
‘ಮೇಕ್ ಇನ್ ಇಂಡಿಯಾ’ ನಿಲುವಿನಿಂದ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚಾಗಿದೆ. ಈಗ ಭಾರತವು ತನ್ನ ಆವಶ್ಯಕತೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿರ ಬಹುದು, ಇದರಿಂದ ಆಮದು ವೆಚ್ಚದಲ್ಲಿ ಉಳಿತಾಯವಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ಶಸ್ತ್ರಾಸ್ತ್ರಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ‘ಆಪರೇಶನ್ ಸಿಂದೂರ’ದಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳು ತೋರಿಸಿದ ಪರಿಣಾಮಕಾರಿ ಕಾರ್ಯಕ್ಷಮತೆ ಈ ನಿಲುವಿನ ಯಶೋಗಾಥೆ ಯಾಗಿದೆ. ಈ ಕಾರ್ಯಾಚರಣೆ ಕೇವಲ ಸಾಮರಿಕ ಯಶಸ್ಸಿನ ಸಂಕೇತ ಮಾತ್ರವಲ್ಲದೇ, ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನದ ಮೇಲಿನ ಆತ್ಮವಿಶ್ವಾಸದ ಸಂಕೇತವೂ ಆಯಿತು.
೧. ಪ್ರಥಮ ಬಾರಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೇಲೆ ದಾಳಿ ಮತ್ತು ‘ಬ್ರಹ್ಮೋಸ್’ ಕ್ಷಿಪಣಿಯ ಬಳಕೆ
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರವಾದಿ ಆಕ್ರಮಣಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತವು ನಡೆಸಿದ ‘ಆಪರೇಶನ್ ಸಿಂದೂರ’ದಲ್ಲಿ ಆಯ್ದ ಮತ್ತು ನಿಖರ ಗುರಿಗಳನ್ನು ನಿರ್ಧರಿಸಲಾಯಿತು. ಇದರಲ್ಲಿ ಲಷ್ಕರ್-ಎ-ತೋಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆಗಳ ಪ್ರಧಾನ ಕಚೇರಿಗಳು ಹಾಗೂ ಉಗ್ರವಾದಿಗಳು ವಾಸವಿದ್ದ ಕಟ್ಟಡಗಳು ಸೇರಿದ್ದವು. ೧೯೭೧ ರ ನಂತರ ಪ್ರಥಮ ಬಾರಿಗೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗದೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೇಲೂ ಆಕ್ರಮಣ ಮಾಡಿತು. ಈ ಆಕ್ರಮಣಗಳಲ್ಲಿ ಭಾರತೀಯ ನಿರ್ಮಿತ ‘ಬ್ರಹ್ಮೋಸ್’ ಕ್ಷಿಪಣಿಯನ್ನು ಬಳಸಿರುವ ಸಾಧ್ಯತೆ ಇದೆ. ಈ ಕ್ಷಿಪಣಿಯು ನಿಖರ ಗುರಿ ತಲುಪಲು ಪ್ರಸಿದ್ಧವಾಗಿದ್ದು, ಈ ಕಾರ್ಯಾಚರಣೆಯಲ್ಲಿ ಅದರ ಪರಿಣಾಮಕಾರಿ ಕಾರ್ಯಕ್ಷಮತೆ ಕಂಡುಬಂದಿತು.
೨. ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಸಿಕ್ಕಿದ ದೊಡ್ಡ ಯಶಸ್ಸು
ಹಿಂದೆ ಭಾರತದಲ್ಲಿ ಶೇ. ೬೦ ರಿಂದ ೭೦ ರಷ್ಟು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು; ಆದರೆ ಈಗ ಶೇ. ೭೦ ರಷ್ಟು ಶಸ್ತ್ರಾಸ್ತ್ರಗಳು ಭಾರತದಲ್ಲಿಯೇ ತಯಾರಾಗುತ್ತಿವೆ. ಇದರ ಜೊತೆಗೆ, ಹಿಂದೆ ಶೇ. ೨೫ ರಷ್ಟು ಗುಂಡುಮದ್ದುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು; ಆದರೆ ಇಂದು ಶೇ. ೧೦೦ ರಷ್ಟು ಗುಂಡುಮದ್ದುಗಳು ಭಾರತದಲ್ಲಿಯೇ ಸಿದ್ಧವಾಗುತ್ತವೆ. ಸ್ವದೇಶಿ ಶಸ್ತ್ರಾಸ್ತ್ರ ನಿರ್ಮಾಣದಿಂದ ಭಾರತೀಯ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶಗಳು ದೊರೆತಿವೆ, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ ಮತ್ತು ಭಾರತದ ಅರ್ಥವ್ಯವಸ್ಥೆಯ ವೇಗವೂ ಹೆಚ್ಚುತ್ತಿದೆ. ಇದು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ದೊಡ್ಡ ಯಶಸ್ಸಾಗಿದೆ. ‘ಬ್ರಹ್ಮೋಸ್’ ಇದು ಭಾರತ ಮತ್ತು ರಷ್ಯಾ ಜಂಟಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ‘ಸೂಪರ್‌ಸಾನಿಕ್ ಕ್ರೂಸ್’ ಕ್ಷಿಪಣಿಯಾಗಿದೆ. ಅದರ ಮಾರಕ ಸಾಮರ್ಥ್ಯ ೪೦೦ ಕಿಲೋಮೀಟರ್ ಆಗಿದೆ ಮತ್ತು ವೇಗವು ಧ್ವನಿಯ ವೇಗಕ್ಕಿಂತ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಅತ್ಯಾಧುನಿಕ ನೆವಿಗೇಷನ್ ವ್ಯವಸ್ಥೆ ಮತ್ತು ಹೆಚ್ಚಿನ ನಿಖರತೆಯಿಂದಾಗಿ ಇದು ಶತ್ರುಗಳ ಪ್ರಮುಖ ಗುರಿಗಳ ಮೇಲೆ ನಿಖರವಾಗಿ ದಾಳಿ ಮಾಡಲು ಅತ್ಯಂತ ಪರಿಣಾಮಕಾರಿಯಾಗಿದೆ.
೩. ‘ಆಪರೇಶನ್ ಸಿಂದೂರ’ದಲ್ಲಿ ಭಾರತೀಯ ಡ್ರೋನ್‌ಗಳು, ಕ್ಷಿಪಣಿಗಳು ತೋರಿಸಿದ ಕ್ಷಮತೆ
‘ಆಪರೇಶನ್ ಸಿಂದೂರ’ದಲ್ಲಿ ಶತ್ರು ಗಳ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಗುರಿಪಡಿಸಲು ‘ಬ್ರಹ್ಮೋಸ್’ ಕ್ಷಿಪಣಿ ಯನ್ನು ಯಶಸ್ವಿಯಾಗಿ ಬಳಸÀಲಾಯಿತು. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಈ ಕ್ಷಿಪಣಿಗಳು ಭೂಮಿಯಿಂದ ಮತ್ತು ಆಕಾಶದಿಂದ ದಾಳಿ ನಡೆಸಿದವು ಮತ್ತು ಅವುಗಳ ನಿಖರ ಗುರಿಯಿಂದಾಗಿ ಶತ್ರುಗಳಿಗೆ ಪ್ರತಿಕ್ರಿಯಿಸುವ ಅವಕಾಶವೇ ಸಿಕ್ಕಿಲ್ಲ. ಈ ಕ್ಷಿಪಣಿಯ ಬಳಕೆಯಲ್ಲಿ ಭಾರತೀಯ ವಾಯುಪಡೆ ಮತ್ತು ಸೈನ್ಯದ ಸಮನ್ವಯದ ಕೌಶಲ್ಯವು ಕಂಡುಬಂದಿತು. ಇದು ಒಂದು ಹೊಸ ಪೀಳಿಗೆಯ, ಸ್ವದೇಶಿ ನಿರ್ಮಿತ, ಭೂಮಿಯಿಂದ ಗಾಳಿಯಲ್ಲಿ ಗುರಿಯಾಗಿಸುವ ಕ್ಷಿಪಣಿ ವ್ಯವಸ್ಥೆ ಯಾಗಿದೆ. ಈ ವ್ಯವಸ್ಥೆಯನ್ನು ಮಧ್ಯಮ ಅಂತರದ ವಾಯು ಗುರಿಗಳನ್ನು
(ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಇತ್ಯಾದಿ) ಎದುರಿಸಲು ಅಭಿವೃದ್ಧಿಪಡಿಸಲಾಗಿದೆ. ‘ಆಕಾಶತೀರ್’ ನಲ್ಲಿ ‘ಮಲ್ಟಿಫಂಕ್ಷನ್’ ರಡಾರ್ ಮತ್ತು ನೆಟ್‌ವರ್ಕ್-ಕೇಂದ್ರೀಕೃತ ಯುದ್ಧ ಸಾಮರ್ಥ್ಯವಿದೆ, ಇದರಿಂದ ಒಂದೇ ಸಮಯದಲ್ಲಿ ಅನೇಕ ಗುರಿಗಳ ಮೇಲೆ ನಿಗಾ ಇಡಲು ಮತ್ತು ದಾಳಿ ನಡೆಸಲು ಸಾಧ್ಯವಾಗುತ್ತದೆ. ‘ಆಪರೇಶನ್ ಸಿಂದೂರ’ದಲ್ಲಿ ಈ ವ್ಯವಸ್ಥೆಯು ಶತ್ರುಗಳ ವಾಯುದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿತು ಮತ್ತು ವಾಯುಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ಸ್ಥಾಪಿಸಿತು.
‘ಆಪರೇಶನ್ ಸಿಂದೂರ’ದಲ್ಲಿಯೇ ಈ ವ್ಯವಸ್ಥೆಯನ್ನು ಯುದ್ಧರಂಗದಲ್ಲಿ ಮೊದಲಸಲ ಬಳಸಲ್ಪಟ್ಟಿತು, ಇದರಿಂದ ಅದರ ನಿಜವಾದ ಯುದ್ಧ ಸಾಮರ್ಥ್ಯದ ಪರೀಕ್ಷೆ ನಡೆಯಿತು ಮತ್ತು ಅದು ಯಶಸ್ವಿಯಾಯಿತು. ಇವೆರಡೂ ವ್ಯವಸ್ಥೆಗಳು ಸಂಪೂರ್ಣವಾಗಿ ಭಾರತದಲ್ಲಿ ಸಿದ್ಧವಾಗುತ್ತವೆ. ‘ಆಕಾಶ’ ಕ್ಷಿಪಣಿಯು ೩೦ ಕಿ.ಮೀ. ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲದು. ‘ಆಪರೇಶನ್ ಸಿಂದೂರ’ದಲ್ಲಿ ಈ ವ್ಯವಸ್ಥೆಗಳು ಶತ್ರುಗಳ ಶೇ. ೯೫ ಕ್ಕೂ ಹೆಚ್ಚು ಡ್ರೋನ್‌ಗಳನ್ನು ನಾಶ ಮಾಡಿದವು. ಇದು ಭಾರತದ ಸ್ವದೇಶಿ ಸಾಮರ್ಥ್ಯಗಳ ದೊಡ್ಡ ಯಶಸ್ಸಾಗಿದೆ. ‘ಆಪರೇಶನ್ ಸಿಂದೂರ’ದಲ್ಲಿ ಭಾರತೀಯ ನಿರ್ಮಿತ ಸಮೀಕ್ಷೆ ಡ್ರೋನ್‌ಗಳು ಮತ್ತು ‘ಆಕ್ರಮಣ’ ಡ್ರೋನ್‌ಗಳ ಪಾತ್ರವು ದೊಡ್ಡದಿತ್ತು. ಈ ಡ್ರೋನ್‌ಗಳು ಕೇವಲ ಗುರಿಗಳನ್ನು ಹುಡುಕಲು ಸಹಾಯ ಮಾಡುವುದರ ಜೊತೆಗೆ, ಅವು ನಿಜವಾದ ಆಕ್ರಮಣದಲ್ಲಿ ಭಾಗವಹಿಸಿದವು. ಭಾರತದಲ್ಲಿ ಅಭಿವೃದ್ಧಿಪಡಿಸಿದ ಡ್ರೋನ್‌ಗಳಾದ ‘ತಾಪಸ್-ಬಿಎಚ್’, ‘ಸ್ವಿಚ್’ ಮತ್ತು ‘ಆರ್ಚರ್’ಗಳ ಬಳಕೆಯು ಗಮನಾರ್ಹವಾಗಿತ್ತು. ಈ ಎಲ್ಲಾ ಡ್ರೋನ್‌ಗಳ ನಿಯಂತ್ರಣವು ಭಾರತದ ‘ನೆಟ್‌ವರ್ಕ್ ಸೆಂಟ್ರಿಕ್ ವಾರ್‌ಫೇರ್’ (ಯುದ್ಧಕೇಂದ್ರಿತ ಕಮಾಂಡ್) ವ್ಯವಸ್ಥೆಗೆ ಜೋಡಿಸಲ್ಪಟ್ಟಿತ್ತು, ಇದು ಭಾರತದ AI (ಕೃತಕ ಬುದ್ಧಿಮತ್ತೆ) ಮತ್ತು ‘ಮಾಹಿತಿ ಆಧಾರಿತ’ ಯುದ್ಧ ಸಿದ್ಧತೆಯನ್ನು ತೋರಿಸುತ್ತದೆ.
೪. ಸ್ವದೇಶಿ ತಂತ್ರಜ್ಞಾನದ ನಿಖರತೆ ಸಾಬೀತು
ಭಾರತವು ‘ಆಪರೇಶನ್ ಸಿಂದೂರ’ ನಿಮಿತ್ತ ಜಗತ್ತಿಗೆ ಮುಂದಿನ ಅಂಶವನ್ನು ಸ್ಪಷ್ಟಪಡಿಸಿತು, ಈಗ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಆಮದುದಾರ ದೇಶವಲ್ಲ, ರಫ್ತುದಾರ ದೇಶವಾಗುತ್ತಿದೆ. ಅನೇಕ ‘ಎಂ.ಎಸ್.ಎಂ.ಇ.’ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು) ಮತ್ತು ‘ಸ್ಟಾರ್ಟ್ಪ್ ಕಂಪನಿಗಳು’ ರಕ್ಷಣಾ ಕ್ಷೇತ್ರಕ್ಕೆ ಪ್ರವೇಶಿಸುತ್ತಿವೆ, ಇದರಿಂದ ಉದ್ಯೋಗ ಹೆಚ್ಚುತ್ತಿದೆ ಮತ್ತು ಆರ್ಥಿಕ ಪ್ರಗತಿಗೆ ವೇಗ ಸಿಗುತ್ತಿದೆ. ‘ಆಪರೇಶನ್ ಸಿಂದೂರ’À ಯುದ್ಧದಲ್ಲಿ ಹಾನಿಗೊಳಗಾದ ಆಸ್ತಿಗಳ ವರದಿಗಳು ಸ್ವದೇಶಿ ಶಸ್ತ್ರಾಸ್ತ್ರಗಳ ಪ್ರಭಾವದ ಸಾಕ್ಷಿ ಹೇಳುತ್ತವೆ. ‘ಬ್ರಹ್ಮೋಸ್’ ಮತ್ತು ಇತರ ನಿಖರ ಗುರಿಯಿಡುವ ಕ್ಷಿಪಣಿಗಳಿಂದ ಶತ್ರುಗಳ ಪ್ರಮುಖ ನೆಲೆಗಳ ಮೇಲೆ ಅತ್ಯಲ್ಪ ಸಮಯದಲ್ಲಿ ಮತ್ತು ನಿಖರ ದಾಳಿಗಳಾದÀವು. ಇದರಿಂದ ಶತ್ರುಗಳ ಮೂಲಸೌಕರ್ಯಗಳಿಗೆ ದೊಡ್ಡ ಹಾನಿಯಾಯಿತು ಮತ್ತು ಅವರ ಯುದ್ಧ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮವಾಯಿತು. ಹಾನಿಗೊಳಗಾದ ಆಸ್ತಿಗಳ ವರದಿಗಳ ಪ್ರಕಾರ ಶೇ. ೯೦ ಕ್ಕೂ ಹೆಚ್ಚು ಗುರಿಗಳು ಮೊದಲ ಪ್ರಯತ್ನದಲ್ಲಿಯೇ ಭೇದಿಸಲ್ಪಟ್ಟವು, ಇದರಿಂದ ಸ್ವದೇಶಿ ತಂತ್ರಜ್ಞಾನದ ನಿಖರತೆ ಸಾಬೀತಾಯಿತು.
‘ಆಪರೇಶನ್ ಸಿಂದೂರ’ ಕೇವಲ ಒಂದು ದಾಳಿಯ ಕಥೆಯಾಗಿರಲಿಲ್ಲ. ಅದು ಭಾರತದ ಸ್ವದೇಶಿ ತಂತ್ರಜ್ಞಾನ, ರಣನೀತಿ ಮತ್ತು ಸಾಮರಿಕ ಸ್ವಾವಲಂಬನೆಯ ಯಶಸ್ಸಿನ ಕಥೆಯಾಗಿತ್ತು ! ಭಾರತೀಯ ಸೇನೆ, ವಾಯುಪಡೆ, ರಕ್ಷಣಾ ಸಂಶೋಧನಾ ಸಂಸ್ಥೆ ಮತ್ತು ಖಾಸಗಿ ಸಂಸ್ಥೆಗಳ ಒಗ್ಗಟ್ಟು ಈ ಯಶಸ್ಸಿನ ಹಿಂದಿತ್ತು. ಈ ಯಶಸ್ಸು ಭವಿಷ್ಯದ ಯುದ್ಧಗಳಿಗಾಗಿ ಭಾರತದ ಸಿದ್ಧತೆ ಎಷ್ಟು ಸಶಕ್ತವಾಗಿದೆ ಎಂಬುದನ್ನು ತೋರಿಸುತ್ತದೆ.
೫. …ಮತ್ತು ಭಾರತದ ಸ್ವಾವಲಂಬನೆ ಹೆಚ್ಚಾಯಿತು !
‘ಮೇಕ್ ಇನ್ ಇಂಡಿಯಾ’ ನಿಲುವಿನಿಂದ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚಾಗಿದೆ. ಈಗ ಭಾರತವು ತನ್ನ ಆವಶ್ಯಕತೆಗಳಿಗಾಗಿ ದೊಡ್ಡ
ಪ್ರಮಾಣದಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತವಾಗಿರಬಹುದು, ಇದರಿಂದ ಆಮದು ವೆಚ್ಚದಲ್ಲಿ ಉಳಿತಾಯವಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ಶಸ್ತ್ರಾಸ್ತ್ರಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ‘ಆಪರೇಶನ್ ಸಿಂದೂರ’ದಲ್ಲಿ ಸ್ವದೇಶಿ ಶಸ್ತ್ರಾಸ್ತ್ರಗಳು ತೋರಿಸಿದ ಪರಿಣಾಮಕಾರಿ ಕಾರ್ಯಕ್ಷಮತೆ ಈ ನಿಲುವಿನ ಯಶೋಗಾಥೆಯಾಗಿದೆ. ‘ಆಪರೇಶನ್ ಸಿಂದೂರ’ನ ಯಶಸ್ಸಿನ ನಂತರ ಭಾರತವು ಜಾಗತಿಕ ವೇದಿಕೆಯ ಮೇಲೆ ತನ್ನ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಮತ್ತು ಆತ್ಮನಿರ್ಭರತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ತೋರಿಸಿದೆ. ಇದರಿಂದ ಇತರ ದೇಶಗಳು ಭಾರತವನ್ನು ‘ಒಂದು ವಿಶ್ವಾಸಾರ್ಹ ರಕ್ಷಣಾ ಪಾಲುದಾರ’ ಎಂದು ನೋಡಲಾರಂಭಿಸಿವೆ.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ. (೨೪.೫.೨೦೨೫)
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
|| ಶ್ರೀ ರಾಜಮಾತಂಗಿ ಮಹಾಯಾಗ ||