ಸಂತರ ಶಕ್ತಿಯಿಂದ, ಬ್ರಾಹ್ಮ-ಕ್ಷಾತ್ರ ತೇಜದಿಂದ ಕೂಡಿದ ಸನಾತನ ರಾಷ್ಟ್ರ ನಿರ್ಮಾಣದ ಸಂಕಲ್ಪ !

ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳು ಹಿಂದೂ ಧರ್ಮದ ದಿವ್ಯ ಪರಂಪರೆ ಯಾಗಿದ್ದು, ಸಾಧು-ಸಂತರು, ಮಹಂತರು ಈ ಪರಂಪರೆಯ ಬುನಾದಿಯಾಗಿದ್ದಾರೆ. ಹಿಂದೂ ಧರ್ಮದಲ್ಲಿ ಅವತಾರಗಳಿಂದ ಹಿಡಿದು ಸಂತರೆಲ್ಲರೂ ಸನಾತನ ಧರ್ಮ ಸಂಸ್ಥಾಪನೆ ಮತ್ತು ನಂತರ ಅದರ ರಕ್ಷಣೆಯ ಅದ್ಭುತ ಕಾರ್ಯ ಮಾಡಿದ್ದಾರೆ. ಈ ಪರಂಪರೆಯನ್ನು ಮುಂದುವರೆಸುವ ಬ್ರಹ್ಮತೇಜಸ್ವಿ ಸಂತರು ಶಂಖನಾದ ಮಹೋತ್ಸವದಲ್ಲಿ ನೀಡಿದ ಕ್ಷಾತ್ರತೇಜಯುಕ್ತ ಮಾರ್ಗದರ್ಶನವು ಉಪಸ್ಥಿತರ ಮನಸ್ಸಿನಲ್ಲಿ ಸನಾತನ ರಾಷ್ಟ್ರದ ಸಂಕಲ್ಪದ ಬೀಜವನ್ನು ಬಿತ್ತಿದೆ. ಈ ಮಹೋತ್ಸವದ ಮೊದಲ ದಿನ, ಮೇ ೧೭ ರಂದು ನಡೆದ ‘ಸನಾತನ ರಾಷ್ಟ್ರ ಸಂಕಲ್ಪ ಧರ್ಮಸಭೆ’ಯಲ್ಲಿ ದೇಶದಾದ್ಯಂತ ಅನೇಕ ಸಂತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂತರು ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ‘ಒಂದು ಕೈಯಲ್ಲಿ ಮಾಲೆ, ಇನ್ನೊಂದು ಕೈಯಲ್ಲಿ ಭಾಲಾ’ ಎಂಬ ಬ್ರಾಹ್ಮ-ಕ್ಷಾತ್ರತೇಜದ ಪರಂಪರೆಯನ್ನು ನೆನಪಿಸುತ್ತಾ ಕ್ಷಾತ್ರತೇಜಯುಕ್ತ ವೀರಶ್ರೀಯುತ ಮಾರ್ಗದರ್ಶನ ಮಾಡಿದರು.

ಈ ಅಧಿವೇಶನವು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ರಚಿಸಿದ ‘ಆದಿಶಕ್ತಿ ನೀ’ ಎಂಬ ಶಕ್ತಿಸ್ತವನದೊಂದಿಗೆ ಪ್ರಾರಂಭವಾಯಿತು. ಈ ಶಕ್ತಿಸ್ತವನವನ್ನು ಕು. ತೇಜಲ ಪಾತ್ರೀಕರ, ಸೌ. ಅನಘಾ ಜೋಶಿ, ಸೌ. ಲಿಂದಾ ಬೋರಕರ, ಸೌ. ಶರಣ್ಯಾ ದೇಸಾಯಿ, ಸೌ. ಭಕ್ತಿ ಕುಲಕರ್ಣಿ, ಸೌ. ಸೀತಾ ಕ್ರಾಕ್ ಮತ್ತು ಸೌ. ರಾಘವಿ ಕೊನೆಕರ್ ಅವರು ಹಾಡಿದರು. ಈ ಸಭೆಗೆ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ವಂದನೀಯ ಉಪಸ್ಥಿತಿ ಇತ್ತು.
ಧರ್ಮ ಮತ್ತು ರಾಜ್ಯಾಡಳಿತದ ಸಂಯೋಗದಿಂದಲೇ ಸನಾತನ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ೧೦೦೮ ಸ್ವಾಮಿ ಬಾಲಕಾನಂದ ಗಿರಿ ಮಹಾರಾಜ, ಆನಂದ ಪೀಠಾಧೀಶ್ವರ, ಹರಿದ್ವಾರ

ಸನಾತನ ಧರ್ಮದ ಸಂವಾಹಕರು ಯಾರು ? ಶಂಕರಾಚಾರ್ಯರು ಧರ್ಮವನ್ನು ಪುನಃ ಸ್ಥಾಪಿಸಿದರು ಮತ್ತು ೪ ಪೀಠಗಳನ್ನು ಸ್ಥಾಪಿಸಿದರು. ಆ ಶಂಕರಾಚಾರ್ಯರ ಸೈನ್ಯವಾಗಿದ್ದ ಅಖಾಡಗಳ ಮೇಲೆ ಇಂದಿನವರೆಗೆ ಯಾರೂ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. ಇಂದು ನಮ್ಮ ಹೃದಯದಲ್ಲಿ ಜಾಗೃತಿ ಬರಬೇಕು, ಧರ್ಮಾಡಳಿತ ಮತ್ತು ರಾಜ್ಯಾಡಳಿತಗಳ ಸಂಯೋಗದಿಂದಲೇ ಸನಾತನ ರಾಷ್ಟ್ರದ ಸ್ಥಾಪನೆ ಸಾಧ್ಯ. ನಮಗೆ ಸನಾತನ ಸಂಸ್ಕೃತಿಯ ಪರಿಚಯವಾಗುವ ವರೆಗೆ, ನಮ್ಮ ಮೇಲೆ ಆಕ್ರಮಣಗಳು ನಡೆಯುತ್ತಲೇ ಇರುತ್ತವೆ. ನಾವು ಸಂಸ್ಕಾರ ಮತ್ತು ವಿವೇಚನೆಯನ್ನು ಜಾಗೃತಗೊಳಿಸಿದಾಗ, ಸನಾತನ ರಾಷ್ಟ್ರವು ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಜಾಗೃತಗೊಳ್ಳುತ್ತದೆ.
ಭಾಷಣಕಾರರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಆಡಿದ ಗೌರವದ ನುಡಿಗಳು !

ಕೊನೆಯ ಸತ್ರದ ಭಾಷಣಗಳು ಮುಗಿದ ನಂತರ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಅವರು ಸಾಧಕರನ್ನು ಉದ್ದೇಶಿಸಿ, ‘ಭಾಷಣಕಾರರಾದ ಸ್ವಾಮಿ ಆನಂದ ಸ್ವರೂಪ ಮಹಾರಾಜರು, ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಪೂ. ದೇವಕೀನಂದನ ಠಾಕೂರ್, ಡಾ. ಸುರೇಶ ಚವ್ಹಾಣ್ಕೆ ಮತ್ತು ಶ್ರೀ. ದರ್ಶಕ್ ಹಾಥಿ ಅವರು ಮಾಡಿದ ಮಾರ್ಗದರ್ಶನ ಹೇಗನಿಸಿತು ?’ ಎಂದು ಕೇಳಿದರು.
ಗುರುದೇವರು ಮುಂದುವರೆದು, ಈ ಭಾಷಣಕಾರರು ಮಾಡಿದ ಮಾರ್ಗದರ್ಶನವು ಪರಿಣಾಮಕಾರಿಯಾಗಿತ್ತು. ಅದು ಜನರ ಮನಸ್ಸನ್ನು ತಲುಪಿತು. ಆದ್ದರಿಂದ ಅದು ಮನಸ್ಸಿಗೆ ನಾಟಿತು. ಸನಾತನದ ಸಾಧಕರು ಹಳ್ಳಿಹಳ್ಳಿಗೆ ಪ್ರಚಾರಕ್ಕೆ ಹೋದಾಗ, ಈ ಭಾಷಣಕಾರರ ಭಾಷಣಗಳ ಧ್ವನಿಮುದ್ರಣವನ್ನು ಜನರಿಗೆ ಕೇಳಿಸಬಹುದು. ಇದಕ್ಕಾಗಿ ನಿಮ್ಮ ಭಾಷಣಗಳ ವೀಡಿಯೊ ಅಥವಾ ಧ್ವನಿಮುದ್ರಣ ನಮಗೆ ಸಿಗುತ್ತದೆಯೇ ? ಈ ಭಾಷಣಗಳಿಂದ ಜನರಿಗೆ ದಿಶೆ ಸಿಗುತ್ತದೆ. ನಿಮ್ಮ ವಿಚಾರಗಳು ಸಾವಿರಾರು ಹಳ್ಳಿಗಳನ್ನು ತಲುಪುತ್ತವೆ. ಸನಾತನದಲ್ಲಿ ನಿಮ್ಮಂತಹ ಭಾಷಣಕಾರರು ಇಲ್ಲ, ಎಂದರು.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು