
ದುಷ್ಟತನದ ಅಭಾವ, ಅಹಿಂಸೆ ಮತ್ತು ದಯೆ ಇದೇ ಶ್ರೇಷ್ಠ ಧರ್ಮ !
ಪ್ರಶ್ನೆ : ಕಶ್ಚ ಧರ್ಮಃ ಪರೋ ಲೋಕೆ ?
ಅರ್ಥ : ಎಲ್ಲದರಲ್ಲಿ ಶ್ರೇಷ್ಠ ಧರ್ಮ ಯಾವುದು ?
ಉತ್ತರ : ಆನೃಶಂಸ್ಯಮ್
ಅರ್ಥ : ದುಷ್ಟತನದ ಕೊರತೆ, ಅಹಿಂಸೆ ಮತ್ತು ದಯೇ ಇದೇ ಶ್ರೇಷ್ಠ ಧರ್ಮವಾಗಿದೆ.
೧. ಭಕ್ತನ ವ್ಯಾಖ್ಯೆ
ಭಕ್ತನ ಲಕ್ಷಣಗಳ ಆರಂಭವನ್ನು ‘ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಎವ ಚ | (ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೨, ಶ್ಲೋಕ ೧೩), ಅಂದರೆ ಯಾವನು ಯಾವುದೇ ಪ್ರಾಣಿಮಾತ್ರರನ್ನು ದ್ವೇಷಿಸುವುದಿಲ್ಲ, ನಿಸ್ವಾರ್ಥನಾಗಿರುತ್ತಾನೆ, ಎಲ್ಲರನ್ನು ಪ್ರೀತಿಸುತ್ತಾನೆ ಮತ್ತು ನಿಷ್ಕಾರಣವಾಗಿ ದಯೆ ತೋರಿಸುತ್ತಾನೆ,’, ಈ ಗುಣಗಳಿರುವ ಎಂದು ಹೇಳಿ ಭಗವಂತನು ಮುಂದೆ ಹೇಳುತ್ತಾನೆ,
‘ಯಸ್ಮಾನ್ನೋದ್ವಿಜತೆ ಲೊಕೊ ಲೋಕಾನ್ನೊದ್ವಿಜತೆ ಚ ಯಃ |’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೨, ಶ್ಲೋಕ ೧೫), ಅಂದರೆ ‘ಯಾರಿಂದಲೂ ಯಾವುದೇ ಜೀವಕ್ಕೆ ಉದ್ವೇಗ ವಾಗುವುದಿಲ್ಲವೋ, ಹಾಗೆಯೇ ಯಾರಿಂದ ಜನರಿಗೆ ಸ್ವಲ್ಪವೂ ತೊಂದರೆಯಾಗುವುದಿಲ್ಲವೋ ಮತ್ತು ಜನರು ಹೇಗೆ ವರ್ತಿಸಿದರೂ, ತಾನು ತೊಂದರೆ ಅನುಭವಿಸುವುದಿಲ್ಲವೋ, ಅವನೇ ಭಕ್ತನಾಗಿದ್ದಾನೆ.
೨. ಹಿಂದೂಗಳು ಸಮಾಜವಾದಿಗಳಿಂದ ಎಚ್ಚರವಾಗಿರುವುದು ಆವಶ್ಯಕ !
ಉಪಾಸನಾ ಪದ್ಧತಿ ಅಥವಾ ಸಂಪ್ರದಾಯ ಭಿನ್ನವಾಗಿದೆ ಎಂದು ಇತರರಿಗೆ ತೊಂದರೆ ನೀಡದ, ಒಂದೇ ಒಂದು ಧರ್ಮವಿದೆ, ಅದೆಂದರೆ ಹಿಂದೂ ಧರ್ಮ. ಸ್ವಾರ್ಥಿ ರಾಜಕಾರಣಿಗಳು ಮತಗಳ ಗಂಟುಗಳಿಗಾಗಿ ಭ್ರಮೆಗೊಳಿಸುವ ತತ್ತ್ವಜ್ಞಾನಕ್ಕೆ ಮರುಳಾದ ಬುದ್ಧಿವಾದಿಗಳು, ಸಮಾಜವಾದಿಗಳು ಹಿಂದೂ ವ್ಯಕ್ತಿಗಳನ್ನು ಮತ್ತು ಹಿಂದೂ ಧರ್ಮವನ್ನು ಎಷ್ಟು ನಿಂದಿಸಲು ಸಾಧ್ಯವೋ ಅಷ್ಟು ನಿಂದಿಸಿದ್ದಾರೆ. ಇವರೆಲ್ಲರ ತಂದೆತಾಯಿ ಧರ್ಮದಿಂದ ಹಿಂದೂಗಳಾಗಿದ್ದರು. ಹೆಚ್ಚಿನಂಶ ಧಾರ್ಮಿಕ ಹಿಂದೂಗಳಾಗಿದ್ದರು. ಈ ವಿಕೃತಿಯಿಂದ ಹಿಂದೂ ಸಮಾಜವು ಪಾಠ ಕಲಿಯುವುದು ಆವಶ್ಯಕವಾಗಿದೆ. ಹಿಂದೂ ವ್ಯಕ್ತಿಗೆ ಹಿಂದುಸ್ಥಾನದ ಹೊರಗೆ ಹೆಜ್ಜೆ ಇಡಲು ಸ್ಥಾನವಿಲ್ಲ. ಸರ್ವಧರ್ಮಸಮಭಾವದ ಸ್ವಾರ್ಥಿ ಜನರು ಪ್ರಚಾರ ಮಾಡಿದ ವಿಕೃತ ಕಲ್ಪನೆಯಿಂದ ಅವರು ತಮ್ಮ ದೇಶದಲ್ಲಿಯೇ ಹೆಚ್ಚು ತುಳಿತಕ್ಕೆ ಒಳಗಾಗಿದ್ದಾರೆ. ಧಾರ್ಮಿಕವಾಗಿ, ಸಾಮಾಜಿಕ ಮಟ್ಟದಲ್ಲಿ ಮಾನಹಾನಿಯನ್ನು ಸಹಿಸುತ್ತಿದ್ದಾರೆ. ಈಗ ಬಹಳ ಎಚ್ಚರಿಕೆಯಿಂದ ವ್ಯವಹರಿಸುವ ಕಾಲ ಬಂದಿದೆ.
೩. ಸಾಮಾಜಿಕದೃಷ್ಟಿಯಿಂದ ಅಹಿಂಸೆಯ ತತ್ತ್ವವನ್ನು ಪಾಲಿಸದೇ ಸಮಾಜಕಂಟಕರ ನಾಶವೂ ದಯೆಯೇ ಆಗಿದೆ !
ಅಹಿಂಸೆಯ ಮಹಾತ್ಮೆಯನ್ನು ಹಿಂದೂ ಧರ್ಮವು ಹೇಗೆ ಹೇಳಿದೆಯೋ, ಹಾಗೆ ಬೇರೆ ಯಾವ ಧರ್ಮವೂ ಹೇಳಿಲ್ಲ. ಹಿಂದೂ ಧರ್ಮಿಯರು ತಮ್ಮ ರಾಜ್ಯಗಳಿದ್ದರೂ ಬೇರೆಯವರ ಪ್ರಾರ್ಥನಾ ಸ್ಥಳಗಳನ್ನು ಕೆಡವಿ ಅವುಗಳ ಮೇಲೆ ದೇವಸ್ಥಾನಗಳನ್ನು ನಿರ್ಮಿಸಿಲ್ಲ. ಇತರ ಆಡಳಿತಗಳಲ್ಲಿ ಏನಾಯಿತು ಎಂಬುದೆಲ್ಲವೂ ಗೊತ್ತೇ ಇದೆ. ಈ ಅಹಿಂಸಾ ಧರ್ಮಕ್ಕೆ ಸದ್ಗುಣವಿಕೃತಿಯ ಸ್ವರೂಪ ಬರದಂತೆ ವಿವೇಕವುಳ್ಳ ಹಿಂದೂ ಮಹಾತ್ಮರು ಎಚ್ಚರಿಕೆಯನ್ನೂ ತೆಗೆದುಕೊಂಡಿದ್ದಾರೆ. ಜಗದ್ಗುರು ಶ್ರೀ ತುಕಾರಾಮ ಮಹಾರಾಜರು ದಯೆಯ ವ್ಯಾಖ್ಯೆಯನ್ನು ಮಾಡುವಾಗ ಸ್ಪಷ್ಟವಾಗಿ ಹೇಳಿದ್ದಾರೆ, ದಯೆ ತಿಚೆಂ ನಾಂವ ಭೂತಾಂಚೆ ಪಾಳಣ | ಆಣಿಕ ನಿರ್ದಳಣ ಕಂಟಕಾಂಚೆ ||
– ತುಕಾರಾಮ ಗಾಥಾ, ಅಭಂಗ ೧೪೧, ದ್ವಿಪದಿ ೧
ಅರ್ಥ : ದಯೆ ಎಂದರೆ ಸಾಮಾನ್ಯವಾಗಿ ಎಲ್ಲ ಪ್ರಾಣಿಮಾತ್ರರ ಪಾಲನೆ ಮಾಡುವ ವೃತ್ತಿಯನ್ನು ಇಟ್ಟುಕೊಳ್ಳುವುದಾಗಿದೆ; ಆದರೆ ಅದರೊಂದಿಗೆ ದುಷ್ಟ ಸಮಾಜಕಂಟಕರ ವಿನಾಶ ಮಾಡುವುದು, ದಯೆಯೇ ಆಗಿದೆ.
ಶ್ರೀಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣ ದಿಗ್ವಿಜಯದ ಸಮಯದಲ್ಲಿ ಮುಸ್ಲಿಂ ಆಡಳಿತದ ಸಮಯದಲ್ಲಿ ದೇವಸ್ಥಾನಗಳನ್ನು ಕೆಡವಿ ಆ ಸ್ಥಳದಲ್ಲಿ ಕಟ್ಟಲಾದ ಮಸೀದಿಗಳನ್ನು ನೆಲಸಮ ಮಾಡಿದರು ಮತ್ತು ಅಲ್ಲಿ ಮತ್ತೆ ಮೊದಲಿನಂತೆ ದೇವಸ್ಥಾನಗಳನ್ನು ನಿರ್ಮಿಸಿದರು. ವೈಯಕ್ತಿಕ ದೃಷ್ಟಿಯಿಂದ ತಮ್ಮ ಮಟ್ಟಿಗೆ ಅಹಿಂಸೆಯ ಯಾವುದೇ ಎತ್ತರದ-ಉದಾತ್ತ ತುದಿಯ ವರೆಗೆ ಹೋಗಲು ಯಾವುದೇ ಅಡಚಣೆ ಇಲ್ಲ. ವ್ಯಕ್ತಿಗತವಾಗಿ ಸಹನಶೀಲ, ಕ್ಷಮಾಶೀಲ, ಅಹಿಂಸಕ, ಉದಾರ, ದಯಾಳು, ಕರುಣೆಯುಳ್ಳ, ಹೆಚ್ಚು ಕಳಕಳಿಯ ಮತ್ತು ಎಷ್ಟು ನಿರಪೇಕ್ಷವೋ ಅಷ್ಟು ಭೂಷಣವೇ ಆಗಿದೆ; ಆದರೆ ಇದು ಅಹಿಂಸೆಯ ಕೊನೆಯ ಸೀಮೆ ಆಯಿತು. ಕುಟುಂಬ-ಸಮಾಜ-ರಾಷ್ಟ್ರ ಇವುಗಳ ಭದ್ರತೆಯ ದೃಷ್ಟಿಯಿಂದ ಅನ್ಯಾಯ-ದುಷ್ಟತೆ-ಹಿಂಸೆ-ಅಧರ್ಮ ಇವುಗಳನ್ನು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪ್ರತಿರೋಧಿಸುವುದು, ಇದು ಸಹ ವ್ಯಕ್ತಿಯ ಅಥವಾ ಸಮಾಜದ ಆವಶ್ಯಕ, ಅನಿವಾರ್ಯ ಕರ್ತವ್ಯವಾಗಿದೆ. ಸಾಮಾಜಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗವಾಗಿ ಅನ್ಯಾಯ ನಡೆಯುತ್ತಿರುವಾಗ ದುಷ್ಟತನವನ್ನು ಪ್ರತಿರೋಧಿಸಲು ದೃಢವಾಗಿ ನಿಲ್ಲದೇ ಕ್ಷಮಾಶೀಲತೆ ಅಥವಾ ಅಹಿಂಸೆಯ ಗುರಾಣಿಯನ್ನು ಮುಂದೆ ಮಾಡಿ ನಿಷ್ಕ್ರಿಯರಾಗಿರುವುದು, ಇದು ಡಂಭಾಚಾರವಾಗಿದ್ದು ಅದು ಹೇಡಿತನ, ಅಜ್ಞಾನ ಮತ್ತು ಅವಿವೇಕದ ಲಕ್ಷಣವಾಗಿದೆ.
೪. ಹಿಂದೂಗಳು ಜಾಗರೂಕರಾಗದಿದ್ದರೆ ಅವರ ಸರ್ವನಾಶವಾಗುವ ಸಾಧ್ಯತೆ ಇದೆ !
ಯಾವಾಗ ನಾವು ಅಹಿಂಸೆಯ ಮತ್ತು ಕ್ಷಮಾಶೀಲತೆಯ ಬಗ್ಗೆ ಮಾತನಾಡುತ್ತೇವೆಯೋ, ಆಗ ವ್ಯಕ್ತಿಯೆಂದು ನಮ್ಮ ಮೇಲೆ ಪ್ರಸಂಗ ಬಂದರೆ ನಮ್ಮ ಮೇಲೆ ಅನ್ಯಾಯವಾಗುತ್ತಿದೆ, ಎಂದು ಅನಿಸಿದರೆ ಅಹಿಂಸೆ ಮತ್ತು ಕ್ಷಮಾಶೀಲತೆಯ ವಿಚಾರವನ್ನು ನಾವು ಎಂದಿಗಾದರೂ ಮಾಡುತ್ತೇವೆಯೇ ? ಅಲ್ಲಿ ನಾವು ಸ್ವಾರ್ಥ ರಕ್ಷಣೆಗಾಗಿ ಪ್ರತಿರೋಧಿಸುವಾಗ ದುಷ್ಟತನದ ಯಾವುದೇ ಮಟ್ಟಕ್ಕೆ ಹೋಗಬಹುದು. ಎಲ್ಲಿ ಕ್ಷಮಾಶೀಲತೆಯ ಆವಶ್ಯಕತೆ ಇದೆಯೋ ಅಲ್ಲಿ ನಾವು ಹಿಂಸಾತ್ಮಕರಾಗುತ್ತೇವೆ. ‘ಸಾಮಾಜಿಕ ಮಟ್ಟದಲ್ಲಿ ನಡೆಯುವ ಅನ್ಯಾಯವನ್ನು ಪ್ರತಿರೋಧಿಸಲು ಕರ್ತವ್ಯವೆಂದು ದುಷ್ಟರ ನಾಶಕ್ಕಾಗಿ ಕೆಲವೊಮ್ಮೆ ಹಿಂಸೆ ಮಾಡುವ ಪ್ರಸಂಗ ಬಂದರೆ, ನಮ್ಮನ್ನು ನಾವು ಗೌತಮ ಬುದ್ಧನ ಅವತಾರವೆಂದು ತಿಳಿದು ನಾವು ಅಹಿಂಸೆಯನ್ನೇ ಸ್ವೀಕರಿಸಬೇಕು, ಕ್ಷಮಾಶೀಲರಾಗಿಯೇ ಇರಬೇಕು’, ಎಂಬ ಪ್ರವಚನಗಳನ್ನು ಮಾಡುತ್ತಿರುತ್ತೇವೆ. ಈ ಡಾಂಭಿಕತನದ ಪರಿಣಾಮಗಳನ್ನು ನಾವು ಸಾಕಷ್ಟು ಅನುಭವಿಸಿ ದ್ದೇವೆ. ಈಗ ಎಚ್ಚರಾಗದಿದ್ದರೆ ಮತ್ತು ಕರ್ತವ್ಯದ ಅರಿವು ಇರದಿದ್ದರೆ ಸರ್ವನಾಶವನ್ನು ತಂದುಕೊಳ್ಳದೇ ಇರಲಾರೆವು.
೫. ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ವ್ಯವಹರಿಸುವಾಗ ವಿವೇಕದ ಅರಿವಿರಬೇಕು !
‘ಶ್ರೀಕೃಷ್ಣನ ಮಾರ್ಗದರ್ಶನದಿಂದ ಪಾಂಡವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ವ್ಯವಹರಿಸುವಾಗ ಬೇಕಾದ ವಿವೇಕದ ಅರಿವು ಚೆನ್ನಾಗಿ ಲಭಿಸಿತ್ತು’, ಎಂಬುದು ಮಹಾಭಾರತದಲ್ಲಿ ಕಂಡುಬರುತ್ತದೆ. ಶ್ರೀ ಛತ್ರಪತಿ ಶಿವಾಜಿ ಮಹಾರಾಜರೂ ಈ ವಿವೇಕವನ್ನು ಯೋಗ್ಯ ರೀತಿಯಲ್ಲಿ ಕಾರ್ಯಾಚರಣೆಗೆ ತಂದರು ಮತ್ತು ಅದಕ್ಕಾಗಿಯೇ ಮುಸ್ಲಿಂರ ಪ್ರಬಲ ಮತ್ತು ಕ್ರೂರ ಆಡಳಿತಗಳ ನಡುವೆ ಹಿಂದೂಗಳ ಆತ್ಮಹತ್ಯಾ ಪ್ರವೃತ್ತಿಯನ್ನು ನಿವಾರಿಸಿ, ಅವರಿಗೆ ಹಿಂದೂಗಳ ಸ್ವತಂತ್ರ ರಾಜಸಿಂಹಾಸನವನ್ನು ಸ್ಥಾಪಿಸಲು ಸಾಧ್ಯವಾಯಿತು. ಆದುದರಿಂದ ಆ ರಾಜ್ಯದಲ್ಲಿ ಹಿಂದೂಗಳಲ್ಲದ ಪರಧರ್ಮಿಯರಿಗೆ ಸ್ವಲ್ಪವೂ ಅನ್ಯಾಯವಾಗಲಿಲ್ಲ.
– ಪ.ಪೂ. ಸ್ವಾಮೀ ವರದಾನಂದ ಭಾರತಿ (ಪೂರ್ವಾಶ್ರಮದ ಅನಂತರಾವ ಆಠವಲೆ) (ಆಧಾರ : ಗ್ರಂಥ ‘ಯಕ್ಷಪ್ರಶ್ನೆ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’