ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಛೀಮಾರಿ ಹಾಕಿದ ಭಾರತ!

ನ್ಯೂಯಾರ್ಕ್ (ಅಮೇರಿಕಾ) – ನಾಗರಿಕರು ಮತ್ತು ಭಯೋತ್ಪಾದಕರ ನಡುವೆ ಭೇದ ಮಾಡದ ದೇಶಕ್ಕೆ ನಾಗರಿಕರ ಸುರಕ್ಷತೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಅಸೀಮ್ ಇಫ್ತಿಖಾರ್ ಅಹ್ಮದ್ ಅವರು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಹಾಗೆಯೇ, ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ನಡೆದ ಸಂಘರ್ಷದ ಬಗ್ಗೆ ಹೇಳಿಕೆ ನೀಡಿದ್ದರು. ಆ ಬಳಿಕ ಭಾರತವು ಇದಕ್ಕೆ ಪ್ರತ್ಯುತ್ತರ ನೀಡಿತು.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪಾರ್ವಥಾನೇನಿ ಹರೀಶ ಅವರು ಮಾತನಾಡಿ, ಪಾಕಿಸ್ತಾನಿ ಸೇನೆಯು ‘ಆಪರೇಷನ್ ಸಿಂದೂರ’ ನಂತರ ಭಾರತದ ಗಡಿ ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿತು. ಇದರಿಂದ ಸಾಮಾನ್ಯ ನಾಗರಿಕರು ಬಲಿಯಾದರು. ಅಲ್ಲದೆ, ಭಾರತದಲ್ಲಿನ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿತು. ಪಾಕಿಸ್ತಾನವು ಭಾರತದಲ್ಲಿ ಇಲ್ಲಿಯವರೆ ನಡೆಸಿದ ಭಯೋತ್ಪಾದಕ ಕೃತ್ಯಗಳಲ್ಲಿ ಸಾಮಾನ್ಯ ನಾಗರಿಕರೇ ಗುರಿಯಾಗಿದ್ದಾರೆ; ಏಕೆಂದರೆ ಪಾಕಿಸ್ತಾನದ ಉದ್ದೇಶ ನಮ್ಮ ಸಮೃದ್ಧಿ ಮತ್ತು ಪ್ರಗತಿಯ ಮೇಲೆ ದಾಳಿ ಮಾಡುವುದಾಗಿದೆ. ಪಾಕಿಸ್ತಾನವು ಭಯೋತ್ಪಾದಕರನ್ನು ರಕ್ಷಿಸಲು ಪದೇ-ಪದೇ ಸಾಮಾನ್ಯ ನಾಗರಿಕರನ್ನು ಕವಚದಂತೆ ಬಳಸುತ್ತಿದೆ. ‘ಆಪರೇಷನ್ ಸಿಂದೂರ’ನಲ್ಲಿ ಹತರಾದ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಸೇನೆಯ ಅಧಿಕಾರಿಗಳು, ಪೊಲೀಸರು ಮತ್ತು ಹಿರಿಯ ಸರಕಾರಿ ಅಧಿಕಾರಿಗಳು ಭಾಗವಹಿಸಿದ್ದ ವಿಡಿಯೋವನ್ನು ಇಡೀ ಜಗತ್ತು ನೋಡಿದೆ ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವುಘೇಂಡಾಮೃಗ ಚರ್ಮದ ಪಾಕಿಸ್ತಾನಕ್ಕೆ ಎಷ್ಟೇ ಬೈದರೂ, ಯಾವುದೇ ಪರಿಣಾಮ ಬೀರುವುದಿಲ್ಲ. ಇಂತಹ ಲಜ್ಜೆ ಬಿಟ್ಟ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಭಾಷೆಯಲ್ಲಿಯೇ ಕಠಿಣ ಉತ್ತರ ನೀಡುತ್ತಲೇ ಇರುವುದು ಆವಶ್ಯಕವಾಗಿದೆ. ಈ ಮೂಲಕವೇ ಅದನ್ನು ನಾಶ ಮಾಡಬೇಕು! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು