
‘ಪರಾತ್ಪರ ಗುರು ಡಾ. ಆಠವಲೆಯವರ ಸ್ಥಿತಿ ಹೇಗಿದೆ ಎಂದರೆ, ಅವರನ್ನು ಮೇಲಿನವರು ಮೇಲೆ ಎಳೆಯುತ್ತಿದ್ದಾರೆ. (ಪರಮೇಶ್ವರನು ಅವರನ್ನು ಸರ್ವೋಚ್ಚ ಸ್ಥಿತಿಯಲ್ಲಿ ಸ್ಥಿರಗೊಳಿಸುತ್ತಿದ್ದಾನೆ.) ಆಧ್ಯಾತ್ಮಿಕ ಮಟ್ಟ ಶೇ. ೧೦೦ ಕ್ಕಿಂತ ಹೆಚ್ಚಾದರೆ, ಮೇಲೆ ಎಳೆಯಲಾಗುತ್ತದೆ. ಪರಾತ್ಪರ ಗುರು ಡಾಕ್ಟರರು ಪರಮೇಶ್ವರೀ ತತ್ತ್ವದಲ್ಲಿ ವಿಲೀನವಾಗಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಅವರು ಸಗುಣಕ್ಕೂ ಕಾರಣರಾಗಿದ್ದಾರೆ (ಅವರು ಹಿಂದೂ ರಾಷ್ಟ್ರದ ಸ್ಥಾಪನೆ ಗಾಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ); ಆದುದರಿಂದ ಅವರು ಋಷಿಮುನಿಗಳಾಗಿ ಸಾಧಕರ ಆವಶ್ಯಕತೆಗಳನ್ನು ಪೂರೈಸಲು ಎಲ್ಲ ಸಂತರಿಂದ ಪ್ರಯತ್ನಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ಕಾಗಿ ಅವರನ್ನು ಕೆಳಗೆ ಎಳೆಯಲಾಗುತ್ತಿದೆ. (ಈ ಕಾರ್ಯಕ್ಕಾಗಿ ಅವರು ಸಗುಣದಲ್ಲಿಯೂ ಇರಬೇಕಾಗಿದೆ).

೧. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪರಾತ್ಪರ ಗುರು ಡಾಕ್ಟರರಿಗೆ ಸಗುಣದಲ್ಲಿ ಬರಬೇಕಾಗಿದೆ ಸಮಾಧಿ ಸ್ಥಿತಿಗೆ ಹೋಗುವಾಗಲು ವಾಸನೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಪಕ್ಕದಲ್ಲಿ ಪೇಡಾ ಇತ್ಯಾದಿಗಳನ್ನು ಇಡುತ್ತಾರೆ. ನನಗೆ ಈ ಪೇಡಾವನ್ನು ತಿನ್ನಬೇಕಾಗಿದೆ, ಆದುದರಿಂದ ಸಮಾಧಿ ಸ್ಥಿತಿಯಿಂದ ಕೆಳಗೆ ಬರಬೇಕಾಗಿದೆ. ಅದೇ ರೀತಿ ಪರಾತ್ಪರ ಗುರು ಡಾಕ್ಟರರದ್ದಾಗಿದೆ. ಸಗುಣದ ಕಾರ್ಯಕ್ಕಾಗಿ (ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ) ಪರಾತ್ಪರ ಗುರು ಡಾಕ್ಟರರಿಗೆ ಜೀವದಶೆಗೆ ಬರಬೇಕಾಗುತ್ತದೆ.

೨. ಕಲಿಯುಗದಲ್ಲಿನ ವಿಕೃತ ಪರಿಸ್ಥಿತಿಯನ್ನು ಸತ್‌ಪ್ರವೃತ್ತ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ಸಗುಣ ಸ್ಥಿತಿಯಲ್ಲಿ ಬದ್ಧರಾಗಿದ್ದಾರೆ ಪರಾತ್ಪರ ಗುರು ಡಾಕ್ಟರರ ಸ್ಥಿತಿ ತ್ರಿಶಂಕು ವಿನಂತಾಗಿದೆ. ಅವರನ್ನು ಒಬ್ಬರು ಮೇಲೆ ಎಳೆಯುತ್ತಿದ್ದಾರೆ. (ಅವರು ಪರಮೇಶ್ವರೀ ತತ್ತ್ವದಲ್ಲಿ ವಿಲೀನಗೊಳ್ಳುತ್ತಿದ್ದಾರೆ.) ಚೈತನ್ಯಮಹಾಪ್ರಭುಗಳು ತತ್ತ್ವದಲ್ಲಿ ವಿಲೀನಗೊಳ್ಳಲು ಸಮುದ್ರದಲ್ಲಿ ಹೋಗುತ್ತಿದ್ದರು. ಆಗ ಅವರನ್ನು ಯಾರೋ ಎಳೆದುಕೊಂಡು ಬರುತ್ತಿದ್ದರು. ಕೊನೆಗೆ ಬಾಗಿಲು ಮುಚ್ಚಿ ಭಗವಂತನ ಮೂರ್ತಿಯ ಹತ್ತಿರ ಕುಳಿತು ಅವರು ಅದರಲ್ಲಿ ವಿಲೀನರಾದರು. ಜ್ಞಾನೇಶ್ವರ ಮಹಾರಾಜರು ವಿಲೀನರಾಗಲಿಲ್ಲ, ಅವರು ಸಮಾಧಿಯನ್ನು ತೆಗೆದುಕೊಂಡರು. ಮುಕ್ತಾಬಾಯಿ, ಶ್ರೀರಾಮ ಮೊದಲಾದವರು ನದಿಯಲ್ಲಿ ಹೋಗಿ ಜಲಸಮಾಧಿ ತೆಗೆದುಕೊಂಡರು; ಆದರೆ ಪರಾತ್ಪರ ಗುರು ಡಾಕ್ಟರರದ್ದು ಬೇರೆಯೇ ಆಗಿದೆ. ಅವರು ಕಾರ್ಯವಶದಿಂದ ಬದ್ಧರಾಗಿದ್ದಾರೆ. ಕಲಿಯುಗದಲ್ಲಿ ಇಂತಹ ಪರಿಸ್ಥಿತಿ ಎಂದಿಗೂ ಬಂದಿರಲಿಲ್ಲ. ಇಷ್ಟು ಅತ್ಯಂತ ವಿಕೃತ ಪರಿಸ್ಥಿತಿಯನ್ನು ಸತ್‌ಪ್ರವೃತ್ತವನ್ನಾಗಿ ಮಾಡಲು, ಉತ್ಕ್ರಾಂತಿ ಮಾಡುವ ಕಠಿಣ ಕಾರ್ಯ ಅವರ ಕಡೆಗೆ ಬಂದಿದೆ ಮತ್ತು ಅದನ್ನು ಶಾಂತಿಯಿಂದ, ಯಾರಿಗೂ ತಿಳಿಯದಂತೆ ಮಾಡಬೇಕಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ಸೂಕ್ಷ್ಮದಿಂದ ಮಾಡುತ್ತಿರುವ ಈ ಕಾರ್ಯ ಯಾರಿಗೂ ತಿಳಿದಿಲ್ಲ.
೩. ಸೂಕ್ಷ್ಮದಲ್ಲಿ ನಡೆದಿರುವ ಯುದ್ಧಕ್ಕಾಗಿ ಪರಾತ್ಪರ ಗುರು ಡಾಕ್ಟರರು ಜಗತ್ತಿನಲ್ಲಿನ ಚೈತನ್ಯದ ಸ್ರೋತವನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮಾಧ್ಯಮದಿಂದ ತೆರೆದಿದ್ದಾರೆ : ಸೂಕ್ಷ್ಮದ ಐದು ಲೋಕಗಳಲ್ಲಿ ಇಲ್ಲಿಯ ವರೆಗೆ (ವರ್ಷ 2017 ರವರೆಗೆ) ಸೂಕ್ಷ್ಮ ಯುದ್ಧ ನಡೆದವು, ಇದು ಯಾರಿಗೂ ಗೊತ್ತಿಲ್ಲ; ಆದರೆ ಅವು ನಡೆದಿವೆ. ಆದುದರಿಂದ ಇಂದಿನ ಪರಿಸ್ಥಿತಿ ಭೀಕರವಾಗಿದೆ. ಆದುದರಿಂದ ಜಗತ್ತಿನಲ್ಲಿ ಯಾವ ಚೈತನ್ಯದ ಸ್ರೋತವಿದೆಯೋ ಅದು ಸದ್ಗುರು ಅಂಜಲಿ ಮುಕುಲ ಗಾಡಗೀಳ ಇವರಿಂದ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಉತ್ತರಾಧಿಕಾರಿ)ಅವರು ತೆರೆಯುತ್ತಿದ್ದಾರೆ.
೪. ರಜ-ತಮದ ಆವರಣದಿಂದ ಮುಚ್ಚಲ್ಪಟ್ಟ ಚೈತನ್ಯದ ಸ್ರೋತವನ್ನು ತೆರೆದಾಗ ಸಮಾಜದ ಮನಸ್ಸು ಪರಿವರ್ತನೆ ಆಗುವುದು !
ಗಂಗಾ ಇದು ನದಿಯಾಗಿರದೇ, ಚೈತನ್ಯದ ಸ್ರೋತವಾಗಿದೆ. ಅದು ರಜ-ತಮ ಆವರಣದಿಂದ ಮುಚ್ಚಿದೆ, ಅದನ್ನು ಪರಾತ್ಪರ ಗುರು ಡಾಕ್ಟರ್ ತೆರೆಯುತ್ತಿದ್ದಾರೆ. ಚೈತನ್ಯದ ಸ್ರೋತಗಳ ಪ್ರಭಾವದಿಂದ ರಜ-ತಮದ ವಾತಾವರಣ ನಾಶವಾಗುವುದು ಮತ್ತು ಸಮಾಜದ ಮನಃಪರಿವರ್ತನೆ ತಾನಾಗಿಯೇ ಆಗುವುದು. ಇದು ಯುದ್ಧವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ಏನು ಮಾಡುತ್ತಿದ್ದಾರೆಯೋ, ಅದನ್ನು ಸಗುಣದಿಂದ, ಸಂಶೋಧನಾತ್ಮಕ ವ್ಯಾಖ್ಯಾನಗಳ ಮೂಲಕ ತೋರಿಸುತ್ತಿದ್ದಾರೆ.

೫. ಸನಾತನ ಧರ್ಮರಾಜ್ಯದ ವ್ಯಾಖ್ಯೆ ಭಗವಂತನಿಗಾಗಿ, ಭಗವಂತನು ಮಾಡಿದ ರಾಜ್ಯ, ಎಂದರೆ ‘ಭಗವತ್ರಾಜ್ಯ’ ಅಂದರೆ ‘ರಾಮರಾಜ್ಯ’ ಅಂದರೆ ‘ಸನಾತನ ಧರ್ಮರಾಜ್ಯ !’
೬. ಈಶ್ವರೀ ರಾಜ್ಯ ಯಾವುದಕ್ಕಾಗಿ ?
‘ಫಾರ್ ದಿ ಪಿಪಲ್’ (ಅಂದರೆ ಜನರಿಗಾಗಿ) ಅಲ್ಲ. ‘ಪಿಪಲ್’ ಇದು ವೃತ್ತಿಯಾಯಿತು. ಈ ವೃತ್ತಿಯನ್ನು ಬದಲಾಯಿಸುವುದು ಅಂದರೆ ಈಶ್ವರೀ ರಾಜ್ಯ ! ಮನುಷ್ಯನ ವೃತ್ತಿ ಬದಲಾಗಿ ಈಶ್ವರನಾಗುವುದು, ಅಂದರೆ ‘ನರ’ನಿಂದ ‘ನಾರಾಯಣ’ನಾಗುವುದು. ಈಗ ಎಲ್ಲೆಡೆ ವಿಕೃತಿ, ಅಂದರೆ ಮನಸ್ಸಿನ ವಿಕೃತಿ ಬಂದಿದೆ. ಆದ್ದರಿಂದ ಅವನು ಈಗ ಮಾನವನಾಗಿದ್ದಾನೆ. ಮಾನವನನ್ನು ಈಶ್ವರೀ ಸ್ವರೂಪದಲ್ಲಿ ಪ್ರಕಟ ಪಡಿಸುವುದು, ಅವನನ್ನು ಸನ್ಮಾರ್ಗಕ್ಕೆ ತರುವುದು, ಸದಾಚಾರಿ ಮಾಡುವುದು ಇದು ಕೆಲಸವಾಗಿದೆ. ಅದೆಂದರೆ ಈಶ್ವರೀ ರಾಜ್ಯ ! ಅದೂ ಯಾರಿಗೂ ತಿಳಿಯದಂತೆ, ಅಂದರೆ ಯಾವುದೇ ವಿರೋಧವಿಲ್ಲದಂತೆ ನಡೆದಿದೆ.
– ಪರಾತ್ಪರ ಗುರು ಪಾಂಡೆ ಮಹಾರಾಜ (೨೦೧೭ ನೇ ಇಸವಿ)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !