|
ಮುಂಬಯಿ – ಜನವರಿ 29 ರಂದು ಮುಂಬಯಿ ಹೈಕೋರ್ಟ್ ಕಾ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 6 ಜನರಿಗೆ ಜಾಮೀನು ನೀಡಿದೆ. ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳು ಈ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿವೆ. ‘ಹಿಂದೂ ಭಯೋತ್ಪಾದನೆ’ಯ ‘ಸಿದ್ಧಾಂತ’ವನ್ನು ಸಾಬೀತುಪಡಿಸಲು ‘ನಕಲಿ ನಿರೂಪಣೆ’ಯನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಯಿತು ಮತ್ತು ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಪ್ರಗತಿ ಪರರ ಹತ್ಯೆಗಳಲ್ಲಿ ಸಿಲುಕಿಸಲಾಯಿತು. ಈ ಪ್ರಕರಣದಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರಿಗೆ ಜಾಮೀನು ಸಿಗದಂತೆ ತಡೆಯಲು ಪನ್ಸಾರೆ ಕುಟುಂಬ ಮತ್ತು ಇತರ ಪ್ರಗತಿಪರರು ಸಾಕಷ್ಟು ಪ್ರಯತ್ನ ಮಾಡಿದ್ದರು. ಅವರು ಮಾಧ್ಯಮಗಳಿಗೆ ದಾರಿತಪ್ಪಿಸುವ ನಿಲುವನ್ನು ಮಂಡಿಸುವ ಮೂಲಕ ನ್ಯಾಯಾಲಯ ಮತ್ತು ಪೊಲೀಸರ ಮೇಲೆ ಒತ್ತಡ ಹೇರಲು ಹಾಗೂ ಪ್ರಕರಣವನ್ನು ವಿಳಂಬಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಈ ಪ್ರಕರಣದಲ್ಲಿ ಪನ್ಸಾರೆ ಕುಟುಂಬ ಮತ್ತು ಪ್ರಗತಿಪರರು ಕೊಲ್ಲಾಪುರದಲ್ಲಿ ಬಳಸುತ್ತಿರುವ ಒತ್ತಡ ತಂತ್ರಗಳನ್ನು ಪರಿಗಣಿಸಿದರೆ, ಈ ಪ್ರಕರಣದ ವಿಚಾರಣೆ ಕೊಲ್ಲಾಪುರದಲ್ಲಿ ಮುಂದುವರಿದರೆ, ನ್ಯಾಯ ಪಡೆಯುವಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ನಮಗೆ ಅನಿಸುತ್ತಿದೆ. ಆದ್ದರಿಂದ, ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆಯನ್ನು ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ, ಕೊಲ್ಹಾಪುರದಲ್ಲಿ ನಡೆಸುವ ಬದಲು ಮೂರನೇ ಸ್ಥಾನದಲ್ಲಿ ನಡೆಸಬೇಕೆಂದು ನಾವು ನ್ಯಾಯಾಲಯವನ್ನು ವಿನಂತಿಸುತ್ತಿದ್ದೇವೆ, ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಇವರು ಮಂಡಿಸಿದರು.
Govind Pansare Murder Case: We welcome the decision of Bombay High Court granting bail to 6 individuals in the case
– @AbhayVartak Spokesperson, @SanatanSansthaKey Points:
Demand to transfer the case to a neutral location outside Kolhapur for a fair trialPansare family and… pic.twitter.com/OTr7BxbXkS
— Sanatan Prabhat (@SanatanPrabhat) January 29, 2025
‘ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ಭಯೋತ್ಪಾದನಾ ಪ್ರಕರಣದಲ್ಲಿ ವಕೀಲರನ್ನು ನೀಡಲಾಗುತ್ತದೆ; ಆದರೆ, ಪ್ರಗತಿಪರರು ಬಡ ಕುಟುಂಬಗಳ ಹಿಂದೂ ಮಕ್ಕಳಿಗೆ ವಕೀಲರ ಸಹಾಯ ನೀಡದೆ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಪ್ರಯತ್ನಿಸುತ್ತಿದ್ದರು. ಒಂದೆಡೆ, ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದ ಪನ್ಸಾರೆ ಕುಟುಂಬವು, “ಈ ಪ್ರಕರಣವನ್ನು ಮುಂದುವರಿಸಬೇಡಿ” ಎಂದು ಮುಂಬಯಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣವನ್ನು ವಿಳಂಬ ಮಾಡುತ್ತಿತ್ತು; ಆದರೆ ಇಂದು, ಈ ಎಲ್ಲಾ ಹಿಂದುತ್ವನಿಷ್ಠರಿಗೆ 6 ವರ್ಷಗಳ ನಂತರ ಜಾಮೀನು ದೊರೆತಿದೆ, ಇದಕ್ಕಾಗಿ ನಾವು ಈಶ್ವರನಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ,” ಎಂದು ಶ್ರೀ. ಅಭಯ ವರ್ತಕ್ ಹೇಳಿದರು.
ನ್ಯಾಯ ಸಿಕ್ಕಿದೆ ಅಂತ ನನಗನ್ನಿಸುವುದಿಲ್ಲ ! – ವಕೀಲ ಸಿದ್ಧವಿದ್ಯಾ, ಮುಂಬಯಿ ಹೈಕೋರ್ಟ್
ಗೌರವಾನ್ವಿತ ಮುಂಬಯಿ ಹೈಕೋರ್ಟ್ ಕಾ. ಪನ್ಸಾರೆ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳಿಗೆ ಜಾಮೀನು ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ; ಆದರೆ ಈ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ; ಏಕೆಂದರೆ 6 ವರ್ಷಗಳ ಕಾಲ ಜೈಲಿನಲ್ಲಿದ್ದವರು ನಾಳೆ ನಿರಪರಾಧಿಗಳು ಎಂದು ಸಾಬೀತಾದರೆ, ಅವರಿಗೆ ಅವರ 6 ವರ್ಷಗಳನ್ನು ಯಾರು ಹಿಂದಿರುಗಿಸುತ್ತಾರೆ ? ಅದು ಅಪರಾಧಿಯೋ ಅಥವಾ ನಿರಪರಾಧಿಯೋ ಎಂಬುದನ್ನು ನಂತರ ನಿರ್ಧರಿಸಲಾಗುತ್ತದೆ; ಆದರೆ ತ್ವರಿತ ನ್ಯಾಯ ಪಡೆಯುವ ಅವರ ಹಕ್ಕಿನ ಬಗ್ಗೆ ಏನು ? ಈ ಇಡೀ ಪ್ರಕರಣವನ್ನು 1 ವರ್ಷದೊಳಗೆ ಪೂರ್ಣಗೊಳಿಸಬಹುದಿತ್ತು ಮತ್ತು ಬೇಗ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಈ ವಿಷಯ ಹೇಗೆ ವಿಳಂಬವಾಗುತ್ತದೆ ಎಂದು ನೋಡಲಾಯಿತು. ಸುಳ್ಳು ನಿರೂಪಣೆಗಳ ಆಟ ನಡೆಯುತ್ತಿದೆ. ಈ ದೇಶದಲ್ಲಿ ಅನೇಕ ಕೊಲೆಗಳು ನಡೆಯುತ್ತಿವೆ; ಆದರೆ ಈ ಕೊಲೆ ಪ್ರಕರಣವನ್ನು ವಿಶೇಷ ಪ್ರಾಮುಖ್ಯತೆಯಿಂದ ನಿರ್ವಹಿಸಲಾಗಿದೆ. “ಈ ಕೊಲೆ ಪ್ರಕರಣದ ಬಂದೂಕನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸ್ಕಾಟ್ಲೆಂಡ್‌ಗೆ ಕಳುಹಿಸಬೇಕಾಗಿದೆ” ಎಂದು ರಾಜ್ಯವು ಹೇಳಿದ ಯಾವುದೇ ಪ್ರಕರಣವನ್ನು ನಾನು ಎಂದಿಗೂ ನೋಡಿಲ್ಲ ಮತ್ತು ಇದರ ಆಧಾರದ ಮೇಲೆ, ಪ್ರಕರಣವನ್ನು 5 ವರ್ಷಗಳ ಕಾಲ ವಿಳಂಬ ಮಾಡಲಾಯಿತು ಮತ್ತು ಅಂತಿಮವಾಗಿ ಅದನ್ನು ಕಳುಹಿಸದಿರಲು ನಿರ್ಧರಿಸಲಾಯಿತು. ಶಂಕಿತನು ಇಷ್ಟು ದಿನಗಳ ಕಾಲ ಜೈಲಿನಲ್ಲಿದ್ದರೂ, 250 ಕ್ಕೂ ಹೆಚ್ಚು ಸಾಕ್ಷಿಗಳಲ್ಲಿ, ಕೇವಲ 25 ಜನರು ಮಾತ್ರ ಸಾಕ್ಷ್ಯ ನುಡಿದರು. ವಿಚಾರಣೆ ಈ ವೇಗದಲ್ಲಿ ನಡೆದಿದ್ದರೆ, ಅದು ಇನ್ನೂ 18 ವರ್ಷಗಳ ಕಾಲ ಎಳೆಯುತ್ತಿತ್ತು. ಈ ಜನರಲ್ಲಿ ಕೆಲವರು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ; ಆದರೆ ಅವರಿಗೆ ಹೊರಗೆ ಬರಲು ಅವಕಾಶ ನೀಡಲಿಲ್ಲ. ಹಾಗಾಗಿ ನಾನು ಇದನ್ನು ನ್ಯಾಯಯುತವೆಂದು ಪರಿಗಣಿಸುವುದಿಲ್ಲ. ನ್ಯಾಯ ಸಿಗಲು ಸಮಯ ಹಿಡಿಯಿತು ಮತ್ತು ನ್ಯಾಯ ನಿರಾಕರಿಸಲ್ಪಟ್ಟಿತು. ಪ್ರಕರಣವು ತ್ವರಿತವಾಗಿ ನಡೆದು ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ !’, ಎಂದು ಹೇಳಿದರು.