ಮಧ್ಯಂತರ ಸರಕಾರದ ಪ್ರಮುಖ ಸಲಹೆಗಾರ ಮಹಮ್ಮದ್ ಯುನೂಸ್ ಇವರಿಂದ ಮಾಹಿತಿ
ಢಾಕಾ (ಬಾಂಗ್ಲಾದೇಶ) – ಸಾರ್ವತ್ರಿಕ ಚುನಾವಣೆಯ ದಿನಾಂಕ ೨೦೨೫ ರ ಕೊನೆಗೆ ಅಥವಾ ೨೦೨೬ ಪೂರ್ವಾರ್ಧದಲ್ಲಿ ನಿಶ್ಚಯಿಸಲಾಗುವ ಸಾಧ್ಯತೆ ಇದೆ. ಚುನಾವಣೆಯ ಮೊದಲು ಕೆಲವು ಮಹತ್ವದ ಸುಧಾರಣೆ ಮಾಡಬೇಕೆಂದು ನನ್ನ ಯಾವಾಗಲೂ ಆಗ್ರಹ ಇರುತ್ತದೆ. ರಾಜಕೀಯ ಪಕ್ಷಗಳು ಕೆಲವು ಅವಶ್ಯಕ ಸುಧಾರಣೆಯ ಕುರಿತು ಸಹಮತಿ ತೋರಿಸಿದರೆ, ೨೦೨೫ ರ ನವೆಂಬರ ಕೊನೆಗೆ ಚುನಾವಣೆ ನಡೆಯಬಹುದು, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ಸಲಹೆಗಾರ ಮಹಮ್ಮದ್ ಯುನೂಸ್ ಇವರು ಮಾಹಿತಿ ನೀಡಿದರು. ಡಿಸೆಂಬರ್ ೧೬ ರಂದು ಬಾಂಗ್ಲಾದೇಶದ ೫೩ ನೆ ಸ್ವಾತಂತ್ರ್ ದಿನವಾಗಿದೆ. ಇದರ ಪ್ರಯುಕ್ತ ಯುನೂಸ್ ಇವರು ರಾಜಧಾನಿ ಢಾಕಾ ಇಲ್ಲಿಯ ರಾಷ್ಟ್ರೀಯ ಸ್ಮಾರಕಕ್ಕೆ ಹೋಗಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ೧೯೭೧ ರಲ್ಲಿ ಭಾರತದ ಸಹಾಯದಿಂದ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ದೊರೆತಿದ್ದು.
೧. ಮಹಮ್ಮದ್ ಯುನೂಸ್ ಇವರು, ಕಳೆದ ೧೫ ವರ್ಷದಲ್ಲಿ ಮತದಾನಕ್ಕಾಗಿ ಯೋಗ್ಯವಾದಂತಹ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವ ನಿರ್ಣಯ ತೆಗೆದುಕೊಳ್ಳುವರು. ವಿದ್ಯಾರ್ಥಿಗಳ ಬಂಡಾಯದ ನಂತರ ಅನೇಕ ಯುವಕರು ದೊಡ್ಡ ಕಾಲಾವಧಿಯ ನಂತರ ಮೊದಲ ಬಾರಿಗೆ ಮತದಾನ ಮಾಡುವವರಿದ್ದಾರೆ ಆದ್ದರಿಂದ ಮತದಾನದ ಪ್ರಕ್ರಿಯೆಯಲ್ಲಿ ಕೊರತೆ ಉಳಿಯಬಾರದೆಂದು ಕಾಳಜಿ ವಹಿಸುವರು.
೨. ೧೯೭೧ ಈ ಯುದ್ಧದಲ್ಲಿ ಸಹಭಾಗಿ ಆಗಿರುವ ೮ ಭಾರತೀಯ ಸೈನಿಕರು ಮತ್ತು ೨ ಕಾರ್ಯನಿರತ ಅಧಿಕಾರಿಗಳು ಬಾಂಗ್ಲಾದೇಶದ ವಿಜಯದಿನ ಉತ್ಸವದಲ್ಲಿ ಸಹಭಾಗಿ ಆಗುವದಕ್ಕಾಗಿ ಢಾಕಾಗೆ ತಲುಪಿದ್ದರು.
೩. ಡಿಸೆಂಬರ್ ೧೬, ೧೯೭೧ ರಂದು ಪಾಕಿಸ್ತಾನಿ ಸೈನ್ಯದ ೯೩ ಸಾವಿರ ಸೈನಿಕರು ಭಾರತದ ಎದುರು ಶರಣಾಗತಿ ಸ್ವೀಕರಿಸಿದ್ದವು, ಅದರ ನಂತರ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ದೊರೆಯಿತು.
ಸಂಪಾದಕೀಯ ನಿಲುವುಆಗಸ್ಟ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆದನಂತರ ಯುನೂಸ್ ಇವರ ನೇತೃತ್ವದಲ್ಲಿ ಮಧ್ಯಂತರ ಸರಕಾರದ ಸ್ಥಾಪನೆಯ ಮಾಡಿ ಮುಂದಿನ ೩ ತಿಂಗಳಲ್ಲಿ ಚುನಾವಣೆ ಘೋಷಣೆ ಮಾಡುವುದಾಗಿ ಹೇಳಿತ್ತು; ಆದರೆ ಇವರ ಮಾಹಿತಿಯ ಪ್ರಕಾರ ಇನ್ನೂ ಒಂದು ವರ್ಷವಾದರು ಇಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಇದರಿಂದ ಇವರ ಏಕಾಧಿಕಾರ ಆಡಳಿತ ನಡೆಸುವುದರ ಜೊತೆಗೆ ಹಿಂದುಗಳ ಮೇಲೆ ದೌರ್ಜನ್ಯ ನಡೆಸುವುದಿದೆ ಇದು ಸ್ಪಷ್ಟವಾಗುತ್ತದೆ ! |