ಯಾರ ಆದರ್ಶವನ್ನು ಇಡಬೇಕು ?

ಯುವ ಪೀಳಿಗೆ ಈಗಿನ ನಟ-ನಟಿಯರನ್ನು ‘ಆದರ್ಶ’ವೆಂದು ತಿಳಿದುಕೊಳ್ಳುತ್ತಾರೆ; ಆದರೆ ‘ಇವರು ನಿಜವಾಗಿಯೂಆದರ್ಶ ರಾಗಿರುತ್ತಾರೆಯೇ ?’, ಇದರ ವಿಚಾರವನ್ನು ಮಾಡಬೇಕು. ಈ ಸಂದರ್ಭದಲ್ಲಿನ ಒಂದು ಉದಾಹರಣೆಯನ್ನು ನೋಡೋಣ. ಹಿಂದಿ ಚಲನಿಚಿತ್ರದ ಓರ್ವ ಖ್ಯಾತ ನಟಿಯು ಸಂದರ್ಶನದಲ್ಲಿ ಅವಳಿಗೆ, ”ನೀನು ‘ಬ್ರೆಕಾಪ್‌ (ಗೆಳೆಯನ ಜೊತೆಯಲ್ಲಿನ ಸಂಬಂಧವನ್ನು ಮುರಿಯುವುದು) ಮಾಡಲಿದ್ದಾರೆ ಅದರಿಂದ ಹೇಗೆ ಹೊರಗೆ ಬರುತ್ತಿಯಾ ?” ಎಂಬ ಪ್ರಶ್ನೆಯನ್ನು ಕೇಳ ಲಾಯಿತು. ಆಗ ಆ ನಟಿಯು, ‘ನಾನು ಸ್ವತಃ ಕೋಣೆಯಲ್ಲಿ ಕೂಡಿಹಾಕಿಕೊಂಡು ತುಂಬಾ ಅಳುತ್ತೇನೆ. ಐಸಕ್ರಿಮ್‌ ತಿನ್ನುತ್ತೇನೆ. ನನಗೆ ಏಕಾಂತದಲ್ಲಿ ಅಳಲು ಇಷ್ಟವಾಗುತ್ತದೆ. ಸಂಬಂಧ ಮುರಿದರೂ ಅದರಿಂದ ಆರಾಮದಿಂದ ಹೊರಗೆ ಬರಬೇಕು. ಗಡಿಬಿಡಿ ಮಾಡಬಾರದು”, ಎಂದಳು. ‘ಯಾರಾದರೊಬ್ಬ ಗೆಳೆಯ ಅಥವಾ ಗೆಳತಿಯೊಂದಿಗೆ ಸಂಬಂಧ ನಿರ್ಮಾಣ ಆಗುವುದು ಮತ್ತು ಅದು ಮುರಿಯುವುದು’, ಇದು ಈಗ ಸರ್ವಸಾಮಾನ್ಯ ವಿಷಯವಾಗಿದೆ. ಚಲನಚಿತ್ರದ ನಟ-ನಟಿಯರ ಅನುಕರಣೆಯು ಅನೇಕ ವಿಷಯಗಳಲ್ಲಿ ಆಗುತ್ತದೆ. ಆದ್ದರಿಂದ ಅವಳು ಈ ರೀತಿ ಮಾಡಿದ್ದಾಳೆ ಅಂದರೆ ಯುವಕರಲ್ಲಿ ಈ ವಿಷಯದ ಅನುಕರಣೆಯೂ ಆಗುತ್ತದೆ ? ಏಕೆಂದರೆ ಈ ನಟಿ ಅವರ ‘ಆದರ್ಶ’ವಾಗಿದ್ದಾಳೆ. ಇಂದಿನ ಯುವ ಪೀಳಿಗೆಗೆ ಇಂತಹ ಕಲಾವಿದರ ಬಗ್ಗೆ ಹೆಮ್ಮೆ ಅನಿಸುತ್ತದೆ. ಅವರೂ ಈ ರೀತಿಯ ಸಂಬಂಧವನ್ನು ಮಾಡುತ್ತಾರೆ ಮತ್ತು ನಂತರ ಅದು ಮುರಿದ ನಂತರ ಮೇಲಿನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ; ಏಕೆಂದರೆ ಆದರ್ಶವನ್ನೇ ಅಯೋಗ್ಯ ಸ್ವರೂಪದಲ್ಲಿ ತೆಗೆದುಕೊಂಡಿರುತ್ತಾರೆ. ಚಲನಚಿತ್ರದ ಕಲಾವಿದರು (ಸಿನಿಮಾ ನಟ-ನಟಿಯರು) ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರು ವಾಹನ, ಬಂಗಲೆ, ದುಬಾರಿ ಬಟ್ಟೆಗಳು, ಆಭರಣಗಳು, ಪ್ರಸಿದ್ಧಿ, ಛಾಯಾಚಿತ್ರಗಳು ಸತತವಾಗಿ ಈ ವಿಶ್ವದಲ್ಲಿಯೇ ಇರುತ್ತಾರೆ. ಅವರಿಗೆ ಎಲ್ಲ ಸುಖಸೌಕರ್ಯಗಳು ಸಿಕ್ಕಿರುತ್ತವೆ. ತಮಗೆ ಬೇಕಾದಾಗ ಸಂಬಂಧವನ್ನು ನಿರ್ಮಾಣ ಮಾಡುತ್ತಾರೆ ಮತ್ತು ಬೇಡವೆನಿಸಿದಾಗ ಅದರಿಂದ ಹೊರಗೆ ಬರುತ್ತಾರೆ, ಈ ರೀತಿ ಅವರ ಪಾಶ್ಚಾತ್ತೀಕರಣವಾಗಿರುತ್ತದೆ.

ಯಾವುದಾದರೊಂದು ಸಂಬಂಧ ನಿರ್ಮಾಣವಾದಾಗ ಅದನ್ನು ಜೀವನವಿಡಿ ಉಳಿಸಲು ಮಾಡಿದ ಪರಿಶ್ರಮ, ಅದಕ್ಕಾಗಿ ಮಾಡಿದ ಎಲ್ಲ ರೀತಿಯ ತ್ಯಾಗ, ತನ್ನ ನೈತಿಕ ಜವಾಬ್ದಾರಿ, ಕರ್ತವ್ಯ ಇವುಗಳ ಅರಿವು ಇದ್ದರೆ ಮಾತ್ರ ಸಂಬಂಧ ಮುರಿಯುವ ಸಾಧ್ಯತೆ ಇರುವುದಿಲ್ಲ. ‘ಸಂಬಂಧವನ್ನು ಮುರಿಯದೇ ತ್ಯಾಗದ ಮತ್ತು ಪ್ರೀತಿಯ ಅರಿವನ್ನಿಟ್ಟುಕೊಂಡು ಹೊಂದಿಕೊಳ್ಳುವುದಿರುತ್ತದೆ’, ಈ ಸಂಸ್ಕಾರಗಳನ್ನು ಯುವಕರ ಮೇಲೆ ಮಾಡಲು ಸದ್ಯ ಯಾರೂ ಇಲ್ಲ. ನಟ-ನಟಿಯರ ಜಗತ್ತಿಗೆ ಆದರ್ಶವೆಂದು ನಂಬಿ ಆಯುಷ್ಯದ ಹಾನಿಯನ್ನು ಮಾಡಿಕೊಳ್ಳುವ ಬದಲು ಜೀವನದ ವಾಸ್ತವವನ್ನು ಅರಿತುಕೊಳ್ಳಬೇಕು. ಜೀವನದ ಮೌಲ್ಯವನ್ನು ಅರಿತು ಯೋಗ್ಯ ಸಂಸ್ಕಾರಗಳ ಆದರ್ಶವನ್ನು ಎದುರಿಗೆ ಇಟ್ಟುಕೊಳ್ಳಬೇಕು. ಯಾರ ಆದರ್ಶವನ್ನು ತೆಗೆದುಕೊಳ್ಳಬೇಕು ? ಸೋಲು ಮತ್ತು ನಕಾರಾತ್ಮಕ ಮಾನಸಿಕತೆಗೆ ಹೋಗುವವರದ್ದೋ ಅಥವಾ ಸಕಾರಾತ್ಮಕವಾಗಿದ್ದು ಜೀವನದ ಯಶಸ್ಸು ಶಿಖರವನ್ನು ತಲುಪುವವರದ್ದೋ ? ದೇಶದೊಂದಿಗೆ ಯಾವ ಸಂಬಂಧವಿಲ್ಲದವರದ್ದೋ ಅಥವಾ ನಿಜವಾಗಿಯೂ ರಾಷ್ಟ್ರದ ಏಳಿಗೆಗಾಗಿ ಪ್ರಯತ್ನಿಸುವವರದ್ದೋ ?

ನಮ್ಮ ದೇಶದಲ್ಲಿ ಋಷಿಮುನಿಗಳು, ಸಂತರು, ಕ್ರಾಂತಿಕಾರರು, ರಾಷ್ಟ್ರಪುರುಷರು, ವಿದ್ವಾಂಸರು, ತತ್ತ್ವಜ್ಞಾನಿಗಳು, ಸೈನಿಕರು ಇವರೆಲ್ಲರ ಭವ್ಯ ಪರಂಪರೆ ಇದೆ. ಯುವಕರು ಇವರಲ್ಲಿನ ಯಾರಾದರೊಬ್ಬರ ಆದರ್ಶವನ್ನು ತೆಗೆದುಕೊಂಡರೆ ಜೀವನ ಸಾರ್ಥಕವಾಗಬಹುದು !

– ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ದೇವದ, ಪನವೇಲ.