‘ಗುಯಿಲೆನ್‌ ಬ್ಯಾರೆ ಸಿಂಡ್ರೊಮ್’ (ಜಿ.ಬಿ. ಸಿಂಡ್ರೊಮ್) ಈ ರೋಗದ ಬಗ್ಗೆ ವಹಿಸಬೇಕಾದ ಕಾಳಜಿ !

ಇದ್ದಕ್ಕಿದ್ದಂತೆಯೇ ಉಷ್ಣತೆ ಹೆಚ್ಚಾಗಿದೆ. ಕಫವು ನೀರಾಗಿ ಮೂಗು ಸೋರುವುದು, ಶೀತ, ಗಂಟಲು ಕೆರೆಯುವುದು, ಇಂತಹ ಲಕ್ಷಣಗಳು ಈಗ ಹೆಚ್ಚಾಗುತ್ತಿರುವುದು ಗಮನಕ್ಕೆ ಬರು ತ್ತಿದೆ. ಅದರಲ್ಲಿಯೇ ಪುಣೆಯಲ್ಲಿ ಇಂತಹ ಸಾಂಕ್ರಾಮಿಕದ ನಂತರ ‘ಗುಯಿಲೆನ್‌ ಬ್ಯರೆ ಸಿಂಡ್ರೊಮ್‌ (ಜಿ.ಬಿ. ಸಿಂಡ್ರೊಮ್‌)ನ ರೋಗಿಗಳು ಇದ್ದಕ್ಕಿದ್ದಂತೆ ಹೆಚ್ಚಾಗಿದ್ದಾರೆ. ಇದರ ಹಿಂದೆ ‘ಕ್ಯಾಂಪಿಲೊಬ್ಯಾಕ್ಟರ್’ (ಒಂದು ರೀತಿಯ ಆಹಾರದ ವಿಷಬಾಧೆ), ಬೇಯಿಸದ ಮಾಂಸ, ‘ವ್ಯಾಕ್ಸಿನ್ಸ್‌’ನಿಂದ (ಲಸಿಕೆಯಿಂದ) ಬಂದ ಪ್ರತಿಕ್ರಿಯೆ, ಇಂತಹ ವಿವಿಧ ಕಾರಣಗಳು ಮುಂದೆ ಬಂದಿವೆ. ಈ ಬಗೆಗಿನ ಮಾಹಿತಿ, ವಹಿಸಬೇಕಾದ ಮುನ್ನೆಚ್ಚರಿಕೆಗಳು ಇತ್ಯಾದಿಗಳು ಸಾಮಾಜಿಕ ಮಾಧ್ಯಮ ಮತ್ತು ಸುದ್ದಿಗಳ ಮೂಲಕ ಮುಕ್ತವಾಗಿ ಹರಿದಾಡುತ್ತಿವೆ, ಆದುದರಿಂದ ಇಲ್ಲಿ ಪುನರಾವರ್ತಿಸುತ್ತಿಲ್ಲ.

ಈ ದ್ವಂದ್ವ ದೃಷ್ಟಿಯಿಂದ ಕೆಲವು ವಿಷಯಗಳು….

೧. ಚಳಿಯಲ್ಲಿ ಚೆನ್ನಾಗಿದ್ದ ಹಸಿವು ಇದ್ದಕ್ಕಿದ್ದಂತೆಯೇ ಕಡಿಮೆ ಯಾಗಿದೆ ಎಂದು ಈಗ ಅರಿವಾಗುವುದು, ಅಂತಹ ಸಮಯದಲ್ಲಿ ಚಳಿಯಲ್ಲಿ ಆಹಾರ ಸೇವನೆ, ಕಷಾಯ, ಸೂಪ್, ಹೊಟ್ಟೆತುಂಬ ತಿನ್ನುವುದು, ಖಾರ ಪದಾರ್ಥ, ಬಹಳಷ್ಟು ತುಪ್ಪ, ಬೆಣ್ಣೆ, ಸಿಹಿ ಪದಾರ್ಥವನ್ನು ತಿನ್ನುತ್ತಿದ್ದರೆ, ಈಗ ಕಡಿಮೆ ಮಾಡಲು ಅಡ್ಡಿಯಿಲ್ಲ. ಹಸಿವಾದರೆ ಮಾತ್ರ ತಿನ್ನಿ ಮತ್ತು ಸಾದಾ ಪುಲಕಾ/ರೊಟ್ಟಿ, ಪಲ್ಯ, ತೊವ್ವೆ-ಅನ್ನ ಇಂತಹವುಗಳನ್ನು ತಿನ್ನಬೇಕು.

೨. ಮಾರುಕಟ್ಟೆಗಳಲ್ಲಿ ಸ್ಟ್ರಾಬೆರಿ ಮತ್ತು ದ್ರಾಕ್ಷಿಗಳು ಕಂಡು ಬರುತ್ತಿವೆ. ದ್ರಾಕ್ಷಿಗಳಿಗಿಂತ ಅದರ ಮೇಲಿರುವ ಸಿಂಪಡನೆಯಿಂದ ಗಂಟಲು ನೋವಾಗುವುದು, ಕೆಮ್ಮಿನ ತೊಂದರೆಯಾಗುವುದು ಕಂಡು ಬರು ತ್ತದೆ. ದ್ರಾಕ್ಷಿಗಳನ್ನು ತಿನ್ನುವುದಿದ್ದರೆ, ಫೆಬ್ರವರಿ ತಿಂಗಳ ಕೊನೆಯ ವಾರದ ವರೆಗೆ ಬೇಡ. ಆದರೆ ತಿನ್ನಬೇಕೆನಿಸಿದರೆ, ಅವುಗಳನ್ನು ಉಪ್ಪು ನೀರಿನಲ್ಲಿ ೧೦-೧೫ ನಿಮಿಷಗಳ ಕಾಲ ಇಟ್ಟು ಕೈಯಿಂದ ತಿಕ್ಕಿ ತೊಳೆದು ಅವಶ್ಯವಿದ್ದಷ್ಟೆ ತಿನ್ನಿ. ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಆವಶ್ಯಕವಿದ್ದಷ್ಟೇ ನೀಡಿ. ಸ್ಟ್ರಾಬೆರಿಯ ವಿಷಯದಲ್ಲಿಯೂ ಸಿಂಪಡಿಕೆಯ ಅಪಾಯವನ್ನು ಗಮನದಲ್ಲಿಟ್ಟು ತೊಳೆಯುವಾಗ ಮುನ್ನೆಚ್ಚರಿಕೆ ವಹಿಸಬೇಕು. ‘ಸ್ಟ್ರಾಬೆರಿ ವಿಥ್‌ ಕ್ರಿಮ್‌’, ಸೇವನೆ ಬೇಡ.

೩. ‘ಜಿ.ಬಿ. ಸಿಂಡ್ರೋಮ್‌’ನ ದೃಷ್ಟಿಯಿಂದ ಕೆಲವು ದಿನ ಹೊರಗಿನ ಮಾಂಸಾಹಾರ, ಮೊಟ್ಟೆ ಸೇವನೆಯನ್ನು ನಿಲ್ಲಿಸಿ. ಅರ್ಧಬೇಯಿಸಿದ ಮಾಂಸ ಅಥವಾ ಮೊಟ್ಟೆಯಿಂದ ಈ ಸೋಂಕು ಹರಡಬಹುದು. ಸ್ನಾಯುಗಳನ್ನು ಬಲಿಷ್ಠಗೊಳಿಸಲು ಕೆಲವು ಜನರು ಬೇಯಿಸದ ಮೊಟ್ಟೆ, ಹಾಲಿನಂತಹ ಆಹಾರವನ್ನು ಸೇವಿಸುತ್ತಾರೆ, ಈ ರೀತಿಯೂ ಬೇಡ; ಆದರೆ ಸದ್ಯ ಆದಷ್ಟು ತಡೆಗಟ್ಟಿ.

೪. ಯಾವುದೇ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು. ಶೀತ, ಕೆಮ್ಮು ಆಗಗೊಡಬಾರದು, ಮಾಸ್ಕ್ ಮುಂತಾದ ನಿತ್ಯದ ಸೂಚನೆಗಳನ್ನು ಪಾಲಿಸುವುದು ಮತ್ತು ಕೈಗಳನ್ನು ಸ್ವಚ್ಛ ತೊಳೆಯಬೇಕು.

೫. ಸದ್ಯ ಹೊರಗೆ ತಿನ್ನುವುದು ಬೇಡ. ಇದರಿಂದ ಜನದಟ್ಟನೆಯಲ್ಲಿ ಹೋಗುವುದೂ ತಪ್ಪುತ್ತದೆ, ಹಾಗೆಯೇ ಆಹಾರದಿಂದ ಯಾವುದೇ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಭೋಜನದಲ್ಲಿ ಪೂರ್ತಿಯಾಗಿ ಬೆಂದ, ಕುದಿಸಿದ ಪದಾರ್ಥವಿರುವಂತೆ ನೋಡಿಕೊಳ್ಳಿ. ಬೇಯಿಸದ ಯಾವುದೇ ಪದಾರ್ಥವನ್ನು ತಡೆಗಟ್ಟಿ. ಸ್ಯಾಂಡ್‌ವಿಚ್, ಅರ್ಧಬೆಂದ ಕೋಸು ಇರುವ ನ್ಯೂಡಲ್ಸ್‌, ಸಲಾಡ್‌ (ಕೊಸಂಬರಿ) ಇತ್ಯಾದಿ. ಇದರಿಂದ ನೇರ ಸೋಂಕಾಗದಿದ್ದರೂ, ಅದನ್ನು ತಯಾರಿಸುವ ಅಥವಾ ತರುವ ವ್ಯಕ್ತಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಸ್ವಚ್ಛತೆಯನ್ನು ಪಾಲಿಸದಿದ್ದರೆ, ಪರೋಕ್ಷ ಸಂಪರ್ಕ ತಡೆಗಟ್ಟಿದರೆ ಉತ್ತಮ.

೬. ದೇಹದಲ್ಲಿ ದಾಹ ಹೆಚ್ಚಾಗು ವಂತಹ ಸೋಯಾ, ಚೈನೀಸ್, ಮೆಣಸಿನಕಾಯಿ, ಹಲಾಪಿನೋ, ಮೆಯೋ ಈ ಪದಾರ್ಥಗಳನ್ನು ತಡೆಗಟ್ಟಿ. ನಿಯಮಿತ ವ್ಯಾಯಾಮ, ಆಹಾರ ಮತ್ತು ನಿದ್ದೆ ಇವು ನಿತ್ಯದ ಪಥ್ಯಗಳಾಗಿವೆ.

೭. ಈ ರೋಗವು ದೇಹದ ಸೋಂಕಿಗೆ ಪ್ರತಿಕ್ರಿಯೆಯಾಗಿರುವುದರಿಂದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ರಸಾಯನ ಸ್ವರೂಪದ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಆರಂಭಿಸಬಹುದು.

ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದಕ್ಕೆ ಪ್ರಾಧಾನ್ಯ ನೀಡಿ !

ಯಾವುದೇ ಲಕ್ಷಣ ಕಂಡು ಬಂದರೂ ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದಕ್ಕೆ ಪ್ರಾಧಾನ್ಯತೆ ನೀಡುವ ವಿಚಾರವನ್ನು ಪ್ರತಿಯೊಬ್ಬರೂ ಮಾಡಬೇಕು. ನೀವು ದೇಹಕ್ಕೆ ಹಾನಿಯಾಗದಂತೆ ಗುಣಪಡಿಸುವ ಔಷಧಿಗಳಿಗೆ ಗಮನ ಹರಿಸಿದಷ್ಟು ನಿಮ್ಮ ದೇಹದ ಒಳಗಿನ ವಾತಾವರಣವೂ ಚೆನ್ನಾಗಿ ಉಳಿಯಬಲ್ಲದು. ಇಷ್ಟು ವರ್ಷ ‘ಜಿ.ಬಿ.ಸಿಂಡ್ರೊಮ್‌’ನ ಕಾರಣಗಳು ಅಸ್ತಿತ್ವದಲ್ಲಿದ್ದರೂ, ನಮ್ಮ ದೇಹದಲ್ಲಿ ಬದಲಾದ ವಾತಾವರಣವು ಅದರ ಪ್ರಸ್ತುತ ಉಲ್ಬಣಕ್ಕೆ ಮುಖ್ಯ ಕಾರಣವಾಗಿದೆ. (ಅದು ಪದೇ ಪದೇ ತೆಗೆದುಕೊಂಡ ‘ಸಿಂಥೆಟಿಕ್’ (ಕೃತಕ) ಔಷಧಿಗಳಿಂದಾಗಲಿ ಅಥವಾ ಹೊಟ್ಟೆಯೊಳಗೆ ಹೋಗುವ ‘ಆರ್ಡರ್’ ಮಾಡಿದ ಡಬ್ಬ ಗಳ ಪ್ಲಾಸ್ಟಿಕ್‌ಗಳಿಂದಾಗಲಿ ಅಥವಾ ನಿರಂತರವಾಗಿ ಸಿಂಪಡಿಸಿದ ಬೆಳೆಗಳಿಂದಾಗಿರಬಹುದು.)

– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ. (೩೦.೧.೨೦೨೫)