ಸಾಧಕರೇ, ಸದ್ಯ ಕೆಟ್ಟಶಕ್ತಿಗಳ ತೊಂದರೆ ನಿವಾರಿಸಲು ‘ಓಂ ಈ ಜಪ ಸಿಗುತ್ತಿದೆ, ಅಂದರೆ ಕೆಟ್ಟಶಕ್ತಿಗಳಿಂದ ಸರ್ವೋಚ್ಚ ಮಟ್ಟದಲ್ಲಿ ಆಕ್ರಮಣಗಳಾಗುತ್ತಿದೆ ಮತ್ತು ಇದು ಅಂತಿಮ ಯುದ್ಧವಾಗಿದ್ದರಿಂದ, ಸಾಧನೆ ಹೆಚ್ಚಿಸಿದರೆ ಧರ್ಮದ ವಿಜಯವಾಗಲಿದೆ !

(ಸದ್ಗುರು) ಡಾ. ಮುಕುಲ ಗಾಡಗೀಳ

‘ಸಾಧಕರ ಸಾಧನೆಯಲ್ಲಿ ಅಡ್ಡಿಪಡಿಸಲು ಕೆಟ್ಟ ಶಕ್ತಿಗಳು ಸೂಕ್ಷ್ಮವಾಗಿ ಸಾಧಕರ ಮೇಲೆ ಆಕ್ರಮಣ ಮಾಡುತ್ತವೆ. ಕೆಟ್ಟ ಶಕ್ತಿಗಳಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು, ಸಾಧಕರು ಪ್ರಾಣಶಕ್ತಿವಹನ ಉಪಾಯ ಪದ್ಧತಿಯ ಪ್ರಕಾರ ಉಪಾಯಗಳನ್ನು ಮಾಡುವಾಗ ನಾಮಜಪವನ್ನು ಕಂಡುಹಿಡಿಯಬೇಕಾಗುತ್ತದೆ. ಆಗ ಸಾಧಕರಿಗೆ ತೊಂದರೆಯ ತೀವ್ರತೆಗೆ ಅನುಗುಣವಾಗಿ ಕೆಳಗಿನ ನಾಮಜಪಗಳಲ್ಲಿ ಯಾವುದಾದರೂ ಒಂದು ಸಿಗುತ್ತದೆ.

೧. ಕೆಟ್ಟ ಶಕ್ತಿಗಳಿಂದ ಸಗುಣ-ನಿರ್ಗುಣ ಮಟ್ಟದ ಆಕ್ರಮಣ ನಡೆಯುತ್ತಿದ್ದರೆ, ಪಂಚತತ್ತ್ವಗಳಲ್ಲಿ ತೇಜತತ್ತ್ವ, ವಾಯುತತ್ತ್ವ ಅಥವಾ ಆಕಾಶತತ್ತ್ವ ಇವುಗಳಲ್ಲಿ ಯಾವುದಾದರೂ ಒಂದು ತತ್ತ್ವದ ಜಪ ಸಿಗುತ್ತದೆ. ತೇಜತತ್ತ್ವ, ವಾಯುತತ್ತ್ವ ಮತ್ತು ಆಕಾಶತತ್ತ್ವ ಈ ಕ್ರಮದಲ್ಲಿ ಆಕಾಶತತ್ತ್ವವು ಅತ್ಯಂತ ಉನ್ನತ ಮತ್ತು ಹೆಚ್ಚು ನಿರ್ಗುಣ ಮಟ್ಟದ್ದಾಗಿದೆ. ಆಕಾಶತತ್ತ್ವದ ಜಪ ಸಿಕ್ಕಿದರೆ, ಕೆಟ್ಟ ಶಕ್ತಿಗಳ ಆಕ್ರಮಣ ಹೆಚ್ಚಾಗಿದೆ ಎಂದು ಇದರ ಅರ್ಥವಾಗುತ್ತದೆ.

೨. ಕೆಟ್ಟ ಶಕ್ತಿಗಳಿಂದ ನಿರ್ಗುಣ-ಸಗುಣ ಮಟ್ಟದ ಆಕ್ರಮಣ ನಡೆಯುತ್ತಿದ್ದರೆ, ಶೂನ್ಯ, ಮಹಾಶೂನ್ಯ, ನಿರ್ಗುಣ ಅಥವಾ ಓಂ ಇವುಗಳಲ್ಲಿ ಯಾವುದಾದರೂ ಒಂದು ಜಪ ಸಿಗುತ್ತದೆ. ಶೂನ್ಯ, ಮಹಾಶೂನ್ಯ, ನಿರ್ಗುಣ ಮತ್ತು ಓಂ ಈ ಜಪಗಳ ಕ್ರಮದಲ್ಲಿ ಓಂ ಅತ್ಯಂತ ಉನ್ನತ ಮತ್ತು ಅತ್ಯಂತ ನಿರ್ಗುಣ ಮಟ್ಟದ ಜಪವಾಗಿದೆ. ಉಪಾಯದಲ್ಲಿ ಓಂ ಜಪ ಸಿಕ್ಕಿದರೆ, ‘ಕೆಟ್ಟ ಶಕ್ತಿಗಳು ಅತ್ಯಂತ ಉನ್ನತ ಮಟ್ಟದ ಆಕ್ರಮಣ ಮಾಡಿವೆ ಎಂದು ಅರ್ಥಮಾಡಿಕೊಳ್ಳಬೇಕು.

ಸದ್ಯ (ಜೂನ್ ೨೦೨೫ ರಲ್ಲಿ) ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಾಗ, ಹೆಚ್ಚಿನ ಸಮಯ ‘ಓಂ ಎಂಬ ನಾಮಜಪ ಸಿಗುತ್ತಿದೆ ಎಂದು ಗಮನಕ್ಕೆ ಬಂದಿದೆ. ಈ ಹಿಂದೆ ‘ಮಹಾಶೂನ್ಯ ಅಥವಾ ಹೆಚ್ಚೆಂದರೆ ‘ನಿರ್ಗುಣ ಎಂಬ ನಾಮಜಪ ಸಿಗುತ್ತಿತ್ತು. ಇದರಿಂದ, ‘ಕೆಟ್ಟ ಶಕ್ತಿಗಳು ಈಗ ಆಕ್ರಮಣ ಮಾಡಲು ತಮ್ಮ ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ತಿಳಿಯುತ್ತದೆ.

ಸಾಧಕರ ಸಾಧನೆ ಹೆಚ್ಚ್ಚಾದಂತೆ, ಕೆಟ್ಟ ಶಕ್ತಿಗಳು ಆಕ್ರಮಣ ಮಾಡಲು ಹೆಚ್ಚು ಹೆಚ್ಚು ಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ಪ್ರಸ್ತುತ ಆಧ್ಯಾತ್ಮಿಕ ಉಪಾಯಕ್ಕಾಗಿ ‘ಓಂ ಎಂಬ ನಾಮಜಪ ಸಿಗುವುದು ಎಂದರೆ, ಕೆಟ್ಟ ಶಕ್ತಿಗಳು ಈಗ ಆಕ್ರಮಣ ಮಾಡಲು ತಮ್ಮ ಅತ್ಯುನ್ನತ ಶಕ್ತಿಯನ್ನು ಬಳಸುತ್ತಿವೆ. ಇದರಲ್ಲಿಯೂ ಅವು ಸೋತರೆ, ಅವು ಸೂಕ್ಷ್ಮವಾಗಿ ಆಕ್ರಮಣ ಮಾಡುವುದನ್ನು ನಿಲ್ಲಿಸಿ ಸ್ಥೂಲದಿಂದ ಆಕ್ರಮಣಗಳನ್ನು ಪ್ರಾರಂಭಿಸುತ್ತವೆ ಮತ್ತು ಆಗ ಮೂರನೇ ಮಹಾಯುದ್ಧವು ಪ್ರಾರಂಭವಾಗುತ್ತದೆ. ಮೂರನೇ ಮಹಾಯುದ್ಧದಲ್ಲಿ ಈಶ್ವರನ ಕೃಪೆಯಿಂದ ಧರ್ಮವು ಗೆದ್ದರೆ, ಈಶ್ವರೀಯ ರಾಜ್ಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತದೆ. ಆದ್ದರಿಂದ, ಸಾಧಕರೇ, ಈಗ ಧರ್ಮದ ವಿಜಯಕ್ಕಾಗಿ ಇನ್ನಷ್ಟು ತೀವ್ರವಾಗಿ ಸಾಧನೆ ಮಾಡಿ ಕೆಟ್ಟ ಶಕ್ತಿಗಳ ಆಕ್ರಮಣವನ್ನು ಹಿಮ್ಮೆಟ್ಟಿಸಿರಿ ! – (ಸದ್ಗುರು) ಡಾ. ಮುಕುಲ ಗಾಡಗೀಳ (ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ., ಮುಂಬಯಿ ವಿಶ್ವವಿದ್ಯಾನಿಲಯ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೬.೨೦೨೫)