ಪ್ರಧಾನಿ ಮೋದಿ ಅವರ ಎಚ್ಚರಿಕೆ!

ಕರ್ಣಾವತಿ (ಗುಜರಾತ) – “ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ 9 ನೆಲೆಗಳನ್ನು 22 ನಿಮಿಷಗಳಲ್ಲಿ ಧ್ವಂಸಗೊಳಿಸಿದ್ದೇವೆ. ಈ ಎಲ್ಲ ಕಾರ್ಯಾಚರಣೆಯನ್ನು ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಲಾಗಿದೆ. ಇದರಿಂದ ಯಾರೂ ಪುರಾವೆಗಳನ್ನು ಕೇಳುವ ಅಗತ್ಯವಿಲ್ಲ. ಈಗ ನಾವು ಪುರಾವೆಗಳನ್ನು ನೀಡುವ ಅಗತ್ಯವಿಲ್ಲ. ಪಾಕಿಸ್ತಾನದಲ್ಲಿ ನಡೆಸಲಾದ ಭಯೋತ್ಪಾದಕರ ಅಂತಿಮ ಯಾತ್ರೆಗಳಲ್ಲಿ , ಅವರಿಗೆ ರಾಷ್ಟ್ರ ಗೌರವವನ್ನು ನೀಡಲಾಯಿತು, ಅವರ ಶವಪೆಟ್ಟಿಗೆಗಳ ಮೇಲೆ ಪಾಕಿಸ್ತಾನಿ ಧ್ವಜಗಳನ್ನು ಇಡಲಾಯಿತು. ಇದರಿಂದ ಭಯೋತ್ಪಾದಕ ಕೃತ್ಯಗಳು ‘ರಹಸ್ಯ ಯುದ್ಧ’ವಲ್ಲ ಎಂಬುದು ಸಾಬೀತಾಗುತ್ತದೆ. ಇದು ಪೂರ್ವನಿಯೋಜಿತ ಯುದ್ಧ ತಂತ್ರವಾಗಿದ್ದು ಇದೇ ರೀತಿಯಲ್ಲಿ ಉತ್ತರ ನೀಡಲಾಗುವುದು” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿಕೆ ನೀಡಿದರು.
ಪ್ರಧಾನಿ ಮೋದಿ ಮಂಡಿಸಿದ ಪ್ರಮುಖ ಅಂಶಗಳು:
1. ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗದ ಕಾರಣ ಪಾಕಿಸ್ತಾನವು ಭಯೋತ್ಪಾದಕರ ಮೂಲಕ ರಹಸ್ಯ ಯುದ್ಧ ಆರಂಭಿಸಿದೆ!
“1948 ರಲ್ಲಿ ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಂಡಾಗ, ಅಂದೇ ಆ ಮುಜಾಹಿದೀನ್ ಗಳನ್ನು ಮಟ್ಟಹಾಕಬೇಕಿತ್ತು. ಆಗ ಅಂದಿನ ಸರ್ಕಾರ ಸರ್ದಾರ ಪಟೇಲ್ ಅವರ ಮಾತನ್ನು ಕೇಳಲಿಲ್ಲ. ಈ ಮುಜಾಹಿದೀನ್ ಗಳು ರಕ್ತದ ರುಚಿಯನ್ನು ನೋಡಿದ್ದರು. ಈ ಸರಣಿಯು 75 ವರ್ಷಗಳಿಂದ ನಡೆಯುತ್ತಿದೆ. ಪಹಲ್ಗಾಮ್ ಈ ದಾಳಿಯ ಒಂದು ಭಾಗವಾಗಿದೆ. ಪಾಕಿಸ್ತಾನದೊಂದಿಗೆ ಪ್ರತೀ ಬಾರಿ ಯುದ್ಧವಾದಾಗ, ಭಾರತದ ಸೇನಾ ಶಕ್ತಿಯು ಮೂರು ಬಾರಿ ಪಾಕಿಸ್ತಾನವನ್ನು ಸೋಲಿಸಿದೆ. ಭಾರತದ ವಿರುದ್ಧ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಅರ್ಥವಾಯಿತು ಮತ್ತು ಅದಕ್ಕಾಗಿಯೇ ಅವರು ಈ ರಹಸ್ಯ ಯುದ್ಧವನ್ನು ಪ್ರಾರಂಭಿಸಿದರು. ಭಯೋತ್ಪಾದಕರಿಗೆ ಮಿಲಿಟರಿ ತರಬೇತಿ ನೀಡಿ ಅವರನ್ನು ಭಾರತಕ್ಕೆ ಕಳುಹಿಸಲಾಗುತ್ತಿದೆ.”
2. ಭಾರತವು ವೀರರ ಭೂಮಿ!
“ಈ ದೇಶವು ಮಹಾನ್ ಸಾಂಸ್ಕೃತಿಕ ಪರಂಪರೆಯೊಂದಿಗೆ ಮುಂದುವರಿದಿದೆ. ‘ವಸುಧೈವ ಕುಟುಂಬಕಂ’ (ಸಂಪೂರ್ಣ ಭೂಮಿಯೇ ಒಂದು ಕುಟುಂಬ) ಎಂಬ ಸಂಸ್ಕಾರವನ್ನು ನಮ್ಮಲ್ಲಿ ಮಾಡಲಾಗಿದ್ದು ಅದು ನಮ್ಮ ಚಾರಿತ್ರ್ಯವಾಗಿದೆ. ಆ ಚರಿತ್ರವನ್ನು ನಾವು ಅನುಭವಿಸಿದ್ದೇವೆ. ‘ಇತರರನ್ನು ಸಂತೋಷದಿಂದ ಬದುಕಲು ಬಿಡಿ ಮತ್ತು ನೀವೂ ಸಂತೋಷದಿಂದ ಬದುಕಿರಿ’ ಎಂಬ ವಿಚಾರವನ್ನು ನಾವು ಸಾವಿರಾರು ವರ್ಷಗಳಿಂದ ಪಾಲಿಸುತ್ತಿದ್ದೇವೆ; ಆದರೆ ನಮ್ಮ ಈ ಶಕ್ತಿಗೆ ಪದೇ-ಪದೇ ಸವಾಲು ಹಾಕಿದಾಗ, ಈ ದೇಶವು ವೀರರ ಭೂಮಿಯಾಗುತ್ತದೆ.”
3. ಶೀಘ್ರದಲ್ಲೇ ನಾವು ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿ ಆಗಲಿದ್ದೇವೆ!
“ನಾವು ಆರ್ಥಿಕತೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿದ್ದೇವೆ. ನಾವು ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ತಲುಪಿದಾಗ ಇಡೀ ದೇಶದಲ್ಲಿ ವಿಶೇಷ ಉತ್ಸಾಹವಿತ್ತು; ಏಕೆಂದರೆ 250 ವರ್ಷಗಳ ಕಾಲ ನಮ್ಮನ್ನು ಆಳಿದ ಬ್ರಿಟನ್ ಅನ್ನು ನಾವು ಹಿಂದಿಕ್ಕಿದ್ದೆವು. ಈಗ ಮೂರನೇ ಸ್ಥಾನಕ್ಕೆ ಬರುವ ಒತ್ತಡವಿದೆ. ಆರ್ಥಿಕತೆಯಲ್ಲಿ ಮೂರನೇ ಸ್ಥಾನಕ್ಕೆ ಬರಲು ನಮಗೆ ಹೆಚ್ಚು ಸಮಯ ಕಾಯಬೇಕಾಗಿಲ್ಲ. ನಾವು ಭಾರತದ ಧ್ವಜವನ್ನು ಜಗತ್ತಿನಾದ್ಯಂತ ಹಾರಿಸಬೇಕು.”
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !