೧. ಸಮಾನ ನಾಗರಿಕ ಕಾನೂನು ಪ್ರಕಾರ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ವ್ಯಕ್ತಿಗಳು ಕಡ್ಡಾಯವಾಗಿ ಸರಕಾರಿ ನೋಂದಣಿ ಮಾಡಬೇಕು
ಗೋವಾದಲ್ಲಿ ಮೊದಲಿನಿಂದಲೇ ಸಮಾನ ನಾಗರಿಕ ಕಾನೂನು ಇದೆ. ಸ್ವತಂತ್ರ ಭಾರತದಲ್ಲಿ ಉತ್ತರಾಖಂಡ ಈ ಕಾನೂನನ್ನು ರೂಪಿಸಿ ಅನ್ವಯಗೊಳಿಸಿದ ಮೊದಲ ರಾಜ್ಯವಾಗಿದೆ. ಅದರಲ್ಲಿನ ಕಲಮ್ ೩೭೮ (೧) ಕ್ಕನುಸಾರ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವಾಗ ಸಂಬಂಧಪಟ್ಟವರು ತಮ್ಮ ಹೆಸರನ್ನು ಸರಕಾರಿ ದಾಖಲೆಯಲ್ಲಿ ನೋಂದಣಿ ಮಾಡದಿದ್ದರೆ, ಅಂತಹ ವ್ಯಕ್ತಿಗಳಿಗೆ ೩ ತಿಂಗಳ ಶಿಕ್ಷೆ ಅಥವಾ ೧೦ ಸಾವಿರ ರೂಪಾಯಿ ದಂಡ ಅಥವಾ ಇವೆರಡೂ ಶಿಕ್ಷೆ ವಿಧಿಸಲಾಗುವುದು. ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಹೆಸರನ್ನು ಸರಕಾರಿ ದಾಖಲೆಯಲ್ಲಿ ನೋಂದಣಿ ಮಾಡಬೇಕು.
ಈ ವ್ಯವಸ್ಥೆಯಿಂದ ಹಿಂದೂದ್ವೇಷಿಗಳು ಬೇಸರಪಟ್ಟಿದ್ದಾರೆ. ಈ ಕಾನೂನಿಗೆ ಅಡ್ಡಿಪಡಿಸಲು ವಿರೋಧಿಗಳು ಎಲ್ಲ ಪ್ರಯತ್ನಗಳನ್ನು ಮಾಡಿದರು. ಈ ಕಾನೂನಿನ ವಿರುದ್ಧ ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ !
೨. ಸಮಾನ ನಾಗರಿಕ ಕಾನೂನಿನ ವಿರುದ್ಧಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ
ಅಲಮಾಸುದ್ದೀನ ಸಿದ್ದಿಕೀ ಎಂಬ ಒಬ್ಬ ವ್ಯಕ್ತಿ ಹಿಂದೂ ಮಹಿಳೆಯ ಜೊತೆಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ಇರುತ್ತಾನೆ. ಅವನು ಸಮಾನ ನಾಗರಿಕ ಕಾನೂನಿನ ಕೆಲವು ಕಲಮ್‌ಗಳ ವಿಷಯದಲ್ಲಿ ಆಕ್ಷೇಪವೆತ್ತಿದ್ದು ಈ ಕಾನೂನಿನ ಸಿಂಧುತ್ವದ ಬಗ್ಗೆ ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾನೆ. ಅವನ ಪ್ರಕಾರ ‘ಸಮಾನ ನಾಗರಿಕ ಕಾನೂನಿಗನುಸಾರ ಯಾವ ವ್ಯಕ್ತಿ ಇತರ ಧರ್ಮದ ವ್ಯಕ್ತಿಯೊಂದಿಗೆ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ಇರುತ್ತಾನೆಯೋ, ಆ ವ್ಯಕ್ತಿ ತನ್ನ ‘ರಿಲೇಶನ್‌ಶಿಪ್’ನ ಮಾಹಿತಿಯನ್ನು ಸರಕಾರಿ ದಾಖಲೆಯಲ್ಲಿ ನೋಂದಣಿ ಮಾಡುವುದೆಂದರೆ, ವ್ಯಕ್ತಿಯ ವೈಯಕ್ತಿಕ ಜೀವನದ ಗೌಪ್ಯತೆಯನ್ನು ಭಂಗ ಮಾಡಿದಂತಾಗುತ್ತದೆ. ಇತರ ಧರ್ಮದವರೊಂದಿಗೆ ವಿವಾಹವಾಗುವ ಸಂವಿಧಾನಾತ್ಮಕ ಅಧಿಕಾರದ ಭಂಗವಾಗುತ್ತದೆ. ಆದ್ದರಿಂದ ಈ ಕಾನೂನನ್ನು ರದ್ದುಪಡಿಸಬೇಕು.
ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿನ ದ್ವಿಸದಸ್ಯ ಪೀಠಕ್ಕೆ ಈ ಅರ್ಜಿಯ ಬಗ್ಗೆ ಬಹಳ ಆಶ್ಚರ್ಯವೆನಿಸಿತು. ಅವರು, ”ನೀವು ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ಇರುತ್ತೀರಿ, ಇದನ್ನು ಬಹಿರಂಗವಾಗಿ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲ; ಆದರೆ ಅದನ್ನು ಕಾನೂನು ಪ್ರಕಾರ ಸರಕಾರಿ ದಾಖಲೆಯಲ್ಲಿ ನೋಂದಣಿ ಮಾಡಲು ನಿಮ್ಮ ವಿರೋಧವಿದೆ. ಈ ನೋಂದಣಿ ಮಾಡುವುದರಲ್ಲಿ ತಪ್ಪೇನಿದೆ ? ಈ ಕಾನೂನಿನಲ್ಲಿ ಭವಿಷ್ಯದಲ್ಲಿ ಆಗುವ ಸಂತಾನಗಳ ಭವಿಷ್ಯವನ್ನು ರೂಪಿಸುವ ಉದ್ದೇಶವಿದೆ. ನಾವು ಇಂತಹ ಅರ್ಜಿಯನ್ನು ಹೇಗೆ ಸ್ವೀಕರಿಸಬಹುದು ?”

೩. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ‘ಲಿವ್ ಇನ್ ರಿಲೇಶನ್‌ಶಿಪ್’ಅನ್ನು ನಿಷೇಧಿಸಬೇಕು !
ಸಮಾನ ನಾಗರಿಕ ಕಾನೂನಿನಲ್ಲಿ ಸರಕಾರ ಕೆಲವು ಕಲಮ್ ಗಳನ್ನು ಸಮಾವೇಶಗೊಳಿಸಿದೆ. ಅದಕ್ಕನುಸಾರ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ಜೋಡಿಗೆ ಮಗುವಾದರೆ ಆ ಮಗುವನ್ನು ಅದರ ತಂದೆ ಸ್ವೀಕರಿಸದಿದ್ದರೆ ಏನು ಮಾಡುವುದು ? ಎಂಬ ಬಗ್ಗೆಯೂ ಕಾನೂನಿನಲ್ಲಿ ಕಾಳಜಿವಹಿಸಲಾಗಿದೆ. ನಿಯಮಕ್ಕನುಸಾರ ವಿವಾಹವಾದರೆ ಅದು ನಿರ್ಮಲ, ನಿಷ್ಪಾಪವಿರುತ್ತದೆ. ಅದೇ ರೀತಿ ವಿವಾಹ ಕಾನೂನಿಗನುಸಾರ ಕೆಲವು ಬಂಧನಗಳಿರುತ್ತವೆ. ಜನ್ಮ ಪಡೆದಿರುವ ಮಗುವಿಗೆ ವಾರಸು ಹಕ್ಕು ಹಾಗೂ ವಿಚ್ಛೇದನೆಯಾದರೆ ಪತ್ನಿಗೆ ಜೀವನಾಂಶ ಇತ್ಯಾದಿ ನೀಡುವ ವ್ಯವಸ್ಥೆ ಇರುತ್ತದೆ. ಮಹಿಳೆ ಮತ್ತು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಸಿವಿಲ್ ಪ್ರಕ್ರಿಯೆಯ ಸಂಹಿತೆಯಲ್ಲಿನ ಹಳೆಯ ಕಾನೂನಿನಲ್ಲಿಯೂ ಈ ವ್ಯವಸ್ಥೆ ಇತ್ತು. ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ವ್ಯಕ್ತಿ ಮಹಿಳೆಯನ್ನು ನಿರಾಕರಿಸಿದರೆ ಅಥವಾ ಅವಳಿಗೆ ಜೀವನಾಂಶ ನಿರಾಕರಿಸಿದರೆ, ಅದರಿಂದ ಸಾಮಾಜಿಕ ಸಮಸ್ಯೆ ಉದ್ಭವಿಸಬಹುದು. ಆದ್ದರಿಂದ ಕಲಮ್ ೧೨೫೦ ಕ್ಕನುಸಾರ ಹಿಂದಿನ ಕಾನೂನಿನಲ್ಲಿ ಜೀವನಾಂಶ ನೀಡುವ ವ್ಯವಸ್ಥೆ ಇತ್ತು. ಅದೇ ರೀತಿ ಸಮಾನ ನಾಗರಿಕ ಕಾನೂನಿ ನಲ್ಲಿಯೂ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ಮಹಿಳೆಯರಿಗೆ ಅನೇಕ ಪ್ರಕಾರದ ವ್ಯವಸ್ಥೆಗಳನ್ನು ಮಾಡಲಾಗಿದೆ.
೪. ಸಮಾನ ನಾಗರಿಕ ಕಾನೂನಿನ ಸಮರ್ಥನೆಗಾಗಿ ಮುಖ್ಯ ಕಾನೂನು ಅಧಿಕಾರಿ (ಅಡ್ವೊಕೇಟ್ ಜನರಲ್) ತುಷಾರ ಮೆಹತಾ ಇವರ ಯುಕ್ತಿವಾದ
ಮುಖ್ಯ ನ್ಯಾಯಾಧೀಶರು ಕೇಂದ್ರದ ಮುಖ್ಯ ಕಾನೂನು ಅಧಿಕಾರಿ ತುಷಾರ ಮೆಹತಾ ಇವರಿಗೆ, ‘ಕೌಟುಂಬಿಕ ಹಿಂಸಾಚಾರಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ಪಡೆಯುವ ವಿಷಯದಲ್ಲಿ ‘ಲಿವ್ ಇನ್ ರಿಲೇಶನ್‌ಶಿಪ್’ಗೆ ‘ಡೊಮೆಸ್ಟಿಕ್ ವೈಲೆನ್ಸ್ ಎಕ್ಟ್’ನ ಮನ್ನಣೆ ಸಿಕ್ಕಿದೆ. ಆದ್ದರಿಂದ ಸಮಾನ ನಾಗರಿಕ ಕಾನೂನು ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿನ ವ್ಯಕ್ತಿ ಗಳಿಗೆ ಸರಕಾರಿ ದಾಖಲೆಯಲ್ಲಿ ನೋಂದಣಿ ಮಾಡುವ ಬಂಧನ ಹೇಗೆ ಹೇರಬಹುದು ?’ ಎಂದು ಪ್ರಶ್ನಿಸಿದಾಗ ಮೆಹತಾ ಹೇಳಿದರು, ”ಹಿಂದೂ ವಿವಾಹ ಕಾನೂನು’ ಮತ್ತು ‘ವಿಶೇಷ ವಿವಾಹ ಕಾನೂನು’ ಇವು ‘ಲಿವ್ ಇನ್ ರಿಲೇಶನ್‌ಶಿಪ್’ಗೆ ಮನ್ನಣೆ ನೀಡುವುದಿಲ್ಲ. ಕೆಲವು ಪಂಥಗಳಲ್ಲಿ ಸಹೋದರಿಯೊಂದಿಗೂ ವಿವಾಹವಾಗುತ್ತದೆ. ಸಹೋದರಿಯೊಂದಿಗೆ ವಿವಾಹವಾಗುವುದು ಯಾವುದೇ ಸಮಾಜದ ವ್ಯಕ್ತಿಯ ಮೂಲಭೂತ ಅಧಿಕಾರವಾಗಿರಲು ಸಾಧ್ಯವಿಲ್ಲ. ಹಿಂದೂ ವಿವಾಹ ಕಾನೂನು ಮತ್ತು ವಿಶೇಷ ವಿವಾಹ ಕಾನೂನು ಸಹೋದರಿಯೊಂದಿಗೆ ವಿವಾಹವಾಗಲು ಅನುಮತಿ ನೀಡುವುದಿಲ್ಲ. ಸಹೋದರಿ-ಸಹೋದರರ ವಿವಾಹದಿಂದ ಕೆಲವು ಅನುವಂಶೀಯ ಸಮಸ್ಯೆಗಳು ಉದ್ಭವಿಸುತ್ತವೆ ಹಾಗೂ ಅದನ್ನು ವೈದ್ಯಕೀಯಶಾಸ್ತ್ರವೂ ಪುಷ್ಟೀಕರಿಸಿದೆ. ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ ನಡೆಯುವ ಈ ವಿಷಯಗಳಿಗೆ ಈ ಮೇಲಿನ ಕಾನೂನು ಮನ್ನಣೆ ನೀಡುವುದಿಲ್ಲ. ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿರುವ ಹಾಗೂ ಅದರಿಂದ ಜನ್ಮ ಪಡೆಯುವ ಮಕ್ಕಳನ್ನು ಪುರುಷರು ಸ್ವೀಕಾರ ಮಾಡದಿದ್ದರೆ, ಸಾಮಾಜಿಕ ಸಮಸ್ಯೆ ಉದ್ಭವಿಸಬಹುದು. ‘ಲಿವ್ ಇನ್ ರಿಲೇಶನ್‌ಶಿಪ್’ಗೆ ನ್ಯಾಯಾಲಯ ಮನ್ನಣೆ ನೀಡಿದ್ದರೂ ಸಮಾಜದ ದೃಷ್ಟಿಯಲ್ಲಿ ಅದು ಅನಧಿಕೃತ ಸಂಬಂಧವಾಗಿದೆ. ಇಂತಹ ಸಂಬಂಧಕ್ಕೆ ಯಾವುದೇ ಸಾಕ್ಷಿ ಸಿಗುವುದಿಲ್ಲ. ಅದರಿಂದ ಆಗುವ ಮಕ್ಕಳಿಗೆ ಸಾಮಾಜಿಕ ಸ್ಥಾನಮಾನ ಸಿಗಬಹುದೇ ? ಆದ್ದರಿಂದ ಇಂತಹ ಮಕ್ಕಳ ಆತ್ಮಸನ್ಮಾನವನ್ನು ಕಾಪಾಡುವುದು ಮಹತ್ವದ್ದಾಗಿದೆ.” ಯುಕ್ತಿವಾದ ಮಾಡುವಾಗ ಪ್ರಮುಖ ಕಾನೂನು ಅಧಿಕಾರಿ ಮೆಹತಾ, ”ಅವರು ಅಥವಾ ರಾಜ್ಯ ಸರಕಾರ ಪರಿತ್ಯಕ್ತ (ತ್ಯಜಿಸಿದ) ಮಹಿಳೆಯರ ದುಃಖದ ಬಗ್ಗೆ ವಿಚಾರ ಮಾಡಿದೆ. ಅದರ ಬಗ್ಗೆ ಅಧ್ಯಯನ ಮಾಡಲಾಗಿದೆ. ಸಂಬಂಧ ಮುಗಿದ ನಂತರ ಮಹಿಳೆಯರನ್ನು ಬಿಟ್ಟುಬಿಡುವುದರಿಂದ ಅವರ ಆತ್ಮಸನ್ಮಾನವನ್ನು ಕಸಿದು ಕೊಳ್ಳಲಾಗುತ್ತದೆ. ಅವರ ಮಕ್ಕಳನ್ನು ಬೀದಿಗೆ ಎಸೆಯು ವುದರಿಂದ ಸಾಮಾಜಿಕ ಅಶಾಂತಿ ಉದ್ಭವಿಸಬಹುದು. ಆದ್ದರಿಂದ ಈ ಕಾನೂನು ಅಧಿಕೃತವಾಗಿದೆ.” ಎಂದರು. ಇಷ್ಟೆಲ್ಲ ಆದರೂ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಉತ್ತರಾಖಂಡ ರಾಜ್ಯ ಸರಕಾರಕ್ಕೆ ‘ಕಾರಣ ಕೇಳಿ ನೋಟೀಸು’ ಜ್ಯಾರಿ ಮಾಡಲು ಆದೇಶ ನೀಡಿತು.’
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೧.೨.೨೦೨೫)

ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border