ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಂದ ಪಾಕಿಸ್ತಾನಕ್ಕೆ ಛೀಮಾರಿ !

ಬರ್ಲಿನ (ಜರ್ಮನಿ) – “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದಕರ ಪಟ್ಟಿಯಲ್ಲಿ ಪಾಕಿಸ್ತಾನಿ ಹೆಸರುಗಳು ಮತ್ತು ಸ್ಥಳಗಳಿವೆ. ನಾವು ಇದೇ ಸ್ಥಳಗಳನ್ನು ಗುರಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಒಂದು ಬಹಿರಂಗ ವ್ಯವಹಾರವಾಗಿದ್ದು, ಅದನ್ನು ಸರಕಾರ ಮತ್ತು ಸೇನೆಯು ಬೆಂಬಲ, ಹಣಕಾಸು ನೆರವು ನೀಡಿ ಪೋಷಿಸುತ್ತಿದೆ. ಕುರುಡನಲ್ಲದ ಯಾರೇ ಆದರೂ ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದನ್ನು ನೋಡಬಹುದು” ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಜರ್ಮನ ಪತ್ರಿಕೆ ‘ಫ್ರಾಂಕ್ ಫರ್ಟರ್ ಆಲ್ ಗೇಮಾಯಿನ್ ಝೀಟುಂಗ್’ ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ನೈಜಮುಖವನ್ನು ಬಯಲು ಮಾಡಿದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂದರ್ಶನದಲ್ಲಿ ಮಂಡಿಸಿದ ಪ್ರಮುಖ ಅಂಶಗಳು
1. ‘ಆಪರೇಷನ್ ಸಿಂದೂರ್’ ಮೂಲಕ ಭಾರತವು ಭಯೋತ್ಪಾದಕರಿಗೆ, ಕಾಶ್ಮೀರದಲ್ಲಿ ಏಪ್ರಿಲ್‌ನಲ್ಲಿ ನಡೆದ ದಾಳಿಗೆ ಭಯೋತ್ಪಾದಕರು ಬೆಲೆ ತೆತ್ತಬೇಕಾಗುತ್ತದೆ, ಎಂದು ಸ್ಪಷ್ಟ ಸಂದೇಶವನ್ನು ನೀಡಿದೆ.
2. ಪಾಕಿಸ್ತಾನದ ಬಳಿ ಚೀನಿ ಶಸ್ತ್ರಾಸ್ತ್ರಗಳು!
ಪಾಕಿಸ್ತಾನದ ಬಳಿ ಇರುವ ಶಸ್ತ್ರಾಸ್ತ್ರಗಳು ಚೀನಾದಲ್ಲಿ ತಯಾರಾದವು. ಆ ಎರಡೂ ದೇಶಗಳು ಪರಸ್ಪರ ಬಹಳ ಹತ್ತಿರದಲ್ಲಿವೆ. ಇದರಿಂದ ನೀವೇ ತೀರ್ಮಾನಕ್ಕೆ ಬರಬಹುದು.
3. ಪಾಶ್ಚಿಮಾತ್ಯ ದೇಶಗಳು ಉದ್ದೇಶಪೂರ್ವಕವಾಗಿ ಅಣ್ವಸ್ತ್ರಗಳ ಭಯ ತೋರಿಸುತ್ತವೆ!
ದಕ್ಷಿಣ ಏಷ್ಯಾದಲ್ಲಿ ಏನಾದರೂ ಸಂಭವಿಸಿದರೆ, ಪಾಶ್ಚಿಮಾತ್ಯ ದೇಶಗಳು ಅಂದರೆ ಯುರೋಪ್ ಮತ್ತು ಅಮೆರಿಕ ತಕ್ಷಣ ಅದನ್ನು ಅಣ್ವಸ್ತ್ರ ಬಿಕ್ಕಟ್ಟಿಗೆ ಜೋಡಿಸುತ್ತವೆ. ಅಣ್ವಸ್ತ್ರ ಸಂಘರ್ಷದಿಂದ ಜಗತ್ತು ಬಹಳ ದೂರದಲ್ಲಿದೆ. ನಿಮ್ಮ ಪ್ರಶ್ನೆಯ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
4. ಪಾಕಿಸ್ತಾನದ ಮನವಿ ನಂತರ ಭಾರತ ಕಾರ್ಯಾಚರಣೆ ನಿಲ್ಲಿಸಿತು!
‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಯೋತ್ಪಾದಕ ತಾಣಗಳು ನಮ್ಮ ಗುರಿಯಾಗಿದ್ದವು. ಬಹಳ ಎಚ್ಚರಿಕೆಯಿಂದ ಯೋಚಿಸಿ, ಉದ್ವಿಗ್ನತೆಯನ್ನು ಹೆಚ್ಚಿಸದಂತೆ ನಾವು ಕ್ರಮ ಕೈಗೊಂಡಿದ್ದೆವು; ಆದರೆ ಪಾಕಿಸ್ತಾನಿ ಸೇನೆ ನಮ್ಮ ಮೇಲೆ ಗುಂಡು ಹಾರಿಸಿತು. ನಾವು ನಮಗೆ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸುವ ಸಾಮರ್ಥ್ಯ ಇದೆ ಎಂದು ತೋರಿಸಲು ಸಮರ್ಥರಾಗಿದ್ದೇವೆ. ನಂತರ ಪಾಕಿಸ್ತಾನದ ಮನವಿ ಮೇರೆಗೆ ಕಾರ್ಯಾಚರಣೆ ನಿಲ್ಲಿಸಲಾಯಿತು.
ಅಮೆರಿಕದಿಂದ ಯುದ್ಧವಿರಾಮ ಆಗಿಲ್ಲ!
ಭಾರತ-ಪಾಕಿಸ್ತಾನ ನಡುವಿನ ಯುದ್ಧವಿರಾಮಕ್ಕಾಗಿ ಅಮೆರಿಕಕ್ಕೆ ಧನ್ಯವಾದ ಹೇಳಬೇಕೇ ಎಂಬ ಪ್ರಶ್ನೆಗೆ ಜೈಶಂಕರ್ ಉತ್ತರಿಸುತ್ತಾ, “ಎರಡೂ ಕಡೆಯ ಸೇನಾ ಕಮಾಂಡರ್ ಗಳ ನಡುವಿನ ನೇರ ಮಾತುಕತೆಯ ನಂತರ ಕದನ ವಿರಾಮದ ನಿರ್ಧಾರವಾಯಿತು. ಸೂರ್ಯೋದಯಕ್ಕೂ ಮುನ್ನವೇ ನಾವು ಪರಿಣಾಮಕಾರಿ ದಾಳಿ ನಡೆಸಿ ಪಾಕಿಸ್ತಾನದ ವಾಯುಪಡೆಯ ನೆಲೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದೆವು. ಹೀಗಿರುವಾಗ ಯುದ್ಧವಿರಾಮಕ್ಕಾಗಿ ನಾನು ಯಾರಿಗೆ ಧನ್ಯವಾದ ಹೇಳಬೇಕು? ನಾನು ಭಾರತೀಯ ಸೇನಾಪಡೆಗಳಿಗೆ ಧನ್ಯವಾದ ಹೇಳುತ್ತೇನೆ; ಏಕೆಂದರೆ ಭಾರತೀಯ ಸೇನಾಪಡೆಯಿಂದ ಪಾಕಿಸ್ತಾನವು ‘ನಾವು ನಿಲ್ಲಿಸುತ್ತಿದ್ದೇವೆ’ ಎಂದು ಹೇಳಬೇಕಾಯಿತು” ಎಂದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು