Film Story of Itihas : ಇತಿಹಾಸದ ವಿಕೃತೀಕರಣದ ಕುರಿತು ‘ಹಿಸ್ ಸ್ಟೋರಿ ಆಫ್ ಇತಿಹಾಸ್’ ಚಲನಚಿತ್ರ ಬಿಡುಗಡೆ!

  • ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಇತಿಹಾಸದ ಪಠ್ಯಪುಸ್ತಕಗಳ ಮೂಲಕ ಮಾಡಿದ ಸುಳ್ಳು ಇತಿಹಾಸದ ಪ್ರಸಾರವನ್ನು ಎತ್ತಿ ತೋರಿಸಿದ್ದಾರೆ

  • ಭೌತಶಾಸ್ತ್ರದ ಪ್ರಾಧ್ಯಾಪಕ ನೀರಜ್ ಅತ್ರಿ ಅವರ ಜೀವನ ಆಧಾರಿತ ಚಲನಚಿತ್ರ

ನವದೆಹಲಿ – ‘ಹಿಸ್ ಸ್ಟೋರಿ ಆಫ್ ಇತಿಹಾಸ್’ (ಅವನ ‘ಇತಿಹಾಸ’ದ ಕಥೆ) ಎಂಬ ಚಲನಚಿತ್ರವು ಮೇ 30 ರಂದು ಬಿಡುಗಡೆಯಾಗಿದೆ. ಇದು ಸ್ವತಂತ್ರ ಭಾರತದಲ್ಲಿ ಇತಿಹಾಸವನ್ನು ಹೇಗೆ ವಿರೂಪಗೊಳಿಸಲಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಲನಚಿತ್ರವು ಭೌತಶಾಸ್ತ್ರ ಕಲಿಸುವ ಪ್ರಾಧ್ಯಾಪಕ ನೀರಜ್ ಅತ್ರಿ ಅವರ ನಿಜ ಕಥೆಯ ಮೇಲೆ ಆಧಾರಿತವಾಗಿದೆ. ಚಲನಚಿತ್ರದ ಸಣ್ಣ ಜಾಹೀರಾತಿನಲ್ಲಿ ಹೇಳಿರುವಂತೆ, ಇತಿಹಾಸವು ಮಾಂತ್ರಿಕವಾಗಿದೆ. ವಾಸ್ತವದಲ್ಲಿ ನಡೆಯದ ಇತಿಹಾಸವನ್ನು ನಮ್ಮ ಮೇಲೆ ಹೇರಲಾಗಿದೆ. ಉದಾಹರಣೆಗೆ: ವಾಸ್ಕೋ-ಡ-ಗಾಮಾ ಭಾರತವನ್ನು ಕಂಡುಹಿಡಿದನು; ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಬ್ರಾಹ್ಮಣರು ಹೊರಗಿನಿಂದ ಭಾರತಕ್ಕೆ ಬಂದರು; ಮಹಿಳೆಯರಿಗೆ ಮತ್ತು ಶೂದ್ರರಿಗೆ ವೇದ ಪಠಣಕ್ಕೆ ಅವಕಾಶವಿರಲಿಲ್ಲ ಇತ್ಯಾದಿ.

ಚಿತ್ರಕ್ಕೆ ಹೆಚ್ಚು ‘ಸ್ಕ್ರೀನ್‌’ಗಳನ್ನು ನೀಡುತ್ತಿಲ್ಲ! – ನೀರಜ್ ಅತ್ರಿ

ಈ ಕುರಿತು ‘ಸನಾತನ ಪ್ರಭಾತ’ದೊಂದಿಗೆ ಮಾತನಾಡಿದ ಶ್ರೀ ಅತ್ರಿ, ಈ ಚಲನಚಿತ್ರವು ಹಿಂದೂ ವಿರೋಧಿಗಳ ಮುಖವಾಡವನ್ನು ಕಳಚುತ್ತದೆ. ಇದು ಪ್ರಬಲ ವ್ಯವಸ್ಥೆಗೆ ವಿರುದ್ಧವಾಗಿರುವುದರಿಂದ, ಅನೇಕ ಚಿತ್ರಮಂದಿರಗಳ ಮಾಲೀಕರು ಈ ಚಿತ್ರಕ್ಕೆ ‘ಸ್ಕ್ರೀನ್‌’ಗಳನ್ನು ನೀಡುತ್ತಿಲ್ಲ ಎಂದು ಗಮನಿಸಲಾಗಿದೆ. ಆದರೂ, ಈ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ.

ಚಿತ್ರದ ಕುರಿತು ಮಾತನಾಡುತ್ತಾ,

ಈ ಚಿತ್ರವು ಯುವ ಪೀಳಿಗೆಯನ್ನು ಹಿಂದೂ ವಿರೋಧಿಗಳನ್ನಾಗಿ ಮಾಡಲು ಹೇಗೆ ‘ಬ್ರೈನ್‌ವಾಶ್’ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಶಾಲೆಯಲ್ಲಿ ಇತಿಹಾಸ ಅಧ್ಯಯನದ ಮೂಲಕ ಮಕ್ಕಳ ಧರ್ಮದ ಬಗ್ಗೆ ನಕಾರಾತ್ಮಕ ಕಲ್ಪನೆಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಹಿಂದೂ ಪೋಷಕರು ತಿಳಿದುಕೊಳ್ಳಬಹುದು. ಆದ್ದರಿಂದ, ಹೆಚ್ಚಿನ ಸಂಖ್ಯೆಯ ಹಿಂದೂಗಳು ತಮ್ಮ ಮಕ್ಕಳೊಂದಿಗೆ ಈ ಚಲನಚಿತ್ರವನ್ನು ನೋಡಬೇಕು ಎಂದು ಶ್ರೀ ಅತ್ರಿ ‘ಸನಾತನ ಪ್ರಭಾತ’ದ ಮೂಲಕ ಹಿಂದೂಗಳಿಗೆ ಕರೆ ನೀಡಿದ್ದಾರೆ.

ನೀರಜ್ ಅತ್ರಿ ಅವರು ಭೌತಶಾಸ್ತ್ರವನ್ನು ಕಲಿಸುತ್ತಿದ್ದಾಗ, ‘ಭಾರತೀಯ ವ್ಯವಸ್ಥೆ (ಎನ್.ಸಿ.ಇ.ಆರ್.ಟಿ.) ವಿದ್ಯಾರ್ಥಿಗಳಿಗೆ ಹೇಗೆ ತಪ್ಪು ಇತಿಹಾಸವನ್ನು ಕಲಿಸಿದೆ’ ಎಂಬುದನ್ನು ಅರ್ಥಮಾಡಿಕೊಂಡಿರುವುದನ್ನು ಚಲನಚಿತ್ರವು ತೋರಿಸುತ್ತದೆ. ವ್ಯವಸ್ಥೆಯ ವಿರುದ್ಧ ಅವರು ನಡೆಸಿದ ಹೋರಾಟ, ಇತಿಹಾಸದ ಪುಸ್ತಕಗಳಲ್ಲಿನ ಮಾಹಿತಿಯನ್ನು ಯಾವ ಆಧಾರದ ಮೇಲೆ ನೀಡಲಾಗಿದೆ, ಈ ಬಗ್ಗೆ ಅತ್ರಿ ಅವರು ಮಾಹಿತಿ ಹಕ್ಕಿನಡಿ ಹೇಗೆ ಅರ್ಜಿ ಸಲ್ಲಿಸಿದರು ಮತ್ತು ಅವರ ಒಟ್ಟಾರೆ ಹೋರಾಟದ ಮೇಲೆ ಈ ಚಲನಚಿತ್ರವು ಬೆಳಕು ಚೆಲ್ಲುತ್ತದೆ. ಅತ್ರಿ ಅವರ ಪಾತ್ರವನ್ನು ನಟ ಸುಬೋಧ್ ಭಾವೆ ನಿರ್ವಹಿಸಿದ್ದಾರೆ. ಮನ್‌ಪ್ರೀತ್ ಸಿಂಗ್ ಧಾಮಿ ಚಿತ್ರದ ಲೇಖಕರು ಮತ್ತು ನಿರ್ದೇಶಕರು ಮತ್ತು ‘ಪಂಚಕರ್ಮ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಿಸಿದೆ.

His Story Of Itihaas | Trailer | In cinemas on 30 May | Subodh Bhave, Yogendra Tiku, Ankur Vikal

ಸೌಜನ್ಯ : Panchkarma Films)

ಸಂಪಾದಕೀಯ ನಿಲುವು

ಶಾಲಾ ಪಠ್ಯಪುಸ್ತಕಗಳ ಮೂಲಕ ಭಾರತೀಯ ಇತಿಹಾಸದ ವಿಕೃತೀಕರಣವು ಸ್ವತಂತ್ರ ಭಾರತದಲ್ಲಿ ಹಿಂದೂ ವಿರೋಧಿ ವೈಚಾರಿಕ ಭಯೋತ್ಪಾದನೆಯ ಅತಿದೊಡ್ಡ ಪಿತೂರಿಯಾಗಿದೆ. ಇದನ್ನು ಬಹಿರಂಗಪಡಿಸುವ ಈ ಚಿತ್ರವನ್ನು ನೋಡುವುದು ಮತ್ತು ನಿಮ್ಮ ಮಕ್ಕಳಿಗೆ ತೋರಿಸುವುದು ಪ್ರತಿಯೊಬ್ಬ ಹಿಂದೂವಿನ ಧರ್ಮ ಮತ್ತು ರಾಷ್ಟ್ರ ಕರ್ತವ್ಯ ಎಂಬುದನ್ನು ಗಮನಿಸಿ!