‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯ

ಸಾಧಕರಿಗೆ ಸೂಚನೆ

ಸದ್ಯದ ಪರಿಸ್ಥಿತಿಯಲ್ಲಿ ‘ಭಕ್ತರನ್ನು ರಕ್ಷಿಸುವುದು ಮತ್ತು ಧರ್ಮಸಂಸ್ಥಾಪನೆ ಮಾಡುವುದು’, ಈ ಕಾರ್ಯವು ಜಗದ್ಗುರು ಭಗವಾನ್‌ ಶ್ರೀಕೃಷ್ಣನದ್ದಾಗಿದೆ. ಆದ್ದರಿಂದ ದೇಶ-ವಿದೇಶಗಳ ಸಾಧಕರು, ಸಂತರು ಮತ್ತು ಸದ್ಗುರುಗಳು ‘ತಮ್ಮ ರಕ್ಷಣೆ ಆಗಬೇಕು ಮತ್ತು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಅಡೆತಡೆಗಳು ನಿವಾರಣೆಯಾಗಬೇಕು’, ಇದಕ್ಕಾಗಿ ‘ಓಂ ನಮೋ ಭಗವತೇ ವಾಸುದೇವಾಯ |’, ಈ ನಾಮಜಪವನ್ನು ೩ ದಿನಗಳ ಕಾಲ ಪ್ರತಿದಿನ ೧ ಗಂಟೆ ಮಾಡಬೇಕು. ಈ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ‘ಈ ನಾಮಜಪವನ್ನು ತೊಂದರೆಯಿರುವ ಮತ್ತು ತೊಂದರೆಯಿಲ್ಲದಿರುವ ಹೀಗೆ ಎಲ್ಲ ಸಾಧಕರು ಮಾಡಬೇಕಾಗಿದೆ. ಈ ಜಪಕ್ಕಾಗಿ ನ್ಯಾಸ ಮತ್ತು ಮುದ್ರೆ ಇಲ್ಲ. ಈ ಜಪವನ್ನು ಸಾಧ್ಯವಿದ್ದಲ್ಲಿ ಮೂರು ದಿನ ಸತತವಾಗಿ ಮಾಡಬೇಕು. ಕಾರಣಾಂತರದಿಂದ ಮಧ್ಯದಲ್ಲಿ ಒಂದು ದಿನ ಮಾಡಲು ಆಗದಿದ್ದಲ್ಲಿ ಅದರ ಮರುದಿನ ಮಾಡಿ ಮುಗಿಸಲು ಪ್ರಯತ್ನಿಸಬೇಕು. ಇದನ್ನು ತಮ್ಮ ತಮ್ಮ ಲಭ್ಯ ಸಮಯದಲ್ಲಿ ಪ್ರತಿದಿನ ಒಂದು ಗಂಟೆ ನಾಮಜಪವನ್ನು ಮಾಡಬೇಕು. ಈ ನಾಮಜಪವನ್ನು ನಿಯಮಿತ ಉಪಾಯದಲ್ಲಿ ಹಿಡಿಯದೇ ಹೆಚ್ಚುವರಿಯಾಗಿ ಮಾಡಬೇಕು. (೨೫.೪.೨೦೨೫)