Donald Trump On Bangladeshi Hindus : ರಾಷ್ಟ್ರಾಧ್ಯಕ್ಷ ಬಯಡೇನ್ ಮತ್ತು ಕಮಲಾ ಹ್ಯಾರಿಸ್ ಇವರು ಜಗತ್ತಿನ ಮತ್ತು ಅಮೆರಿಕಾದ ಹಿಂದುಗಳನ್ನು ನಿರ್ಲಕ್ಷಿಸಿದ್ದರು ! – ಟ್ರಂಪ್ ಇವರ ಆರೋಪ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ (ಅಮೇರಿಕಾ) – ಬಾಂಗ್ಲಾದೇಶದಲ್ಲಿನ ಹಿಂದೂ, ಕ್ರೈಸ್ತ ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಬರ್ಬರ ದಾಳಿಗಳು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಎಲ್ಲರ ಮೇಲೆ ಗುಂಪಿನಿಂದ ದಾಳಿ ನಡೆದಿದೆ ಮತ್ತು ಅವರನ್ನು ಲೂಟಿ ಮಾಡಲಾಗಿದೆ. ಆ ಜನರು ಅರಾಜಕತೆಯ ಸ್ಥಿತಿಯಲ್ಲಿದ್ದಾರೆ. ನನ್ನ ರಾಷ್ಟಾಧ್ಯಕ್ಷ ಕಾರ್ಯಕಾಲದಲ್ಲಿ ಹೀಗೆ ಎಂದು ನಡೆದಿಲ್ಲ. ರಾಷ್ಟ್ರಾಧ್ಯಕ್ಷ ಬಾಯಡೆನ್ ಮತ್ತು ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಇವರು ಜಗತ್ತಿನಲ್ಲಿನ ಮತ್ತು ಅಮೇರಿಕಾದಲ್ಲಿನ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಇಸ್ರೈಲ್ ನಿಂದ ಯುಕ್ರೇನವರೆಗೆ ಮತ್ತು ನಮ್ಮ ಸ್ವಂತದ ದಕ್ಷಿಣದ ಗಡಿಯ ವರೆಗೆ ಜನರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ, ಎಂದು ಅಮೇರಿಕಾದ ಚುನಾವಣೆಯಲ್ಲಿನ ರಾಷ್ಟ್ರಾಧ್ಯಕ್ಷ ಸ್ಥಾನದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇವರು ಆರೋಪಿಸಿದ್ದಾರೆ. ಟ್ರಂಪ್ ಇವರು ಅಮೆರಿಕದಲ್ಲಿನ ಹಿಂದೂಗಳಿಗೆ ದೀಪಾವಳಿ ಪ್ರಯುಕ್ತ ನೀಡಿರುವ ಶುಭಾಶಯ ಸಂದೇಶದ ಜೊತೆಗೆ ಮೇಲಿನ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದ ವಿಷಯದ ಕುರಿತು ಟ್ರಂಪ ಇವರು ಮೊದಲ ಬಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಮೇರಿಕಾದಲ್ಲಿ ನವಂಬರ್ ೫ ರಂದು ರಾಷ್ಟ್ರಪತಿ ಸ್ಥಾನಕ್ಕಾಗಿ ಮತದಾನ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಇವರು ನೇರವಾಗಿ ಡೆಮಾಕ್ರಟಿಕ್ ಪಾರ್ಟಿಯ ಕಮಲ ಹ್ಯಾರಿಸ್ ಇವರ ವಿರುದ್ಧ ಸ್ಪರ್ಧಿಸಿದ್ದಾರೆ.

೧. ಟ್ರಂಪ್ ಇವರು ಪೋಸ್ಟ್ ನಲ್ಲಿ, ನಾವು ಅಮೆರಿಕದಲ್ಲಿ ಮತ್ತೊಮ್ಮೆ ಸಧೃಢವಾದ ಸರಕಾರ ಸ್ಥಾಪಿಸುವೆವು ಮತ್ತು ಶಾಂತಿ ಸ್ಥಾಪನೆ ಮಾಡುವೆವು. ಕಟ್ಟರ ಎಡಪಂಥೀಯರ ಧರ್ಮವಿರೋಧಿ ನೀತಿಯ ವಿರುದ್ಧ ಕೂಡ ನಾವು ಹಿಂದೂ ಅಮೆರಿಕನ್ ಜನರ ರಕ್ಷಣೆ ಮಾಡುವೆವು ನಾವು ನಿಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವೆವು ಎಮದು ಹೇಳಿದ್ದಾರೆ.

೨. ಭಾರತದೊಂದಿಗಿನ ಸಂಬಂಧದ ಕುರಿತು ಟ್ರಂಪ್ ಇವರು, ನನ್ನ ಕಾರ್ಯಕಾಲದಲ್ಲಿ ನಾವು ಭಾರತ ಮತ್ತು ನನ್ನ ಒಳ್ಳೆಯ ಮಿತ್ರ ಪ್ರಧಾನಿ ಮೋದಿ ಇವರ ಜೊತೆಗೆ ಇರುವ ಬೃಹತ್ ಪಾಲುದಾರಿಕೆ ಸಧೃಢಗೊಳಿಸುವೆವು.

೩. ಕಮಲಾ ಹ್ಯಾರಿಸ್ ಹೆಚ್ಚಿನ ಕಾನೂನು ಮತ್ತು ಹೆಚ್ಚಿನ ತೆರಿಗೆ ವಿಧಿಸಿ ನಿಮ್ಮ ಚಿಕ್ಕ ವ್ಯವಸಾಯಗಳನ್ನು ನಾಶ ಮಾಡುವವರು. ತದ್ವಿರುದ್ಧ ನಾನು ತೆರಿಗೆ ಕಡಿಮೆ ಮಾಡಿದೆನು, ನಿಯಮದಲ್ಲಿ ಕಡಿತ ಮಾಡಿದೆನು, ಅಮೆರಿಕಾದ ವಿದ್ಯುತ್ ವ್ಯವಸ್ಥೆಯಲ್ಲಿನ ಜಟಿಲತೆ ಕಡಿಮೆಗೊಳಿಸಿದ್ದೇನೆ ಮತ್ತು ಇತಿಹಾಸದಲ್ಲಿ ಎಲ್ಲಕ್ಕಿಂತ ಬೃಹತ್ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ್ದೇನೆ. ನಾವು ಅದನ್ನು ಮತ್ತೆ ಮಾಡಬಹುದು, ಹಿಂದೆಗಿಂತಲೂ ಬೃಹತ್ ಮತ್ತು ಒಳ್ಳೆಯದಾಗಿ ಮಾಡುವೆವು, ನಾವು ಅಮೆರಿಕಾವನ್ನು ಮತ್ತೆ ಮಹಾನ ಮಾಡುವೆವು.

೪. ಟ್ರಂಪ್ ಇವರು ತಮ್ಮ ಪೋಸ್ಟ್‌ನ ಕೊನೆಯಲ್ಲಿ, ಹಾಗೂ ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಬರೆದಿದ್ದಾರೆ. ದೀಪದ ಉತ್ಸವದಿಂದ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವಾಗುವುದು ಎಂದು ನಾನು ಆಶಿಸುತ್ತೇನೆ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದ್ದು ಟ್ರಂಪ್ ಇವರು ಅಭ್ಯರ್ಥಿಯಾಗಿದ್ದಾರೆ ಮತ್ತು ಅವರು ಅಮೆರಿಕಾದಲ್ಲಿನ ಹಿಂದುಗಳ ಮತ ಪಡೆಯಲು ಹೀಗೆ ಹೇಳುತ್ತಿದ್ದಾರೆ. ಕಮಲಾ ಹ್ಯಾರಿಸ್ ಭಾರತೀಯ ಮೂಲದ ಹಿಂದೂ ಆಗಿದ್ದರು ಕೂಡ ಅವರು ಎಂದು ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಲಿಲ್ಲವೆಂದು ಟ್ರಂಪ್ ಹಿಂದುಗಳಿಗೆ ಆಪ್ತರೆಂದು ಅನಿಸಿದರೆ ಆಶ್ಚರ್ಯ ಅನಿಸಬಾರದು !