‘ಕೆನಡಾದ ಖಲಿಸ್ತಾನಿಗಳನ್ನು ಗುರಿಯಾಗಿಸುವ ಸಂಚಿನಲ್ಲಿ ಅಮಿತ ಶಾಹ ಭಾಗಿಯಾಗಿದ್ದಾರಂತೆ !’ – ಕೆನಡಾದ ಉಪ ವಿದೇಶಾಂಗ ಸಚಿವರಾದ ಡೇವಿಡ ಮಾರಿಸನ

ಕೆನಡಾದ ಉಪ ವಿದೇಶಾಂಗ ಸಚಿವರಾದ ಡೇವಿಡ ಮಾರಿಸನರವರು ‘ದಿ ವಾಷಿಂಗ್ಟನ್ ಪೋಸ್ಟ್’ಗೆ ಮಾಹಿತಿ ನೀಡಿದ್ದರು !

ಒಟಾವಾ (ಕೆನಡಾ) – ಕೆನಡಾದ ಉಪ ವಿದೇಶಾಂಗ ಸಚಿವರಾದ ಡೇವಿಡ ಮಾರಿಸನರವರು ಅಕ್ಟೋಬರ್ 29 ರಂದು ಕೆನಡಾದ ಸಂಸದೀಯ ಸಮಿತಿಯಲ್ಲಿ, ‘ದೇಶದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುವ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾಹರವರು ಇದ್ದಾರೆ’ ಎಂದು ಹೇಳಿದ್ದಾರೆ. ಕೆನಡಾದ ಮಂತ್ರಿಗಳು ಬಹಿರಂಗವಾಗಿ ಭಾರತ ಸರಕಾರದ ಸಚಿವರ ಹೆಸರನ್ನು ಹೇಳಿರುವುದು ಇದೇ ಮೊದಲನೇಯ ಬಾರಿಯಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಕೆನಡಾದಲ್ಲಿರುವ ಭಾರತೀಯ ಉಚ್ಚ-ಆಯುಕ್ತರು ಈ ವಿಷಯದಲ್ಲಿ ತಕ್ಷಣ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ; ಆದರೆ ಭಾರತ ಸರಕಾರವು ಈ ಹಿಂದೆಯೇ ಕೆನಡಾ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವೆಂದು ಹೇಳಿದ್ದು, ಅದರಲ್ಲಿ ಯಾವುದೇ ರೀತಿಯ ಸಹಭಾಗವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

1. ಅಕ್ಟೋಬರ್ 14 ರಂದು, ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ಕೆನಡಾದ ಅಧಿಕಾರಿಗಳನ್ನು ಉಲ್ಲೇಖಿಸಿ, ಗೃಹ ಸಚಿವ ಅಮಿತ ಶಾಹ ಮತ್ತು ಭಾರತೀಯ ಗುಪ್ತಚರ ಸಂಸ್ಥೆಯಾದ `ರಾ’ ಜಂಟಿಯಾಗಿ ಕೆನಡಾದ ಗುಪ್ತಚರ ಮಾಹಿತಿ ಸಂಗ್ರಹಿಸಲು ಮತ್ತು ಖಲಿಸ್ತಾನಿ ಭಯೋತ್ಪಾದಕರ ಮೇಲೆ ದಾಳಿ ಮಾಡಲು ಅನುಮತಿ ನೀಡಿತ್ತು ಎಂದು ಹೇಳಿಕೊಂಡಿತ್ತು.

2. ಕೆನಡಾದ ಸಮಾಚಾರ ಪತ್ರಿಕೆಯಾದ ‘ಸಿಬಿಸಿ ನ್ಯೂಸ್’ನ ಅನುಸಾರ, ಡೇವಿಡ ಮಾರಿಸನರವರು ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿಯ ಮುಂದೆ ಸಾಕ್ಷಿ ನೀಡಲು ಬಂದಿದ್ದರು. ಈ ಸಮಿತಿಗೆ ಸಂಬಂಧಿಸಿದ ಸಂಸದರಾದ ರಾಕೆಲ ಡ್ಯಾಂಚೋರವರು ಮಾರಿಸನರವರಿಗೆ ‘ಈ ಮಾಹಿತಿಯು `ವಾಷಿಂಗ್ಟನ್ ಪೋಸ್ಟ್’ ವರೆಗೆ ಹೇಗೆ ತಲುಪಿತು?’ ಎಂದು ಕೇಳಿದರು.

3. ಇದಕ್ಕೆ ಮಾರಿಸನರವರು, ‘ನಾನು ಉದ್ದೇಶಪೂರ್ವಕವಾಗಿ ‘ವಾಷಿಂಗ್ಟನ್ ಪೋಸ್ಟ್’ನ್ನು ಆಯ್ಕೆ ಮಾಡಿದ್ದೇನೆ. ನಿಜವಾಗಿ ಹೇಳಬೇಕೆಂದರೆ, ನಮಗೆ ಅಂತರಾಷ್ಟ್ರೀಯ ಮತ್ತು ನಮ್ಮ (ಕೆನಡಾದ) ಮಾಹಿತಿಯನ್ನು ಹೇಳುವಂತಹ ಸುದ್ದಿಪತ್ರಿಕೆಯು ಬೇಕಿತ್ತು. ಇದಕ್ಕಾಗಿ, ಈ ವಿಷಯದ ಬಗ್ಗೆ ಸುದೀರ್ಘ ಅನುಭವವನ್ನು ಹೊಂದಿರುವ ಮತ್ತು ಈಗಾಗಲೇ ಈ ವಿಷಯದ ಬಗ್ಗೆ ಅನೇಕ ಬಾರಿ ಲೇಖನವನ್ನು ಬರೆದಿರುವ ಪತ್ರಕರ್ತರನ್ನು ಆಯ್ಕೆ ಮಾಡಲಾಯಿತು. ನಾನು ‘ದಿ ವಾಷಿಂಗ್ಟನ್ ಪೋಸ್ಟ್’ಗೆ ಈ ಪ್ರಕರಣದಲ್ಲಿ ಭಾರತದ ಗೃಹ ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳಿದೆ. ‘ದಿ ವಾಷಿಂಗ್ಟನ್ ಪೋಸ್ಟ್’ನ ಪತ್ರಕರ್ತರು ಇವರು(ಅಮಿತ ಶಹಾ) ಅದೇ ವ್ಯಕ್ತಿಯಾಗಿದ್ದಾರೆಯೇ? ಎಂದು ನನಗೆ ಕೇಳಿದರು, ನಾನು `ಅದೇ ವ್ಯಕ್ತಿ’ ಎಂದು ಹೇಳಿದೆನು. (ಮೊದಲೇ ಮಂಗ, ಅದಕ್ಕೆ ಮದ್ಯ ಕುಡಿಸಿದಂತಾಗಿದೆ ಎಂಬುದನ್ನು ಈ ಘಟನೆಯಿಂದಲೇ ಹೇಳಬೇಕಾಗುವುದು. ಭಾರತದ್ವೇಷದ ಕಾಮಾಲೆಯಾಗಿರುವ ‘ವಾಷಿಂಗ್ಟನ್ ಪೋಸ್ಟ್’ ಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಸಿಗುವುದೇ ? – ಸಂಪಾದಕರು)

ಸಂಪಾದಕೀಯ ನಿಲುವು

ಕೆನಡಾವು ತಾನು ಎಷ್ಟೇ ಸುಳ್ಳು ಹೇಳಲು ಪ್ರಯತ್ನಿಸಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು!