ಮೈಸೂರಿನ ಸಾಧಕಿ ಶ್ರೀಮತಿ ನಳಿನಿ ಶ್ರೀನಿವಾಸನ್ ಇವರು ದಿನಾಂಕ ೧೪ ಅಕ್ಟೋಬರನಂದು ಜನ್ಮಮೃತ್ಯುವಿನ ಚಕ್ರ ದಿಂದ ಬಿಡುಗಡೆ ಹೊಂದಿದರು. ಅವರ ಸಾಧನೆ ಹಾಗೂ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡುತ್ತಿದ್ದೇವೆ
೧. ಪ್ರೀತಿ : ಅಕ್ಕನವರ ಮನೆಗೆ ಹೋದನಂತರ ಅವರು ಸಾಧಕರಿಗೆ ತಿನಿಸು ಕೊಡುತ್ತಾರೆ. ಮೈಸೂರು ಜಿಲ್ಲೆಯಲ್ಲಿನ ಸಂತರ ಪ್ರವಾಸದ ಸಮಯದಲ್ಲಿ ನಾವು ಅವರ ಮನೆಗೆ ಹೋಗಿದ್ದೆವು. ಆಗ ಅಕ್ಕನವರ ಆರೋಗ್ಯ ಸರಿಯಿಲ್ಲದಿದ್ದರೂ, ಅವರು ನಮಗೆಲ್ಲರಿಗೂ ಭೋಜನವನ್ನು ತಯಾರಿಸಿದರು.
೨. ತಳಮಳ : ಅವರಿಗೆ ಯಾವುದಾದರೊಂದು ಸೇವೆ ಬರ ದಿದ್ದರೆ, ಸಾಧಕರ ಸಹಾಯದಿಂದ ಸೇವೆ ಮಾಡಲು ಪ್ರಯತ್ನಿಸುತ್ತಾರೆ.
೩. ತಮ್ಮನ್ನು ಬದಲಾಯಿಸುವ ತಳಮಳ : ಅಕ್ಕನವರಿಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಅವರು ಮನೆಯಲ್ಲಿದ್ದು ಸಂಚಾರವಾಣಿಯಿಂದ ‘ಆನ್‌ಲೈನ್’ ಸತ್ಸಂಗವನ್ನು ಕೇಳುತ್ತಾರೆ. ಅವರು ಸತ್ಸಂಗದಲ್ಲಿ ಹೇಳಿದ ಅಂಶಗಳನ್ನು ಬರೆದಿಡುತ್ತಾರೆ. ಅದರನುಸಾರ ತನ್ನಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸುತ್ತಾರೆ.
೪. ಭಾವ : ಅವರು ಯಾವಾಗಲೂ, ”ಗುರುದೇವರು ನನ್ನನ್ನು ಬದುಕಿಸಿದ್ದಾರೆ. ಗುರುಗಳ ಕೃಪೆಯಿಂದ ನಾನು ಸೇವೆಯನ್ನು ಮಾಡುತ್ತಿದ್ದೇನೆ” ಎಂದು ಹೇಳುತ್ತಿರುತ್ತಾರೆ. ಆಗ ಅವರ ಭಾವಜಾಗೃತಿಯಾಗುತ್ತದೆ.
– ಕು. ರೇವತಿ ಮೊಗೆರ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೩೨ ವರ್ಷ), ಬೆಂಗಳೂರು.