ಮಾರ್ಚ ೧೨ ರಂದು ಇರುವ ‘ವಿಶ್ವ ಅಗ್ನಿಹೋತ್ರ ದಿನ’ದ ನಿಮಿತ್ತ…
‘ಇಂದಿನ ಒತ್ತಡಮಯ ಕಾಲದಲ್ಲಿ ಭೌತಿಕ ಸೌಲಭ್ಯಗಳಿಂದಾಗಿ ಮನುಷ್ಯನ ಜೀವನ ವ್ಯಸ್ತ ಮತ್ತು ಗತಿಮಾನವಾಗಿದೆ. ಈ ಸಂಘರ್ಷದ ಹಿಂದೆ ಮನುಷ್ಯನು ಸುಖವಾಗಿರಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ; ಆದರೆ ಶಾಶ್ವತ ಸುಖವೆಂದರೇನು ? ಅದನ್ನು ಹೇಗೆ ಪಡೆಯಬೇಕು ? ಎಂಬುದರ ಉಪಾಯ ತಿಳಿಯದಿರುವುದರಿಂದ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿರುವುದು ಕಾಣಿಸುತ್ತದೆ. ಹೆಚ್ಚೆಚ್ಚು ಸುಖಸಾಧನಗಳನ್ನು ಸಂಗ್ರಹಿಸುವುದು, ಅದೇ ಹಾದಿಯಲ್ಲಿ ನಡೆಯುತ್ತಿರುವುದು ಅದರಲ್ಲಿಯೆ ಸುಖ ಸಮಾಧಾನವಿದೆ ಎಂದು ನಂಬಲಾಗುತ್ತದೆ; ಆದರೆ ಮಾನವ ಜೀವನವೆಂದರೆ ಇಷ್ಟೆಯೆ ? ಅದರ ಉತ್ತರ ‘ಇಲ್ಲ’ ಆಗಿದೆ.
ಗಾಳಿ ನೀರಿನಿಂದ ಹಿಡಿದು ವಿಚಾರಗಳ ವರೆಗೆ ಎಲ್ಲವೂ ಮಾಲಿನ್ಯದ ತುತ್ತತುದಿಗೆ ತಲುಪಿದೆ. ಆದ್ದರಿಂದ ಕುಸಿಯುತ್ತಿರುವ ನಿಸರ್ಗದ ಸಮತೋಲನ, ವೇಗವಾಗಿ ಬದಲಾಗುತ್ತಿರುವ ಹವಾಮಾನ, ಹೊಸ ಕಾಯಿಲೆಗಳು ಮತ್ತು ಸೋಂಕುರೋಗಗಳು, ಹೆಚ್ಚುತ್ತಿರುವ ಅಶಾಂತಿ ಇವೆಲ್ಲವೂ ಭಯಹುಟ್ಟಿಸುವ ಸ್ಥಿತಿಗೆ ತಲಪಿವೆ. ಎಲ್ಲೆಡೆ ದಿಶಾಹೀನತೆ, ಉದಾಸೀನತೆ, ನಿರಾಶೆ ಮತ್ತು ಅಸಹಾಯಕತೆ ಹರಡಿರುವುದು ಕಂಡುಬರುತ್ತದೆ. ಇಂದಿನ ಪರಸ್ಪರವಿರೋಧಿ ಸಾಂಪ್ರದಾಯಿಕ ರೂಢಿ ಮತ್ತು ಪ್ರಗತಿ ಹೊಂದಿದ ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಈ ವಿಷಯಗಳಿಗೆ ಯೋಗ್ಯ ಉಪಾಯವಿಲ್ಲ; ಆದ್ದರಿಂದ ಈಗ ನಿಸರ್ಗದೊಂದಿಗೆ ಹೊಂದಿಕೊಳ್ಳುವಂತಹ ಜೀವನಪದ್ಧತಿಯನ್ನು ಸ್ವೀಕರಿಸಲು ವಿಚಾರವಾದಿಗಳು ಮತ್ತು ವಿಜ್ಞಾನಿಗಳು ಆಗ್ರಹಿಸುತ್ತಿದ್ದಾರೆ, ಅದು ಇಂದಿನ ಕಾಲದ ಅವಶ್ಯಕತೆಯಾಗಿದೆ. ಶಾಶ್ವತ ಸುಖವನ್ನು ಹೇಗೆ ಪಡೆಯಬೇಕು ? ವಾಸ್ತವದಲ್ಲಿ ಸುಖವೇನು ವಸ್ತು ಅಲ್ಲ, ಅದು ಒಂದು ಅವಸ್ಥೆಯಾಗಿದೆ. ಅದು ಚಿರಂತನವಾಗಿರುವ ಆನಂದದ ಆಂತರಿಕ ಅನುಭೂತಿ ಆಗಿದೆ. ಆ ಅವಸ್ಥೆ ಮತ್ತು ಅನುಭೂತಿಯನ್ನು ಪಡೆಯುವ ಅಧಿಕಾರವನ್ನು ಪ್ರಾಚೀನಕಾಲದ ವೇದಗಳು ವಿಶ್ವದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ನೀಡಿವೆ. ಅದಕ್ಕಾಗಿ ಆದರ್ಶ ಜೀವನಪದ್ಧತಿಯನ್ನು ನೀಡಿವೆ.
೧. ಅಗ್ನಿಹೋತ್ರದ ವಿಷಯ…
ವಾಯುಮಂಡಲ ಶುದ್ಧಿಗಾಗಿ ಯಜ್ಞ ಮಾಡುವುದಕ್ಕೆ ‘ಅಗ್ನಿಹೋತ್ರ’ ಎಂದು ಹೇಳಲಾಗುತ್ತದೆ. ಯಜ್ಞವು ನಿತ್ಯ ಆಚರಣೆಯ ವಿಷಯವಾಗಿದೆ. ಅಗ್ನಿಹೋತ್ರವನ್ನು ಆಚರಿಸುವ ವಿವಿಧ ಪದ್ಧತಿಗಳನ್ನು ಹೇಳಲಾಗಿದೆ, ಅದರಲ್ಲಿ ‘ಶ್ರೌತ’ ಮತ್ತು ‘ಸ್ಮಾರ್ತ’ ಹೀಗೆ ವರ್ಗೀಕರಣವನ್ನು ಮಂಡಿಸಲಾಗಿದೆ, ಅದಕ್ಕೆ ಸಾಮಾನ್ಯ ಭಾಷೆಯಲ್ಲಿ ‘ವ್ಯಕ್ತಿಗತ’ ಮತ್ತು ‘ಸಮಷ್ಟಿಗತ’ ಆಚರಣೆ ಪ್ರಕ್ರಿಯೆ ಗಳನ್ನು ನಂಬುತ್ತಾರೆ. ಸಾಮಾನ್ಯವಾಗಿ ಅಗ್ನಿಗೆ ನಿತ್ಯ ಆಹುತಿ ಸಮರ್ಪಣೆಯಾಗಬೇಕು, ಎಂಬುದು ಅದರಲ್ಲಿನ ಪ್ರಮುಖ ಕೃತಿಯಾಗಿದೆ. ಅದರಲ್ಲಿ ಪ್ರತಿಯೊಂದು ಮನೆಯಲ್ಲಿ ನಿತ್ಯ ವೈಶ್ವದೇವ ಪ್ರಯೋಗ ಮತ್ತು ಶಿವಪುರಿ, ಅಕ್ಕಲಕೋಟವಾಸಿ ಸದ್ಗುರು ಗಜಾನನ ಮಹಾರಾಜರು ವಿಶ್ವಕಲ್ಯಾಣಕ್ಕಾಗಿ ಪುನಃ ಪ್ರಸ್ತಾಪಿಸಿದ ಪ್ರಾಚೀನತಮ ಅಗ್ನಿಹೋತ್ರ ಸಾಧನಾ ಮಾರ್ಗದಂತಹ ವಿವಿಧ ಆಚರಣ ಶೈಲಿಗಳ ಅವಶ್ಯಕತೆಯಿದೆ. ವೇದಗಳು ಅಗ್ನಿಯ ಉಪಾಸನೆಗೆ ಒತ್ತು ಕೊಟ್ಟಿರುವುದರಿಂದ ಪ್ರಾಚೀನ ಕಾಲಕ್ಕನುಸಾರ ಪ್ರತಿಯೊಂದು ಮನೆಯಲ್ಲಿ ಅಗ್ನಿಹೋತ್ರ ಸಂಪನ್ನವಾಗುವುದು ಇಂದಿನ ಕಾಲದ ಅವಶ್ಯಕತೆ ಮತ್ತು ಯುಗ ಸಂದೇಶವಾಗಿದೆ. ಅಗ್ನಿಹೋತ್ರ ವಿಧಿಯಿಂದ ವಾತಾವರಣದಲ್ಲಿ ನಿಸರ್ಗದಲ್ಲಿನ ಊರ್ಜಾ ಚಕ್ರಗಳು ಗತಿಮಾನವಾಗುತ್ತವೆ. ಅಗ್ನಿಹೋತ್ರ ವಿಧಿಯ ಆಚರಣೆ ಸುಲಭ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಆಗುತ್ತದೆ.
ಅಗ್ನಿಹೋತ್ರಕ್ಕನುಸಾರ ಅದರ ಪ್ರಮುಖ ೫ ಉಪಭಾಗಗಳಿವೆ.
ಅ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸ್ಥಳೀಯ ಸಮಯವನ್ನು ತಪ್ಪದೆ ಪಾಲಿಸುವುದು.
ಆ. ದಶಾಂಗುಲಿ (೧೦ ಬೆರಳುಗಳು) ಅಳತೆಯ ‘ಪಿರಾಮಿಡ್’ ಆಕಾರದ ತಾಮ್ರ ಅಥವಾ ಮಣ್ಣಿನ ಯಜ್ಞಪಾತ್ರೆ.
ಇ. ದೇಶಿ ಹಸುವಿನ ಸೆಗಣಿಯಿಂದ ಮಾಡಿದ ಬೆರಣಿ.
ಈ. ದೇಶಿ ಹಸುವಿನ ತುಪ್ಪ.
ಉ. ಎರಡು ಚಮಚ ಅಕ್ಷತೆ (ಅಖಂಡ ಅಕ್ಕಿ).
ಇಷ್ಟೇ ಸಾಮಗ್ರಿಗಳು ಬೇಕಾಗುತ್ತವೆ.
೨. ಅಗ್ನಿಹೋತ್ರ ಮಾಡುವ ಪದ್ಧತಿ
ಸ್ವಚ್ಛ, ಶುಚಿರ್ಭೂತವಾದ ಸ್ಥಳದಲ್ಲಿ ವೈಯಕ್ತಿಕ ಅಥವಾ ಸಾಮೂಹಿಕವಾಗಿ ಅಗ್ನಿಹೋತ್ರ ಆಹುತಿ ನೀಡಬಹುದು. ಯಜ್ಞಪಾತ್ರೆಯಲ್ಲಿ ಬೆರಣಿಗಳ ಮೇಲೆ ಸ್ವಲ್ಪ ತುಪ್ಪ ಹಾಕಿ ಅಗ್ನಿಯನ್ನು ಪ್ರಜ್ವಲಿಸಬೇಕು ಮತ್ತು ಸೂರ್ಯೋದಯದ ಅಥವಾ ಸೂರ್ಯಾಸ್ತದ ಸರಿಯಾದ ಸಮಯವನ್ನು ನೋಡಿ ಪ್ರಜ್ವಲಿತ ಅಗ್ನಿಗೆ ತುಪ್ಪವನ್ನು ಹಚ್ಚಿದ ಅಕ್ಷತೆಯ ೨ ಆಹುತಿ ನೀಡಬೇಕು. ಸೂರ್ಯೋದಯದ ಸಮಯದಲ್ಲಿ
‘ಓಂ ಸೂರ್ಯಾಯ ಸ್ವಾಹಾ, ಸೂರ್ಯಾಯ ಇದಮ್ ನ ಮಮ್ |’,
‘ಓಂ ಪ್ರಜಾಪತಯೆ ಸ್ವಾಹಾ, ಪ್ರಜಾಪತಯೆ ಇದಮ್ ನ ಮಮ್ |’
ಈ ಮಂತ್ರವನ್ನು ಉಚ್ಚರಿಸಬೇಕು ಮತ್ತು ಸೂರ್ಯಾಸ್ತದ ಸಮಯದಲ್ಲಿ ‘ಓಂ ಅಗ್ನಯೆ ಸ್ವಾಹಾ, ಅಗ್ನಯೆ ಇದಮ್ ನ ಮಮ್ |’, ‘ಓಂ ಪ್ರಜಾಪತಯೆ ಸ್ವಾಹಾ ಪ್ರಜಾಪತಯೆ ಇದಮ್ ನ ಮಮ್ |’
ಈ ರೀತಿ ಉಚ್ಚಾರ ಮಾಡಬೇಕು. ಆಹುತಿ ಸುಟ್ಟು ಹೋಗುವ ವರೆಗೆ ಅಗ್ನಿಜ್ವಾಲೆಯನ್ನೆ ನೋಡುತ್ತಾ ಅಲ್ಲಿಯೆ ಶಾಂತವಾಗಿ ಕುಳಿತುಕೊಳ್ಳಬೇಕು, ಅನಂತರ ಅದರಲ್ಲಿ ತಯಾರಾಗುವ ಭಸ್ಮವನ್ನು ತಮ್ಮ ಹಣೆಗೆ ಹಚ್ಚಿಕೊಳ್ಳಬೇಕು.
೩. ಅಗ್ನಿಹೋತ್ರದ ಪರಿಣಾಮ ಹೇಗಾಗುವುದು ?
ಸದ್ಯ ‘ಅಗ್ನಿಹೋತ್ರ ಚಿಕಿತ್ಸೆ’ ಜಗತ್ತಿನಾದ್ಯಂತ ಮುಂದೆ ಬರುತ್ತಿದೆ. ಪ್ರಾಚೀನ ವೈದಿಕ ಪರಂಪರೆಗನುಸಾರ ಆಚರಿಸುವ ಅಗ್ನಿಹೋತ್ರದ ಸಮಯದಲ್ಲಿ ತಾಮ್ರದ ತಗಡಿನ ಸುತ್ತಲೂ ಬೃಹತ್ಪ್ರಮಾಣದಲ್ಲಿ ಊರ್ಜೆ ಸಂಗ್ರಹವಾಗುತ್ತದೆ. ಆಗ ಅಲ್ಲಿ ಆಯಸ್ಕಾಂತ ಶಕ್ತಿಯಂತಹ ಕ್ಷೇತ್ರ ನಿರ್ಮಾಣವಾಗುತ್ತದೆ, ಅದರಿಂದ ಆಘಾತಕಾರಿ ಊರ್ಜೆ ನಿಷ್ಕ್ರಿಯವಾಗಿ ಪೋಷಕ ಊರ್ಜೆ ದೃಢವಾಗುತ್ತದೆ. ಅದರ ಪರಿಣಾಮದಿಂದ ಯಾವ ವ್ಯಕ್ತಿ ಅಗ್ನಿಹೋತ್ರ ಮಾಡುತ್ತಾನೆಯೋ, ಆ ವ್ಯಕ್ತಿಯ ಸುತ್ತಲೂ ರಚನಾತ್ಮಕ ಶಕ್ತಿಯ ಕ್ಷೇತ್ರ ಸಿದ್ಧವಾಗುತ್ತದೆ. ಅಗ್ನಿಹೋತ್ರ ಮಾಡುವಾಗ ಅದರ ಹೊಗೆ ವಾತಾವರಣದಲ್ಲಿನ ಹಾನಿಕರ ‘ರೇಡಿಯೇಶನ್’ನ ಕಣಗಳನ್ನು ಸಂಗ್ರಹಿಸಿ ಸೂಕ್ಷ್ಮಸ್ತರದಲ್ಲಿ ಅವುಗಳ ‘ರೆಡಿಯೋಎಕ್ಟಿವ್’ ಪರಿಣಾಮವನ್ನು ಕ್ಷೀಣಗೊಳಿಸುತ್ತದೆ. ಇದರಲ್ಲಿ ಏನೂ ನಷ್ಟವಾಗುವುದಿಲ್ಲ, ಕೇವಲ ರಚನೆಯನ್ನು ಬದಲಾಯಿಸಲಾಗುತ್ತದೆ.
ಅಗ್ನಿಹೋತ್ರ ಮಾಡುವಾಗ ಅದರಲ್ಲಿ ಕೇವಲ ಅಗ್ನಿಹೋತ್ರದ ಊರ್ಜೆ ಮಾತ್ರ ಇರುತ್ತದೆ ಎಂದೇನಿಲ್ಲ; ಅದರಲ್ಲಿ ಅಗ್ನಿಯಿಂದ ಅತೀಸೂಕ್ಷ್ಮಊರ್ಜೆ ನಿರ್ಮಾಣವಾಗಿ ಅದು ವೇಗವಾಗಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಇದರ ಜೊತೆಗೆ ನಮಗೆ ಅರಿವಾಗುವುದೇನೆಂದರೆ ಈ ಅಗ್ನಿಹೋತ್ರದಲ್ಲಿ ಯಾವ ದ್ರವ್ಯಗಳ ಪ್ರಯೋಗ ಮಾಡಲಾಗುತ್ತದೆಯೋ, ಅವುಗಳಲ್ಲಿನ ಔಷಧದ ಗುಣಗಳಿಂದ ಈ ಚೈತನ್ಯದಾಯಕ ಹೋಮದಿಂದ ಪೂರ್ಣ ಪರಿಣಾಮ ಪ್ರಾಪ್ತಿಯಾಗುತ್ತದೆ.ಅಪಾಯಕಾರಿ ಜೀವಾಣುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಅಗ್ನಿಹೋತ್ರದಲ್ಲಿದೆ. ನಾವು ಅಗ್ನಿಹೋತ್ರದಲ್ಲಿನ ಅಗ್ನಿಯ ಮುಂದೆ ಕುಳಿತರೆ ಮತ್ತು ಹವಿದ್ರವ್ಯದ ಜ್ವಲನದಿಂದ ಹೊರಡುವ ಹೊಗೆಯನ್ನು ಶ್ವಾಸದ ಮೂಲಕ ಒಳಗೆ ತೆಗೆದುಕೊಂಡರೆ, ಅದು ತಕ್ಷಣ ಪುಪ್ಪುಸದಲ್ಲಿ ಮತ್ತು ರಕ್ತ ಪ್ರವಾಹದಲ್ಲಿ ಹರಡುತ್ತದೆ. ಇದರಿಂದ ರಕ್ತಾಭಿಸರಣ ಕ್ರಿಯೆಯಲ್ಲಿ ಉತ್ತಮ ಪರಿಣಾಮವಾಗುತ್ತದೆ ಮತ್ತು ಅಗ್ನಿಹೋತ್ರದ ಭಸ್ಮವನ್ನು ಸೇವನೆ ಮಾಡಿದರೆ, ಅದಕ್ಕಿಂತಲೂ ಹೆಚ್ಚು ಪರಿಣಾಮವಾಗುತ್ತದೆ. ವನಸ್ಪತಿಗಳಿಗೆ ವಾತಾವರಣದಲ್ಲಿನ ಪೋಷಕದ್ರವ್ಯ ಸಿಗುತ್ತದೆ, ಅವುಗಳ ಪೋಷಣೆ ಮತ್ತು ಬೆಳವಣಿಗೆ ಉತ್ತಮವಾಗುತ್ತದೆ. ಸೂರ್ಯ ಊರ್ಜೆಯನ್ನು ತರುತ್ತಾನೆ ಮತ್ತು ಊರ್ಜೆಯನ್ನು ತೆಗೆದುಕೊಳ್ಳುತ್ತಾನೆ, ಆದ್ದರಿಂದ ಮಾಲಿನ್ಯವನ್ನು ದೂರಗೊಳಿಸಲು ಪೋಷಕ ಸ್ಥಿತಿ ತನ್ನಷ್ಟಕ್ಕೆ ನಿರ್ಮಾಣ ಮಾಡುತ್ತದೆ.
೪. ಕೃಷಿಯಲ್ಲಿ ಅಗ್ನಿಹೋತ್ರ ವಾತಾವರಣದ ಉಪಯೋಗ
ಸದ್ಯ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕಗಳ ವಿಪರೀತ ಉಪಯೋಗದಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಅದರಿಂದ ಅರ್ಬುದರೋಗ ಮತ್ತು ಹೃದ್ರೋಗದಂತಹ ಅನೇಕ ಕಾಯಿಲೆಗಳು ಹೆಚ್ಚಾಗುತ್ತಿವೆ. ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಮಾನಸಿಕ ಮತ್ತು ಶಾರೀರಿಕ ಉದಾಸೀನತೆ ಕಂಡುಬರುತ್ತಿದೆ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ವಿಷಮುಕ್ತ ಅನ್ನಧಾನ್ಯ ನಿರ್ಮಾಣ ಮಾಡಲು ಅಗ್ನಿಹೋತ್ರದ ಉಪಯೋಗ ಚೆನ್ನಾಗಿ ಆಗುತ್ತಿರುವುದರ ಅನುಭವವಾಗುತ್ತಿದೆ.
‘ಅಲ್ಪ ಮತ್ತು ದೀರ್ಘ ಅವಧಿಯ ಉತ್ಪಾದನೆ ಚಕ್ರವಿರುವ ಬೆಳೆಗಳಲ್ಲಿನ ಎಲ್ಲ ಪ್ರಕಾರದ ಕೀಟಕಗಳ ಮತ್ತು ರೋಗ ನಿಯಂತ್ರಣ ಕ್ಕಾಗಿ ಉಪಯೋಗವಾಗುತ್ತದೆ. ಜೋಳ, ಗೋದಿ, ರಾಗಿ, ಮೆಕ್ಕೆ ಜೋಳ, ಈರುಳ್ಳಿ, ಟೊಮೇಟೊ, ಕೋಸು, ಸೌತೆಕಾಯಿ, ಅದೇ ರೀತಿ ಬಾಳೆ, ಮಾವು, ಕಿತ್ತಳೆ, ಲಿಂಬು, ಇಂತಹ ಫಲಗಳ ಮೇಲೆ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಅಗ್ನಿಹೋತ್ರ ಉಪಯೋಗವಾಗುತ್ತದೆ’, ಎಂಬುದು ಕಂಡು ಬಂದಿದೆ. ಸಾಕುಪ್ರಾಣಿಗಳ ಆರೋಗ್ಯ ಸುಧಾರಣೆ, ಹಾಲು ಕೊಡುವ ಜಾನುವಾರುಗಳ ಆರೋಗ್ಯ ಮತ್ತು ಹಾಲು ಕೊಡುವ ಕ್ಷಮತೆ ವೃದ್ಧಿಗೆ ಅಗ್ನಿಹೋತ್ರ ಉಪಯೋಗವಾಗುತ್ತದೆ.
೫. ಕೃಷಿ, ಭೂಮಿ ಮತ್ತು ಜಲಕ್ಕೆ ಅಗ್ನಿಹೋತ್ರ ಎಲ್ಲಕ್ಕಿಂತ ದೊಡ್ಡ ಆಧಾರ !
ಅ. ಎರೆಹುಳಗಳಿಂದ ಭೂಮಿಯಲ್ಲಿ ಗೊಬ್ಬರ ನಿರ್ಮಾಣವಾಗಿ ಅದು ಕೃಷಿಗೆ ಪೋಷಕವಾಗುತ್ತದೆ. ಅಗ್ನಿಹೋತ್ರ ಭಸ್ಮ ೧೦೦ ಗ್ರಾಮ್ ಮತ್ತು ಪಟಕಾರ (ಸ್ಪಟಿಕ) ೧೦೦ ಗ್ರಾಮ್ ಇದನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬೆಳಗ್ಗಿನ ಸಮಯದಲ್ಲಿ ಸಿಂಪಡಿಸಿದರೆ ಭೂಮಿ ಮೃದುವಾಗುತ್ತದೆ.
ಆ. ತೇವವುಳ್ಳ ಭೂಮಿಯಲ್ಲಿ ತಿಂಗಳಿಗೊಮ್ಮೆ ಈ ಉಪಚಾರ ಮಾಡಿದರೆ ಭೂಮಿಯಲ್ಲಿ ಎರೆಹುಳಗಳ ಸಂಖ್ಯೆ ಹೆಚ್ಚಾಗಲು ಸಹಾಯವಾಗುತ್ತದೆ.
ಇ. ಜೀವಾಮೃತದಲ್ಲಿಯೂ ಅಗ್ನಿಹೋತ್ರ ಭಸ್ಮವನ್ನು ಹಾಕಿದರೆ ಕೂಡಲೇ ಸಕಾರಾತ್ಮಕ ಪರಿಣಾಮ ಕಾಣಿಸುತ್ತದೆ.
ಈ. ೧೩ ಲೀಟರ್ ನೀರಿನಲ್ಲಿ ೫ ಗ್ರಾಮ್ ಅಗ್ನಿಹೋತ್ರ ಭಸ್ಮವನ್ನು ಹಾಕಿ ಬೆಳೆಯ ಮೇಲೆ ಸಿಂಪಡಿಸಿದರೆ ಕೀಟಗಳ ನಿಯಂತ್ರಣವಾಗುತ್ತದೆ.
ಉ. ಭೂಮಿಯ ಕೆಳಗೆ ಬೆಳೆಯುವ ಬೆಳೆಗಳಾದ ಅರಿಶಿನ, ಶುಂಠಿ, ಈರುಳ್ಳಿ ಮತ್ತು ಬೆಳ್ಳುಳ್ಳಿ ಇವುಗಳ ಬೆಳೆಯನ್ನು ಹೆಚ್ಚಿಸಲು ಈ ಭಸ್ಮವನ್ನು ಉಪಯೋಗಿಸಬಹುದು.
ಊ. ಭೂಮಿಯಲ್ಲಿನ ಆಕ್ಸಿಜನ್‌ನ ಮಟ್ಟವನ್ನು ಹೆಚ್ಚಿಸಲು ಸಹಾಯ ವಾಗುತ್ತದೆ. ಇದರಿಂದ ಭೂಮಿಯ ಪೋಷಣೆಯಾಗುತ್ತದೆ. ಬಾವಿ ಅಥವಾ ಬೋರ್‌ವೆಲ್‌ನ ನೀರಿನಲ್ಲಿ ಕ್ಷಾರ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಲು ಅಗ್ನಿಹೋತ್ರ ಭಸ್ಮವನ್ನು ಉಪಯೋಗಿಸಬಹುದು.
ಎ. ಪ್ರತಿಯೊಂದು ಏಕಾದಶಿಯಂದು ದೇಶಿ ಹಸುವಿನ ೨ ಲೀಟರ್ ಹಾಲು, ೫ ಲೀಟರ್ ಜೈವಿಕ ರಸಾಯನವನ್ನು ೧೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಬಾವಿ ಅಥವಾ ಬೋರ್‌ವೆಲ್ ಒಳಗೆ ಹಾಕಿದರೆ ಉಪ್ಪಿನಂತಹ ಜಡ ನೀರು ರುಚಿ ಆಗುತ್ತದೆ. ಈ ಪ್ರಯೋಗವನ್ನು ಸತತವಾಗಿ ಕನಿಷ್ಟ ೬ ತಿಂಗಳು ಮಾಡಬೇಕು. ನೀರಿನ ಮೂಲವನ್ನು ಬಲಶಾಲಿ ಮಾಡಲು ೧೦೦ ಗ್ರಾಂ ಅಗ್ನಿಹೋತ್ರ ಭಸ್ಮ ೧೦ ಲೀಟರ ಗೋಮುತ್ರ ೧೦ ಲೀಟರ ನೀರಿನಲ್ಲಿ ಬೆರೆಸಿ ಬಾವಿಯಲ್ಲಿ ಅಥವಾ ಬೋರಿನಲ್ಲಿ ಹಾಕಿದರೆ ನೀರಿನ ಮೂಲಗಳು ಬಲಶಾಲಿ ಆಗುತ್ತವೆ ಇದನ್ನು ಪ್ರತಿಯೊಂದು ಅಮವಾಸ್ಯೆ ಮತ್ತು ಹುಣ್ಣಿಮೆಯಂದು ೬ ತಿಂಗಳು ಸತತವಾಗಿ ಮಾಡಬೇಕು. ರೋಗಮುಕ್ತ ಮತ್ತು ವಿಷಮುಕ್ತ ಕೃಷಿಗಾಗಿ ಅಗ್ನಿಹೋತ್ರ ಎಲ್ಲಕ್ಕಿಂತ ದೊಡ್ಡ ಆಧಾರವಾಗುತ್ತಿದೆ. ಅದನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಪರೀಕ್ಷಣೆ ಮಾಡಿ ಪರಿಣಾಮಕಾರಕತೆಯ ಶೋಧನೆ ಮತ್ತು ಚಿಕಿತ್ಸೆ ಆಗುವುದು ಆವಶ್ಯಕವಾಗಿದೆ. ಆ ದೃಷ್ಟಿಯಲ್ಲಿ ವಿಜ್ಞಾನಿಗಳು, ವಿಚಾರವಂತರು ಮುಂದೆ ಬರಬೇಕು ಇದೇ ಅಪೇಕ್ಷೆ !’
– ರವೀಂದ್ರ ದಿಗಂಬರ ದೇಶಮುಖ (ಆಧಾರ :’ಅಗ್ನಿಸೋಮ ಸೇವಾ ಪ್ರತಿಷ್ಠಾನ’ ಮತ್ತು ತ್ರೈಮಾಸಿಕ ‘ಪ್ರಜ್ಞಾಲೋಕ’, ಜನವರಿಯಿಂದ ಮಾರ್ಚ್ ೨೦೨೪)