ಅತಿಯಾಗಿ ಶೋಕಿಸುವುದು ಮೃತವ್ಯಕ್ತಿಯ ಮುಂದಿನ ಪ್ರಯಾಣಕ್ಕೊಂದು ಅಡ್ಡಿ !

ಕರ್ಣಾವತಿ (ಗುಜರಾತ) ವಿಮಾನ ಅಪಘಾತದ ನಂತರ ಮೃತ್ಯು ಮತ್ತು ದುಃಖದ ಬಗ್ಗೆ ಮಾರಿಯಾ ವರ್ಥ ಅವರ ವಿಶ್ಲೇಷಣೆ

ಕರ್ಣಾವತಿಯಲ್ಲಿ ವಿಮಾನ ಅಪಘಾತ

ಕರ್ಣಾವತಿ (ಗುಜರಾತ)ಯಲ್ಲಿ ಸಂಭವಿಸಿದ ವಿಮಾನ ಅಪಘಾತ ನಿಜಕ್ಕೂ ದುಃಖದಾಯಕವಾಗಿದೆ. ಅದರಲ್ಲೂ ವಿಮಾನ ಹಾರಾಟಕ್ಕೆ ಮೊದಲು ೫ ಜನರ ಒಂದು ಕುಟುಂಬ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದ ‘ಸೆಲ್ಫಿ’ (ತಮ್ಮ ಛಾಯಾಚಿತ್ರವನ್ನು ತಾವೇ ತೆಗೆಯುವುದು) ನೆನಪಿನಲ್ಲಿ ಉಳಿಯುತ್ತದೆ ಮತ್ತು ಈ ಘಟನೆಯು ಜೀವನವು ಎಷ್ಟು ಅನಿಶ್ಚಿತವಾಗಿದೆ ಎಂಬುದನ್ನು ನಮಗೆ ಅರಿವು ಮಾಡಿಕೊಡುತ್ತದೆ. ಅದು ಭಾರತೀಯ ಋಷಿಗಳ ದೃಷ್ಟಿಕೋನದಿಂದ ನೋಡಿದ ೧೦೮ ಸಾಮಾನ್ಯ ಪದಗಳ ಶಬ್ದಕೋಶ ವಾಗಿತ್ತು. ನಾನು ಇಂಗ್ಲಿಷನಲ್ಲಿ ‘ಟಿ’ ಅಕ್ಷರದ ವರೆಗೆ ತಲುಪಿದಾಗ, ನಾನು ‘ಟೋಡ್’ (ಮೃತ್ಯು) ಮತ್ತು ‘ಟ್ರೌರ್’ (ಶೋಕಿಸುವುದು) ಎಂಬ ಪದಗಳನ್ನು ಆರಿಸಿದೆ. ಈ ಎರಡು ವಿಷಯಗಳ ಬಗ್ಗೆ ನಾನು ಬರೆದ ನಂತರ, ಒಂದು ಪತ್ರದ ಮೂಲಕ ನನ್ನ ಅತಿ ಆಪ್ತ ಮತ್ತು ಪ್ರಿಯ ಸ್ನೇಹಿತನ ಮರಣದ ಸುದ್ದಿ ಪತ್ರದ ಮೂಲಕ ನನಗೆ ತಿಳಿಯಿತು. ಮೊದಲ ಬಾರಿಗೆ ನನಗೆ ತುಂಬಾ ಹತ್ತಿರವಿದ್ದ ಯಾರನ್ನೋ ನಾನು ಕಳೆದುಕೊಂಡಿದ್ದೆ ಮತ್ತು ಆಗ ನಾನು ಬರೆದಿದ್ದನ್ನು ಅಭ್ಯಾಸ ಮಾಡುವ ಅವಕಾಶ ಸಿಕ್ಕಿತು. ನಿಜಕ್ಕೂ ಆ ಆಘಾತಕಾರಿ ಪತ್ರ ನನಗೆ ತಲುಪಿದಾಗ, ನನ್ನೊಳಗಿನ ಧ್ವನಿ ನನಗೆ, ‘ಮಾರಿಯಾ, ಧೈರ್ಯ ತೋರಿಸು, ನಾನು ಸತ್ತಿಲ್ಲ ಇದು ನಿನಗೆ ಗೊತ್ತಿದೆ’ ಎಂದು ಕೇಳಿಸಿತು.

ಮಾರಿಯಾ ವರ್ಥ

೧. ಸಾವು ಎಂದರೆ ಜೀವನದ ಅಂತ್ಯವೇ ?

‘ಸಾವು ಎಂದರೆ ಜೀವನದ ಅಂತ್ಯ’ ಎಂದು ಖಂಡಿತವಾಗಿಯೂ ಅಲ್ಲ. ಋಷಿಗಳು ಹೇಳುವುದೇನೆಂದರೆ, ‘ನಾವು ಸಾವಿನ ಬಗ್ಗೆ ತಿಳಿದಿರುವ ಅರ್ಥ ತಪ್ಪಾಗಿದೆ. ನಮ್ಮ ಸಾವು ಸಂಭವಿಸಿದಾಗ, ನಮ್ಮ ಇಚ್ಛೆಯಿದ್ದರೂ ನಮ್ಮ ಅಸ್ತಿತ್ವವನ್ನು ನಾವು ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ನಾವು ಉಪಯೋಗಿಸಿದ ಶರೀರ ಮತ್ತು ನಾವು ಇತರರಿಗೆ ತೋರಿಸುವ ವ್ಯಕ್ತಿತ್ವ, ಇವೆರಡನ್ನೂ ತ್ಯಜಿಸಲಾಗುತ್ತದೆ; ಏಕೆಂದರೆ ಪ್ರಾರಂಭವಿರುವ ಪ್ರತಿಯೊಂದು ವಿಷಯಕ್ಕೂ ಅಂತ್ಯವಿರಲೇಬೇಕು; ಆದರೆ ಅದರ ಬಗ್ಗೆ ನಾವು ಅಳಬಾರದು. ನಾವು ಯಾವುದನ್ನು ಸಹ ಬದಲಾಯಿಸಲಾರೆವೋ, ಆ ವಿಷಯದೊಂದಿಗೆ ಹೋರಾಡುವುದು ನಮ್ಮ ಶಕ್ತಿಯನ್ನು ವ್ಯರ್ಥಗೊಳಿಸಿದಂತೆ’ ಆಗುತ್ತದೆ.

ಭಾರತೀಯ ಋಷಿಗಳ ಪ್ರಕಾರ, ಜನ್ಮದ ಸಮಯದಲ್ಲಿಯೇ ಸಾವಿನ ಸಮಯ ನಿರ್ಧರಿಸಲ್ಪಟ್ಟಿರುತ್ತದೆ. ಅವರು ಹೇಳುತ್ತಾರೆ, ‘ನಮ್ಮ ಜೀವನವು ರಂಗಮಂಟಪದ ನಾಟಕದಂತಿದೆ. ಅದರಲ್ಲಿ ಪರದೆ ತೆರೆಯುತ್ತದೆ ಮತ್ತು ಸ್ವಲ್ಪ ಸಮಯದ ನಂತರ ತೆರೆ ಬೀಳುತ್ತದೆ. ನಮ್ಮ ನಾಟಕದ ಪಾತ್ರ ಮುಗಿದರೂ, ನಮ್ಮ ಅಸ್ತಿತ್ವ ಖಂಡಿತವಾಗಿಯೂ ಇರುತ್ತದೆ. ನಾವು ರಂಗಮಂಟಪದಲ್ಲಿ ಮತ್ತೊಂದು ನಾಟಕದಲ್ಲಿ ಇನ್ನೊಂದು ದೇಹವನ್ನು ಧರಿಸಿ, ಇನ್ನೊಂದು ವ್ಯಕ್ತಿತ್ವವನ್ನು ಪ್ರಸ್ತುತಪಡಿಸುವವರೆಗೆ ನಮಗೆ ವಿಶ್ರಾಂತಿ ಇರುತ್ತದೆ. ಆದ್ದರಿಂದ, ನಾವು ಈ ವಿಶ್ರಾಂತಿಗೆ ಹೆದರಬಾರದು. ಬದಲಿಗೆ, ‘ಮೃತ್ಯು’ ಎಂದರೆ ‘ಜನ್ಮ’ ಎಂದು ಋಷಿಗಳು ಹೇಳುತ್ತಾರೆ.

೨. ಮರಣದ ನಂತರ ದುಃಖ ಪಡಬಾರದು….

ಒಮ್ಮೆ ಆನಂದಮಯಿ ಮಾ ಅವರು ನಿಜವಾಗಿ ನಡೆದ ಒಂದು ಕಥೆಯನ್ನು ಹೇಳಿದರು. ಒಬ್ಬ ತಾಯಿ ತನ್ನ ೧೨ ವರ್ಷದ ಮಗಳ ಸಾವಿನ ಬಗ್ಗೆ ಹಲವು ವರ್ಷಗಳಿಂದ ಶೋಕಸಾಗರದಲ್ಲಿದ್ದಳು. ಒಂದು ರಾತ್ರಿ ಅವಳ ಪತಿಗೆ ಕನಸು ಬಿತ್ತು. ಅವಳ ಮಗಳು ಅವರ ಬಳಿ ಬಂದು, “ನನ್ನ ತಾಯಿಯ ನೋವನ್ನು ನನಗೆ ಸಹಿಸಲು ಆಗುತ್ತಿಲ್ಲ. ನಾನು ನಿಮ್ಮ ಬಳಿ ಪುನಃ ಬರುತ್ತೇನೆ” ಎಂದಳು. ಅನಂತರ ಕೆಲವು ತಿಂಗಳ ನಂತರ ಅವರ ಪತ್ನಿ ಒಂದು ಹೆಣ್ಣುಮಗುವಿಗೆ ಜನ್ಮ ನೀಡಿದರು. ನಾವು ಈ ಕಥೆಯನ್ನು ನಂಬಬಹುದು ಅಥವಾ ನಂಬದೇ ಇರಬಹುದು; ಆದರೆ ಭಾರತೀಯ ಋಷಿಗಳು ಹೇಳುತ್ತಾರೆ, ‘ಅತಿಯಾಗಿ ದುಃಖ ಪಡುವುದು, ಇದು ಮೃತರ ಮುಂದಿನ ಪಯಣದ ಹಾದಿಯಲ್ಲಿ ಅಡ್ಡಿಯಾಗುತ್ತದೆ ಮತ್ತು ಅವರನ್ನು ಮುಂದೆ ಹೋಗಲು ಬಿಡಬೇಕು’ ಎಂದು ಅವರು ನಮಗೆ ವಿನಂತಿಸುತ್ತಾರೆ; ಏಕೆಂದರೆ ಶೋಕಿಸುವುದು ಆ ವ್ಯಕ್ತಿಯೊಂದಿಗೆ ನಾವು ಎಷ್ಟು ಬೆಸೆದುಕೊಂಡಿದ್ದೇವೆ ಎಂಬುದರ ಸಂಕೇತವಾಗಿದೆ. ಅದು ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದರ ಸಂಕೇತವಲ್ಲ; ಆದರೆ ನಾವು ಈ ಎರಡು ವಿಷಯಗಳನ್ನು ಒಂದಕ್ಕೊಂದು ಬೆಸೆಯುತ್ತೇವೆ. ಆದರೂ, ಪಾಶ್ಚಿಮಾತ್ಯ ಸಮಾಜದಲ್ಲಿ ಶೋಕಿಸುವುದು ಒಂದು ಪುಣ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಶೋಕಿಸದೇ ಇರುವವರನ್ನು ಸಂಶಯದಿಂದ ನೋಡಲಾಗುತ್ತದೆ. ಇದರಿಂದ ಶೋಕದಲ್ಲಿ ಮುಳುಗಿರುವುದಕ್ಕೆ ಪ್ರೋತ್ಸಾಹ ಸಿಗುತ್ತದೆ. ನಾವು ಯಾರೊಂದಿಗಾದರೂ ಸಂಪರ್ಕ ಹೊಂದಿದಾಗ ಮತ್ತು ಆ ವ್ಯಕ್ತಿ ದೂರವಾದಾಗ ನಮಗೆ ದುಃಖವಾಗುತ್ತದೆ. ಈ ದುಃಖವನ್ನು ಕೆಲವೊಮ್ಮೆ ತಡೆಯಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅತ್ಯಂತ ದುಃಖದಲ್ಲಿದ್ದಾಗಲೂ ಕೆಲವೊಂದು ಕ್ಷಣಗಳಲ್ಲಿ ನಾವು ಧೈರ್ಯಶಾಲಿಗಳಾಗುತ್ತೇವೆ. ನಮ್ಮ ಸ್ವಂತ ಹಿತಾಸಕ್ತಿಗಾಗಿ ಅಂತಹ ಕ್ಷಣದಲ್ಲಿ ಋಷಿಗಳ ಸಲಹೆ ಯನ್ನು ಪಾಲಿಸಬೇಕಾಗುತ್ತದೆ. –

ಮಾರಿಯಾ ವರ್ಥ, ಹಿಂದೂ ಧರ್ಮದ ಸಂಶೋಧಕಿ ಮತ್ತು ಜರ್ಮನ ಲೇಖಕಿ, ಹರಿದ್ವಾರ.