ಶಿವಪುರಾಣ, ಮಹಾಶಿವಪುರಾಣ ಇತ್ಯಾದಿ ಗ್ರಂಥಗಳಲ್ಲಿ ಶಿವಲಿಂಗ, ಸಾಲಿಗ್ರಾಮ ಇವುಗಳ ಉಲ್ಲೇಖವಿದೆ. ಶಿವಪುರಾಣದಲ್ಲಿ ೧೬೪ ವಿಧದ ಶಿವಲಿಂಗಗಳು, ಸಾಲಿಗ್ರಾಮ ಹಾಗೂ ಬಾಣಲಿಂಗಗಳ ವರ್ಣನೆಯಿದೆ. ಶಿವಲಿಂಗವೆಂದರೆ ಒಂದು ಯಂತ್ರ ವಾಗಿದೆ. ಅದರಲ್ಲಿ ವಿವಿಧ ಬಣ್ಣಗಳನ್ನು ತರಲಿಕ್ಕಿದ್ದರೆ, ವಿಶಿಷ್ಟ ಪ್ರಕಾರದ ಮಂತ್ರ ಹೇಳಬೇಕಾಗುತ್ತದೆ. ಮಂತ್ರ ಎಂದರೆ ಇದೊಂದು ಶಕ್ತಿಯಾಗಿದೆ. ಪ್ರತಿಯೊಂದು ಶಬ್ದದಲ್ಲಿ ಪ್ರತಿಯೊಂದು ಅಕ್ಷರದಲ್ಲಿ, ಅದರ ಉಚ್ಚಾರದಲ್ಲಿ, ಮಂತ್ರಸಂಖ್ಯೆಯಲ್ಲಿ ಸಾಮರ್ಥ್ಯವನ್ನು ಉತ್ಪನ್ನ ಮಾಡುವ ಶಕ್ತಿಯಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಮಂತ್ರ ಉಚ್ಚರಿಸಿದಾಗ ವಿಶಿಷ್ಟ ಪ್ರಕಾರದ ಊರ್ಜೆ, ಸ್ಪಂದನಗಳು ಉತ್ಪನ್ನವಾಗುತ್ತವೆ, ಎಂಬುದು ಸಿದ್ಧವಾಗಿದೆ ಹಾಗೂ ಅದರಿಂದ ಅಪೇಕ್ಷಿತ ಪರಿಣಾಮಗಳು ಕಂಡುಬರುತ್ತವೆ, ಎಂಬುದು ಅರಿವಾಗಿದೆ. ಇದು ಈ ಶಿವಲಿಂಗದ ಮಹಿಮೆಯಾಗಿದೆ.
ಇಂದು ಕೂಡ ೧೪೨ ಸ್ಥಳಗಳಲ್ಲಿ ಇಂತಹ ವಿವಿಧ ಬಣ್ಣಗಳ ಶಿವಲಿಂಗಗಳಿವೆ. ಕೊಣಾರ್ಕದ ಮಹಾದೇವ ಮಂದಿರದಲ್ಲಿನ ಶಿವಲಿಂಗ ಪ್ರತಿ ೩ ತಿಂಗಳಲ್ಲಿ ಬಣ್ಣ ಬದಲಾಯಿಸುತ್ತದೆ. ಕೆಲವು ಶಿವಲಿಂಗಗಳು ಬಣ್ಣ ಬದಲಾಯಿಸುವುದು ಮಾತ್ರವಲ್ಲ, ಹಾಲು, ನೀರು, ಜೇನು, ಚಿನ್ನ, ಬೆಳ್ಳಿ, ಪಾದರಸ ಈ ಪದಾರ್ಥಗಳನ್ನೂ ಹೊರಗೆ ಹಾಕುತ್ತವೆ.
(ಆಧಾರ : ‘ಪುರುಷಾರ್ಥ’, ಫೆಬ್ರವರಿ ೨೦೦೭)