ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ಸಂದೇಶ

ನಿಸ್ವಾರ್ಥಿ ಸಾಧಕವೃತ್ತಿಯ ಹಿಂದೂಗಳೇ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬಲ್ಲರು; ಆದುದರಿಂದ ಸಾಧನೆ ಮಾಡಿ ! – ಶ್ರೀಸತ್‍ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

`ಹಿಂದೂ ರಾಷ್ಟ್ರದ ಸ್ಥಾಪನೆಯು ಧರ್ಮಸಂಸ್ಥಾಪನೆಯ ಕಾರ್ಯವಾಗಿದೆ. ಭಗವ್ಭಕ್ತರಾದ ಪಾಂಡವರು ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಂದ ಧರ್ಮಸಂಸ್ಥಾಪನೆಯ ಕಾರ್ಯವಾಯಿತು; ಏಕೆಂದರೆ ಅವರು ಉನ್ನತ ಸಾಧಕರಾಗಿದ್ದರು. ಸಾಧಕತ್ವ ಇರುವವರಿಂದಲೇ ಈಶ್ವರ ಮತ್ತು ಗುರುಗಳು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿಸಿಕೊಳ್ಳುತ್ತಾರೆ. ಸಾಧಕತ್ವವೆಂದರೆ ಈಶ್ವರೀ ಗುಣಗಳನ್ನು ಅಳವಡಿಸಿ, ದೋಷ ನಿರ್ಮೂಲನೆ ಮಾಡಿದ ವ್ಯಕ್ತಿತ್ವವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆಯಾದ ನಂತರ ನಮ್ಮಲ್ಲಿ ಸಾಧಕತ್ವ ಬರುತ್ತದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಕ್ರಿಯೆಯು ರಾಜಕೀಯ ಅಥವಾ ಭೌಗೋಲಿಕವಲ್ಲ, ಅದು ಪೂರ್ಣತಃ ಆಧ್ಯಾತ್ಮಿಕ ಮತ್ತು ವಿಶ್ವಕಲ್ಯಾಣದ ಉದ್ದೇಶ ಹೊಂದಿದೆ. ಪ್ರತಿಯೊಂದು ಕೃತಿಯಲ್ಲಿ ಈಶ್ವರೀ ತತ್ತ್ವದ ಅನುಭೂತಿ ಪಡೆದು ವಿಶ್ವಕಲ್ಯಾಣದ ವಿಚಾರದ, ನಿಸ್ವಾರ್ಥ ಸಾಧಕ ಹಿಂದೂಗಳೇ ಹಿಂದೂರಾಷ್ಟ್ರ ಸ್ಥಾಪಿಸಬಲ್ಲರು; ಹಾಗಾಗಿ ಹಿಂದೂಗಳೇ, ಅಧ್ಯಾತ್ಮದ ಅಧಿಕಾರಿ ಸಂತರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ತಮ್ಮಲ್ಲಿ ಸಾಧಕತ್ವವನ್ನು ತನ್ನಿ. ಭಗವಂತ ಮತ್ತು ಗುರುಗಳು ನಮ್ಮೆಲ್ಲರಿಂದ ಹಿಂದೂ ರಾಷ್ಟ್ರ ಸ್ಥಾಪನೆಯ ಮಹಾನ ಕಾರ್ಯ ಮಾಡಿಸಿಕೊಳ್ಳುವರು.’ – ಶ್ರೀಸತ್‍ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು.


ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕೃತಿಶೀಲರಾಗುತ್ತೇವೆ, ಎಂಬ ದೃಢ ಸಂಕಲ್ಪರೂಪಿ ಗುರುದಕ್ಷಿಣೆ ಅರ್ಪಿಸಿ ! – ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಈ ವರ್ಷದ ಗುರುಪೂರ್ಣಿಮೆಯನ್ನು ಯುದ್ಧಜನ್ಯ ಸ್ಥಿತಿಯಲ್ಲಿ ಆಚರಿಸಲಾಗುತ್ತಿದೆ. ಸನಾತನ ಸಂಸ್ಥೆಯು ಭಾರತಕ್ಕೆ ಯುದ್ಧದಲ್ಲಿ ಜಯ ಸಿಗಬೇಕೆಂದು ಶತಚಂಡಿ ಯಜ್ಞವನ್ನು ಮಾಡಿದೆ. ದೇಶದ ಅನೇಕ ಸಂತರು ಭಾರತದ ವಿಜಯಕ್ಕಾಗಿ ಅನುಷ್ಠಾನಗಳು, ಧಾರ್ಮಿಕ ವಿಧಿಗಳು ಇತ್ಯಾದಿ ಮಾಡುತ್ತಿದ್ದಾರೆ. ಈಗ ನಾವೂ ಶಾರೀರಿಕ (ಉದಾ. ಜಾಗರೂಕತೆ, ಪರಸ್ಪರ ಸಹಾಯ), ಮಾನಸಿಕ (ಉದಾ. ಸ್ವಯಂಸೂಚನೆಗಳ ಮೂಲಕ ಮನಸ್ಸನ್ನು ಸ್ಥಿರತೆ) ಮತ್ತು ಆಧ್ಯಾತ್ಮಿಕ (ಉದಾ. ಪ್ರಾರ್ಥನೆ-ನಾಮಜಪ, ಭಕ್ತಿಯನ್ನು ಹೆಚ್ಚಿಸುವುದು) ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಬೇಕು ! ಜಗದ್ಗುರು ಶ್ರೀಕೃಷ್ಣನು `ನಾನು ನನ್ನ ಭಕ್ತನನ್ನು ರಕ್ಷಿಸುವೆನು’, ಎಂದು ಹೇಳಿದ್ದಾನೆ. ಆದುದರಿಂದ ಭಗವಂತನ ಭಕ್ತರಾಗಿ ! ಅದಕ್ಕಾಗಿ ಸನಾತನದ ಸಾಧಕರ ಸಹಾಯ ಪಡೆಯಿರಿ ! ಯುದ್ಧದಂತಹ ಬಾಹ್ಯ ಮತ್ತು ದೇಶದ ಆಂತರಿಕವಾಗಿರುವ ಎಲ್ಲ ಸಮಸ್ಯೆಗಳು ದೂರವಾಗಲು ಹಿಂದೂ ರಾಷ್ಟ್ರವೇ ಬೇಕು, ಎಂಬುದನ್ನು ಗಮನದಲ್ಲಿಡಿ ! `ಹಿಂದೂ ರಾಷ್ಟ್ರದ ಸ್ಥಾಪನೆ ಗಾಗಿ ನಾನು ಖಂಡಿತ ಕೃತಿಶೀಲನಾಗುವೆನು’, ಎಂಬ ದೃಢ ಸಂಕಲ್ಪರೂಪಿ ಗುರುದಕ್ಷಿಣೆಯನ್ನು ಗುರುಚರಣಗಳಲ್ಲಿ ಭಾವಪೂರ್ಣವಾಗಿ ಅರ್ಪಿಸಿರಿ ! – ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು