ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಸಪ್ತರ್ಷಿಗಳಿಗೆ ಒಂದು ಪ್ರಶ್ನೆಯನ್ನು ಕೇಳಲು ಹೇಳಿದ್ದರು. ಅದಕ್ಕೆ ಮಹರ್ಷಿಗಳು ನೀಡಿದ ಉತ್ತರ, ಆ ಬಗ್ಗೆ ಗುರುದೇವರು ವ್ಯಕ್ತಪಡಿಸಿದ ವಿಚಾರಗಳು ಮತ್ತು ಶ್ರೀಚಿತ್‍ಶಕ್ತಿ (ಸೌ.) ಗಾಡಗೀಳ ಇವರ ಮನೋಗತವನ್ನು ಮುಂದೆ ಕೊಡಲಾಗಿದೆ.

1. ಪರಾತ್ಪರ ಗುರು ಡಾ. ಆಠವಲೆಯವರು ಮಹರ್ಷಿಗಳಲ್ಲಿ ವಿಚಾರಿಸಲು ಹೇಳಿದ ಪ್ರಶ್ನೆ
`ಒಮ್ಮೆ ಗುರುದೇವರು ನನಗೆ, “ಮಹರ್ಷಿಗಳು ಸೂಕ್ಷ್ಮದಿಂದ ಕಾರ್ಯವನ್ನು ಮಾಡಬಲ್ಲರು, ಹಾಗೆ ನಮಗೇಕೆ ಮಾಡಲು ಬರುವುದಿಲ್ಲ ? ನನ್ನ ಪ್ರಾಣಶಕ್ತಿ ಇಷ್ಟು ಕಡಿಮೆ ಇರುವಾಗ ಮಹರ್ಷಿ
ಗಳು ನನ್ನನ್ನು ಉಳಿಸಿಕೊಳ್ಳಲು ಇಷ್ಟೇಕೆ ಪ್ರಯತ್ನ ಮಾಡುತ್ತಿದ್ದಾರೆ ?’ ಎಂದು ಸಪ್ತರ್ಷಿಗಳಲ್ಲಿ ವಿಚಾರಿಸಲು ಹೇಳಿದ್ದರು.
2. ಮಹರ್ಷಿಗಳು ನೀಡಿದ ಉತ್ತರ
2 ಅ. ಮನುಷ್ಯನಿಗೆ ಪ್ರತ್ಯಕ್ಷ ಕೃತಿ, ಮಾತನಾಡುವುದು ಮತ್ತು ನಡೆದು ಕೊಳ್ಳುವುದು ಇವುಗಳಿಂದ ಕಲಿಸಲು ಸ್ಥೂಲದೇಹದ ಆವಶ್ಯಕತೆ ಇರುತ್ತದೆ : `ಅವತಾರಿ ಕಾರ್ಯವನ್ನು ಮಾಡಲು ಸ್ಥೂಲದೇಹದ ಅವಶ್ಯಕತೆ ಇರುತ್ತದೆ, ಆಗ ಮಾತ್ರ ಜನರಿಗೆ ದೇವರ ಕಾರ್ಯ ತಿಳಿಯುತ್ತದೆ. ಮನುಷ್ಯನಿಗೆ ತನ್ನ ಪ್ರತ್ಯಕ್ಷ ಕೃತಿ, ಮಾತನಾಡುವುದು ಮತ್ತು ನಡುವಳಿಕೆಯಿಂದ ಕಲಿಸಲು ಸ್ಥೂಲದೇಹದ ಅವಶ್ಯಕತೆ ಇರುತ್ತದೆ. ಇದಕ್ಕೇ `ಅವತಾರಿ ಲೀಲೆ’ ಎಂದು ಕರೆಯುತ್ತಾರೆ.
2 ಆ. ಮಹರ್ಷಿಗಳ ಕಾರ್ಯವು ಸಂಪೂರ್ಣ ಸೂಕ್ಷ್ಮದ್ದಾಗಿದ್ದು `ಅವತಾರಗಳ ಕಾರ್ಯದ ಬಗ್ಗೆ ಜನರಿಗೆ ಮಾರ್ಗದರ್ಶನ ಮಾಡುವುದು, ಅವತಾರಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಸಿ ಕೊಡುವುದು ಮತ್ತು ಜ್ಞಾನದಾನದ ಕಾರ್ಯ ಮಾಡುವುದು’, ಹೀಗಿರುವುದು : ನಮ್ಮ, ಮಹರ್ಷಿಗಳ ಕಾರ್ಯ ಭಿನ್ನವಾಗಿದೆ. `ಅವತಾರಗಳ ಕಾರ್ಯದ ಬಗ್ಗೆ ಜನರಿಗೆ ಮಾರ್ಗದರ್ಶನ ಮಾಡು ವುದು ಮತ್ತು ಅವತಾರಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಸಿಕೊಡುವುದು’, ಇದಕ್ಕಾಗಿಯೇ ನಾವು ಇಷ್ಟೊಂದು ಜ್ಞಾನ ವನ್ನು ಸಿದ್ಧಿಯ ಮಾಧ್ಯಮದಿಂದ ನಾಡಿಪಟ್ಟಿಯಲ್ಲಿ ಬರೆದಿಟ್ಟಿದ್ದೇವೆ. ನಮ್ಮ ಕಾರ್ಯವು ಸಂಪೂರ್ಣ ಸೂಕ್ಷ್ಮದ್ದಾಗಿದೆ. ನಾವು ಕೇವಲ ಜ್ಞಾನದಾನದ ಕಾರ್ಯವನ್ನು ಮಾಡುತ್ತಿದ್ದೇವೆ.
3. ಪರಾತ್ಪರ ಗುರು ಡಾಕ್ಟರ್ ಆಠವಲೆಯವರು ಮಹರ್ಷಿಗಳು ನೀಡಿದ ಉತ್ತರಕ್ಕೆ ನೀಡಿದ ಹೇಳಿಕೆ !
3 ಅ. ಶ್ರೀರಾಮ ಮತ್ತು ಶ್ರೀಕೃಷ್ಣ ಪೂರ್ಣಾವತಾರಿಗಳಾದುದರಿಂದ ಅವರ ದೇಹವು ತೇಜತತ್ತ್ವದ್ದಾಗಿರುವುದು, ಅವರಿಗೆ ಮನುಷ್ಯರಂತೆ ಭೋಗಗಳು ಇಲ್ಲದಿರುವುದು; ಆದರೆ ಅಂಶಾವತಾರಿಗಳ ದೇಹದಲ್ಲಿ ಪೃಥ್ವಿ ಮತ್ತು ಆಪ ತತ್ತ್ವಗಳ ಪ್ರಮಾಣ ಹೆಚ್ಚಿರುವುದರಿಂದ ಅವರಿಗೆ ದೇಹಪ್ರಾರಬ್ಧವನ್ನು ಭೋಗಿಸಬೇಕಾಗುವುದು : ನಾನು ಮಹರ್ಷಿಗಳ ಉತ್ತರವನ್ನು ಗುರುದೇವರಿಗೆ ಹೇಳಿದಾಗ ಅವರು, “ಸರಿ ಇದೆ. ಶ್ರೀರಾಮ ಮತ್ತು ಶ್ರೀಕೃಷ್ಣರು ಪೂರ್ಣಾವತಾರಿಗಳಾಗಿದ್ದರು. ಅವರು ಶೇ. 100 ರಷ್ಟು ಅವತಾರಿಗಳಾಗಿದ್ದರು. ಅವರ ಜನ್ಮವೇ ತೇಜತತ್ತ್ವದಿಂದ ಆಯಿತು. ಆದುದರಿಂದ ಅವರ ಬಣ್ಣ ನೀಲಿಯಾಗಿತ್ತು. ನಾವು ಅಂಶಾವಂತಾರಿಗಳಾಗಿದ್ದೇವೆ. ನಮ್ಮಲ್ಲಿ ಪೃಥ್ವಿ ಮತ್ತು ಆಪ ತತ್ತ್ವಗಳ ಪ್ರಮಾಣ ಹೆಚ್ಚಿರುವುದರಿಂದ ನಾವು ಮನುಷ್ಯರಂತೆ ಅನಾರೋಗ್ಯಪೀಡಿತರಾಗುತ್ತೇವೆ ಮತ್ತು ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ತಿರುಗುತ್ತಿರುತ್ತೇವೆ’’, ಎಂದು ಹೇಳಿದರು.
4. ಪೂರ್ಣಾವತಾರಿಯು ಒಂದು ಯುಗದಲ್ಲಿ ಒಂದೇ ಬಾರಿ ಜನ್ಮ ಪಡೆಯುತ್ತಾನೆ; ಆದರೆ ಅಂಶಾವತಾರಿಗಳಿಗೆ ಈಶ್ವರನ ಇಚ್ಛೆಯಂತೆ ಪುನಃ ಪುನಃ ಮನುಷ್ಯ ಭೋಗಗಳೊಂದಿಗೆ ಜನ್ಮ ಪಡೆಯಬೇಕಾಗುತ್ತದೆ
ಅವರು ಮಾತುಗಳನ್ನು ಮುಂದುವರೆಸುತ್ತಾ, “ಪೂರ್ಣಾವತಾರಿಗಳಿಗೆ ಮನುಷ್ಯರಂತೆ ಭೋಗಗಳು ಇರುವುದಿಲ್ಲ; ಆದರೆ ಅಂಶಾವತಾರಗಳಿಗೆ ದೇಹಭೋಗ ಇರುತ್ತದೆ. ಶೇ. 100 ರಷ್ಟು ದೇವತಾತತ್ತ್ವವಿರುವ ಪೂರ್ಣಾವತಾರಿಯು ಒಂದು ಯುಗದಲ್ಲಿ ಒಂದೇ ಬಾರಿ ಜನ್ಮ ಪಡೆಯುತ್ತಾನೆ; ಆದರೆ ಅಂಶಾವತಾರಿಗಳಿಗೆ ಈಶ್ವರನ ಇಚ್ಛೆಯಂತೆ ಪುನಃ ಪುನಃ ಮನುಷ್ಯ ಭೋಗಗಳೊಂದಿಗೆ ಪ್ರಾರಬ್ಧಸಹಿತ ಜನ್ಮಕ್ಕೆ ಬರಬೇಕಾಗುತ್ತದೆ, ಎಂದು ಹೇಳಿದರು. ಮಹರ್ಷಿಗಳು, `ಗುರುದೇವರೇ, ಸ್ವಲ್ಪ ಸಮಯದ ನಂತರ ನಿಮಗೆ ಪೃಥ್ವಿಯ ಮೇಲೆ ಕಾರ್ಯ ಮಾಡಲು ಪುನಃ ಜನ್ಮ ಪಡೆಯಬೇಕಾಗು ತ್ತದೆ’, ಎಂದು ಹೇಳಿದರು.’ – (ಶ್ರೀಚಿತ್‍ಶಕ್ತಿ) ಸೌ. ಅಂಜಲಿ ಗಾಡಗೀಳ, ಕೊಳ್ಳಿಮಲೈ, ತಮಿಳುನಾಡು. (14.1.2021)
ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ವ್ಯಕ್ತ ಪಡಿಸಿದ ಭಾವಸ್ಪರ್ಶಿ ಮನೋಗತ !![]() `ಅಂಶಾವತಾರಿಯು ಸಾಧಕರಿಗಾಗಿ ಪುನಃ ಜನ್ಮ ಪಡೆಯುವುದನ್ನು ಸ್ವೀಕರಿಸಿದರೆ, ಸಾಧಕರೂ ಅವರೊಂದಿಗೆ ಪುನಃ ಪುನಃ ಜನ್ಮ ಪಡೆಯಲು ಆನಂದದಿಂದ ಸ್ವೀಕರಿಸು ತ್ತಾರೆ : ಅವತಾರ ಎಂದಿಗೂ ಒಬ್ಬರೇ ಜನ್ಮಕ್ಕೆ ಬರುವುದಿಲ್ಲ, ಅವರು ತಮ್ಮ ವ್ಯೂಹದೊಂದಿಗೆ (ಸೈನ್ಯದೊಂದಿಗೆ) ಬರುತ್ತಾರೆ. ಇದಕ್ಕನುಸಾರ ನಾವು ಸಾಧಕರೂ ಗುರುದೇವರು ಜನ್ಮ ಪಡೆದ ನಂತರ ಈ ಬ್ರಹ್ಮಾಂಡದ ಚಕ್ರದಲ್ಲಿ ಪುನಃ ಜನ್ಮ ಪಡೆಯುವೆವು, ಎಂಬುದರಲ್ಲಿ ಸಂದೇಹವಿಲ್ಲ. ಈಶ್ವರೇಚ್ಛೆಯಂತೆ ನಡೆದುಕೊಳ್ಳುವುದು, ಅಂದರೆ ನಿಜವಾದ ಮೋಕ್ಷವಾಗಿರುವುದರಿಂದ ಆ ಬಗ್ಗೆಯೂ ನಮಗೆ ಏನೂ ಅನಿಸುವುದಿಲ್ಲ. ಒಂದು ವೇಳೆ ಈಶ್ವರನು ನಮಗಾಗಿ ಜನ್ಮ-ಮೃತ್ಯುವಿನ ಚಕ್ರಗಳಲ್ಲಿ ಸಿಲುಕುವುದನ್ನು ಸ್ವೀಕರಿಸಿದ್ದರೆ, ನಾವೂ ಅದನ್ನು ಆನಂದದಿಂದ ಸ್ವೀಕರಿಸೋಣ.’ |

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !