ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman

ಸೇನೆಗೆ ಸವಾಲು ಹಾಕಿದ 'ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್' ಪಕ್ಷದ ಮುಖ್ಯಸ್ಥ ಮೌಲಾನಾ ಫಜಲುರ್ ರೆಹಮಾನ್ !

ಮೌಲಾನಾ ಫಜ್ಲುರ್ ರೆಹಮಾನ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಸೇನೆಯು ದೇಶದ ಸಾಂವಿಧಾನಿಕ ಮಿತಿಗಳಲ್ಲಿ ಇರಬೇಕು. ನಿಮಗೆ ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರವನ್ನು ಕಳಚಿ ಬನ್ನಿ. ಚುನಾವಣೆಯಲ್ಲಿ ಭಾಗವಹಿಸಿ. ಸಮವಸ್ತ್ರ ಧರಿಸಿದ ಜನರಿಗೆ ಜನರು ಎಷ್ಟು ಮತಗಳನ್ನು ನೀಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ, ಎಂದು ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ ಪಕ್ಷದ ಮುಖ್ಯಸ್ಥ ಮೌಲಾನಾ (ಇಸ್ಲಾಮಿನ ವಿದ್ವಾಂಸ) ಫಜಲುರ್ ರೆಹಮಾನ್ ಅವರು ಪಂಜಾಬ್‌ನ ಕಸೂರ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸೇನೆಗೆ ಸವಾಲು ಹಾಕಿದರು.

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರಕಾರದ ಯಾವುದೇ ನಿಯಂತ್ರಣವಿಲ್ಲ!

ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಕುರಿತು ಫಜಲುರ್ ರೆಹಮಾನ್ ಅವರು, ದೇಶವು ಛಿದ್ರವಾಗುತ್ತಿದೆ ಎಂದು ಹೇಳಿದರು. ಆಡಳಿತಗಾರರು ಎಲ್ಲಿದ್ದಾರೆ? ಬಲೂಚಿಸ್ತಾನದಲ್ಲಿ ದಂಗೆ ಎದ್ದಿತ್ತು. ಇಡೀ ಬಲೂಚಿಸ್ತಾನ ಪ್ರದೇಶ ಪಾಕಿಸ್ತಾನದ ನಿಯಂತ್ರಣದಿಂದ ಹೊರಬಂದಿತ್ತು. ಇಂದಿಗೂ ಅಲ್ಲಿ ಪಾಕಿಸ್ತಾನ ಸರಕಾರದ ಯಾವುದೇ ನಿಯಂತ್ರಣ ಅಥವಾ ಆಡಳಿತವಿಲ್ಲ. ಕುಸಿಯುತ್ತಿರುವ ಈ ಭದ್ರತಾ ವ್ಯವಸ್ಥೆಯು ಈಗ ಖೈಬರ್ ಪಖ್ತುನ್ಖ್ವಾದವರೆಗೆ ಹರಡಿದೆ.

ದೇಶಕ್ಕಾಗಿ ಹುತಾತ್ಮರಾಗುವ ಸೈನಿಕರು ಸಂಬಳ ಪಡೆಯುತ್ತಾರೆ!

ಭದ್ರತೆಯ ಕುರಿತು ಮಾತನಾಡುತ್ತಾ ಅವರು, ಜನರು, ನಮ್ಮ ಯುವಕರು (ಸೈನಿಕರು) ಹುತಾತ್ಮರಾಗುತ್ತಿದ್ದಾರೆ. ನಿಮ್ಮ ಯುವಕರು ಇದೇ ಉದ್ದೇಶದಿಂದ ಸಮವಸ್ತ್ರವನ್ನು ಧರಿಸುತ್ತಾರೆ. ದೇಶವನ್ನು ರಕ್ಷಿಸಲು ಅವರಿಗೆ ಸಂಬಳ ನೀಡಲಾಗುತ್ತದೆ, ಎಂದು ಹೇಳುತ್ತಾರೆ, ನೀವು ನಿಮ್ಮ ರಕ್ತದ ಉಪಕಾರವನ್ನು ನನ್ನ ಮೇಲೆ ಏಕೆ ಹೇರುತ್ತಿದ್ದೀರಿ? ನೀವು ನಮ್ಮ ಕಷ್ಟ ಮತ್ತು ಬೆವರುಗಳ ಮೂಲಕ ಗಳಿಸಿದ ತೆರಿಗೆಯಿಂದ ನಿಮ್ಮ ಸಂಬಳವನ್ನು ಪಡೆಯುತ್ತಿದ್ದೀರಿ ಎಂದರು.