ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾದ ಮೈಸೂರಿನ ಶ್ರೀಮತಿ ನಳಿನಿ ಶ್ರೀನಿವಾಸನ್‌ (ವಯಸ್ಸು ೭೮ ವರ್ಷ) ಮತ್ತು ಶ್ರೀಮತಿ ಮುತ್ತಮ್ಮಾ ರೆಡ್ಡಿ (ವಯಸ್ಸು ೭೭ ವರ್ಷ)

ಎಡದಿಂದ ಶ್ರೀಮತಿ ನಳಿನಿ ಶ್ರೀನಿವಾಸನ್, ಪೂ. ರಮಾನಂದ ಗೌಡ ಮತ್ತು ಶ್ರೀಮತಿ ಮುತ್ತಮ್ಮಾ ರೆಡ್ಡಿ

ಮೈಸೂರು – ಇಲ್ಲಿನ ಸನಾತನ ಸಾಧಕರಾದ ಶ್ರೀಮತಿ ನಳಿನಿ ಶ್ರೀನಿವಾಸನ್‌ (ವಯಸ್ಸು ೭೮ ವರ್ಷ) ಇವರು ಶೇ. ೬೨  ಹಾಗೂ ಶ್ರೀಮತಿ ಮುತ್ತಮ್ಮ ರೆಡ್ಡಿ (ವಯಸ್ಸು ೭೭ ವರ್ಷ) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾದರು. ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ (ವಯಸ್ಸು ೪೮ ವರ್ಷ) ಇವರು ಅಕ್ಟೋಬರ್‌ ೨೫ ರಂದು ಇಲ್ಲಿ ನಡೆದ ಸತ್ಸಂಗವೊಂದರಲ್ಲಿ ಅವರಿಬ್ಬರ ಸತ್ಕಾರವನ್ನು ಮಾಡಿದರು.

ಕು. ರೇವತಿ ಮೊಗೇರ

ತನ್ನನ್ನು ಬದಲಾಯಿಸುವ ತಳಮಳವಿರುವ ಶ್ರೀಮತಿ ನಳಿನಿ

೧. ಶ್ರೀಮತಿ ನಳಿನಿ ಅಕ್ಕ ಹಸನ್ಮುಖಿ ಮತ್ತು ಉತ್ಸಾಹದಿಂದಿರುತ್ತಾರೆ.

೨. ಅವರು ಸತತ ನಾಮಜಪ ಮತ್ತು ಪ್ರಾರ್ಥನೆ ಮಾಡುತ್ತಿರುತ್ತಾರೆ.

೩. ಕ್ಷಮೆ ಯಾಚನೆ ಮಾಡುವುದು : ಒಮ್ಮೆ ಅವರು ಓರ್ವ ಸಾಧಕನಿಗೆ ಸಂಚಾರವಾಣಿಯಲ್ಲಿ ಮಾತನಾಡುತ್ತಾ, ”ನೀವು ನಮ್ಮ ಮನೆಗೆ ಬಂದಾಗ ನಾನು ನಿಮಗೆ ಮಾತನಾಡಲು ಅವಕಾಶ ನೀಡದೇ ನಾನೇ ಮಾತನಾಡುತ್ತಿದ್ದೆನು’, ಇದು ನನ್ನ ಅಹಂನ ಲಕ್ಷಣವಾಗಿದೆ. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ” ಎಂದು ಹೇಳಿದರು.

೪. ಭಾವ : ಒಮ್ಮೆ ಪೂ. ರಮಾನಂದಣ್ಣನವರು ನೀಡಿದ ಪ್ರಸಾದವನ್ನು ಸಾಧಕರು ಅಕ್ಕನವರಿಗೆ ನೀಡಿದಾಗ ಅವರು ಆ ಪ್ರಸಾದವನ್ನು ಕೈಯಲ್ಲಿ ಹಿಡಿದು ಭಾವಸ್ಥಿತಿಗೆ ಹೋಗಿ, ”ಎಲ್ಲ ಗೋಡೆಗಳಿಂದ ‘ಗುರುದೇವ, ಗುರುದೇವ’ ಎಂದು ಕೇಳಿಸುತ್ತಿದೆ” ಎಂದರು.

ದತ್ತಾತ್ರೆಯರ ಮೇಲೆ ಶ್ರದ್ಧೆಯಿರುವ ಶ್ರೀಮತಿ ಮುತ್ತಮ್ಮಾ

೧. ಶ್ರೀಮತಿ ಮುತ್ತಮ್ಮಕ್ಕನವರ ಸತತ ನಗುಮುಖವಿರುತ್ತದೆ.

೨. ಸ್ವಾವಲಂಬಿ : ಹದಿನೆಂಟನೇ ಪ್ರಾಯದಲ್ಲಿ ಅಕ್ಕನವರ ಎರಡೂ ಕಣ್ಣುಗಳ ದೃಷ್ಟಿ ಹೋಯಿತು. ಮನೆಯಲ್ಲಿ ಒಬ್ಬರೇ ಇದ್ದರೂ ಎಲ್ಲ ಕೆಲಸಗಳನ್ನು ತಾವೇ ಮಾಡುತ್ತಾರೆ.

೩. ಅಕ್ಕನವರು ಪ್ರತಿಯೊಂದು ಪ್ರಸಂಗದಲ್ಲಿ ಶಾಂತ ಮತ್ತು ಸ್ಥಿರವಾಗಿರುತ್ತಾರೆ.

೪. ಅಕ್ಕನವರಿಗೆ ದತ್ತಾತ್ರೆಯರ ಮೇಲೆ ತುಂಬಾ ಶ್ರದ್ಧೆ ಇದ್ದು ‘ನನ್ನ ಎಲ್ಲ ಕಾಳಜಿಯನ್ನು ದತ್ತಾತ್ರೆಯನೇ ತೆಗೆದುಕೊಳ್ಳುತ್ತಾನೆ’, ಎನ್ನುತ್ತಾರೆ.

೫. ಸಂತರ ಬಗೆಗಿನ ಭಾವ : ಒಮ್ಮೆ ಅವರು ಇರುವ ಊರಿನ ಹತ್ತಿರ ಪೂ. ರಮಾನಂದಣ್ಣನವರು ಬರುವುದು ಅಕ್ಕನಿಗೆ ಗೊತ್ತಿರಲಿಲ್ಲ. ಹಿಂದಿನ ದಿನ ಅಕ್ಕನವರು ದತ್ತಾತ್ರೆಯರ ಜಪವನ್ನು ಮಾಡುತ್ತ ಮಲಗಿದರು. ಆಗ ದತ್ತಾತ್ರೆಯ ಮತ್ತು ಪ.ಪೂ. ಗುರುದೇವರು ಅವರಿಗೆ ದರ್ಶನವನ್ನು ನೀಡಿದರು. ಬೆಳಗ್ಗೆ ಸಾಧಕರು ಅವರಿಗೆ ಸಂಚಾರವಾಣಿ ಕರೆ ಮಾಡಿ, ”ಇಂದು ಸಂತರು ಬರಲಿದ್ದು ನಾವು ನಿಮಗೆ ಅವರ ಬಳಿ ಕರೆದುಕೊಂಡು ಹೋಗಲಿದ್ದೇವೆ’’ ಎಂದು ಹೇಳಿದರು. ಆಗ ಅಕ್ಕನವರಿಗೆ ತುಂಬಾ ಆನಂದವಾಯಿತು. ಸಾಧಕರ ಜೊತೆಗೆ ಪೂ. ರಮಾನಂದ ಅಣ್ಣನವರಿಗೆ ಭೇಟಿಯಾಗಲು ಹೋದಾಗ ಅಕ್ಕನವರು ಪೂ. ಅಣ್ಣನವರ ಕೈಯನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ತಲೆಯ ಮೇಲೆ ಇಟ್ಟುಕೊಂಡರು. ಆಗ ಅಕ್ಕನವರಿಗೆ ಭಾವಜಾಗೃತಿ ಆಯಿತು.’

– ಕು. ರೇವತಿ ಮೊಗೇರ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೩೨), ಬೆಂಗಳೂರು. (ಜೂನ್‌ ೨೦೨೪)