ಶ್ರೀ ಚಾಂಗದೇವ್ ಮಹಾರಾಜರ ದೇವಸ್ಥಾನದಲ್ಲಿ ಮತಾಂಧರಿಂದ ಅತಿಕ್ರಮಣ!

  • ಜಳಗಾಂವ್‌ನಲ್ಲಿ ಭೂಮಿ ಜಿಹಾದ್ ಪ್ರಕರಣ!

  • ಅನಧಿಕೃತ ಗೋರಿಗಳನ್ನು (ಕಬ್ರ) ತೆರವುಗೊಳಿಸುವಂತೆ ಭಕ್ತರ ಒತ್ತಾಯ

ಮುಂಬಯಿ – ಜಳಗಾಂವ್ ಜಿಲ್ಲೆಯ ಮುಕ್ತಾಯಿನಗರ ತಾಲೂಕಿನಲ್ಲಿ ತಾಪಿ ಮತ್ತು ಪೂರ್ಣಾ ನದಿಗಳ ಸಂಗಮದಲ್ಲಿ 1 ಸಾವಿರದ 200 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಶ್ರೀ ಕ್ಷೇತ್ರ ಚಾಂಗದೇವ್ ಮಹಾರಾಜರ ಪ್ರಾಚೀನ ದೇವಸ್ಥಾನವಿದೆ. ಇದು ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. ಈ ದೇವಸ್ಥಾನದಲ್ಲಿ ದರ್ಗಾ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದೇವಸ್ಥಾನದಲ್ಲಿ ಗೋರಿಗಳು ಮತ್ತು ಅದರ ಮೇಲೆ ಹಸಿರು ಚಾದರಗಳು ಕಂಡುಬರುತ್ತಿವೆ.

೧. ಪ್ರಾಚೀನ ಮತ್ತು ಐತಿಹಾಸಿಕ ದೇವಸ್ಥಾನದ ಆವರಣದಲ್ಲಿ ಕಬ್ರ ನಿರ್ಮಿಸಿ ಅತಿಕ್ರಮಣ ಮಾಡುವುದು ಅಥವಾ ಅನಧಿಕೃತ ನಿರ್ಮಾಣಗಳು, ಅಥವಾ ಭವಿಷ್ಯದಲ್ಲಿ ಸಣ್ಣ ಸಮಾಧಿಯನ್ನು ದರ್ಗಾವನ್ನಾಗಿ (ಮುಸ್ಲಿಮರ ಗೋರಿ ಸ್ಥಳ) ಪರಿವರ್ತಿಸುವ ಪ್ರಯತ್ನಗಳಿಂದಾಗಿ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. (ಇದೇ ರೀತಿಯ ಘಟನೆ ಮಲಂಗ್‌ಗಢದಲ್ಲಿಯೂ ನಡೆದಿತ್ತು ಮತ್ತು ಹಿಂದೂಗಳ ಪವಿತ್ರ ಸ್ಥಳವನ್ನು ಮತಾಂಧರು ವಶಪಡಿಸಿಕೊಂಡಿದ್ದರು! – ಸಂಪಾದಕರು)

೨. ‘ಏರಂಡೋಲ್‌ನ ಪಾಂಡವವಾಡ ಮತಾಂಧರ ಕೈವಶವಾಯಿತು ಮತ್ತು ನಂತರ ಹಿಂದೂಗಳು ಅದಕ್ಕಾಗಿ ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. ಇಂತಹ ಘಟನೆ ಚಾಂಗದೇವ್ ಮಹಾರಾಜರ ದೇವಸ್ಥಾನದ ವಿಷಯದಲ್ಲಿ ಮರುಕಳಿಸಬಾರದು. ಪುರಾತತ್ವ ಇಲಾಖೆಯು ಇಲ್ಲಿನ ಅನಧಿಕೃತ ಗೋರಿಗಳನ್ನು ಧ್ವಂಸಗೊಳಿಸಬೇಕು’, ಎಂದು ಭಕ್ತರು ಒತ್ತಾಯಿಸಿದ್ದಾರೆ.

೩. ಇದು 12 ನೇ ಶತಮಾನದ ಹೇಮಾಡಪಂತಿ ವಾಸ್ತುಶಿಲ್ಪ ಶೈಲಿಯ ದೇವಸ್ಥಾನವಾಗಿದ್ದು, ಪುಣ್ಯಶ್ಲೋಕ ಅಹಲ್ಯಬಾಯಿ ಹೋಳ್ಕರ್ ಅವರು ಇದರ ಪುನರ್ನಿರ್ಮಾಣದಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.

೪. ‘ದೇವಸ್ಥಾನದ ಆವರಣದಲ್ಲಿ ಭೂಮಿ ಜಿಹಾದ್ ಪ್ರಕ್ರಿಯೆ ನಡೆಯುತ್ತಿದ್ದು, ಸ್ಥಳೀಯ ಆಡಳಿತ ಮತ್ತು ಭಾರತೀಯ ಪುರಾತತ್ವ ಇಲಾಖೆಯು ಈ ಅತಿಕ್ರಮಣವನ್ನು ಶೀಘ್ರದಲ್ಲೇ ತೆರವುಗೊಳಿಸಬೇಕು’, ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಒತ್ತಾಯವನ್ನು ಏಕೆ ಮಾಡಬೇಕಾಗುತ್ತಿದೆ? ಗೋರಿಗಳನ್ನು ನಿರ್ಮಿಸುತ್ತಿರುವಾಗ ಆಡಳಿತ ಮಂಡಳಿ ಮತ್ತು ಪುರಾತತ್ವ ಇಲಾಖೆ ನಿದ್ರಿಸುತ್ತಿದ್ದವೇ?