ಪೊಲೀಸರು ಕ್ರಮ ಕೈಗೊಳ್ಳುವ ಬದಲು ಕೆರೆಹಳ್ಳಿ ಅವರನ್ನು ಘಟನಾ ಸ್ಥಳದಿಂದಲೇ ಕರೆದೊಯ್ದರು!

ಬೆಂಗಳೂರು – ಇಲ್ಲಿನ ಮುಸ್ಲಿಂ ಬಾಹುಳ್ಯದ ಅಹ್ಮದ್ ನಗರದ ಮಸೀದಿಯ ಹಿಂಭಾಗದಲ್ಲಿ ಗೋರಕ್ಷಕ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರು, ಅಲ್ಲಿ ಕಟ್ಟಲಾಗಿದ್ದ ಹಸುಗಳ ಬಗ್ಗೆ ಮುಸ್ಲಿಮರಿಗೆ ಪ್ರಶ್ನಿಸಿದರು.

ಇದನ್ನು ಅವರು ‘ಫೇಸ್‌ಬುಕ್ ಲೈವ್’ ಮೂಲಕ ಪ್ರಸಾರ ಮಾಡಿದರು. ಅವರು ಪ್ರಸಾರ ಮಾಡಿದ ವೀಡಿಯೊದಲ್ಲಿ ೩೦ ಕ್ಕೂ ಹೆಚ್ಚು ಹಸುಗಳು ಕಾಣಿಸುತ್ತಿದ್ದವು.

ಈ ಲೈವ್ ಮೂಲಕ ಪೊಲೀಸರಿಗೆ ತೋರಿಸಿದ ಕೂಡಲೇ ಅನೇಕರು ಅದೇ ಸಮಯದಲ್ಲಿ ಹಸುಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು. ‘ಈಗ ಪೊಲೀಸರು ಬರುತ್ತಾರೆ, ನಿಮ್ಮ ಬಳಿ ಹಸುಗಳ ಮಾಲೀಕತ್ವದ ಬಗ್ಗೆ ಯಾವುದೇ ದಾಖಲೆಗಳಿದ್ದರೆ ಅವರಿಗೆ ತೋರಿಸಿ’ ಎಂದು ಕೆರೆಹಳ್ಳಿ ಅಲ್ಲಿ ಸೇರಿದ್ದ ಮುಸ್ಲಿಮರಿಗೆ ಹೇಳಿದರು.

ಸ್ವಲ್ಪ ಸಮಯದ ನಂತರ ಪೊಲೀಸರು ಅಲ್ಲಿಗೆ ತಲುಪಿದರು; ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಕೆರೆಹಳ್ಳಿ ಅವರನ್ನೇ ವಶಕ್ಕೆ ತೆಗೆದುಕೊಂಡು ಕರೆದೊಯ್ದರು.

‘ಕಾನೂನು ಎಲ್ಲಿದೆ? ಪ್ರಜಾಪ್ರಭುತ್ವ ಎಲ್ಲಿದೆ?’ – ಕೆರೆಹಳ್ಳಿ ಅವರ ಪ್ರಶ್ನೆ
ಫೇಸ್‌ಬುಕ್‌ನಲ್ಲಿ ಲೈವ್ ಪ್ರಸಾರ ನಡೆಯುತ್ತಿದ್ದಾಗ ಬರೆದ ಪೋಸ್ಟ್‌ನಲ್ಲಿ ಕೆರೆಹಳ್ಳಿ, ಇದು ಮುಸ್ಲಿಂ ಪ್ರದೇಶ. ಇಲ್ಲಿ ಪುನೀತ್ ಕೆರೆಹಳ್ಳಿ ಬರಲು ಸಾಧ್ಯವಿಲ್ಲ ಎಂದು ಭಾವಿಸಬೇಡಿ! ಮುಂದಿನ ದಿನಗಳಲ್ಲಿ ನಾನು ಇನ್ನೂ ದೊಡ್ಡ ಸಂಖ್ಯೆಯಲ್ಲಿ ಬರುತ್ತೇನೆ. ಹಿಂದೂಗಳೇ, ಈ ಲೈವ್ ಅನ್ನು ದೊಡ್ಡ ಸಂಖ್ಯೆಯಲ್ಲಿ ಪ್ರಸಾರ ಮಾಡಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ಬರಲು ಹೇಳಿ. ಗೋರಕ್ಷಣೆಯಲ್ಲಿ ನಿಮ್ಮ ಅಳಿಲು ಸೇವೆ ಸಲ್ಲಿಸಿ.

ಬೆಂಗಳೂರಿನ ಅಹ್ಮದ್ ನಗರದ ಮಸೀದಿಯ ಹಿಂಭಾಗದಲ್ಲಿ ಬಕ್ರೀದ್ ಹಬ್ಬಕ್ಕಾಗಿ ೨೫ ಕ್ಕೂ ಹೆಚ್ಚು ಹಸುಗಳನ್ನು ಬಲಿ ನೀಡಲು ಕಟ್ಟಿರುವ ಮಾಹಿತಿ ದೊರೆತ ಕೂಡಲೇ ಗೋ ರಕ್ಷಣೆಗಾಗಿ ಘಟನಾ ಸ್ಥಳಕ್ಕೆ ಬಂದ ಪುನೀತ್ ಕೆರೆಹಳ್ಳಿ ಅವರನ್ನೇ ಪೊಲೀಸರು ಬಂಧಿಸಿದ್ದಾರೆಯೇ? ಕಾನೂನು ಎಲ್ಲಿದೆ? ಪ್ರಜಾಪ್ರಭುತ್ವ ಎಲ್ಲಿದೆ?” ಎಂದು ಕೆರೆಹಳ್ಳಿ ಪ್ರಶ್ನಿಸುತ್ತಿದ್ದರು.

ಸಂಪಾದಕೀಯ ನಿಲುವುಕಾಂಗ್ರೆಸ್ ಆಡಳಿತದಲ್ಲಿ ಗೋಹತ್ಯೆಗೆ ಹೇಗೆ ಅವಕಾಶ ನೀಡಲಾಗುತ್ತಿದೆ ಮತ್ತು ಗೋರಕ್ಷಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಕ್ಕೆ ಇದು ಜೀವಂತ ಉದಾಹರಣೆ! ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದ ರಾಜ್ಯದ ಹಿಂದೂಗಳಿಗೆ ಈಗಲಾದರೂ ನಾಚಿಕೆಯಾಗುತ್ತದೆಯೇ? |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!