ವಾಸ್ತವ ಸ್ಥಿತಿಯನ್ನು ಒಪ್ಪಿಕೊಂಡ ಇರಾನ್ !

ವಾಷಿಂಗ್ಟನ್(ಅಮೇರಿಕಾ) – ಮೇರಿಕಾ ಮತ್ತು ಇಸ್ರೇಲ್ ನ ತೀವ್ರ ದಾಳಿಗಳಿಂದ ಇರಾನ್ ನ ಪರಮಾಣು ಇಂಧನ ಕೇಂದ್ರಗಳಿಗೆ ಭಾರಿ ಹಾನಿಯಾಗಿದೆ. ಈ ದಾಳಿಗಳಿಂದ ಇರಾನ್ ನ ಪರಮಾಣು ಯೋಜನೆಯು ಹಲವು ವರ್ಷಗಳಷ್ಟು ಹಿಂದಕ್ಕೆ ಬಿದ್ದಿದೆ ಎಂದು ಅಮೇರಿಕಾದ ಗುಪ್ತಚರ ಸಂಸ್ಥೆ ‘ಸಿಐಎ’ ಅಂದರೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ ಹೇಳಿದೆ. ಈ ದಾಳಿಗಳಿಂದ ಇರಾನಿನ ಹಲವು ಪ್ರಮುಖ ಪರಮಾಣು ಇಂಧನ ಕೇಂದ್ರಗಳು ನಾಶವಾಗಿವೆ. ಅವುಗಳನ್ನು ಪುನರ್ನಿರ್ಮಿಸಲು ಹಲವು ವರ್ಷಗಳು ಬೇಕಾಗಬಹುದು ಎಂದು ಸಿಐಎ ನಿರ್ದೇಶಕ ಜಾನ್ ರಾಟ್ ಕ್ಲಿಫ್ ತಿಳಿಸಿದ್ದಾರೆ. ಮತ್ತೊಂದೆಡೆ, ಇಸ್ರೇಲ್ ಮತ್ತು ಅಮೇರಿಕಾದಿಂದ ನಿರಂತರವಾಗಿ ನಡೆಯುತ್ತಿರುವ ದಾಳಿಗಳಿಂದ ನಮ್ಮ ಪರಮಾಣು ಇಂಧನ ಕೇಂದ್ರಗಳಿಗೆ ತೀವ್ರ ಹಾನಿಯಾಗಿದೆ ಎಂದು ಇರಾನಿನ ವಿದೇಶಾಂಗ ಸಚಿವಾಲಯವೂ ಸ್ಪಷ್ಟಪಡಿಸಿದೆ.
ಅಧ್ಯಕ್ಷ ಟ್ರಂಪ್ ಇವರಿಂದಲೂ ಪುನರುಚ್ಚಾರ

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಈ ದಾಳಿಗಳಿಂದ ಇರಾನಿನ ಶಸ್ತ್ರಾಸ್ತ್ರ ತಯಾರಿಸುವ ಶಕ್ತಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಹೇಳಿದ್ದಾರೆ.
ತುಳಸಿ ಗಬ್ಬಾರ್ಡ್ ಹೇಳಿದ್ದೇನು?

ಅಮೇರಿಕಾದ ‘ರಾಷ್ಟ್ರೀಯ ಗುಪ್ತಚರ’ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ಈ ಬಗ್ಗೆ ಮಾತನಾಡಿ, ಡೊನಾಲ್ಡ್ ಟ್ರಂಪ್ ಅವರು ಇರಾನ್ ದಾಳಿಯ ವಿಷಯವನ್ನು ನಿರ್ವಹಿಸಿದ ರೀತಿಗಾಗಿ ಅವರಿಗೆ ಮನ್ನಣೆ ಸಿಗಬಾರದು ಎಂದು ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಅಮೇರಿಕಾದ ವೈಮಾನಿಕ ದಾಳಿಗಳಲ್ಲಿ ಇರಾನಿನ ನತಾಂಜ, ಎಸ್ಫಹಾನ್ ಮತ್ತು ಫೋರ್ಡೋದಲ್ಲಿನ ಪರಮಾಣು ಯೋಜನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂಬುದು ವಾಸ್ತವ ಎಂದು ಹೇಳಿದ್ದಾರೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump