ಇಸ್ಲಾಮಾಬಾದ (ಪಾಕಿಸ್ತಾನ) – ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರ ನಡೆಸಿ, ಪಾಕಿಸ್ತಾನದಲ್ಲಿರುವ ಲಷ್ಕರ್-ಎ-ತೋಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಒಂಬತ್ತು ನೆಲೆಗಳನ್ನು ನಾಶಪಡಿಸಿತು. ಈಗ, ಈ ನೆಲೆಗಳನ್ನು ಪುನರ್ನಿರ್ಮಿಸಲು ಪಾಕಿಸ್ತಾನಿ ಸೇನೆಯು 40 ಕೋಟಿ ರೂಪಾಯಿ ನೀಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನವು ತನ್ನ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
💣 Pakistan to spend ₹40 CRORE to rebuild terror bases destroyed by India’s ‘Operation Sindoor’! 😡
This exposes how deeply the Pak military shields and funds terrorism against India. 🧠💥
✅ Hitting terror camps isn’t enough.
🇮🇳 It’s time to dismantle Pakistan’s terror… pic.twitter.com/OtKyDB6Qpc
— Sanatan Prabhat (@SanatanPrabhat) June 20, 2025
೧. ಪಾಕಿಸ್ತಾನಿ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ ಮುನೀರ ಅವರು ಸ್ವತಃ ಮಧ್ಯಪ್ರವೇಶಿಸಿ ಈ ಸರಕಾರಿ ನಿಧಿಯನ್ನು ಒದಗಿಸಿದ್ದಾರೆ. ವಿಶೇಷವೆಂದರೆ, ಈ ನಿಧಿಯು ಭಯೋತ್ಪಾದಕ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಮದರಸಾಗಳು ಮತ್ತು ಮಸೀದಿಗಳಿಗೂ ಸಿಗಲಿದೆ.
೨. ಈ ನೆಲೆಗಳ ದುರಸ್ತಿಗಾಗಿ ಜೂನ್ 30 ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ. ಫೀಲ್ಡ್ ಮಾರ್ಷಲ್ ಮುನೀರ ಅವರು ಈ ನೆಲೆಗಳನ್ನು ದುರಸ್ತಿ ಮಾಡಲು ತಂಡವನ್ನು ಸಿದ್ಧಪಡಿಸಿದ್ದಾರೆ. ಮುನೀರ ಅವರು ಸ್ವತಃ ತಮ್ಮ ಮೇಲ್ವಿಚಾರಣೆ ಈ ಕೆಲಸಗಳನ್ನು ಮಾಡುತ್ತಿದ್ದಾರೆ.
೩. ಈ ನೆಲೆಗಳಲ್ಲಿರುವ ಮದರಸಾಗಳು ಜೂನ್ 20 ರಿಂದ ತೆರೆಯಬೇಕಿತ್ತು, ಆದರೆ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದ ಕಾರಣ, ಜುಲೈ 1 ರಂದು ತೆರೆಯಲಾಗುವುದು.
ಸಂಪಾದಕೀಯ ನಿಲುವು
|