ಭಾರತದ ವಿರುದ್ಧ ವಿಷ ಕಕ್ಕಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ !

ವಾಷಿಂಗ್ಟನ್ – ‘ಆಪರೇಷನ್ ಸಿಂದೂರ್’ನಲ್ಲಿ ಮುಖಭಂಗವಾದ ನಂತರವೂ ಪಾಕಿಸ್ತಾನದಿಂದ ವಿವಿಧ ರೀತಿಯಲ್ಲಿ ಕುತಂತ್ರಗಳು ಮುಂದುವರಿದಿವೆ. ಈಗ ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ವಿಷ ಕಾರಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ‘ನಾವು ಭಾರತವನ್ನು ವಿಭಜಿಸಿ 1971 ರ ಯುದ್ಧದಲ್ಲಿ ನಮ್ಮ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನಿ ಪತ್ರಕರ್ತ ಅಜಾಜ್ ಸಯ್ಯದ್ ಅವರು ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ.
1. ಅಸಿಮ್ ಮುನೀರ್ ತಮ್ಮ ಭಾಷಣದಲ್ಲಿ, “ನಾವು ಚೀನಾದೊಂದಿಗೆ ಸೇರಿ ಭಾರತದ ವಿರುದ್ಧ ಯುದ್ಧ ಮಾಡಿದೆವು. ಭಾರತದ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಚೀನಾದಿಂದ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳು ದೊರೆತಿದ್ದವು” ಎಂದು ಹೇಳಿದರು.
2. ಈ ವೇಳೆ ಮುನೀರ್ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ‘ಭಯೋತ್ಪಾದಕ ದಾಳಿ’ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು.
3. ಅಸಿಮ್ ಮುನೀರ್, ಪಾಕಿಸ್ತಾನವು ಭಾರತದ ವಿರುದ್ಧ ಐದು ಹಂತಗಳಲ್ಲಿ ಹೋರಾಡಿದೆ. ಅದರಲ್ಲಿ ‘ಸೈಬರ್’ ಯುದ್ಧವೂ ಸೇರಿತ್ತು. ಪಾಕಿಸ್ತಾನದ ಡ್ರೋನ್‌ಗಳು ಗುಜರಾತ್ ಮತ್ತು ದೆಹಲಿಯವರೆಗೂ ತಲುಪಿದ್ದವು. ಇಷ್ಟೇ ಅಲ್ಲದೆ, ಭಾರತದ ರೈಲ್ವೆ ವ್ಯವಸ್ಥೆಯನ್ನೂ ಸಹ ಹಾನಿಗೊಳಿಸಲಾಗಿದೆ ಎಂದು ಅಸಿಮ್ ಮುನೀರ್ ದಾವೆ ಮಾಡಿದ್ದಾರೆ.
ಸಂಪಾದಕೀಯ ನಿಲುವುಇಂತಹ ಹಗಲುಗನಸು ಕಾಣುವ ಮುನೀರ್, ಪಾಕಿಸ್ತಾನವೇ ಶೀಘ್ರದಲ್ಲೇ ಹಲವು ತುಂಡುಗಳಾಗಿ ಒಡೆಯಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು