ಸಾಧಕರಿಗೆ ಸೂಚನೆ

‘ಯಾವುದೇ ವಸ್ತುವಿನ ಉತ್ಪಾದನೆಯಾಗುತ್ತಿರುವಾಗ ಅದರಲ್ಲಿ ಉತ್ಪಾದನೆಯ ಸ್ಥಳದ ಮತ್ತು ಅದನ್ನು ತಯಾರಿಸುವವರ ಸ್ಪಂದನಗಳು ಬರುತ್ತಿರುತ್ತವೆ. ಕೆಲವೊಮ್ಮೆ ಈ ಸ್ಪಂದನಗಳು ನಕಾರಾತ್ಮಕವಾಗಿರುತ್ತವೆ. ಆ ವಸ್ತುವನ್ನು ಬಳಸುವವರಿಗೆ ಅವುಗಳಿಂದ ತೊಂದರೆಯಾಗಬಹುದು. ಇದಕ್ಕಾಗಿ ಯಾವಾಗಲೂ ಸಿದ್ಧ ಉಡುಪು, ಚಪ್ಪಲಿಗಳಂತಹ ವೈಯಕ್ತಿಕ ಬಳಕೆಯ ಹೊಸ ವಸ್ತುಗಳನ್ನು ಬಳಸುವ ಮೊದಲು ಅವುಗಳನ್ನು ‘ಗೋಮೂತ್ರ ಸಿಂಪಡಿಸುವುದು, ಗೋಮೂತ್ರ ಮತ್ತು ವಿಭೂತಿ ಹಾಕಿದ ನೀರಿನಿಂದ ತೊಳೆಯುವುದು, ವಿಭೂತಿ ಹಚ್ಚುವುದು, ಬಿಸಿಲು ತೋರಿಸುವುದು’ ಇವುಗಳ ಪೈಕಿ ೧-೨ ಮಾಧ್ಯಮಗಳಿಂದ ಆಧ್ಯಾತ್ಮಿಕ ಸ್ತರದ ಶುದ್ಧೀಕರಣ ಮಾಡಿ ಅನಂತರ ಬಳಸಬೇಕು. ಆಧ್ಯಾತ್ಮಿಕ ಸ್ತರದ ಶುದ್ಧೀಕರಣವಾಗಲೆಂದೇ ಹಿಂದಿನ ಕಾಲದಲ್ಲಿ ಹೊಸ ವಸ್ತುವನ್ನು ತಂದ ತಕ್ಷಣ, ಅದನ್ನು ದೇವರ ಚರಣಗಳಲ್ಲಿ ಅರ್ಪಿಸುತ್ತಿದ್ದರು ಮತ್ತು ನಂತರವೇ ಬಳಸುತ್ತಿದ್ದರು. ದೇವರ ಚರಣಗಳಲ್ಲಿ ಅರ್ಪಿಸಿದ ವಸ್ತು ದೇವರ ಪ್ರಸಾದವಾಗುತ್ತದೆ. ಅದರಲ್ಲಿ ಸಾತ್ತ್ವಿಕ (ಸಕಾರಾತ್ಮಕ) ಸ್ಪಂದನಗಳು ಬರುತ್ತವೆ. ಇಂತಹ ವಸ್ತುಗಳ ಬಳಕೆಯಿಂದ ಆಧ್ಯಾತ್ಮಿಕ ಲಾಭ ಆಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !