೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆÉ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆ ಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ. ೨೫/೩೦ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ. (ಭಾಗ ೫)
೧೩. ಪ್ರಸಂಗ – ‘ನಾನು ತುಂಬಾ ಪ್ರಯತ್ನ ಪಟ್ಟೆ; ಆದರೆ ನನ್ನ ಪ್ರಗತಿಯಾಗದಿರಲು ಪರಿಸ್ಥಿತಿಯೇ ಕಾರಣವಾಗಿದೆ’, ಎಂಬ ವಿಚಾರ
೧೩ ಅ. ದೃಷ್ಟಿಕೋನ
೧. ‘ಪ್ರಗತಿಯ ಬಗ್ಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಭಾಗ, ಹಾಗೆಯೇ ಹಲವಾರು ಕಾರಣಗಳಿರುವ ಸಾಧ್ಯತೆ ಇದೆ.
೨. ಇತರ ವ್ಯಕ್ತಿಗಳಿಂದ ನಮ್ಮ ಸಾಧನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
೩. ತಿಳಿದುಕೊಳ್ಳಲು ಎಲ್ಲಿ ಕಡಿಮೆ ಬಿದ್ದೆನು ? ವ್ಯಷ್ಟಿ ಮಟ್ಟದಲ್ಲಿ ಎಲ್ಲಿ ಕಡಿಮೆ ಬಿದ್ದೆನು ? ಫಲನಿಷ್ಪತ್ತಿಯ ಪರಿಕಲ್ಪನೆಯ ಬಗ್ಗೆ ಪರಿಗಣಿಸಲಾಯಿತೇ ? ಪ್ರಗತಿಯು ಬಾಹ್ಯವಾಗಿ ಮಾಡಿದ ಕೃತಿಗಳಿಗಿಂತ ಆಂತರಿಕ ಪ್ರಕ್ರಿಯೆ ಮೇಲೆ ಹೆಚ್ಚು ಅವಲಂಬಿಸಿದೆ.
೪. ‘ನಮ್ಮ ಸೇವೆ ಎಷ್ಟು ಗಂಟೆ ಆಯಿತು, ಎನ್ನುವುದಕ್ಕಿಂತ ಸೇವೆಯ ಅವಧಿಯಲ್ಲಿ ನನ್ನ ಸ್ವಭಾವದೋಷ ಮತ್ತು ಅಹಂ ಎಷ್ಟು ಕಾರ್ಯನಿರತವಾಗಿತ್ತು ?’, ಎಂಬ ಆತ್ಮಚಿಂತನೆ ಹೆಚ್ಚಾಗಬೇಕು.
೫. ವಿಕಲ್ಪವು ಅಧೋಗತಿಗೆ ಕಾರಣವಾಗುತ್ತದೆ. ವಿಕಲ್ಪ ಬಂದಾಗ, ‘ಈಶ್ವರನು ನಿರೀಕ್ಷಿಸಿದಂತೆ ನನ್ನಿಂದ ಪ್ರಯತ್ನಗಳಾಗಬೇಕು’, ಎಂಬ ಸೆಳೆತ ಹೆಚ್ಚಬೇಕು. ಅದಕ್ಕಾಗಿ ‘ಇಡೀ ವರ್ಷ ಎಲ್ಲಿ ಕಡಿಮೆ ಬಿದ್ದೆನು ?’,
ಇದನ್ನು ಆಂತರಿಕ ಮಟ್ಟದಲ್ಲಿ ಮೊದಲು ತೆಗೆದಿಡಬೇಕು.
೬. ಸಾಧನೆಯ ಪ್ರಯತ್ನಗಳು ನಿರಂತರವಾಗಿರಬೇಕಾದರೆ ನಮ್ಮಲ್ಲಿನ ಕೊರತೆಗಳು ಸ್ಪಷ್ಟವಾಗಿರಬೇಕು.ಸುಮ್ಮನೆ ದುಃಖಪಡುತ್ತ ಕೂಡುವುದಕ್ಕಿಂತ ನಮ್ಮ ಮನಸ್ಸಿಗೆ ಅರಿವು ಮಾಡಿಕೊಟ್ಟು ಅದಕ್ಕೆ ಮುಂದೆ ಮಾಡಬೇಕಾದ ಪ್ರಯತ್ನಗಳಿಗೆ ಚಾಲನೆ ನೀಡಬೇಕು. ಸ್ವಂತದ ತಪ್ಪುಗಳ ಬಗ್ಗೆ ಪ್ರತಿಯೊಂದು ಕಡೆ ಅರಿವಾಗಬೇಕು ಮತ್ತು ಅವುಗಳ ಸ್ವೀಕಾರ ಮಾಡಬೇಕು. ಇದು ತಿಳಿದರೆ ಬೇಗನೆ ಬದಲಾವಣೆಯಾಗುತ್ತದೆ.
೭. ನಮ್ಮೊಳಗಿನ ಕೊರತೆಗಳಿಂದ ಕಲಿಯಲು ಪ್ರಯತ್ನಿಸಬೇಕು. ‘ವಿಕಲ್ಪ (ಸಮಷ್ಟಿಯಿಂದ ನನ್ನ ಪ್ರಗತಿಯಾಗಲಿಲ್ಲ) ಏಕೆ ಬರುತ್ತದೆ ?’, ಇದರ ಬಗ್ಗೆ ಯೋಚಿಸಿ ಬರೆದಿಡಬೇಕು. ‘ನಮ್ಮ ಮನಸ್ಸಿನ ಮೇಲೆ ಏನು ಪರಿಣಾಮ ಬೀರಿದೆ’, ಇದನ್ನು ಹುಡುಕಬೇಕು.
೧೪. ಪ್ರಸಂಗ – ಸಮರ್ಪಣೆಯ ಭಾವ
೧೪ ಅ. ದೃಷ್ಟಿಕೋನ
೧. ದೇವರ ಕೃಪೆಯಿಂದ ನನಗೆ ಸೇವೆ ಸಿಕ್ಕಿದೆ.
೨. ನನಗೆ ಸಿಕ್ಕಿದ ಸೇವೆ ಇದು ಈಶ್ವರನಿಗೆ ಅಪೇಕ್ಷಿತವಾಗಿದೆ.
೩. ಸೇವೆಯಿಂದÀ ಈಶ್ವರನು ನನ್ನ ಉದ್ಧಾರವೇ ಮಾಡುತ್ತಿರುತ್ತಾನೆ.
೪. ಶರಣಾಗತಿ ಇದ್ದರೆ ಸಾಧನೆಯ ಪ್ರಯತ್ನಗಳಲ್ಲಿ ಈಶ್ವರನ ಚೈತನ್ಯ ದೊರಕಿ ಮನಸ್ಸಿನ ಅಂತರ್ಮುಖತೆ ಹೆಚ್ಚುತ್ತದೆ.
೫. ಸಾಧನೆ ಎಂದರೆ ನಿರಂತರವಾಗಿರುವುದು. ಸಾಧನೆಯಲ್ಲಿನ ತಪ್ಪುಗಳೆಂದರೆ ಕಡಿಮೆ ಭಾವ ಮತ್ತು ಈಶ್ವರನೊಂದಿಗಿನ ಅನುಸಂಧಾನ ಇರಲಿಲ್ಲ, ಎಂದು ಅರ್ಥವಾಗುತ್ತದೆ.
೬. ಕೊನೆಯುಸಿರಿನ ತನಕ ಗುರುಚರಣಗಳೊಂದಿಗೆ ಲೀನವಾಗುವ ಯೋಚನೆ ಮಾಡುವುದು ಮತ್ತು ಪ್ರಯತ್ನದಲ್ಲಿ ತೊಡಗಿರುವುದು.
೭. ತತ್ತ್ವನಿಷ್ಠರಾಗಿ ಪ್ರಯತ್ನಿಸಿದÀರೆ ಫಲನಿಷ್ಪತ್ತಿ ದೊರಕುತ್ತದೆ.
೮. ಕೃತಜ್ಞತಾಭಾವ ಮತ್ತು ಶರಣಾಗತಿಯನ್ನು ಹೆಚ್ಚಿಸಿದಾಗ ಈಶ್ವರನ ಚೈತನ್ಯ ದೊರೆತು ಮುಂದಿನ ಪ್ರಕ್ರಿಯೆಯಾಗುತ್ತದೆ.
೯. ಈಶ್ವರನೇ ಎಲ್ಲವೂ ಮಾಡುತ್ತಿರುತ್ತಾನೆ. ಅದನ್ನು ನೋಡಿ ಅನುಭವಿಸಬೇಕು. ಕೇವಲ ದೈಹಿಕವಾಗಿ ಸೇವೆ ಮಾಡಿದರೆ ಅದರಿಂದ ಸಮರ್ಪಿತಭಾವ ಆಗದು.
೧೦. ‘ನಾನು ಏನು ಮಾಡಿದೆ ಎನ್ನುವುದಕ್ಕಿಂತ ಈಶ್ವರನು ನನಗಾಗಿ ಏನೇನು ಮಾಡಿದನು ? ನನಗೆ ಏನೇನು ಕಲಿಸಿದನು’, ಎಂಬ ಅರಿವು ಇದ್ದರೆ ಸತತವಾಗಿ ಕೃತಜ್ಞತಾಭಾವದಲ್ಲಿರಬಹುದು.
೧೧. ಸತತವಾಗಿ ಸೇವಕನ ಪಾತ್ರದಯಲ್ಲಿಯೇ ಇರಬೇಕು
೧೨. ಈಶ್ವರನು ಸಾಮರ್ಥ್ಯಶಾಲಿಯಾಗಿದ್ದಾನೆ. ಅವನ ಕಾರ್ಯನಿರತವಾದ ಶಕ್ತಿಯು ನಮಗಾಗಿ ಏನೇನು ಮಾಡುತ್ತದೆ ?
ಇದರ ಕಡೆಗೆ ಸತತ ಗಮನವಿಟ್ಟು ಶರಣಾಗತಿಯನ್ನು ಹೆಚ್ಚಿಸಬೇಕು.
೧೩. ನಮ್ಮಲ್ಲಿ ಎಷ್ಟು ಭಕ್ತಿ ಇದೆ, ಅದಕ್ಕನುಗುಣವಾಗಿ ಈಶ್ವರನ ಸಹಾಯ ದೊರಕುತ್ತಿರುತ್ತದೆ.
೧೪. ‘ಅಹಂ ನಷ್ಟವಾಗಲು ಈಶ್ವರನು ಪ್ರಸಂಗವನ್ನು ನಿರ್ಮಿಸುತ್ತಾನೆ, ಇದಕ್ಕಿಂತ ನಮ್ಮೊಳಗೆ ಗುಣ ನಿರ್ಮಾಣವಾಗಲೆಂದೇ ಪ್ರಸಂಗ ತಂದಿಡುತ್ತಾನೆ’, ಎಂಬ ಯೋಚನೆ ಹೆಚ್ಚು ಸೂಕ್ತವಾಗಿದೆ.
೧೫. ಈಶ್ವರನೊಂದಿಗಿನ ಅನುಸಂಧಾನವು ಹೆಚ್ಚಾದ ನಂತರ ಉತ್ಸಾಹ, ಚೈತನ್ಯ ಹೆಚ್ಚುತ್ತದೆ ಮತ್ತು ಅದರಿಂದ ವೇಗ ಬರುತ್ತದೆ.
೧೬. ಉತ್ಸಾಹವನ್ನು ಹೆಚ್ಚಿಸಲು ದಿನವಿಡೀ ೫ ಸಲ ಆತ್ಮನಿವೇದನೆ ಮಾಡಬೇಕು. ಪ್ರತಿಯೊಂದು ಕೃತಿಗೆ ಭಾವ ಜೋಡಿಸಬೇಕು.
೧೭. ಸೇವೆಯಿಂದ ಅನುಭೂತಿ ಬರುತ್ತದೆ, ಅದರೊಟ್ಟಿಗೆ ಈಶ್ವರನ ಗುಣ ಮತ್ತು ಚೈತನ್ಯ ಪಡೆಯಲು ಪ್ರಯತ್ನ ಮಾಡಬೇಕು.
೧೮. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಎಲ್ಲ ದೇಹಗಳ ಶುದ್ಧಿಯಾಗಿದೆ.
೧೯. ಕಲಿಯುವ ಸ್ಥಿತಿಯಲ್ಲಿರಲು ಕನಿಷ್ಠ ೧೦೦ ಸಲ ಪ್ರಾರ್ಥನೆ ಮಾಡಬೇಕು.
೨೦. ಸಹಸಾಧಕರು ಎಂದರೆ ಗುರುದೇವರು ನಮ್ಮ ಸಮಷ್ಟಿ ಸಾಧನೆ ಆಗಬೇಕೆಂದು ನೀಡಿದ ಸಹಾಯವಿದೆ. ಅದಕ್ಕಾಗಿ ಅವÀರ ಬಗ್ಗೆ ಶುದ್ಧಭಾವ ಇರಬೇಕು.
೨೧. ಮನಸ್ಸು ಅಸ್ವಸ್ಥವಾಗಿದ್ದರೆ ಸಮರ್ಪಣೆಯಾಗುವುದು ಕಷ್ಟ. ಸೇವೆಯಲ್ಲಿ ಮನಸ್ಸು ಶುದ್ಧವಾಗಿರಬೇಕು. ಮನಸ್ಸಿನಿಂದ ನಾವು ಪೂರ್ಣ ಸಮಯ ನೀಡಿದ್ದೇವೆಯೇ ?
೨೨. ಶರೀರದೊಂದಿಗೆ ಮನಸ್ಸು ಕೂಡ ಈಶ್ವರನು ನಿರೀಕ್ಷಿಸಿದಂತೆ ಶುದ್ಧವಾಗಿರುವುದೇ ?
೨೩. ಗುರುಕಾರ್ಯವನ್ನು ಮಾಡಿ ನಮ್ಮನ್ನು ಉದ್ಧರಿಸಿಕೊಳ್ಳಬೇಕು.’
– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು ಸೇವಾಕೇಂದ್ರ, ಮಂಗಳೂರು. (೧೩.೭.೨೦೧೯)