೨೧ ಜೂನ್ ‘ಅಂತರರಾಷ್ಟ್ರೀಯ ಯೋಗದಿನ’ದ ನಿಮಿತ್ತ
೧. ಶರೀರ ಮತ್ತು ಮನಸ್ಸು ಇವುಗಳ ಸಂಯೋಜಿತ ವ್ಯಾಯಾಮವೆಂದರೆ ಯೋಗ !

೨೧ ಜೂನ್ ಈ ದಿನದಂದು ಎಲ್ಲೆಡೆ ‘ಅಂತರರಾಷ್ಟ್ರೀಯ ಯೋಗದಿನ’ವನ್ನು ಆಚರಿಸಲಾಗುತ್ತದೆ. ಶರೀರ ಮತ್ತು ಮನಸ್ಸನ್ನು ಪರಿವರ್ತಿಸುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಧನೆಯ ಸಾವಿರಾರು ವರ್ಷಗಳ ಪರಂಪರೆಯನ್ನು ಭಾರತ ಹೊಂದಿದೆ. ಭಾರತೀಯ ಧರ್ಮ ಸಂಸ್ಕೃತಿಯಲ್ಲಿ ‘ಯೋಗ’ದ ಪರಿಕಲ್ಪನೆಯನ್ನು ‘ಶ್ರೀಮದ್ಭಗವದ್ಗೀತೆ’ ಗ್ರಂಥದಲ್ಲಿ ಪ್ರಸ್ತುತಪಡಿಸಲಾಗಿದೆ. ಭಾರತೀಯ ಪ್ರಾಚೀನ ಸಂಸ್ಕೃತಿ, ಪರಂಪರೆ ಇವುಗಳಲ್ಲಿ ಯೋಗ, ಯೋಗಾಸನಗಳು, ಯೋಗಸಾಧನೆ ಇವುಗಳಿಗೆ ಅಸಾಧಾರಣ ಮಹತ್ವವಿದೆ. ಪ್ರಸ್ತುತ ಕಾಲದ ಧಾವಂತದ ಜೀವನದಲ್ಲಿ ಯೋಗದ ಮಾಧ್ಯಮದಿಂದ ನಾವು ನಮ್ಮ ಶರೀರವನ್ನು ಸದೃಢವಾಗಿಟ್ಟುಕೊಳ್ಳಬಹುದು, ಹಾಗೆಯೇ ಮನಸ್ಸಿನ ಮೇಲೆ ಒಳ್ಳೆಯ ಸಂಸ್ಕಾರಗಳನ್ನು ಮೂಡಿಸಬಹುದು. ಶರೀರ ಮತ್ತು ಮನಸ್ಸು ಇವುಗಳ ಸಂಯೋಜಿತ ವ್ಯಾಯಾಮವೆಂದರೆ ಯೋಗ ! ಭಾರತದಲ್ಲಿನ ಈ ಯೋಗ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ದೇಶಗಳು ಸ್ವೀಕರಿಸಿದ್ದು, ಯೋಗಾಸನಗಳ ಲಾಭವನ್ನು ಅವರೂ ದೊಡ್ಡ ಪ್ರಮಾಣದಲ್ಲಿ ಅನುಭವಿಸಿದ್ದಾರೆ. ಆದುದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದಲ್ಲಿ ಅವಶ್ಯ ಸಮಾವೇಶ ಮಾಡಿಕೊಳ್ಳಬೇಕು.

೨. ಮಹಿಳೆಯರಿಗಾಗಿ ‘ಯೋಗ’ವು ವ್ಯಾಪಕ ಸಾಧನ !
ಸದ್ಯದ ಯೋಗದಿನದ ಸಂಕಲ್ಪನೆ ‘ಮಹಿಳೆಯರ ಸಬಲೀಕರಣಕ್ಕಾಗಿ ಯೋಗ’ ಹೀಗಿತ್ತು. ಇದರಲ್ಲಿ ಮಹಿಳೆಯರ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಒತ್ತು ನೀಡಲಾಗುವುದು. ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಶಾರೀರಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆವಶ್ಯಕತೆಯನ್ನು ಪೂರ್ಣಗೊಳಿಸಲು ‘ಯೋಗ’ವು ವ್ಯಾಪಕ ಸಾಧನವಾಗಿದೆ.
೩. ಯೋಗದಿಂದಾಗುವ ವಿವಿಧ ಲಾಭಗಳು
೩ ಅ. ಶಾರೀರಿಕ
೧. ಯೋಗವು ಶಾರೀರಿಕ ಚಲನವಲನ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದರಿಂದ ವೇದನೆಗಳು ಕಡಿಮೆಯಾಗಿ ಗತಿಮಾನತೆ ಬರುತ್ತದೆ .
೨. ಯೋಗವು ಸ್ನಾಯುಗಳನ್ನು ಬಲಪಡಿಸುವ ಮೂಲಕ ಮುಖ್ಯ ಸ್ನಾಯುಗಳೊಂದಿಗೆ ಭಂಗಿ(Posಣuಡಿe) ಮತ್ತು ಸಮತೋಲನವನ್ನು ಸುಧಾರಿಸುತ್ತದೆ.
೩. ಯೋಗಾಸನಗಳು ರಕ್ತಸಂಚಾರವನ್ನು ಸುಧಾರಿಸುತ್ತವೆ, ಹಾಗೆಯೇ ಆಯಾಸವನ್ನು ಕಡಿಮೆ ಮಾಡಿ ಊರ್ಜೆಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಯೋಗದಿಂದ ಉಷ್ಣ ಪರಿಮಾಣ (ಕ್ಯಾಲರಿ) ಸುಟ್ಟು ಹೋಗುತ್ತದೆ ಮತ್ತು ಅದರಿಂದ ಚಯಾಪಚಯ ಸುಧಾರಿಸುತ್ತದೆ. ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ.
೪. ಯೋಗದಿಂದ ಸ್ಥಿತಿಸ್ಥಾಪಕತ್ವ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
೩ ಆ. ಮಾನಸಿಕ
೧. ಯೋಗದಿಂದ ಶರೀರ ಮತ್ತು ಮನಸ್ಸು ಶಾಂತವಾಗಿ ಒತ್ತಡ (ಟೆನ್ಶನ್) ಕಡಿಮೆಯಾಗುತ್ತದೆ. ಶಾಂತ ನಿದ್ದೆಯನ್ನು ಪಡೆಯಬಹುದು. ಮಾನಸಿಕ ಸಂತುಲನ ಸುಧಾರಿಸುತ್ತದೆ.
೨. ಯೋಗದಿಂದ ಚಿಂತೆ ಕಡಿಮೆಯಾಗಿ ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ. ನಿರಾಶೆ ದೂರವಾಗುತ್ತದೆ.
೩ ಇ. ಇತರ
೧. ನಿರ್ಣಯಕ್ಷಮತೆ ಮತ್ತು ನೇತೃತ್ವಗುಣ : ಯೋಗಾಭ್ಯಾಸದಿಂದ ಮಹಿಳೆಯರಲ್ಲಿ ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಮತ್ತು ನೇತೃತ್ವಗುಣ ವಿಕಾಸಗೊಳ್ಳುತ್ತದೆ.
೨. ಆತ್ಮಸಂಯಮ : ಯೋಗಾಭ್ಯಾಸದಿಂದ ಧೈರ್ಯ ಮತ್ತು ಶಾಂತತೆ ಹೆಚ್ಚಾಗಲು ಸಹಾಯವಾಗುತ್ತದೆ.
೩. ಆತ್ಮರಕ್ಷಣೆ : ಕೆಲವು ಯೋಗಾಸನಗಳಿಂದ ಆತ್ಮರಕ್ಷಣೆಗಾಗಿ ಆವಶ್ಯಕವಿರುವ ಶಾರೀರಿಕ ಕ್ಷಮತೆ ಮತ್ತು ಸತರ್ಕತೆ ಹೆಚ್ಚಾಗಲು ಸಹಾಯವಾಗುತ್ತದೆ.
– ಶ್ರೀ. ದಿಲೀಪ ದೇಶಪಾಂಡೆ, ಜಾಮನೆರ, ಜಳಗಾವ.
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !