![]() ಸೂರ್ಯನ ಆಗಮನವು ಕತ್ತಲೆಯನ್ನು ನಾಶ ಮಾಡುತ್ತದೆ ಮತ್ತು ಚಂದ್ರನ ಆಗಮನವು ಆಹ್ಲಾದವನ್ನು ನೀಡುತ್ತದೆ. ಮೇ ೬, ೧೯೪೨ ರಂದು ಕಾಲವು ಒಬ್ಬ ಮಹಾಪುರುಷನನ್ನು ಜನ್ಮಕ್ಕೆ ಹಾಕಿತು. ಅಧರ್ಮವೆಂಬ ಕತ್ತಲೆಯನ್ನು ಸೂರ್ಯನು ನಾಶ ಮಾಡಿದಂತೆ ಸನಾತನ ಧರ್ಮ ರಾಜ್ಯವನ್ನು (ಈಶ್ವರೀ ರಾಜ್ಯ, ಹಿಂದೂ ರಾಷ್ಟ್ರ) ಸ್ಥಾಪಿಸಲು ಹಾಗೆಯೇ ಚಂದ್ರನಂತೆ ಸಾಧಕರು ಮತ್ತು ಭಕ್ತರ ಮೇಲೆ ಗುರುಕೃಪೆಯ ಆಹ್ಲಾದದಾಯಕ ವೃಷ್ಟಿ ಮಾಡಿ ಅವರಿಗೆ ಮೋಕ್ಷ ಪ್ರದಾನಿಸಲು ಈ ಮಹಾಪುರುಷನ ಜನ್ಮವಾಯಿತು ! ಇದು ಆ ಮಹಾಪುರುಷ, ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಸಂಕ್ಷಿಪ್ತ ಚರಿತ್ರೆಯಾಗಿದೆ ! ‘ಅಖಿಲ ಮನುಕುಲಕ್ಕೆ ಗುರುದೇವರ ಮಹಾತ್ಮೆ ತಿಳಿಯಲಿ ಮತ್ತು ಅವರ ಬೋಧನೆಗಳಿಗನುಸಾರ ಸಾಧನೆ ಮಾಡಿ ಅವರು ಆನಂದಮಯರಾಗಲಿ’ ಎಂಬುದು ಈ ಗ್ರಂಥದ ಮುಖ್ಯ ಉದ್ದೇಶವಾಗಿದೆ. ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಮತ್ತು ಪೂ. ಸಂದೀಪ ಆಳಶಿ |
ಗುರುದೇವರ ವ್ಯಕ್ತಿತ್ವ, ಕರ್ತೃತ್ವಶಕ್ತಿ ಹಾಗೂ ಅವತಾರತ್ವದ ವಿವಿಧ ಅಂಗಗಳು ಖ್ಯಾತ ಸಮ್ಮೋಹನೋಪಚಾರ ತಜ್ಞರಾದ ಡಾ. ಆಠವಲೆಯವರಿಗೆ ಮೊದಲು ಅಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಇರಲಿಲ್ಲ. ಆದರೆ ಅಧ್ಯಾತ್ಮದ ಮಹತ್ವವು ತಿಳಿದ ನಂತರ ಅವರು ಅಧ್ಯಾತ್ಮಶಾಸ್ತ್ರದ ಅಧ್ಯಯನ ಮತ್ತು ಸಾಧನೆಯನ್ನು ಮಾಡಿದರು. ಅವರ ತೀವ್ರ ತಳಮಳದಿಂದಾಗಿ ಅವರಿಗೆ ೧೯೮೭ ರಲ್ಲಿ ಇಂದೋರಿನ ಮಹಾನ್ ಸಂತ ಪ.ಪೂ. ಭಕ್ತರಾಜ ಮಹಾರಾಜರ ರೂಪದಲ್ಲಿ ಗುರುಪ್ರಾಪ್ತಿಯಾಯಿತು. ಅವರು ಗುರುಗಳ ಚರಣಗಳಿಗೆ ತಮ್ಮ ತನು-ಮನ-ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆಯನ್ನು ಮಾಡಿದರು. ಗುರುಗಳು ಅವರಿಗೆ ವಿವಿಧ ರೀತಿಗಳಲ್ಲಿ ಅವರ ಆಧ್ಯಾತ್ಮಿಕ ಅಧಿಕಾರವನ್ನು ಗಮನಕ್ಕೆ ತಂದರು, ಉದಾ. ೧೯೯೨ ರಲ್ಲಿ ಗುರುಗಳು ‘(ಸಾಧಕರೇ,) ನೀವು ಡಾಕ್ಟರರನ್ನು ಸಂತರು ಮತ್ತು ಗುರುಗಳೆಂದು ಭಾವಿಸಬೇಕು !’ ಎಂದು ಹೇಳಿದರು. ‘ಸಾಧಕ’ನಿಂದ ‘ಉತ್ತಮ ಶಿಷ್ಯ’ರಾಗುವ ವರೆಗಿನ ಡಾ. ಆಠವಲೆಯವರ ಬೋಧಪ್ರದ ಪಯಣವು ಈ ಗ್ರಂಥದ ಮೂಲಕ ತಿಳಿಯುತ್ತದೆ.
ಗುರುಗಳು ಡಾ. ಆಠವಲೆಯವರಿಗೆ ಸಮಷ್ಟಿ ಸಾಧನೆಗಾಗಿ, ಅಂದರೆ ಧರ್ಮಪ್ರಸಾರದ ಕಾರ್ಯಕ್ಕಾಗಿ ಅನೇಕ ಆಶೀರ್ವಾದಗಳನ್ನು ನೀಡಿದರು. ಇದರ ನಂತರ ಡಾ. ಆಠವಲೆಯವರು ಧರ್ಮ ಪ್ರಸಾರದ ಕಾರ್ಯವನ್ನು ಅನೇಕ ಪಟ್ಟು ಹೆಚ್ಚಿಸಿದರು. ಅವರು ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮದ ಬಗ್ಗೆ ವಿವಿಧ ಅಂಗಗಳಿಂದ ಮಾಡಿದ ಕಾರ್ಯಕ್ಕೆ ಸರಿಸಾಟಿಯಿಲ್ಲ. ಅಧ್ಯಾತ್ಮ ಪ್ರಸಾರವು ಶೀಘ್ರವಾಗಿ ಆಗಲು ೧೯೯೯ ರಲ್ಲಿ ಅವರು ‘ಸನಾತನ ಸಂಸ್ಥೆ’ಯನ್ನು ಸ್ಥಾಪಿಸಿದರು. ಅವರ ಅವಿರತ ಪರಿಶ್ರಮದ ಫಲವಾಗಿಯೇ ಇಂದು ಸನಾತನ ಸಂಸ್ಥೆಯ ಕಾರ್ಯದ ವ್ಯಾಪ್ತಿಯು ದಿನೇದಿನೇ ಹೆಚ್ಚಾಗತೊಡಗಿದೆ ! ಜಿಜ್ಞಾಸುಗಳಿಗೆ ಅಧ್ಯಾತ್ಮಶಾಸ್ತ್ರದ ಉನ್ನತ ಶಿಕ್ಷಣವು ದೊರೆತು ಈಶ್ವರಪ್ರಾಪ್ತಿಯ ವಿವಿಧ ಮಾರ್ಗಗಳ ಬಗ್ಗೆ ಮಾರ್ಗದರ್ಶನ ಸಿಗಲು ೨೦೧೪ ರಲ್ಲಿ ಗುರುದೇವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು. ಗುರುಗಳಿಂದ ಪ್ರೇರಣೆ ಪಡೆದು ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಮಂದಿರ ಮಹಾಸಂಘ’ ಎಂಬ ಸಂಸ್ಥೆಗಳೂ ಸ್ಥಾಪನೆಯಾಗಿದ್ದು ಅವು ಉತ್ಸಾಹದಿಂದ ಕಾರ್ಯನಿರತವಾಗಿವೆ.
ಗುರುದೇವರು ಧರ್ಮ, ಅಧ್ಯಾತ್ಮ, ಧರ್ಮರಕ್ಷಣೆ, ಹಿಂದೂ ರಾಷ್ಟ್ರದ ಸ್ಥಾಪನೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಏಪ್ರಿಲ್ ೨೦೨೫ ರ ವರೆಗೆ ಸ್ವತಃ ೨೭೦ ಗ್ರಂಥ-ಕಿರುಗ್ರಂಥಗಳ ಸಂಕಲನ ಮಾಡಿದ್ದು ೯೬ ಗ್ರಂಥ-ಕಿರುಗ್ರಂಥಗಳ ಸಂಕಲನದ ಸೇವೆಯಲ್ಲಿ ಮಹತ್ವದ ಯೋಗದಾನ ನೀಡಿದ್ದಾರೆ. ಇನ್ನೂ ೫,೦೦೦ ಕ್ಕೂ ಹೆಚ್ಚು ಗ್ರಂಥಗಳ ಪ್ರಕಾಶನವಾಗುವಷ್ಟು ಬರವಣಿಗೆಯ ಸಂಗ್ರಹವನ್ನೂ ಮಾಡಿದ್ದಾರೆ. ‘ಅಧ್ಯಾತ್ಮವನ್ನು ವೈಜ್ಞಾನಿಕ ಪರಿಭಾಷೆ ಯಲ್ಲಿ ವಿವರಿಸುವುದು’ ಈ ಗ್ರಂಥಗಳ ಪ್ರಮುಖ ವೈಶಿಷ್ಟ್ಯವಾಗಿದೆ.
ಗುರುದೇವರು ೧೯೯೮ ರಲ್ಲಿ ಆಧ್ಯಾತ್ಮಿಕ ಅಡಿಪಾಯದ ಮೇಲಾಧಾರಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಘೋಷಣೆ ಮಾಡಿದರು ! ಭಾರತದಲ್ಲಿ ‘ಜಾತ್ಯತೀತ’ದ ಅತಿರೇಕವಾಗಿದ್ದ ಕಾಲದಲ್ಲಿ ಅವರು ಮೊಟ್ಟಮೊದಲು ಈ ಸಿಂಹಘರ್ಜನೆ ಮಾಡಿದರು ! ಇದಕ್ಕಾಗಿ ಅವರು ಸಾರ್ವಜನಿಕ ಸಭೆಗಳನ್ನು ತೆಗೆದುಕೊಳ್ಳುವುದು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳನ್ನು ಪ್ರಾರಂಭಿಸುವುದು, ಸಂತರ ಸಂಘಟನೆ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡಿದರು. ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಕೂಡ ಗುರುದೇವರ ಬಗ್ಗೆ ”ಪರಮ ಶ್ರದ್ಧೆಯ ಡಾ. ಆಠವಲೆಯೆಂಬ ಸತ್ಪುರುಷರು ಗೋವಾದಲ್ಲಿ ಕುಳಿತು ತಪಸ್ಸನ್ನು ಪ್ರಾರಂಭಿಸಿ ಇಡೀ ರಾಷ್ಟ್ರವನ್ನು ವ್ಯಾಪಿಸುವಂತಹ ಶಕ್ತಿ ಮತ್ತು ಚೈತನ್ಯವನ್ನು ನಿರ್ಮಾಣ ಮಾಡಿದರು. ಅದರಿಂದ ರಾಷ್ಟ್ರದಲ್ಲಿ ಸನಾತನ ಧರ್ಮದ ಜಯಘೋಷವು ಪ್ರಾರಂಭವಾಗಿದೆ !” ಎಂದು ಗೌರವಾಸ್ಪದ ಮಾತನ್ನು ಹೇಳಿದ್ದಾರೆ.

ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕಾರ್ಯ ಮಾಡುವವರ ಬಗ್ಗೆ ಗುರುದೇವರಿಗೆ ಆತ್ಮೀಯತೆಯೆನಿಸುತ್ತದೆ. ಆದ್ದರಿಂದ ಅವರಿಗೂ ಗುರುದೇವರು ಸಾಧಕರಂತೆಯೇ ಮಾರ್ಗದರ್ಶನ ಮಾಡುತ್ತಾರೆ. ಗುರುದೇವರ ಮೇಲಿನ ಶ್ರದ್ಧೆಯಿಂದ ಇಂದು ಅನೇಕ ಧರ್ಮಪ್ರೇಮಿಗಳು, ರಾಷ್ಟ್ರಪ್ರೇಮಿ ಗಳು, ಹಿಂದುತ್ವನಿಷ್ಠರು ಮುಂತಾದವರು ಅವರನ್ನು ಗುರುಸ್ಥಾನದಲ್ಲಿ ಕಾಣಲು ಪ್ರಾರಂಭಿಸಿದ್ದಾರೆ.
ಇದರೊಂದಿಗೆ ಗುರುದೇವರು ಸಾಧಕರಿಗೆ ಶೀಘ್ರ ಈಶ್ವರ ಪ್ರಾಪ್ತಿಯಾಗಲು ‘ಗುರುಕೃಪಾಯೋಗ’ ಎಂಬ ವಿನೂತನ ಯೋಗಮಾರ್ಗದ ನಿರ್ಮಿತಿ, ಆಶ್ರಮಗಳ ನಿರ್ಮಾಣ ಕಾರ್ಯ ಮುಂತಾದ ವಿವಿಧ ಕಾರ್ಯಗಳ ಸಾರಾಂಶವನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಗುರುದೇವರ ಈ ಕಾರ್ಯಗಳ ಫಲಿತಾಂಶವೇನೆಂದರೆ, ಅವರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ ೧೦.೪.೨೦೨೫ ರ ವರೆಗೆ ಸನಾತನದ ೧೩೧ ಸಾಧಕರು ಸಂತರಾಗಿದ್ದು ೧,೦೫೩ ಸಾಧಕರು ಸಂತರಾಗುವ ಹಾದಿಯಲ್ಲಿದ್ದಾರೆ ! ಹಾಗೆಯೇ ಸಾವಿರಾರು ಸಾಧಕರು ರಾಷ್ಟ್ರ ಮತ್ತು ಧರ್ಮದ ಕಾರ್ಯಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ವಿವಿಧ ಸಂಪ್ರದಾಯದವರು, ಧರ್ಮಪ್ರೇಮಿಗಳು, ರಾಷ್ಟ್ರಪ್ರೇಮಿಗಳು, ಹಿಂದುತ್ವನಿಷ್ಠರು ಮುಂತಾದವರಿಗೂ ಗುರುದೇವರ ಈ ಎಲ್ಲ ಕಾರ್ಯಗಳು ಖಂಡಿತವಾಗಿಯೂ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶಕವಾಗಲಿದೆ.
ಇವೆಲ್ಲವೂ ಗುರುದೇವರ ಸ್ಥೂಲದ ಕಾರ್ಯ ಬಗೆಗಿನ ಮಾಹಿತಿಗಳು ! ಅವರ ಸ್ಥೂಲದ ಕಾರ್ಯವು ಕೇವಲ ಶೇ. ೩೦ ರಷ್ಟು ಮತ್ತು ಸೂಕ್ಷ್ಮ ಕಾರ್ಯವು ಶೇ. ೭೦ ರಷ್ಟಿದೆ ! ‘ಸೂಕ್ಷ್ಮ’ ಎಂದರೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳಿಗೆ ಅರಿವಾಗದ ವಿಷಯ. ‘ಗುರುದೇವರು ಈಶ್ವರನೊಂದಿಗೆ ಏಕರೂಪವಾಗುತ್ತಿರುವುದರಿಂದ ಅವರ ಕಾರ್ಯವೂ ಈಶ್ವರನಂತೆ ಹೆಚ್ಚೆಚ್ಚು ಸೂಕ್ಷ್ಮ ಸ್ತರದಲ್ಲಿ, ಬ್ರಹ್ಮಾಂಡದಾದ್ಯಂತ ಹೇಗೆ ವಿಸ್ತರಿಸುತ್ತಿದೆ ? ಹಿಂದೂ ರಾಷ್ಟ್ರವು ಸ್ಥೂಲ ರೂಪದಲ್ಲಿ ಸ್ಥಾಪನೆಯಾಗಲು ಅತಿ ದೊಡ್ಡ ಅಡಚಣೆಯಾಗಿರುವ ಕೆಟ್ಟ ಶಕ್ತಿಗಳೊಂದಿಗೆ ಗುರುದೇವರು ಸೂಕ್ಷ್ಮ ಸ್ತರದಲ್ಲಿ ಹೇಗೆ ಹೋರಾಡುತ್ತಿದ್ದಾರೆ ?’ ಮುಂತಾದವುಗಳಿಂದ ಗುರುದೇವರ ಸೂಕ್ಷ್ಮ ಸ್ತರದ ಕಾರ್ಯಗಳ ಪರಿಚಯವಾಗುತ್ತದೆ.
ಗುರುದೇವರ ಸಾಧನೆಯಿಂದ ಅವರಲ್ಲಿ ಹೆಚ್ಚಾದ ಚೈತನ್ಯ ಮತ್ತು ನಿರ್ಗುಣ ತತ್ತ್ವದಿಂದ ಅವರ ದೇಹ, ಅವರು ಬಳಸುವ ವಸ್ತುಗಳು ಮತ್ತು ಅವರು ವಾಸವಾಗಿರುವ ವಾಸ್ತುವಿನಲ್ಲಿಯೂ ಪಂಚತತ್ತ್ವಗಳ ಸ್ತರದಲ್ಲಿ ಬುದ್ಧಿಗೆ ನಿಲುಕದ ಬದಲಾವಣೆಗಳು ಆಗುತ್ತಿವೆ. ಇಂತಹ ಬದಲಾವಣೆಗಳ ಸಂಶೋಧನಾತ್ಮಕ ಅಧ್ಯಯನ ಮಾಡುವ ಗುರುದೇವರು ಏಕೈಕರಾಗಿದ್ದಾರೆ ! ಈ ಬದಲಾವಣೆಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ, ಇವೂ ಕೂಡ ಈ ಗ್ರಂಥದ ಅಸಾಮಾನ್ಯ ವೈಶಿಷ್ಟ್ಯವಾಗಿದೆ. ‘ನಾಡಿಭವಿಷ್ಯ (ನಾಡಿಪಟ್ಟಿಗಳ ವಾಚನ)’ವು ಒಂದು ಪ್ರಬುದ್ಧ ಜ್ಯೋತಿಷ್ಯಶಾಸ್ತ್ರವಾಗಿದೆ. ಈ ನಾಡಿಪಟ್ಟಿಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಗುರುದೇವರ ಅವತಾರ ಮಹಿಮೆಯನ್ನು ಬರೆದಿಡಲಾಗಿದೆ.
ಗುರುದೇವರ ಈ ಅವತಾರ ಮಹಿಮೆಯು ಅವರ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವಂತಹ ಅಧ್ಯಾಯವಾಗಿದೆ !
‘ಗುರುದೇವರ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವು ಪೂರ್ತಿಯಾಗಬಾರದು’ ಎಂದು ಕೆಟ್ಟಶಕ್ತಿಗಳು ೧೯೮೨ ರಿಂದ ಗುರುದೇವರ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದವು ಮತ್ತು ಅನೇಕ ಬಾರಿ ಅವರ ಮೇಲೆ ಮಹಾಮೃತ್ಯುಯೋಗದ ಆಪತ್ತುಗಳನ್ನೂ ತಂದವು. ಆದರೆ ಸಂತರು ಮತ್ತು ನಾಡಿಪಟ್ಟಿಗಳ ಮೂಲಕ ಪ್ರಾಚೀನ ಮಹರ್ಷಿಗಳು ಗುರುದೇವರಿಗೆ ಕಾಲಕಾಲಕ್ಕೆ ಸಹಾಯ ಮಾಡಿ ದರು. ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಕೆಲವು ವರ್ಷಗಳಿಂದ ಗುರುದೇವರಿಗೆ ಬಹಳ ಆಯಾಸವಾಗುವುದು ಮುಂತಾದ ವಿವಿಧ ದೈಹಿಕ ತೊಂದರೆಗಳಾಗುತ್ತಿವೆ. ಹೀಗಿದ್ದರೂ ಅವರು ಕೇವಲ ಲೋಕಕಲ್ಯಾಣಕ್ಕಾಗಿ ಕಾರ್ಯನಿರತರಾಗಿ ದ್ದಾರೆ. ಇದರಿಂದಲೂ ಅವರ ದೈವಿಕತೆಯ ಸಾಕ್ಷಿ ದೊರೆಯುತ್ತದೆ.
‘ಗುರುದೇವರಂತಹ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಪ್ರತಿಯೊಬ್ಬರೂ ನಿಜವಾದ ಅರ್ಥದಲ್ಲಿ ತಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !’
– (ಪೂ.) ಸಂದೀಪ ಆಳಶಿ, ಸನಾತನದ ಸಂತರು, ರಾಮನಾಥಿ, ಗೋವಾ. (೧೦.೪.೨೦೨೫)

‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಸರಕಾರವು ಸಾವರ್ಕರ್ ಸದನವನ್ನು ಸ್ವಾಧೀನಪಡಿಸಿಕೊಂಡು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು !