ಸುಖದ ಗುರುಕೀಲಿ ಅಧ್ಯಾತ್ಮ ಶಿಕ್ಷಣ !

ಮನುಷ್ಯನನ್ನು ಬಿಟ್ಟರೆ ಉಳಿದ ಎಲ್ಲ ಪ್ರಾಣಿಮಾತ್ರಗಳು ಮತ್ತು ವನಸ್ಪತಿಗಳು ದೇವರು ನಿಗದಿತಪಡಿಸಿದ ಕಾರ್ಯವನ್ನು ಪೂರ್ಣ ಕ್ಷಮತೆಯನ್ನು ಉಪಯೋಗಿಸಿ ಮಾಡುತ್ತವೆ. ಅವರು ಯಾವುದೇ ಅಪೇಕ್ಷೆಯನ್ನಿಡುವುದಿಲ್ಲ. ‘ನಾನು-ನನ್ನದು’ ಎಂದು ಮೆರೆಯುವುದಿಲ್ಲ. ಅವರಿಂದ ತಪ್ಪುಗಳು ಎಂದಿಗೂ ಆಗುವುದಿಲ್ಲ. ಆದ್ದರಿಂದ ಅವರಿಗೆ ದೋಷ ತಗಲುವುದಿಲ್ಲ. ಅವರಿಂದ ಶೇ. ೧೦೦ ರಷ್ಟು ದೇವರ ಆಜ್ಞಾಪಾಲನೆ ಆಗುತ್ತಿರುತ್ತದೆ; ಏಕೆಂದರೆ ಅವರಿಗೆ ದೇವರ ಆಜ್ಞೆಯು ಜನ್ಮತಃವೇ ಗೊತ್ತಿದೆ ಎನೋ, ಎನ್ನುವಂತಾಗಿದೆ.

ಮನುಷ್ಯನಿಂದ ಮಾತ್ರ ಬಹಳಷ್ಟು ತಪ್ಪುಗಳು ಆಗುತ್ತಿರುತ್ತವೆ. ದೇವರ ಆಜ್ಞೆಯಂತೂ ಬಿಡಿ, ಅವನಿಗೆ ‘ಮನುಷ್ಯಜನ್ಮದ ಉದ್ದೇಶ’ವೂ ಗೊತ್ತಿರುವುದಿಲ್ಲ. ಅವನಿಗೆ ‘ತನ್ನ ಕರ್ತವ್ಯವೇನು ?’, ಎಂಬುದೂ ಗೊತ್ತಿರುವುದಿಲ್ಲ. ಇದರ ಕಾರಣವೆಂದರೆ ಜನ್ಮತಃ ಅವನಿಗೆ ಅದರ ಜ್ಞಾನ ಇರುವುದಿಲ್ಲ. ಕೇವಲ ಉನ್ನತ ವ್ಯಕ್ತಿ, ಅಂದರೆ ಹಿಂದಿನ ಜನ್ಮದಲ್ಲಿನ ಯಾರ ಸಾಧನೆ ಇರುತ್ತದೆಯೋ, ಅವರಿಗೆ ಮಾತ್ರ ಈ ಜ್ಞಾನವು ಜನ್ಮತಃ ಬಂದಿರುತ್ತದೆ. ಇತರರಿಗೆ ಚಿಕ್ಕಂದಿನಿಂದ ಕಲಿಸಬೇಕಾಗುತ್ತದೆ; ಆದರೆ ಸದ್ಯದ ಪಾಲಕರು ಅಥವಾ ಶಿಕ್ಷಕರು ಈ ಜ್ಞಾನವನ್ನು ತಮ್ಮ ಮಕ್ಕಳಿಗೆ ಕೊಡಲು ಸಾಧ್ಯವಿಲ್ಲ; ಏಕೆಂದರೆ ಅವರೇ ಈ ಕುರಿತು ಅಜ್ಞಾನಿಯಾಗಿರುತ್ತಾರೆ. ಹಿಂದಿನ ಕಾಲದಲ್ಲಿ ಈ ಮನುಷ್ಯಜೀವನದ, ಸಾಧನೆಯ ಜ್ಞಾನವು ಗುರುಕುಲದಿಂದ ದೊರಕುತ್ತಿತ್ತು; ಆದರೆ ಸದ್ಯ ಇಂತಹ ವ್ಯವಸ್ಥೆಯೇ ಇಲ್ಲ.

ಸದ್ಯ ಶಾಲೆಯಲ್ಲಿ, ಕಾಲೇಜುಗಳಲ್ಲಿ ಕೇವಲ ವ್ಯವಹಾರಿಕ ಶಿಕ್ಷಣವನ್ನು ನೀಡಲಾಗುತ್ತದೆ. ಹಿಂದೂಗಳು ಆಧ್ಯಾತ್ಮಿಕ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಆದ್ದರಿಂದಲೇ ಮನುಷ್ಯನ ಅವನತಿಗೆ ಆರಂಭವಾಗಿದೆ. ಸರಕಾರವು ವ್ಯಾವಹಾರಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ, ಹಾಗೆಯೇ ರಾಷ್ಟ್ರರಕ್ಷಣೆಯ, ಅಂದರೆ ಸೈನ್ಯಶಿಕ್ಷಣದ ಪಾಠವನ್ನು ಕಲಿಸುವಂತಹ ಗುರುಕೀಲಿಯನ್ನು ನಿರ್ಮಾಣ ಮಾಡಬೇಕು.

ಸುಖವಾದ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಸಾಧನೆ ಮಾಡಿ ಕ್ರಿಯಮಾಣವನ್ನು ಬಳಸಬೇಕು. ಪ್ರಯತ್ನವನ್ನು ಮಾಡದೇ ಪ್ರಾರಬ್ಧದ ಮೇಲೆ ಎಲ್ಲವನ್ನು ಬಿಟ್ಟುಕೊಟ್ಟರೆ, ಜೀವನವಿಡಿ ದುಃಖವನ್ನು ಎದುರಿಸಬೇಕಾಗುವುದು. ಪ್ರಯತ್ನ ಮಾಡಿದ ನಂತರ ಫಲದ ಅಪೇಕ್ಷೆ ಬೇಡ. ಏನು ಒಳ್ಳೆಯ ಫಲ ಸಿಗುತ್ತದೆಯೋ, ಅದು ದೇವರ ಕೃಪೆಯಾಗಿದೆ ಮತ್ತು ಏನು ದುಃಖ ಸಿಗುತ್ತದೆಯೋ, ಅದು ದೇವರ ಇಚ್ಛೆ ಎಂದು ತಿಳಿಯಬೇಕು. ಇಂತಹ ವಿಚಾರಗಳಿಂದಲೇ ಮನುಷ್ಯನು ಸತತವಾಗಿ ಸುಖ ಮತ್ತು ಆನಂದದಿಂದ ಇರಲು ಸಾಧ್ಯವಾಗುತ್ತದೆ. ಇದೇ ಸುಖದ ಗುರುಕೀಲಿಯಾಗಿದೆ !

– ಶ್ರೀ. ಶ್ರೀರಾಮ ಖಡೆಕರ, ಫೊಂಡಾ, ಗೋವಾ.