ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳನ್ನು ಮಹರ್ಷಿಗಳು ಮೊದಲೇ ಅರಿತುಕೊಂಡು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಾರೆ, ಅದರ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಬಂದ ಅನುಭವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

’೧೨.೨.೨೦೨೧ ರಂದು ಬ್ರಹ್ಮಮುಹೂರ್ತದಲ್ಲಿ ನನಗೆ ಒಂದು ಕನಸು ಬಿದ್ದಿತು. ಕನಸಿನಲ್ಲಿ ನನಗೆ, ’ಸಾವಿರಾರು ವರ್ಷಗಳ ಹಿಂದಿನ ಒಂದು ದೇವಸ್ಥಾನ ಕಾಣಿಸಿತು. ಆ ದೇವಸ್ಥಾನದಲ್ಲಿ ಅನೇಕ ಕಂಬಗಳಿದ್ದವು. ಆ ಕಂಬಗಳಿಗೆ ಪಾಚಿ ಹಿಡಿದಿರುವುದು ಕಾಣಿಸಿತು. ಯಾರೋ ನನಗೆ ದಿವ್ಯ ಧ್ವನಿಯಲ್ಲಿ, ’ಕಂಬಗಳ ಮೇಲಿನ ಮೂರ್ತಿಗಳನ್ನು ನೋಡು !’ ಎಂದು ಹೇಳಿ ದರು. ನಾನು ಗಮನಕೊಟ್ಟು ಕಂಬಗಳನ್ನು ನೋಡತೊಡಗಿದೆ. ಅವುಗಳಲ್ಲಿನ ಒಂದು ಕಂಬದ ಮೇಲೆ ಮಹಿಷಾಸುರಮರ್ದಿನಿಯ ಮೂರ್ತಿ ಇತ್ತು. ನಡುವಿನ ಕಂಬದ ಮೇಲೆ ಗಡ್ಡವಿರುವ ಓರ್ವ ಋಷಿಗಳ ಮುಖ ಕಾಣಿಸುತ್ತಿತ್ತು ಮತ್ತು ಕೊನೆಯ ಕಂಬದ ಮೇಲೆ ಶ್ರೀ ನರಸಿಂಹನು ಹಿರಣ್ಯಕಶ್ಯಪುವನ್ನು ವಧಿಸುವಾಗಿನ ಮೂರ್ತಿ ಇತ್ತು. ಈ ಮೂರ್ತಿಗಳ ಮುಖಗಳು ಸ್ಪಷ್ಟ ಕಾಣಿಸುತ್ತಿರಲಿಲ್ಲ. ಈ ಮೂರ್ತಿಗಳು ತುಂಬಾ ಸವೆದಿದ್ದವು.’ ಆಗ, ’ಯಾವುದೋ ದಿವ್ಯ ಶಕ್ತಿ ನನ್ನನ್ನು ಕರೆದು ಇವುಗಳನ್ನು ತೋರಿಸಲು ಇಚ್ಛಿಸುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿತು, ಈ ದೇವತೆಗಳು ಸನಾತನದ ಧರ್ಮಕಾರ್ಯದಲ್ಲಿ ಅಸುರರ ವಿರುದ್ಧ ಹೋರಾಡಲು ಸದ್ಯ ಸಹಾಯ ಮಾಡುತ್ತಿದ್ದಾರೆ.’ ಇದೇ ಕಾಲಾವಧಿಯಲ್ಲಿ ಮಹರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರಿಗೆ ’ನರಸಿಂಹಯಾಗ’ವನ್ನು ಮಾಡಲು ಹೇಳಿದ್ದರು ಮತ್ತು ನನಗೆ ಅಹೋಬಿಲಮ್ (ಆಂಧ್ರಪ್ರದೇಶ)ನಲ್ಲಿನ ನವನರಸಿಂಹನ ದರ್ಶನಕ್ಕೆ ಹೋಗಲು ಹೇಳಿದ್ದರು. ’ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲ್ಲಿ ಯಾವ ದೇವತೆಯ ತತ್ತ್ವ ಕಾರ್ಯನಿರತವಾಗಿದೆ ?’, ಎಂಬುದು ಮಹರ್ಷಿಗಳಿಗೆ ಮೊದಲೇ ತಿಳಿಯುತ್ತದೆ ಮತ್ತು ಅದಕ್ಕನುಸಾರ ಅವರು ನಮಗೆ ಆ ರೀತಿ ಉಪಾಸನೆಯನ್ನು ಮಾಡಲು ಹೇಳುತ್ತಾರೆ ಮತ್ತು ನಮಗೆ ಆ ರೀತಿಯ ದೃಷ್ಟಾಂತಗಳೂ ಆಗುತ್ತಿರುತ್ತವೆ. ’ನಿಜ, ಮಹರ್ಷಿಗಳು ನಮಗೆ ಪೂ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಎಷ್ಟೊಂದು ಮಾರ್ಗದರ್ಶನ ಮಾಡುತ್ತಿದ್ದಾರೆ !’, ನನ್ನ ಮನಸ್ಸಿನಲ್ಲಿ ಹೀಗೆ ವಿಚಾರ ಬಂದು ನನಗೆ ಬಹಳ ಕೃತಜ್ಞತೆ ಅನಿಸಿತು.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೧೪.೨.೨೦೨೧, ಸಾಯಂಕಾಲ. ೭.೧೬)