ಪುನಃ ಕಾಶ್ಮೀರದಲ್ಲಿ ನುಸುಳಿ ದೊಡ್ಡ ಅನಾಹುತ ನಡೆಸುವ ಸಾಧ್ಯತೆ !

ನವದೆಹಲಿ – ಇತ್ತೀಚೆಗಷ್ಟೆ ಭಾರತದಿಂದ ಹೀನಾಯ ಸೋಲು ಅನುಭವಿಸಿರುವ ಪಾಕಿಸ್ತಾನವು ತನ್ನ ಭಾರತ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಸಿದ್ಧವಿಲ್ಲ. ಗಡಿ ಭದ್ರತಾ ಪಡೆಯ ಅನುಸಾರ, ‘ಆಪರೇಷನ್ ಸಿಂದೂರ’ನ ನಂತರ ಜಿಹಾದಿ ಭಯೋತ್ಪಾದಕರು ಪುನಃ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ತಮ್ಮ ತಾಣಗಳಿಗೆ ಮರಳುತ್ತಿದ್ದಾರೆ ಮತ್ತು ತರಬೇತಿ ಪಡೆಯುತ್ತಿದ್ದಾರೆ. ಆದುದರಿಂದ, ಅವರು ಜಮ್ಮು-ಕಾಶ್ಮೀರದಲ್ಲಿ ಪುನಃ ನುಸುಳಿ ದೊಡ್ಡ ಅನಾಹುತವನ್ನು ಮಾಡಬಹುದು’ ಎಂಬ ಮಾಹಿತಿಯು ಗುಪ್ತಚರ ಇಲಾಖೆಗೆ ದೊರೆತಿದೆ. ಇದರಿಂದ ಭದ್ರತಾ ಏಜೆನ್ಸಿಗಳು ಎಚ್ಚೆತ್ತುಕೊಂಡಿವೆ ಎಂದು ದಳದ ಮಹಾನಿರೀಕ್ಷಕರಾದ ಶಶಾಂಕ ಆನಂದರವರು ತಿಳಿಸಿದ್ದಾರೆ.
🚨Terrorists are returning to their camps near LoC – Jammu BSF IG Shashank Anand
🛑A fresh wave of infiltration in Kashmir could lead to another major terror strike.
👉India’s swift response to the Pahalgam attack, “Operation Sindoor”, wiped out nine terror camps. However… pic.twitter.com/sQRC1FWRaw
— Sanatan Prabhat (@SanatanPrabhat) May 28, 2025
1. ಶಶಾಂಕ ಆನಂದರವರು ಮಾತನಾಡುತ್ತ, ನಮಗೆ ನಿರಂತರವಾಗಿ ವಿವಿಧ ರೀತಿಯ ರಹಸ್ಯ ಮಾಹಿತಿಗಳು ದೊರೆಯುತ್ತಿವೆ. ಆದರೂ, ಭಯೋತ್ಪಾದಕರು ಯಾವಾಗ ನುಸುಳಲು ಪ್ರಯತ್ನಿಸುವರು ಎಂಬುದು ಇನ್ನೂ ತಿಳಿದಿಲ್ಲ; ಆದರೆ ಭದ್ರತಾ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ, ಎಂದು ಹೇಳಿದರು.
2. ಶಶಾಂಕ ಆನಂದರವರು ಮೇ 10 ರಂದು ಪಾಕಿಸ್ತಾನದ ದುಃಸಾಹಸದ ಬಗ್ಗೆ ಹೀಗೆ ವಿವರಿಸಿದರು, ಪಾಕಿಸ್ತಾನವು ನಮ್ಮ ಚೌಕಿಗಳನ್ನು ಗುರಿಯಾಗಿಸಲು ಡ್ರೋನ್ ಗಳನ್ನು ಕಳುಹಿಸಿತ್ತು. ಸೈನಿಕರು ಆ ಡ್ರೋನ್ ಗಳನ್ನು ಹೊಡೆದುರುಳಿಸಲು ಪ್ರಯತ್ನಿಸುತ್ತಿದ್ದಾಗ, ಒಂದು ಡ್ರೋನ್ ಬಾಂಬ್ ಹಾಕಿತು, ಅದರಲ್ಲಿ ನಮ್ಮ ಉಪನಿರೀಕ್ಷಕರಾದ ಮಹಮ್ಮದ ಇಮ್ತಿಯಾಜ, ಸಿಪಾಯಿ ದೀಪಕ ಕುಮಾರ ಮತ್ತು ಭಾರತೀಯ ಸೇನೆಯ ನಾಯಕ ಸುನಿಲ ಕುಮಾರರವರು ಸಾವನ್ನಪ್ಪಿದರು. ಗಡಿ ಭದ್ರತಾ ದಳವು ಈ ಸೈನಿಕರ ಹೆಸರಿನಲ್ಲಿ ತಮ್ಮ 2 ಚೌಕಿಗಳು ಮತ್ತು ಸಾಂಬಾ ಸೆಕ್ಟರ್ನಲ್ಲಿರುವ ಒಂದು ಚೌಕಿಗೆ ‘ಸಿಂದೂರ’ ಎಂದು ಹೆಸರಿಸಲು ಪ್ರಸ್ತಾಪಿಸಿದೆ.
#WATCH | Jammu | BSF IG Jammu Shashank Anand says, “We are getting many inputs regarding terrorists returning to their launchpads & camps and possible infiltration along LoC & IB. Security Forces will have to remain alert.” pic.twitter.com/ASd3rauAq4
— ANI (@ANI) May 27, 2025
3. ಈ ಹಿಂದೆ ಮೇ 13 ರಂದು ‘ಆಪರೇಷನ್ ಕೆಲರ’ನಲ್ಲಿ ಭಾರತೀಯ ಸೇನೆಯು ಲಷ್ಕರ್-ಎ-ತೈಬಾದ 4 ಭಯೋತ್ಪಾದಕರ ಹತ್ಯೆ ಮಾಡಿತ್ತು. ಈ ಭಯೋತ್ಪಾದಕರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸಂಪಾದಕೀಯ ನಿಲುವು
|
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು