
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಫೆಬ್ರವರಿ ೨೦೨೧ ರ ವರೆಗೆ ಗೋವಾದಲ್ಲಿನ ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದ ಒಂದು ಕೋಣೆಯಲ್ಲಿ ವಾಸಿಸುತ್ತಿದ್ದರು. ಅನಂತರ ೩ ವರ್ಷ ಅವರು ಅಥವಾ ಬೇರೆ ಯಾರೂ ಆ ಕೋಣೆಯಲ್ಲಿ ವಾಸಿಸುತ್ತಿರಲಿಲ್ಲ; ಆದರೆ ಆ ಕೋಣೆಯನ್ನು ನಿಯಮಿತವಾಗಿ ಸ್ವಚ್ಛತೆ ಮಾಡಲಾಗುತ್ತಿತ್ತು. ಮಹರ್ಷಿಗಳ ಆಜ್ಞೆಗನುಸಾರ ಫೆಬ್ರವರಿ ೨೦೨೪ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿನ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಆ ಕೋಣೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರು ಆ ಕೋಣೆಯಲ್ಲಿ ವಾಸಿಸಲು ಹೋಗುವ ಮೊದಲು ಆ ಕೋಣೆಯ ಪೂಜೆಯನ್ನು ಮಾಡಲಾಯಿತು. ಈ ಕೋಣೆಯ ಛಾಯಾಚಿತ್ರಗಳ ‘ಯು.ಎ.ಎಸ್.’ (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣ ಮತ್ತು ಲೋಲಕದ ಮೂಲಕ ಸಂಶೋಧನೆ ಮಾಡಲಾಯಿತು. ‘ಯು.ಎ.ಎಸ್.’ ಉಪಕರಣ ಮತ್ತು ಲೋಲಕದ ಮೂಲಕ ವಸ್ತು, ವಾಸ್ತು ಹಾಗೂ ವ್ಯಕ್ತಿಯಲ್ಲಿನ ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆ ಅಳೆಯಬಹುದು. ಈ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊದಲು ವಾಸಿಸುತ್ತಿದ್ದ ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆ ಉತ್ತರೋತ್ತರ ಬೃಹತ್ಪ್ರಮಾಣದಲ್ಲಿ ಹೆಚ್ಚಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮೊದಲು ವಾಸಿಸುತ್ತಿದ್ದ ಕೋಣೆಯ ಯಾವುದೇ ಛಾಯಾಚಿತ್ರದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಈ ಛಾಯಾಚಿತ್ರಗಳಲ್ಲಿ ಉತ್ತರೋತ್ತರ ಬೃಹತ್ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು. ಅವುಗಳ ನೋಂದಣಿಯನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ – ‘ಯು,ಎ.ಎಸ್.’ ಉಪಕರಣದ ಮೂಲಕ ಪ್ರಭಾವಲಯವನ್ನು ಅಳೆಯಲು ಪರಿಶೀಲನೆಯ ಸ್ಥಳದಲ್ಲಿ ಹೆಚ್ಚೆಂದರೆ ೨.೩ ಕಿ.ಮೀಟರ್‌ನಷ್ಟೆ ಸ್ಥಳವಿತ್ತು. ಆದ್ದರಿಂದ ಅದಕ್ಕಿಂತ ಮುಂದಿನ ಪ್ರಭಾವಲಯವನ್ನು ಯೋಗ್ಯ ರೀತಿಯಲ್ಲಿ ಅಳೆಯಲು ಲೋಲಕವನ್ನು ಉಪಯೋಗಿಸಲಾಯಿತು.

ಮೇಲಿನ ನೋಂದಣಿಯಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚೈತನ್ಯಮಯ ಸ್ಪಂದನಗಳು ಇದುವರೆಗೆ ಕೋಣೆಯಲ್ಲಿ ಉಳಿದಿರುವುದು : ಫೆಬ್ರವರಿ ೨೦೨೧ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈ ಕೋಣೆಯಲ್ಲಿ ವಾಸಿಸುತ್ತಿರಲಿಲ್ಲ. ಆದರೂ ಫೆಬ್ರವರಿ ೨೦೨೪ ರಲ್ಲಿ, ಅಂದರೆ ೩ ವರ್ಷಗಳಲ್ಲಿ ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣ ಹೆಚ್ಚುತ್ತಾ ಹೋಗಿ ಅದು ೭೨.೧ ಕಿ.ಮೀಟರ್ ಆಯಿತು. ಇದರ ಕಾರಣವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚೈತನ್ಯಮಯ ಸ್ಪಂದನಗಳು ಇದುವರೆಗೂ ಕೋಣೆಯಲ್ಲಿ ಉಳಿದಿವೆ. ಇಷ್ಟು ಮಾತ್ರವಲ್ಲ, ಕಾಲಕ್ಕನುಸಾರ ಅವರಲ್ಲಿನ (ಸಚ್ಚಿದಾನಂದ ಪರಬ್ರಹ್ಮ ಡಾಕ್ಟರಲ್ಲಿನ) ಚೈತನ್ಯ ಹೇಗೆ ಹೆಚ್ಚಾಗುತ್ತಿದೆಯೋ, ಹಾಗೆಯೇ ಕೋಣೆಯಲ್ಲಿನ ಚೈತನ್ಯವೂ ಹೆಚ್ಚಾಗುತ್ತಿದೆ. ಇದರ ಕಾರಣವೆಂದರೆ, ಈ ಹಿಂದೆ ಕೋಣೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ವಾಸ ಮಾಡಿರುವುದರಿಂದ ಅವರ ತತ್ತ್ವ ಇದುವರೆಗೆ ಆ ಕೋಣೆ ಯಲ್ಲಿದೆ. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿನ ಚೈತನ್ಯ ಕಾಲಕ್ಕನುಸಾರ ಹೆಚ್ಚಾದಾಗ ಕೋಣೆಯಲ್ಲಿನ ಚೈತನ್ಯವೂ ತನ್ನಿಂತಾನೇ ಹೆಚ್ಚಾಯಿತು. ಇದು ಭೌತಶಾಸ್ತ್ರದಲ್ಲಿನ ‘ರೆಝೋನನ್ಸ್ ಇಫೆಕ್ಟ್’ (ಎರಡು ಸಮಾನ ಗುಣಧರ್ಮದ ತಂತಿಗಳು ಒಂದರ ಮುಂದೆ ಒಂದು ಇದ್ದರೆ ಅವುಗಳಲ್ಲಿನ ಒಂದು ತಂತಿಯನ್ನು ಮೀಟಿದಾಗ ಅದರಲ್ಲಿ ಕಂಪನವುಂಟಾಗುತ್ತದೆ, ಆಗ ಇನ್ನೊಂದು ತಂತಿಯಲ್ಲಿಯೂ ಮೊದಲ ತಂತಿಯ ಹಾಗೆಯೆ ತನ್ನಿಂತಾನೇ ಕಂಪನವುಂಟಾಗುತ್ತದೆ.)
೧ ಆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಕೋಣೆಯಲ್ಲಿ ಶ್ರೀ ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ) ಛಾಯಾಚಿತ್ರವನ್ನಿಟ್ಟು ಭಾವಪೂರ್ಣ ಪೂಜೆ ಮಾಡಿದ ನಂತರ ಕೋಣೆಯಲ್ಲಿನ ಚೈತನ್ಯ ಬಹಳಷ್ಟು ಹೆಚ್ಚಾಗುವುದು : ಫೆಬ್ರವರಿ ೨೦೨೪ ರಿಂದ ಈ ಕೋಣೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ವಾಸಿಸುತ್ತಿದ್ದಾರೆ. ಅಲ್ಲಿ ವಾಸಿಸಲು ಹೋಗುವ ಮೊದಲು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಕೋಣೆ ಯಲ್ಲಿ ಶ್ರೀ ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ) ಛಾಯಾಚಿತ್ರವನ್ನಿಟ್ಟು ಭಾವಪೂರ್ಣ ಪೂಜೆ ಮಾಡಿದರು. ಪೂಜೆಯ ನಂತರ ಕೋಣೆಯಲ್ಲಿ ಚೈತನ್ಯದ ಪ್ರಮಾಣ ಬಹಳಷ್ಟು ಹೆಚ್ಚಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆ ೧೧೮.೩ ಕಿ.ಮೀಟರ್ ಆಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಭಾವಪೂರ್ಣ ಪೂಜೆಯಿಂದ ಶ್ರೀ ಗುರುಗಳ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಯಿತು. ಇದರ ಸಕಾರಾತ್ಮಕ ಪರಿಣಾಮ ಕೋಣೆಯ ಮೇಲಾಯಿತು.
೧ ಇ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಲ್ಲಿನ ಭಾವದಿಂದ ಕೋಣೆಯಲ್ಲಿನ ಚೈತನ್ಯದ ಪ್ರಮಾಣ ತುಂಬಾ ಹೆಚ್ಚಾಗುವುದು : ಫೆಬ್ರವರಿ ೨೦೨೪ ರಿಂದ ಈ ಕೋಣೆಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರು ವಾಸಿಸಲು ಆರಂಭಿಸಿದ ನಂತರ ೧ ತಿಂಗಳಲ್ಲಿ (ಮಾರ್ಚ್ ೨೦೨೪ ರಲ್ಲಿ) ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣ ಹೆಚ್ಚಾಗಿ ಅದು ೧೧೮.೩ ಕಿ.ಮೀಟರ್‌ನಿಂದ ೧೭೨ ಕಿ.ಮೀಟರ್ ಆಯಿತು. ಇದು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಇದರ ಕಾರಣವೆಂದರೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಲ್ಲಿನ ಭಾವದಿಂದ ಕೋಣೆಯಲ್ಲಿನ ಚೈತನ್ಯ ಬೃಹತ್ಪ್ರಮಾಣದಲ್ಲಿ ಹೆಚ್ಚಾಯಿತು.
೧ ಈ. ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಮಹಾಲಕ್ಷ್ಮಿಸ್ವರೂಪಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಲ್ಲಿನ ಅವತಾರಿತತ್ತ್ವ (ಶ್ರೀ ಮಹಾಲಕ್ಷ್ಮಿದೇವಿಯ ತತ್ತ್ವ) ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗುವುದು : ಈ ಮೇಲಿನ ನೋಂದಣಿಯಿಂದ ಅರಿವಾಗುವುದೇನೆಂದರೆ, ೨೦೧೬ ರಿಂದ ೨೦೨೦ ಅಂದರೆ ಸುಮಾರು ೫ ವರ್ಷಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸ್ವತಃ ಸ್ಥೂಲದಲ್ಲಿ ಕೋಣೆಯಲ್ಲಿ ವಾಸಿಸುತ್ತಿದ್ದರೂ ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆ ಕೇವಲ ಎರಡು ಪಟ್ಟು ಹೆಚ್ಚಾಗಿ ೧ ಕಿ.ಮೀಟರ್ ಆಯಿತು. ತದ್ವಿರುದ್ಧ ೨೦೨೧ ರಿಂದ ಜನವರಿ ೨೦೨೪ ರ ವರೆಗೆ ಅಂದರೆ ಸುಮಾರು ೩ ವರ್ಷಕ್ಕಿಂತಲೂ ಹೆಚ್ಚು ವರ್ಷ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ್ ಆ ಕೋಣೆಯಲ್ಲಿ ಸ್ಥೂಲದಲ್ಲಿ ವಾಸಿಸದಿದ್ದರೂ ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆ ಅನೇಕ ಪಟ್ಟು ಹೆಚ್ಚಾಗಿ ಅದು ೭೨.೧ ಕಿ.ಮೀಟರ್ ಆಯಿತು. ವಿಶೇಷವೆಂದರೆ ಫೆಬ್ರವರಿ ೨೦೨೪ ರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಈ ಕೋಣೆಯಲ್ಲಿ ವಾಸಿಸಲು ಆರಂಭಿಸಿದ ನಂತರ ಕೇವಲ ಒಂದೇ ತಿಂಗಳಲ್ಲಿ ಕೋಣೆಯಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಗಿ ಅದು ೧೭೨.೮ ಕಿ.ಮೀಟರ್ ಆಯಿತು. ಇದು ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಮಹಾಲಕ್ಷ್ಮಿಸ್ವರೂಪಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಲ್ಲಿನ ಅವತಾರಿತತ್ತ್ವ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಲ್ಲಿನ ಶ್ರೀ ಮಹಾಲಕ್ಷ್ಮಿದೇವಿಯ ತತ್ತ್ವ) ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುವುದರ ಸಂಕೇತವಾಗಿದೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಗೋವಾ. (೧.೨.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !