ಚರ್ಚ್ ನಿಂದ ಹಿಂದೂಗಳಿಗೆ ವಿಧಿ ಮಾಡಲು ಒಪ್ಪಿಗೆ
ತಿರುವನಂತಪುರಂ (ಕೇರಳ) – ಕೇರಳದ ಪಲಯಿನಲ್ಲಿರುವ ಕ್ಯಾಥೋಲಿಕ್ ಚರ್ಚ್‌ನ ಭೂಮಿಯಲ್ಲಿ ಪ್ರಾಚೀನ ಹಿಂದೂ ದೇವಸ್ಥಾನದ ಅವಶೇಷಗಳು ಪತ್ತೆಯಾದ ನಂತರ, ಹಿಂದೂ ಭಕ್ತರಿಗೆ ದೇವರ ಇಚ್ಛೆಯನ್ನು ತಿಳಿದು ಕೊಳ್ಳಲು ದೇವಪ್ರಸನ್ನಂ (ಜ್ಯೋತಿಷ್ಯ ಆಚರಣೆ) ಮಾಡಲು ಚರ್ಚ್ ಅವಕಾಶ ಮಾಡಿಕೊಟ್ಟಿದೆ. ಸ್ಥಳೀಯ ಹಿಂದೂ ಸಂಘಟನೆಗಳು ಮತ್ತು ಚರ್ಚ್‌ಗಳ ಹೇಳಿಕೆ ಪ್ರಕಾರ, ಕಳೆದ ವಾರ ಕೃಷಿಗಾಗಿ 1.8 ಎಕರೆ ಭೂಮಿಯನ್ನು ಅಗೆಯುತ್ತಿದ್ದಾಗ, ಶಿವಲಿಂಗ ಸೇರಿದಂತೆ ದೇವಸ್ಥಾನಗಳ ಅವಶೇಷಗಳು ಪತ್ತೆಯಾಗಿತ್ತು.
ಹಿಂದೂಗಳು ಪಾದ್ರಿಗಳನ್ನು ಸಂಪರ್ಕಿಸಿದರು
ಶ್ರೀ ವನದುರ್ಗಾ ಭಗವತಿ ದೇವಸ್ಥಾನ ಸಮಿತಿಯ ಸದಸ್ಯರಾದ ವಿನೋದ ಕೆ.ಎಸ್. ಮಾತನಾಡಿ, ದೇವಸ್ಥಾನದ ಅವಶೇಷಗಳು ಫೆಬ್ರವರಿ 4, 2025 ರಂದು ಪತ್ತೆಯಾಗಿವೆ; ಆದರೆ ನಮಗೆ 2 ದಿನಗಳ ನಂತರ ತಿಳಿಯಿತು. ಇದಾದ ನಂತರ, ನಾವು ತಕ್ಷಣ ಪಲಾಯಿ ಬಿಷಪ್ ಹೌಸ್‌ನ ಪಾದ್ರಿಗಳನ್ನು ಸಂಪರ್ಕಿಸಿದೆವು. ಅವರು ದೇವಪ್ರಸನ್ನಮ್ ಮಾಡಲು ಒಪ್ಪಿಕೊಂಡರು.
ಚರ್ಚ್‌ನ ಭೂಮಿ ಈ ಹಿಂದೆ ಒಬ್ಬ ಬ್ರಾಹ್ಮಣ ಕುಟುಂಬದ ಒಡೆತನದಲ್ಲಿತ್ತು
‘ಪಲಾಯಿ ಡಾಯೊಸಿಸ್’ನ ಕುಲಪತಿ ಫಾದರ್ ಜೋಸೆಫ್ ಕುಟ್ಟಿಯಾಂಕಲ್ ಮಾತನಾಡಿ, ಚರ್ಚ್ ಸ್ಥಳದಲ್ಲಿ ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ನಾವು ಪಲಾಯಿ ಹಿಂದೂಗಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದೇವೆ ಮತ್ತು ನಾವು ಅವುಗಳನ್ನು ಉಳಿಸಿಕೊಳ್ಳುತ್ತೇವೆ. ನಮ್ಮ ಬಿಶಪ್ (ಹಿರಿಯ ಪಾದ್ರಿಯ) ವ್ಯಾಪ್ತಿಯಲ್ಲಿರುವ ಪ್ರದೇಶವು ಅವರ ಭಾವನೆಗಳನ್ನು ಗೌರವಿಸುತ್ತದೆ. ಹಿರಿಯರು ಈ ಸ್ಥಳದಲ್ಲಿ ದೇವಸ್ಥಾನ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಭೂಮಿ ಹಿಂದೆ ಬ್ರಾಹ್ಮಣ ಕುಟುಂಬದ ಒಡೆತನದಲ್ಲಿತ್ತು. ಸುಮಾರು 100 ವರ್ಷಗಳ ಹಿಂದೆ ಈ ದೇವಾಲಯವು ನಾಶವಾಯಿತು ಮತ್ತು ಈ ಆಸ್ತಿಯು ಅನೇಕ ಜನರ ಕೈಗೆ ಹೋಗಿ ಕೊನೆಗೆ ಪಲಾಯಿ ಡಾಯೊಸಿಸ್ ಬಳಿ ಸೇರಿದೆ’, ಎಂದು ಅಂದಾಜಿಸಲಾಗಿದೆ.