ಇಂಡಿಯಾ ಟುಡೇ’ ಪತ್ರಕರ್ತ ರಾಜದೀಪ ಸರದೇಸಾಯಿ ಅವರ ರಾಷ್ಟ್ರಘಾತುಕ ಸಲಹೆ

ನವದೆಹಲಿ – ‘ಇಂಡಿಯಾ ಟುಡೇ’ ನಿಯತಕಾಲಿಕೆಯ ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಒಂದು ವಿಡಿಯೋ ಪ್ರಸಾರವಾಗಿದೆ. ‘ಇಂಡಿಯಾ ಟುಡೇ’ ಮೇಲಿನ ಚರ್ಚೆಯ ಈ ವಿಡಿಯೋವನ್ನು ಮೇ 22, 2025 ರಂದು ‘ಇಂಡಿಯಾ ಟುಡೇ’ಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಅವರು, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಬಗ್ಗೆ ಪರಿಗಣಿಸಬೇಕು ಮತ್ತು ನೆರೆಯ ದೇಶದೊಂದಿಗಿನ ವಿವಾದಗಳಿಗೆ ‘ಶಾಶ್ವತ ಪರಿಹಾರ’ ಕಂಡುಕೊಳ್ಳಲು ನಿಯಂತ್ರಣ ರೇಖೆಯನ್ನು (ಎಲ್.ಓ.ಸಿ.) ಅಂತರರಾಷ್ಟ್ರೀಯ ಗಡಿಯಾಗಿ ಸ್ವೀಕರಿಸಬೇಕು, ಎಂದು ಸಲಹೆ ನೀಡಿದ್ದಾರೆ.
ರಾಜದೀಪ ಸರದೇಸಾಯಿ ಇವರು,
1. “ನಾವು ಮೂಲ ವಿಷಯದತ್ತ ಗಮನ ಹರಿಸುವವರೆಗೂ ಶಾಶ್ವತ ಪರಿಹಾರ ಸಿಗುವುದಿಲ್ಲ. ನಾವು ಪಾಕಿಸ್ತಾನದೊಂದಿಗೆ ಭಯೋತ್ಪಾದನೆಯ ಬಗ್ಗೆ ಮಾತನಾಡಬೇಕಾಗಿದೆ. ಹಾಗೂ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಮ್ಮ ಆಂತರಿಕ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ.”
2. “ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹೇಗೆ ವಶಪಡಿಸಿಕೊಳ್ಳುತ್ತೇವೆ? ನಮ್ಮಲ್ಲಿ ಎರಡು ಆಯ್ಕೆಗಳಿವೆ. ಒಂದು, ಪ್ರಸ್ತುತ ನಿಯಂತ್ರಣ ರೇಖೆಯನ್ನು ಅಂತರರಾಷ್ಟ್ರೀಯ ಗಡಿಯಾಗಿ ಸ್ವೀಕರಿಸುವುದು. ನನ್ನ ಪ್ರಕಾರ, ಇದು ಒಂದು ಸಂಭವನೀಯ ಪರಿಹಾರ ಆಗಬಹುದು.”
3. “ನಾಳೆ ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋದರೆ ಪಾಕಿಸ್ತಾನ ಅದನ್ನು ಬಿಟ್ಟುಕೊಡುತ್ತದೆ ಎಂದು ನೀವು ಭಾವಿಸುತ್ತೀರಾ?” ಎಂದು ರಾಜದೀಪ ಸರದೇಸಾಯಿ ಪ್ರಶ್ನಿಸಿದರು. ಅಲ್ಲದೆ, “ನಾವು ಪಾಕಿಸ್ತಾನದ ಪ್ರತಿದಾಳಿ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಬಾರದು” ಎಂದೂ ಅವರು ಹೇಳಿದರು. (ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಸರದೇಸಾಯಿ ಅವರಿಗೆ ಮಾಹಿತಿ ಹೇಗೆ ಸಿಕ್ಕಿತು? ಪಾಕಿಸ್ತಾನದ ಸಾಮರ್ಥ್ಯ ಏನು ಎಂಬುದನ್ನು ಭಾರತವು ನಡೆಸಿದ ಪ್ರತಿದಾಳಿಯ ಸಮಯದಲ್ಲಿ ಇಡೀ ಜಗತ್ತು ನೋಡಿದೆ. ಭಾರತಕ್ಕಿಂತ ಪಾಕಿಸ್ತಾನದ ಮೇಲೆ ಹೆಚ್ಚು ವಿಶ್ವಾಸ ಇಡುವ ಸರದೇಸಾಯಿ ಭಾರತದ ಪ್ರಜೆಯೋ ಅಥವಾ ಪಾಕಿಸ್ತಾನದ ಪ್ರಜೆಯೋ? – ಸಂಪಾದಕರು)
ಸಂಪಾದಕೀಯ ನಿಲುವು
|
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman