‘ಕೆನಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಬೇಕಂತೆ !’

ಕೆನಡಾದಲ್ಲಿನ ನ್ಯೂ ಡೆಮೊಕ್ರಟಿಕ್ ಪಾರ್ಟಿಯ (ಎನ್.ಡಿ.ಪಿ.ಯ) ಸಂಸದರಿಂದ ಮತ್ತೊಮ್ಮೆ ಆಗ್ರಹ!

ಓಟಾವಾ (ಕೆನಡಾ) – ಕೆನಡಾದಲ್ಲಿನ ನ್ಯೂ ಡೆಮಾಕ್ರಟಿಕ್ ಪಾರ್ಟಿಯ (ಎನ್.ಡಿ.ಪಿ.ಯ) ಸಂಸದರು ಮತ್ತೊಮ್ಮೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಭಯೋತ್ಪಾದಕ’ ಸಂಘಟನೆ ಎಂದು ಹೇಳಿ ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪ ಅಂಶದ ಕುರಿತು ಕೆನಡಾದ ಸಂಸತ್ತಿನ ತುರ್ತು ಸಭೆ ನಡೆಯಿತು, ಅದರಲ್ಲಿ ಈ ಬೇಡಿಕೆ ಮಾಡಲಾಯಿತು. ಎನ್.ಡಿ.ಪಿ.ಯ ಸಂಸದ ಮ್ಯಾಕಫರ್ಸನ್ ಇವರು ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

೧. ನ್ಯೂ ಡೆಮಾಕ್ರಟಿಕ್ ಪಾರ್ಟಿಯ (ಎನ್.ಡಿ.ಪಿ.ಯ) ಖಲಿಸ್ತಾನಿ ವಿಚಾರಧಾರೆಯ ನಾಯಕ ಜಗಮೀತ ಸಿಂಹ ಇವರು ಮಾತನಾಡಿ, ಕೆನಡಾ ಇನ್ನು ಮುಂದೆ ಭಾರತದ ಜೊತೆಗೆ ಮಾಹಿತಿ ವಿನಿಮಯ ಮಾಡಬಾರದು. ಕೆನಡಾದ ನಾಗರಿಕರ ಕುರಿತು ಗೌಪ್ಯ ಮಾಹಿತಿ ಯಾವುದಾದರೂ ದೇಶಕ್ಕೆ ಅಥವಾ ಸರಕಾರಕ್ಕೆ ನೀಡಬಾರದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂಸಕ, ಅತಿರೇಕೀ ಬಲಪಂಥಿಯ ಸಂಘಟನೆಯಾಗಿದೆ. ಅದು ಆಳವಾಗಿ ಬಿರಕು ಮೂಡಿಸುವಂತಹದ್ದಾಗಿದೆ ಮತ್ತು ಕೆನಡಾದ ಸಹಿತ ಜಗತ್ತಿನಾದ್ಯಂತ ಅದರ ಶಾಖೆಗಳು ಇವೆ. ಅದನ್ನು ನಿಷೇಧಿಸಬೇಕು. (ಖಲಿಸ್ತಾನಿ ಭಯೋತ್ಪಾದಕರು ಮತ್ತು ಖಲಿಸ್ತಾನಿ ಬೆಂಬಲಿಗರು ಅಹಿಂಸೆಯ ಪ್ರಸಾರ ಮಾಡುವವರ ಹಾಗೆ ವರ್ತಿಸುತ್ತಾರೆ, ಎಂದು ಈ ಪಕ್ಷಕ್ಕೆ ಅನಿಸುತ್ತದೆ ! – ಸಂಪಾದಕರು)

೨. ಈ ಸಭೆಯಲ್ಲಿ ಟ್ರುಡೋ ಇವರ ಲಿಬರಲ್ ಪಕ್ಷದ ಸಂಸದ ರಣದೀಪ ಸಾರಯ ಇವರು ಮಾತನಾಡಿ, ನಾನು ಕೆನಡಾದಲ್ಲಿನ ಹಿಂದೂಗಳಿಗೆ, ಇದು ಸಿಖ್ ಅಥವಾ ಹಿಂದೂ ಎಂಬ ಅಂಶವಲ್ಲ, ಇದು ಕೆನಡಾ ವಿರುದ್ಧ ಭಾರತ ಸರಕಾರ ಹೀಗೆ ಇದೆ. ಭಾರತದಿಂದ ವಿದೇಶಿ ಹಸ್ತಕ್ಷೇಪ ಎಲ್ಲಕ್ಕಿಂತ ಜಾಸ್ತಿ ಇದೆ. ಈ ಹಸ್ತಕ್ಷೇಪ ಚೀನಾ, ರಷ್ಯಾ ಅಥವಾ ಇರಾನ್ ಇವುಗಳಿಗಿಂತಲೂ ಬಹಳ ಮೇಲಿನ ಮಟ್ಟದ್ದಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕ ಸಂಘಟನೆ ಮತ್ತು ಖಲಿಸ್ತಾನಿ ಭಯೋತ್ಪಾದಕರ ಮೇಲೆ ಅಲ್ಲ, ಪ್ರಖರ ಭಾರತಪ್ರೇಮಿ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎನ್ನುವರ ಮೇಲೆಯೇ ಭಾರತವೇ ನಿಷೇಧಿಸಬೇಕು !