ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕಪ್ರಯಾಣ ಮತ್ತು ಅವರ ಶಿಷ್ಯಭಾವ – ಭಾಗ 1

ಉಚ್ಚಶಿಕ್ಷಿತರಿದ್ದರೂ ಅಧ್ಯಾತ್ಮದ ಪ್ರಸಾರಕ್ಕಾಗಿ ತಮ್ಮನ್ನು ಸಮರ್ಪಿಸಿದ ದಂಪತಿಗಳು : ಪ.ಪೂ. ಡಾ. ಆಠವಲೆ ಮತ್ತು ಡಾ. (ಸೌ.) ಕುಂದಾ ಆಠವಲೆ (ವರ್ಷ ೧೯೯೬)

ಡಾ. ಕುಂದಾ ಆಠವಲೆಯವರ ಶಬ್ದಗಳಲ್ಲಿ……………

|| ಹರಿ ಓಂ ತತ್ಸತ್‌ ||

‘ಡಾ. ಆಠವಲೆಯವರ ಅಂದರೆ, ನನ್ನ ಪತಿದೇವರ ೮೩ ನೆಯ ಹುಟ್ಟುಹಬ್ಬ ಆಚರಣೆಯಾಗಲಿಕ್ಕಿದೆ. ಆದ್ದರಿಂದ ಅವರ ವಿಷಯದಲ್ಲಿ ಏನಾದರೂ ಬರೆಯಬೇಕೆಂದು ನನಗೆ ಸೂಚಿಸಲಾಯಿತು. ಆದ್ದರಿಂದ ನಾನು ಬರೆಯಲು ಮುಂದಾದೆನು. ‘ಡಾಕ್ಟರರ ಆಧ್ಯಾತ್ಮಿಕ ಪ್ರಯಾಣದ ವಿಷಯದಲ್ಲಿ ಮತ್ತು ನಾನು ಅನುಭವಿಸಿದ ಅವರ ಶಿಷ್ಯಭಾವದ ವಿಷಯದಲ್ಲಿ ಬರೆಯಬೇಕೆಂದು ನನಗನಿಸಿತು.

೧. ಡಾಕ್ಟರರಿಗೆ ‘ಅಧ್ಯಾತ್ಮ’ದ ಬಗ್ಗೆ ಮೂಡಿದ ಜಿಜ್ಞಾಸೆ !

೧ ಅ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಡಾಕ್ಟರರಿಗೆ ಅಧ್ಯಾತ್ಮದ ಬಗ್ಗೆ ಜಿಜ್ಞಾಸೆ ಮೂಡಿ ಆ ವಿಷಯದ ಬಗ್ಗೆ ಅವರು ಓದಲು ಪ್ರಾರಂಭಿಸುವುದು : ೧೯೭೮ ರಲ್ಲಿ ಡಾಕ್ಟರರು ಇಂಗ್ಲೆಂಡ್‌ನಿಂದ ಹಿಂತಿರುಗಿದ ನಂತರ ಅವರು ಪ್ರಾವಿಣ್ಯ ಪಡೆದಿರುವ ಸಮ್ಮೋಹನ ಚಿಕಿತ್ಸಾ ಪದ್ಧತಿ ಯಿಂದ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದರು. ಅವರ ಚಿಕಿತ್ಸಾ ಪದ್ಧತಿಗೆ ಉತ್ತಮ ಪ್ರೋತ್ಸಾಹ ಸಿಕ್ಕಿತು. ಚಿಕಿತ್ಸೆಯ ಜೊತೆಗೆ ಅವರು ಚಿಕಿತ್ಸೆಯ ವಿಷಯ ದಲ್ಲಿ ಸಂಶೋಧನೆಯನ್ನೂ ಮುಂದುವರಿಸಿದರು ಹಾಗೂ ಅದರಿಂದ ‘ಸ್ವಭಾವದೋಷ ನಿರ್ಮೂಲನೆ ಹಾಗೂ ವ್ಯಕ್ತಿತ್ವ ವಿಕಾಸ’ ಈ ಹೊಸ ಚಿಕಿತ್ಸಾ ಪದ್ಧತಿಯ ಜನ್ಮವಾಯಿತು. ಚಿಕಿತ್ಸೆಯ ಅವಧಿಯಲ್ಲಿ ರೋಗಿ ಹಾಗೂ ಸಂಬಂಧಿಕರೊಂದಿಗೆ ಚರ್ಚೆ ಮಾಡುವಾಗ ಅವರ ‘ಅಧ್ಯಾತ್ಮ’ದ ವಿಷಯದ ಅನುಭವದ ಬಗ್ಗೆ ಡಾಕ್ಟರರಿಗೆ ತಿಳಿಯಿತು. ಆದ್ದರಿಂದ ಡಾಕ್ಟರರಿಗೆ ಅಧ್ಯಾತ್ಮದ ಬಗ್ಗೆ ಜಿಜ್ಞಾಸೆ ಮೂಡಿತು. ಆ ವಿಷಯದಲ್ಲಿ ಅವರ ವಾಚನವೂ ಆರಂಭವಾಯಿತು.

೧ ಆ. ಮುಂಬಯಿಯಲ್ಲಿ ಅಧ್ಯಾತ್ಮದ ವಿವಿಧ ಅಧಿಕಾರಿ ವ್ಯಕ್ತಿಗಳನ್ನು ಭೇಟಿಯಾಗಿ ಡಾಕ್ಟರರ ಅಧ್ಯಾತ್ಮದ ಅಭ್ಯಾಸ ಆರಂಭವಾಗುವುದು : ಡಾಕ್ಟರರ ಅಣ್ಣ ಖ್ಯಾತ ಬಾಲರೋಗ ತಜ್ಞ ಡಾ. ವಸಂತ ಆಠವಲೆಯವರು ಅಧ್ಯಾತ್ಮದ ಅಭ್ಯಾಸ ಮಾಡಿದ್ದರು. ಆದ್ದರಿಂದ ಅವರು ರವಿವಾರ ‘ಪತಂಜಲಿಯೋಗಶಾಸ್ತ್ರ’ದ ಬಗ್ಗೆ ವ್ಯಾಖ್ಯಾನ ಮಾಡುತ್ತಿದ್ದರು. ಆ ವ್ಯಾಖ್ಯಾನಗಳಿಗೆ ನಾವು ಹೋಗಲು ಆರಂಭಿಸಿದೆವು. ಅವರ ಚಿಕಿತ್ಸಾಲಯದಲ್ಲಿ ಕೆಲವೊಮ್ಮೆ ರವಿವಾರ ‘ಅಧ್ಯಾತ್ಮ’ದ ವಿಷಯದಲ್ಲಿ ಜ್ಞಾನವಿರುವ ಅಧ್ಯಾತ್ಮದ ಅಧಿಕಾರಿ ವ್ಯಕ್ತಿಗಳ ವ್ಯಾಖ್ಯಾನಗಳನ್ನು ಆಯೋಜಿಸಲಾಗುತ್ತಿತ್ತು. ನಾವು ಆ ವ್ಯಾಖ್ಯಾನಗಳಿಗೆ ಉಪಸ್ಥಿತರಿರುತ್ತಿದ್ದೆವು. ನಂತರ ಒಬ್ಬ ಮಿತ್ರನ ಪರಿಚಯದಿಂದ ಶಂಕರ ಮಹಾರಾಜರ ಭಕ್ತ ಹಾಗೂ ಅಧ್ಯಾತ್ಮದ ಜ್ಞಾನವಿರುವ ಮಲಾಡದ ಶ್ರೀ. ದಾತೆಯವರಲ್ಲಿಗೆ ಪ್ರತಿ ರವಿವಾರ ನಾವು ಮಾರ್ಗದರ್ಶನಕ್ಕಾಗಿ ಹೋಗಲು ಆರಂಭಿಸಿದೆವು. ಶ್ರೀ. ದಾತೆಯವರ ಪರಿಚಯದಿಂದ ಮುಂಬಯಿಯ ಸಂತ ಪ.ಪೂ. ಮಲಂಗ ಶಹಾ ಬಾಬಾ ಈ ಸಂತರ ಭೇಟಿಯಾಯಿತು. ಅನಂತರ ಅಧ್ಯಾತ್ಮದ ಬೇರೆಯೆ ಒಂದು ಅಂಗ ಅನುಭವಿಸಲು ಸಿಕ್ಕಿತು.

೨. ಡಾಕ್ಟರರನ್ನು ‘ಆಮಂತ್ರಿತ ವ್ಯಾಖ್ಯಾನಕಾರ’ರೆಂದು ಅಮೇರಿಕಾಗೆ ಕರೆಯವುದು !

೩ ಅ. ಡಾಕ್ಟರರು ಹೊಸ ಚಿಕಿತ್ಸಾ ಪದ್ಧತಿಯ ಬಗ್ಗೆ ಶೋಧನಿಬಂಧ ಬರೆದು ಅದನ್ನು ಅಮೇರಿಕಾದ ಜಾಗತಿಕ ಸಂಸ್ಥೆಗೆ ಕಳುಹಿಸಿದ ನಂತರ ಅವರಿಗೆ ಅಭಿನಂದನೆಯ ಪತ್ರದೊಂದಿಗೆ ವ್ಯಾಖ್ಯಾನ ಮಾಡಲು ಅಲ್ಲಿಗೆ ಆಮಂತ್ರಣ ಸಿಗುವುದು : ಅದೇ ಸಮಯದಲ್ಲಿ ಡಾಕ್ಟರರು ಹೊಸ ಚಿಕಿತ್ಸಾ ಪದ್ಧತಿಯ ಬಗ್ಗೆ ಒಂದು ಶೋಧನಿಬಂಧವನ್ನು ಬರೆದರು ಹಾಗೂ ‘ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕ್ಲಿನಿಕಲ್‌ ಹಿಪ್ನೋಸಿಸ್’ (ಈಟಿಣಎಡಿಟಿಚಿಣೈಒಟಿಚಿಟ ಶೊಛೀಎಣಥಿ ಈಒಡಿ ಅಟೈಟೀಛಿಚಿಟ ಊಥಿಠಿಟಿಒಸಿಸ್) ಈ ಅಮೇರಿಕಾದಲ್ಲಿರುವ ಜಾಗತಿಕ ಸಂಸ್ಥೆಗೆ ಕಳುಹಿಸಿದರು. ಆ ಚಿಕಿತ್ಸಾ ಪದ್ಧತಿಯನ್ನು ಅಲ್ಲಿನ ಮನೋರೋಗತಜ್ಞರು ತುಂಬಾ ಹೊಗಳಿದರು. ಅವರಿಂದ ಡಾಕ್ಟರರಿಗೆ ಅಭಿನಂದನೆಯ ಪತ್ರಗಳು ಬಂದವು. ಅನಂತರ ಅಮೇರಿಕಾದ ‘ಯುಕ್ಲಾ (ಕ್ಯಾಲಿಫೋರ್ನಿಯಾ) ಯುನಿವರ್ಸಿಟಿ’ಯ ಮಾನಸೋಪಾಚಾರ ವಿಭಾಗದ ಮುಖ್ಯಸ್ಥೆ ಡಾ. ಕೆಥರೀನ ವೆಲ್ಡ್ಸ್‌ ಇವರು ಡಾಕ್ಟರರನ್ನು ‘ಆಮಂತ್ರಿತ ವ್ಯಾಖ್ಯಾನಕಾರ’ರೆಂದು ಅಮೇರಿಕಾಗೆ ಬರಲು ಆಮಂತ್ರಣ ನೀಡಿದರು. ಅವರು ಡಾಕ್ಟರರನ್ನು ‘ಡಿಸೆಂಬರ ೧೯೮೬ ರ ಚಳಿಗಾಲದ ಅಧಿವೇಶನಕ್ಕೆ ಬರಬೇಕೆಂದು ತಿಳಿಸಿದರು. ‘ನಿಮ್ಮ ವ್ಯಾಖ್ಯಾನ ಇಷ್ಟವಾದರೆ ಇನ್ನಿತರ ವಿದ್ಯಾಪೀಠಗಳಲ್ಲಿಯೂ ನಿಮ್ಮ ವ್ಯಾಖ್ಯಾನವನ್ನು ಆಯೋಜಿಸುವೆವು’, ಎಂದು ಕೂಡ ಹೇಳಿದರು.

೩ ಆ. ಡಾಕ್ಟರರು ಕೆಥರಿನ್‌ ವೇಲ್ಡ್ಸ್‌ ಇವರ ಆಮಂತ್ರಣವನ್ನು ಸ್ವೀಕರಿಸಿ ಕ್ಯಾಲಿಫೋರ್ನಿಯಾಗೆ ಹೋಗಲು ಒಪ್ಪಿದರು; ಆದರೆ ದೈವೇಚ್ಛೆ ಬೇರೆಯೆಇತ್ತು, ಆದುದರಿಂದ ಅವರಿಗೆ ಕ್ಯಾಲಿಫೋರ್ನಿಯಾಗೆ ಹೋಗಲು ಸಾಧ್ಯವಾಗಲಿಲ್ಲ : ಡಾಕ್ಟರರು ಅದನ್ನು ಒಪ್ಪಿಕೊಂಡು ಒಪ್ಪಿಗೆಯ ಪತ್ರವನ್ನು ನನಗೆ ಓದಲು ಕೊಟ್ಟು ಇನ್ನೂ ಏನಾದರೂ ಬರೆಯಬೇಕೆ ? ಎಂದು ಕೇಳಿದರು. ಆಗ ನನಗೆ ಡಾಕ್ಟರರು ೮ ವರ್ಷ ಇಂಗ್ಲೆಂಡ್‌ನಲ್ಲಿದ್ದರೂ ಅಮೇರಿಕಾಗೆ ಹೋಗಿರಲಿಲ್ಲ; ಆದ್ದರಿಂದ ನಾನು ಅವರಿಗೆ ಮುಂದಿನಂತೆ ಹೇಳಿದೆ, ”ಇಷ್ಟು ದೂರ ಹೋಗುತ್ತಿದ್ದೀರಿ, ನೀವು ಅಲ್ಲಿ ಇತರ ಸ್ಥಳಗಳನ್ನೂ ನೋಡಬಹುದು; ಆದರೆ ಒಂದು ಅಡಚಣೆ ಕಾಣಿಸುತ್ತದೆ. ಡಿಸೆಂಬರ್‌ ಎಂದರೆ ಕ್ರಿಸ್‌ಮಸ್‌ನ ತಿಂಗಳು. ಈ ತಿಂಗಳಲ್ಲಿ ವಿಮಾನ ಹಾಗೂ ರೈಲ್ವೆಯ ಮೀಸಲಾತಿ ಸಿಗಲು ಕಷ್ಟವಾಗಬಹುದು. ಅದರ ಬಗ್ಗೆ ಅವರಿಗೆ ಕೇಳಿ.’’ ಡಾಕ್ಟರರು ಅದೇ ರೀತಿ ಪತ್ರದಲ್ಲಿ ಬರೆದರು. ನಂತರ ಅವರ ಉತ್ತರ ಬಂದಿತು, ‘ನೀವು ಮೊದಲ ಬಾರಿ ಬರುವುದರಿಂದ ನಿಮಗೆ ಸುತ್ತಮುತ್ತಲಿನ ಪರಿಸರವನ್ನು ನೋಡುವ ಇಚ್ಛೆಯಾಗಬಹುದು; ಆದರೆ ಹಬ್ಬ ಇರುವುದರಿಂದ ನಿಮಗೆ ಮೀಸಲಾತಿ ಸಿಗುವುದು ಕಠಿಣವಾಗಬಹುದು. ಆದ್ದರಿಂದ ನಾನು ನಿಮ್ಮನ್ನು ‘ಸ್ಪ್ರಿಂಗ್’ (ಅಂದರೆ ಮಾರ್ಚ್ ತಿಂಗಳಲ್ಲಿನ) ಅಧಿವೇಶನಕ್ಕೆ ಕರೆಯುತ್ತೇನೆ.’ ಡಾಕ್ಟರರು ಅವರ ಆಮಂತ್ರಣವನ್ನು ಸ್ವೀಕರಿಸಿದರು; ಆದರೆ ದೈವೇಚ್ಛೆ ಬೇರೆಯೆ ಇದ್ದುದರಿಂದ ಅವರು ಕ್ಯಾಲಿಫೋರ್ನಿಯಾಗೆ ಹೋಗಲೇ ಇಲ್ಲ.

೪. ಪ.ಪೂ. ಅಣ್ಣಾ ಕರಂದೀಕರರವರ ಭೇಟಿ

೪ ಅ. ಒಬ್ಬ ಡಾಕ್ಟರ್‌ರ ಕೋರ್ಸ ಮಾಡುವ ಹುಡುಗ ಮೆದುಳಿನಲ್ಲಿ ರಕ್ತಸ್ರಾವವಾಗಿ ಸ್ಮೃತಿ ಕಳೆದುಕೊಂಡಿರುವುದರಿಂದ ಆಸ್ಪತ್ರೆಗೆ ಸೇರಿಸಿದಾಗ ಅಲ್ಲಿನ ಡಾಕ್ಟರರು ‘ಹುಡುಗನಲ್ಲಿ ಸುಧಾರಣೆಯಾಗುವುದು ಕಠಿಣವೆನಿಸುತ್ತದೆ’, ಎಂದು ಹೇಳುವುದು : ಡಿಸೆಂಬರ್‌ ೧೯೮೬ ರ ಪ್ರಾರಂಭದಲ್ಲಿ ಡಾಕ್ಟರರ ಪರಿಚಯದ ಒಬ್ಬ ಡಾಕ್ಟರರ ಮಗನಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಸ್ಮೃತಿ ಕಳೆದುಕೊಂಡಿದ್ದನು. ಅವನನ್ನು ಮುಂಬಯಿಯ ಸಾಯನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ತಜ್ಞರು ಅವನನ್ನು ಪರೀಕ್ಷಿಸಿದರು. ಶಸ್ತ್ರಚಿಕಿತ್ಸೆ ಗಾಗಿ ಅವನನ್ನು ಶಸ್ತ್ರಕ್ರಿಯಾಗೃಹಕ್ಕೆ ಸಾಗಿಸಿದರು; ಆದರೆ ಅವನ ಸ್ಥಿತಿ ಹದಗೆಟ್ಟಿದ್ದರಿಂದ ಅವನನ್ನು ಹೊರಗಿನ ಕೋಣೆಯಲ್ಲಿಯೆ ಇಡಲಾಯಿತು. ಅವನ ಶಸ್ತ್ರಚಿಕಿತ್ಸೆ ಆಗಲಿಲ್ಲ. ಅಲ್ಲಿನ ಡಾಕ್ಟರರು, ”ಇವನ ಆರೋಗ್ಯದಲ್ಲಿ ಸುಧಾರಣೆಯಾದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಬಹುದು’’ ಎಂದು ಹೇಳಿದರು. ಎರಡು ದಿನಗಳ ನಂತರ ಅವರು, ”ಹುಡುಗನಲ್ಲಿ ಸುಧಾರಣೆ ಯಾಗುವುದು ಕಠಿಣವೆನಿಸುತ್ತದೆ. ನಿಮಗೆ ನಿಮ್ಮ ದೈವೀ ಉಪಾಯ ಮಾಡಲಿಕ್ಕಿದ್ದರೆ, ನೀವು ಮಾಡಬಹುದು,’’ ಎಂದರು. ಅದಕ್ಕನುಸಾರ ಎಲ್ಲರೂ ನಾಮಜಪಾದಿ ಉಪಾಯ ಆರಂಭಿಸಿದರು.

೪ ಆ. ಸಾಯನ್‌ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಡಾಕ್ಟರರ ಮಿತ್ರರು ಓರ್ವ ವೈದ್ಯರ ಮಾಹಿತಿ ನೀಡಿ ಅವರನ್ನು ಭೇಟಿಯಾಗಲು ಹೇಳಿದರು, ಅದೇ ರೀತಿ ಮರುದಿನ ಅವರಲ್ಲಿಗೆ ಹೋಗಲು ನಿರ್ಧರಿಸುವುದು : ಮರುದಿನ ಸಾಯನ್‌ ಆಸ್ಪತ್ರೆಯಿಂದ ಮನೆಗೆ ಬಂದಿರುವಾಗ ಡಾಕ್ಟರರ (ಡಾ. ಆಠವಲೆಯವರ) ಓರ್ವ ಮಿತ್ರ ಅವರನ್ನು ಕಾಯುತ್ತಾ ಕುಳಿತಿರುವುದು ಕಾಣಿಸಿತು. ಮೊದಲು ಅವರನ್ನು ವಿಚಾರಿಸಿಕೊಂಡು ಅವರಿಗೆ ರೋಗಿಯ ವಿಷಯ ಹೇಳಿದೆನು. ಆಗ ಅವರು, ”ನನ್ನ ಮಿತ್ರನ ಪರಿಚಯದ ಅಧ್ಯಾತ್ಮ ಮಾರ್ಗದ ಓರ್ವ ವ್ಯಕ್ತಿ ಇದ್ದಾರೆ. ಅವರು ವೈದ್ಯರಾಗಿದ್ದು ಆಯುರ್ವೇದ ಔಷಧ ಕೊಡುತ್ತಾರೆ ಹಾಗೂ ಅವರು ಅನೇಕ ಜನರನ್ನು ಗುಣಪಡಿಸಿದ್ದಾರೆ. ಪ್ರತಿ ತಿಂಗಳ ಮೊದಲ ಶನಿವಾರ-ರವಿವಾರ ಅವರು ದಾದರ್‌ನ ‘ಎಸ್‌.ಕೆ. ಬೋಲೆ ರೋಡ್‌ನಲ್ಲಿನ ಒಂದು ‘ಗೆಸ್ಟ್ ಹೌಸ್‌’ನಲ್ಲಿ ರೋಗಿಗಳನ್ನು ನೋಡುತ್ತಾರೆ. ಸದ್ಯ ತಿಂಗಳ ಮೊದಲ ಶನಿವಾರ-ರವಿವಾರ ಇರುವುದರಿಂದ ಅವರು ಇಲ್ಲಿಗೆ ಬಂದಿದ್ದಾರೆ. ನಾವು ಅವರನ್ನು ಭೇಟಿಯಾಗಬಹುದು,’’ ಎಂದರು. ಡಾಕ್ಟರರು ಅವರ ಅಣ್ಣ (ಸದ್ಗುರು ದಿ.) ವಸಂತ ಆಠವಲೆಯವರನ್ನು ವಿಚಾರಿಸಿ ಮರುದಿನ ಅವರಲ್ಲಿಗೆ ಹೋಗಲು ನಿರ್ಧರಿಸಿದರು. ಆ ದಿನ ಆ ವೈದ್ಯರಲ್ಲಿಗೆ (ಪ.ಪೂ. ಅಣ್ಣಾ ಕರಂದೀಕರ್‌ ಅವರಲ್ಲಿಗೆ) ಹೋಗುವಾಗ ಡಾಕ್ಟರರ ಮಿತ್ರ ವೈದ್ಯರ ವಿಷಯದಲ್ಲಿ ಬಂದಿರುವ ಅನುಭವ ಹಾಗೂ ಅವರ ಅಧ್ಯಾತ್ಮ ಜ್ಞಾನದ ವಿಷಯದಲ್ಲಿ ಬಹಳಷ್ಟು ಹೇಳಿದರು.

೪ ಇ. ಪ.ಪೂ. ಅಣ್ಣಾ ಕರಂದೀಕರ್‌ ಇವರಿಗೆ ರೋಗಿಯ ವಿಷಯ ದಲ್ಲಿ ಏನೂ ಹೇಳುವ ಮೊದಲೆ ಅವರು ‘ರೋಗಿಗೆ ಔಷಧದಿಂದ ಲಾಭವಾಗಬಹುದು’, ಎಂದು ಅನಿಸುವುದಿಲ್ಲ’, ಎಂದು ಹೇಳಿ ಔಷಧ ಕೊಟ್ಟರು ಹಾಗೂ ಡಾಕ್ಟರರು ‘ನಿಮ್ಮ ಅಧ್ಯಾತ್ಮಜ್ಞಾನದ ಲಾಭ ಪಡೆಯಲು ನಿಮ್ಮಲ್ಲಿಗೆ ಬರಬಹುದೇ’, ಎಂದು ಕೇಳಿ ಅವರಿಂದ ಅನುಮತಿ ಪಡೆಯುವುದು : ಅಲ್ಲಿಗೆ ಹೋದಾಗ ಡಾಕ್ಟರರು ಏನೂ ಹೇಳುವ ಮೊದಲೆ ಪ.ಪೂ. ಅಣ್ಣಾ ಕರಂದೀಕರ್‌ ಮಂದಿನಂತೆ ಹೇಳಿದರು, ”ನೀವು ಔಷಧ ತೆಗೆದುಕೊಳ್ಳಲು ಬಂದಿದ್ದೀರಿ; ಆದರೆ ‘ಅದರಿಂದ ಏನೂ ಉಪಯೋಗವಾಗಬಹುದೆಂದು ನನಗೆ ಅನಿಸುವುದಿಲ್ಲ; ಆದರೆ ನೀವು ಬಂದಿದ್ದೀರಿ; ಆದುದರಿಂದ ಔಷಧ ಕೊಡುತ್ತೇನೆ. ನೀವು ಪುನಃ ಸೋಮವಾರ ಬನ್ನಿ, ರೋಗಿ ಜೀವಂತವಿದ್ದರೆ ಆ ಮೇಲೆ ಅವನಿಗೆ ಔಷಧೋಪಚಾರ ಅನ್ವಯವಾಗುವುದು !’’ ಪುನಃ ಹೊರಡುವಾಗ ಡಾಕ್ಟರರು ಅವರಿಗೆ ಕೇಳಿದರು, ”ನಿಮ್ಮ ಅಧ್ಯಾತ್ಮ ಜ್ಞಾನದ ಲಾಭ ನಮಗೆ ಪಡೆಯಲಿಕ್ಕಿದೆ. ನೀವು ಮುಂಬಯಿಗೆ ಬರುವಾಗ ನಾವು ನಿಮ್ಮನ್ನು ಭೇಟಿಯಾಗಲು ಬರಬಹುದೇ ?’’ ಆಗ ಅವರು ನಗುತ್ತಾ ಒಪ್ಪಿಗೆ ಕೊಟ್ಟರು. ಸೋಮವಾರ ರೋಗಿ ಜೀವಂತ ಇದ್ದಾನೆಂದು ತಿಳಿಯಿತು; ಆದ್ದರಿಂದ ಡಾ. ಪ.ಪೂ. ಅಣ್ಣಾರವರನ್ನು ಭೇಟಿಯಾಗಲು ಪುನಃ ಅವರಲ್ಲಿಗೆ ಹೋದರು. ಅಣ್ಣಾರವರಿಗೆ ತುಂಬಾ ಆಶ್ಚರ್ಯವೆನಿಸಿತು. ಅವರು, ‘ರೋಗಿ ಜೀವಂತವಿದ್ದರೆ ನಾನು ಬೇರೆ ಔಷಧಿ ಕೊಡುತ್ತೇನೆ’’ ಎಂದು ಹೇಳಿದರು. ಔಷಧಿ ತೆಗೆದುಕೊಂಡು ಇವರು ಮನೆಗೆ ಬಂದರು.

೪ ಈ. ಪ.ಪೂ. ಅಣ್ಣಾ ಕರಂದೀಕರ್‌ ಇವರಲ್ಲಿಗೆ ಹೋಗಲು ಆರಂಭಿಸಿದ ನಂತರ ಅವರ ಆಧ್ಯಾತ್ಮಿಕ ಜ್ಞಾನ ಮತ್ತು ದೂರದೃಷ್ಟಿಯ ಅನುಭವವಾಗಲು ಆರಂಭವಾಗುವುದು : ಅನಂತರ ಪ್ರತಿ ತಿಂಗಳ ಮೊದಲ ಶನಿವಾರ-ರವಿವಾರ ನಾವು ಪ.ಪೂ. ಅಣ್ಣಾ ಕರಂದಿಕರರಲ್ಲಿಗೆ ಹೋಗುವುದನ್ನು ನಿರ್ಧರಿಸಲಾಯಿತು. ಈ ಭೇಟಿಯಲ್ಲಿ ಅವರ ಆಧ್ಯಾತ್ಮಿಕ ಜ್ಞಾನದ ಹಾಗೂ ದೂರದೃಷ್ಟಿಯ ಅನುಭವವಾಯಿತು. ರೋಗಿ ಬರುವ ಮೊದಲೆ ‘ಇಂತಹ ರೋಗಿ ಬರಲಿದ್ದಾನೆ ಹಾಗೂ ಅವನ ಲಕ್ಷಣ ಹೀಗೀಗೆ ಇರುತ್ತವೆ’, ಎಂದು ಅವರು ಹೇಳುತ್ತಿದ್ದರು. ಅದೆಲ್ಲವೂ ನಿಜವಾಗುತ್ತಿತ್ತು. ಪ.ಪೂ.ಅಣ್ಣಾ ರೋಗಿಗಳ ವಿಷಯದಲ್ಲಿ ಸ್ವತಃ ಕೆಲವು ಮಾಹಿತಿಯನ್ನು ಹೇಳುತ್ತಿದ್ದರು. ಆಗ ರೋಗಿಗಳು ಆಶ್ಚರ್ಯಚಕಿತರಾಗುತ್ತಿದ್ದರು.

೪ ಉ. ಪ.ಪೂ. ಅಣ್ಣಾ ಕರಂದೀಕರ್‌ ಇವರು ಸೂಚಿಸಿದಂತೆ ಪ್ರಯತ್ನಿಸಿದಾಗ ಆಠವಲೆ ಮನೆತನದ ಕುಲದೇವಿಯ ಪರಿಚಯವಾಗಿ ಅವಳ ದರ್ಶನವಾಗುವುದು

೪ ಉ ೧. ಪ.ಪೂ. ಅಣ್ಣಾ ಕರಂದೀಕರ್‌ ಇವರು ಡಾಕ್ಟರರಿಗೆ ಧ್ಯಾನದಲ್ಲಿ ಹೋಗಿ ಏನು ಕಾಣಿಸುತ್ತದೆಯೋ, ಅದನ್ನು ಚಿತ್ರಿಸಲು ಹೇಳುವುದು ಹಾಗೂ ಅಂಬಾಜೋಗಾಯಿಗೆ ಹೋದ ನಂತರ ಧ್ಯಾನದಲ್ಲಿ ಕಾಣಿಸಿದ ಚಿತ್ರದ ಹಾಗೆಯೆ ಮೂರ್ತಿಯಲ್ಲಿ ಏನಾದರೂ ಕಾಣಿಸಿದರೆ ‘ಅವಳೇ ನಿಮ್ಮ ಕುಲದೇವಿ ಆಗಿರುತ್ತಾಳೆ’, ಎಂದು ಹೇಳುವುದು : ಮೊದಲ ಭೇಟಿಯಲ್ಲಿಯೆ ಪ.ಪೂ. ಅಣ್ಣಾರವರು ನಮಗೆ ನಮ್ಮ ಕುಲದೇವಿಯ ಉಪಾಸನೆ ಮಾಡಲು ಹೇಳಿದರು; ಆದರೆ ಡಾಕ್ಟರರ ತಂದೆ (ತೀ. ದಾದಾ ಅಂದರೆ ಪೂ. ಬಾಳಾಜಿ ಆಠವಲೆ)ಯವರ ತಾಯಿ-ತಂದೆಯವರು ಚಿಕ್ಕಂದಿನಲ್ಲಿಯೆ ಪ್ಲೇಗ್‌ನ ಸೋಂಕಿಗೆ ಬಲಿಯಾಗಿದ್ದರು. ಆಗ ಅವರು ತುಂಬಾ ಚಿಕ್ಕವರಾಗಿದ್ದರು. ಆದ್ದರಿಂದ ಅವರಿಗೆ ಕುಲದೇವತೆಯ ವಿಷಯ ದಲ್ಲಿ ಮಾಹಿತಿಯಿರಲಿಲ್ಲ. ಅನೇಕ ಕೊಂಕಣಿ ಬ್ರಾಹ್ಮಣರ ಕುಲದೇವಿ ಅಂಬಾಜೋಗಾಯಿಯ ‘ಶ್ರೀ ಯೋಗೇಶ್ವರೀದೇವಿ‘ ಆಗಿದ್ದಳು; ಆದ್ದರಿಂದ ಅವರು ಅವಳ ಉಪಾಸನೆ ಮಾಡುತ್ತಿದ್ದರು. ಅನಂತರ ಪ.ಪೂ. ಅಣ್ಣಾ ಕರಂದೀಕರ್‌ ಇವರು ಸೂಚಿಸಿದರು, ”ನೀವು ಧ್ಯಾನಕ್ಕೆ ಹೋಗಿ ಧ್ಯಾನದಲ್ಲಿ ನಿಮಗೆ ಏನು ಕಾಣಿಸುತ್ತದೆಯೋ, ಅದನ್ನು ಚಿತ್ರಿಸಿ. ನೀವು ಅಂಬೋಜಾಗಾಯಿ ಮಂದಿರಕ್ಕೆ ಹೋದಾಗ ನೀವು ಚಿತ್ರಿಸಿದ ಚಿತ್ರದ ಹಾಗೆಯೆ ಮೂರ್ತಿಯಲ್ಲಿ ಏನಾದರೂ ಕಾಣಿಸಿದರೆ, ಅವಳೇ ನಿಮ್ಮ ಕುಲದೇವಿ ಆಗಿರುತ್ತಾಳೆ.’’

೪ ಉ ೨. ಅಂಬಾಜೋಗಾಯಿಯ ಮಂದಿರಕ್ಕೆ ಹೋದಾಗ ಚಿತ್ರದಲ್ಲಿ ಚಿತ್ರಿಸಿದಂತೆಯೆ ಸಂಕೇತಗಳು ಮೂರ್ತಿಯಲ್ಲಿ ಕಾಣಿಸುವುದು ಹಾಗೂ ಅಂದಿನಿಂದ ಕುಲದೇವತೆಯೆಂದು ಶ್ರೀ ಯೋಗೇಶ್ವರೀದೇವಿ‘ಯ ಉಪಾಸನೆ ಆರಂಭವಾಗುವುದು : ಪ.ಪೂ. ಅಣ್ಣಾರವರು ಹೇಳಿದಂತೆಯೆ ಡಾಕ್ಟರ್, ಡಾಕ್ಟರರ ಅಣ್ಣ (ಸದ್ಗುರು ಡಾ.) ವಸಂತ ಆಠವಲೆ ಮತ್ತು ನಾನು ಧ್ಯಾನದಲ್ಲಿ ಕುಳಿತು ನಮಗೆ ಏನು ಕಾಣಿಸಿತೊ, ಅದನ್ನು ಚಿತ್ರಿಸಿದೆವು. ಆಶ್ಚರ್ಯವೆಂದರೆ, ಅಂಬಾಜೋಗಾಯಿಯ ಮಂದಿರಕ್ಕೆ ಹೋದಾಗ ನಮಗೆ ಕಾಣಿಸಿದ ಮೂರೂ ವಿಷಯಗಳು ದೇವಿಯ ‘ಅಕ್ಕಿಯ’ (ಒಂದು ಪ್ರಕಾರದ ಕಲ್ಲು) ಸ್ವರೂಪದಲ್ಲಿ ಇರುವ ಮೂರ್ತಿಯಲ್ಲಿ ಕಾಣಿಸಿತು. ಅಂದಿನಿಂದ ಕುಲದೇವತೆಯೆಂದು ಶ್ರೀ ಯೋಗೇಶ್ವರೀದೇವಿ‘ಯ ಉಪಾಸನೆ ಆರಂಭವಾಯಿತು.

೪ ಊ. ಪ.ಪೂ. ಅಣ್ಣಾರವರು ‘ಡಾಕ್ಟರ್, ನೀವು ನನ್ನ ಜೀವನದಲ್ಲಿ ತುಂಬಾ ತಡವಾಗಿ ಬಂದಿದ್ದೀರಿ !’, ಎಂದು ಹೇಳಿದಾಗ ಅವರ ಮಾತಿನ ಭಾವಾರ್ಥ ತಿಳಿಯಲಿಲ್ಲ ಹಾಗೂ ೧ ವರ್ಷದಲ್ಲಿ ಆವರಿಗೆ ಕಾಯಿಲೆ ಬಂದಾಗ ಅದು ಅರ್ಥವಾಗುವುದು : ಎಪ್ರಿಲ್‌ ೧೯೮೭ ರಲ್ಲಿ ಭೇಟಿಯಾದಾಗ ಪ.ಪೂ. ಕರಂದೀಕರ್‌ ಇವರು ನಮಗೆ ಮುಂದಿನಂತೆ ಹೇಳಿದರು, ”ನಾನು ನಿಮ್ಮ ಗುರು ಅಲ್ಲ. ಯೋಗ್ಯ ಕಾಲ ಬಂದಾಗ ಅವರು ನಿಮ್ಮ ಜೀವನದಲ್ಲಿ ಬರುವರು !’’ ನಂತರ ಅವರು ಹೀಗೂ ಹೇಳಿದರು, ”ಡಾಕ್ಟರ್, ನೀವು ನನ್ನ ಜೀವನದಲ್ಲಿ ತುಂಬಾ ತಡವಾಗಿ ಬಂದಿದ್ದೀರಿ !’’ ಆಗ ಡಾಕ್ಟರರಿಗೆ ಅನಿಸಿತು, ‘ಹಿಂದೆ ಪ.ಪೂ. ಅಣ್ಣಾ ಸಾತಾರಾ, ನಾಶಿಕ್, ಪುಣೆ ಮತ್ತು ಮುಂಬಯಿ ಈ ನಾಲ್ಕು ಸ್ಥಳಗಳಿಗೆ ಒಂದು ಶನಿವಾರ-ರವಿವಾರ ಹೋಗುತ್ತಿದ್ದರು. ನಂತರ ವಯಸ್ಸಿನ ಬಂಧನದಿಂದ ಅವರು ಸಾತಾರಾ, ನಾಶಿಕ್‌ಗೆ ಹೋಗುವುದನ್ನು ನಿಲ್ಲಿಸಿದರು; ಆದರೆ ಮೊದಲ ಶನಿವಾರ-ರವಿವಾರ ಅವರು ಮುಂಬಯಿಗೆ ಬರುತ್ತಿದ್ದರು ಹಾಗೂ ಮೂರನೇ ಶನಿವಾರ-ರವಿವಾರ ಪುಣೆಗೆ ಹೋಗುತ್ತಿದ್ದರು. ಈಗ ಬಹುಶಃ ಪ.ಪೂ. ಅಣ್ಣಾ ಮುಂಬಯಿಗೆ ಬರುವುದನ್ನು ನಿಲ್ಲಿಸಬಹುದು; ಎಂದು ಡಾಕ್ಟರ್‌ ಅವರಿಗೆ ಹೇಳಿದರು, ”ನಾವು ನಿಮ್ಮನ್ನು ಭೇಟಿಯಾಗಲು ಡಹಾಣುವಿಗೆ ಬರುವೆವು.’’ ಆಗ ಪ.ಪೂ. ಅಣ್ಣಾ ನಕ್ಕರು. ‘ಅವರ ನಗುವಿನ ಅರ್ಥ ಮುಂದೆ ತಿಳಿಯಿತು. ಮುಂದಿನ ಎಪ್ರಿಲ್‌ನಲ್ಲಿ (ಎಪ್ರಿಲ್‌ ೧೯೮೮ ರಲ್ಲಿ) ಅವರ ಕಾಯಿಲೆ ಪ್ರಾರಂಭವಾಯಿತು ಹಾಗೂ ೮-೯ ತಿಂಗಳಲ್ಲಿಯೆ ಅವರು ದೇಹತ್ಯಾಗ ಮಾಡಿದರು.

೪ ಎ. ಪೂಜ್ಯ ಪಾಂಡುರಂಗಶಾಸ್ತ್ರಿ ಆಠವಲೆಯವರ ಭೇಟಿಗಾಗಿ ಠಾಣೆಯ ಆಶ್ರಮಕ್ಕೆ ಹೋದೆವು, ಆದರೆ ಅವರ ಭೇಟಿಯಾಗಲಲ್ಲ : ಮೇ ೧೯೮೭ ರಲ್ಲಿ ಪ.ಪೂ. ಅಣ್ಣಾ ಕರಂದೀಕರ್‌ ನಮಗೆ ಪೂಜ್ಯ ಪಾಂಡುರಂಗ ಶಾಸ್ತ್ರಿ ಆಠವಲೆಯವರ ಠಾಣೆಯ ಆಶ್ರಮಕ್ಕೆ ಕರೆದುಕೊಂಡು ಹೋಗಿದ್ದರು; ಆದರೆ ಆಗ ಅವರು ಆಶ್ರಮದಲ್ಲಿ ಇಲ್ಲದ ಕಾರಣ ನಾವು ಹಿಂತಿರುಗಿ ಬಂದೆವು. ಅವರ ಶಿಷ್ಯತ್ವವನ್ನು ಗಳಿಸುವ ಯೋಗವಿರಲಿಲ್ಲ. ‘ನಮ್ಮ ಸ್ಥಾನ ಬೇರೆ ಕಡೆಯಲ್ಲಿ ನಿರ್ಧರಿಸಲ್ಪಟ್ಟಿತ್ತು’, ಎಂದು ಕಾಣಿಸುತ್ತದೆ.

೪ ಏ. ‘ಶ್ರೀ ರಾಮ ಭೋಸಲೆ’ ಎಂಬ ಸ್ವಾತಂತ್ರ್ಯ ಸೈನಿಕ ಹಾಗೂ ಆಧ್ಯಾತ್ಮಿಕ ಜ್ಞಾನವಿರುವ ವ್ಯಕ್ತಿಯನ್ನು ಭೇಟಿಯಾಗಲು ಹೋಗಿ ಮನೆಗೆ ಹಿಂತಿರುಗಿದಾಗ ಪ.ಪೂ. ಅಣ್ಣಾ ಕರಂದೀಕರ್‌ ಇವರ ಪತ್ರ ಸಿಗುವುದು : ೧೨ ಜುಲೈ ೧೯೮೭ ರಲ್ಲಿ ನಾವು ‘ಶ್ರೀ. ರಾಮ ಭೋಸಲೆ’ ಎಂಬ ಸುಪ್ರಸಿದ್ಧ ಮಾಲೀಶ್‌ ತಜ್ಞರಾದ ಸ್ವಾತಂತ್ರ್ಯ ಸೈನಿಕ ಹಾಗೂ ಆಧ್ಯಾತ್ಮಿಕ ಜ್ಞಾನವಿರುವ ವ್ಯಕ್ತಿಯನ್ನು ಭೇಟಿಯಾಗಲು ಹೋಗಿದ್ದೆವು. ಅವರು ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಮಹಾರಾಷ್ಟ್ರದ ‘ಪತ್ರಿ ಸರ್ಕಾರ’ದಲ್ಲಿ (ಮಹಾರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸ್ಥಾಪಿತವಾದ ಒಂದು ಸಮಾನಾಂತರ ಸರ್ಕಾರದಲ್ಲಿ) ಇದ್ದರು. ಅವರ ಮೇಲೆ ಆಂಗ್ಲ ಸರಕಾರ ವಾರಂಟ್‌ ಹೊರಡಿಸಿತ್ತು; ಆದ್ದರಿಂದ ಅವರು ಹಿಮಾಲಯದಲ್ಲಿ ಅಡಗಿದ್ದರು. ಅಲ್ಲಿ ಅವರಿಗೆ ಅಧ್ಯಾತ್ಮ ಮಾರ್ಗದಲ್ಲಿನ ವಿಭೂತಿಗಳು ಭೇಟಿಯಾಗಿದ್ದರು. ಮಹರ್ಷಿ ಯೋಗಾನಂದರ ಪರಾತ್ಪರ ಗುರು ಶ್ರೇಷ್ಠಯೋಗಿ ಬಾಬಾಜೀ ಮಹಾರಾಜರು ಕೂಡ ಅವರಿಗೆ ಭೇಟಿಯಾಗಿದ್ದರು. ಶ್ರೀ. ಭೋಸಲೆಯವರೊಂದಿಗೆ ೨-೩ ಗಂಟೆ ಚರ್ಚೆ ಮಾಡಿದ ನಂತರ ಮುಂದಿನ ರವಿವಾರ ಪುನಃ ಬರುವುದಾಗಿ ನಿರ್ಧರಿಸಿ ನಾವು ಮನೆಗೆ ಬಂದೆವು. ಆಗ ನಮಗೆ ಪ.ಪೂ. ಅಣ್ಣಾ ಕರಂದೀಕರ್‌ ಇವರ ಸಂದೇಶದ ಪತ್ರ ಸಿಕ್ಕಿತು. ಆ ಪತ್ರವೆಂದರೆ ಪಾಲಘರದಲ್ಲಿನ ‘ಗುರುಪೂರ್ಣಿಮೆಯ ಆಮಂತ್ರಣ ಪತ್ರಿಕೆಯಾಗಿತ್ತು ಹಾಗೂ ಆ ವಿಳಾಸಕ್ಕೆ ತಕ್ಷಣ ಬರಲು ಹೇಳಿದ್ದರು.

೪ ಏ ೧. ಪಾಲಘರಕ್ಕೆ ತಲುಪಲು ತಡವಾದ ಕಾರಣ ಅಲ್ಲಿ ಯಾರೂ ಭೇಟಿಯಾಗದಿರುವುದು : ಪ.ಪೂ. ಅಣ್ಣಾರವರ ಸಂದೇಶವನ್ನು ಓದಿ ನಾವು ಆಗಲೆ ಹೊರಟೆವು; ಆದರೆ ನಾವು ಪಾಲಘರಕ್ಕೆ ತಲಪುವಾಗ ಸಾಯಂಕಾಲದ ೫ ಗಂಟೆಯಾಗಿತ್ತು. ನಾವು ಅವರು ಕೊಟ್ಟಿರುವ ವಿಳಾಸಕ್ಕೆ ಹೋದೆವು; ಆದರೆ ಅಲ್ಲಿ ಯಾರೂ ಇರಲಿಲ್ಲ. ಸಮಾರಂಭ ಮುಗಿದು ಜನರು ಹೋಗಿದ್ದರು. ಅಲ್ಲಿ ಅಕ್ಕಪಕ್ಕದವರಿಗೆ ಕೇಳಿದೆವು; ಅದರೆ ಅವರಿಗೆ ‘ಎಲ್ಲರೂ ಎಲ್ಲಿಗೆ ಹೋದರೆಂದು ಹೇಳಲು ಸಾಧ್ಯವಾಗಲಿಲ್ಲ. ನಾವು ನಿರಾಶರಾಗಿ ಹಿಂತಿರುಗಿ ಬಂದೆವು.

೪ ಒ. ಪ.ಪೂ. ಅಣ್ಣಾರವರು ಪಾಲಘರಕ್ಕೆ ಬರಲಿಲ್ಲವೆಂದು ಕೋಪಿಸಿಕೊಂಡರು. ಬರದಿರುವುದರ ಕಾರಣ ತಿಳಿದಾಗ ಶಾಂತರಾದರು : ಮುಂದಿನ ವಾರ ಗುರುವಾರ ಬೆಳಗ್ಗೆ ಪ.ಪೂ.ಅಣ್ಣಾ ಕರಂದೀಕರ್‌ ನಮ್ಮ ಮನೆಗೆ ಬಂದರು ಹಾಗೂ ಪಾಲಘರಕ್ಕೆ ಬರಲಿಲ್ಲವೆಂದು ಕೋಪಗೊಂಡಿದ್ದರು. ಡಾಕ್ಟರರು ನಮ್ರತೆಯಿಂದ ಎಲ್ಲವನ್ನೂ ಅವರಿಗೆ ವಿವರಿಸಿದರು. ಆಗ ಪ.ಪೂ.ಅಣ್ಣಾರವರ ಕೋಪ ಶಮನವಾಯಿತು. ನಂತರ ಅವರು, ”ಸೋಮವಾರ ಜುಲೈ ೨೦ ರಂದು ನಾನು ಇಂದೂರಿಗೆ ಹೋಗುತ್ತಿದ್ದೇನೆ. ನೀವು ನನ್ನ ಜೊತೆಗೆ ಬರುವಿರಾ ?’’ ಎಂದು ಕೇಳಿದರು.

– ಡಾ. (ಸೌ.) ಕುಂದಾ ಜಯಂತ ಆಠವಲೆ (೨೧.೪.೨೦೨೫) (ಮುಂದುವರಿಯುವುದು)

ಇದರ ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ – https://sanatanprabhat.org/kannada/147811.html