ಕುಂಭಮೇಳದಲ್ಲಿ ೧೪ ದಿನದಲ್ಲಿ ಸನಾತನ ಗ್ರಂಥ ಪ್ರದರ್ಶನಕ್ಕೆ ೨೫ ಸಾವಿರಗಿಂತಲೂ ಹೆಚ್ಚಿನ ಜಿಜ್ಞಾಸುಗಳ ಭೇಟಿ !

ಪ್ರಯಾಗರಾಜ ಕುಂಭಮೇಳ 2025

ಭಾರತದಲ್ಲಿನ ಎಲ್ಲಾ ರಾಜ್ಯಗಳ ಸಹಿತ ವಿದೇಶಿ ನಾಗರೀಕರ ಸಹಭಾಗ !

ಪ್ರಯಾಗರಾಜ, ಫೆಬ್ರುವರಿ ೩,(ಸುದ್ಧಿ.) – ಮಹಾಕುಂಭಮೇಳದಲ್ಲಿ ಸನಾತನದ ಗ್ರಂಥಗಳಿಗೆ ಉತ್ಸಾಹಭರಿತ ಪ್ರತಿಕ್ರಿಯೆ ದೊರೆತಿದೆ. ಹಿಂದೂ ಧರ್ಮದ ಶಿಕ್ಷಣ ಸುಲಭ, ಸರಳ ಮತ್ತು ಶಾಸ್ತ್ರೀಯ ಭಾಷೆಯಲ್ಲಿ ನೀಡುವ ಸನಾತನದ ಗ್ರಂಥ ಸಂಪತ್ತು ಜಿಜ್ಞಾಸುಗಳನ್ನು ಆಕರ್ಷಿತಗೊಳಿಸುತ್ತಿದೆ. ಗ್ರಂಥ ಪ್ರದರ್ಶನ ಆರಂಭವಾದ ನಂತರ ಜನವರಿ ೧೦ ರಿಂದ ಫೆಬ್ರುವರಿ ೨ ಈ ೧೪ ದಿನದ ಕಾಲಾವಧಿಯಲ್ಲಿ ಕುಂಭಮೇಳದಲ್ಲಿನ ಮೋರಿ ಮುಕ್ತಿ ಚೌಕದಲ್ಲಿನ ಸನಾತನ ಗ್ರಂಥ ಪ್ರದರ್ಶನಕ್ಕೆ ೨೫ ಸಾವಿರಗಿಂತಲೂ ಹೆಚ್ಚಿನ ಜನರು ಭೇಟಿ ನೀಡಿದ್ದಾರೆ. ಇದರಲ್ಲಿ ಭಾರತದಲ್ಲಿನ ಎಲ್ಲಾ ರಾಜ್ಯಗಳ ಸಹಿತ ಅಮೆರಿಕ, ಆಸ್ಟ್ರೇಲಿಯ, ನೇಪಾಳ, ಕೆನಡಾ, ಇಂಡೋನೇಷಿಯಾ, ಮಲೇಶಿಯಾ ಈ ದೇಶದಲ್ಲಿನ ನಾಗರೀಕರ ಸಮಾವೇಶವಿದೆ.

ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡುವ ಜಿಜ್ಞಾಸುಗಳು

ಗ್ರಂಥ ಪ್ರದರ್ಶನ ನೋಡಿ ಜಿಜ್ಞಾಸುಗಳು ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ, ಕೆಲವು ಜಿಜ್ಞಾಸುಗಳು ಸ್ವಂತ ಭಾಷೆಯಲ್ಲಿನ ಗ್ರಂಥದ ಎಲ್ಲಾ ಭಾಗಗಳ ಬೇಡಿಕೆ ನೀಡುತ್ತಿದ್ದಾರೆ. ಗ್ರಂಥ ಪ್ರದರ್ಶನಕ್ಕೆ ಭೇಟಿ ನೀಡುವ ಕೆಲವು ಜಿಜ್ಞಾಸುಗಳು ಮತ್ತೆ ಮತ್ತೆ ನೂತನ ಜಿಜ್ಞಾಸುಗಳನ್ನು ಕರೆದುಕೊಂಡು ಗ್ರಂಥ ಪ್ರದರ್ಶನ ಸ್ಥಳಕ್ಕೆ ಬರುತ್ತಿದ್ದಾರೆ. ಕೆಲವು ಜಿಜ್ಞಾಸುಗಳು ಅವರ ರಾಜ್ಯದಲ್ಲಿ ಸನಾತನದ ಗ್ರಂಥ ವಿತರಣೆಗಾಗಿ ಸ್ಥಳ ಉಪಲಬ್ಧ ಮಾಡಿ ಕೊಡುವ ಆಶ್ವಾಸನೆ ನೀಡಿದ್ದಾರೆ ಹಾಗೂ ಕೆಲವು ಜನರು ಸ್ವತಃ ಮತ್ತು ಆಪ್ತರಿಗಾಗಿ ಕೂಡ ಗ್ರಂಥಗಳ ಬೇಡಿಕೆ ನೀಡುತ್ತಿದ್ದಾರೆ. ಅನೇಕರು ಗ್ರಂಥ ತೆಗೆದುಕೊಂಡು ನಂತರ ಇತರ ಗ್ರಂಥದ ಬೇಡಿಕೆಗಾಗಿ ಸನಾತನದ ಜಾಲತಾಣ ಮತ್ತು ಅದಕ್ಕೆ ಸಂಪರ್ಕಿಸಲು ಸಂಪರ್ಕ ಸಂಖ್ಯೆಯನ್ನು ಕೇಳಿ ಪಡೆಯುತ್ತಿದ್ದಾರೆ. ಹಿಂದಿ, ಬಂಗಾಲಿ, ಕನ್ನಡ ಮತ್ತು ಮರಾಠಿ ಭಾಷೆಯಲ್ಲಿನ ಗ್ರಂಥಗಳಿಗೆ ವಿಶೇಷ ಪ್ರತಿಕ್ರಿಯೆ ಲಭಿಸುತ್ತಿದೆ.

ಬಂಗಾಲಿ ನಾಗರಿಕರಿಂದ ಗ್ರಂಥ ಪ್ರದರ್ಶನಕ್ಕೆ ಭೇಟಿ

ಸನಾತನದ ಗ್ರಂಥಗಳು ‘ಆನ್‌ಲೈನ್‌’ನಲ್ಲಿ ಲಭ್ಯ !

ಸನಾತನದ ವಿವಿಧ ೧೭ ಭಾಷೆಯಲ್ಲಿನ ಗ್ರಂಥಗಳು ಮತ್ತು ಸಾತ್ವಿಕ ಉತ್ಪಾದನೆಗಳು https://sanatanshop.com/ ಈ ಜಾಲತಾಣದಲ್ಲಿ ಲಭ್ಯವಿದೆ. ಜಿಜ್ಞಾಸುಗಳು ಗ್ರಂಥ ಮತ್ತು ಸಾತ್ವಿಕ ಉತ್ಪಾದನೆ ಬೇಕಿದ್ದರೆ 9167512161 ಈ ಸಂಖ್ಯೆಗೆ ಸಂಪರ್ಕಿಸಬಹುದು.