ನಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದ್ದೇವೆ ! – ಕೆನಡಾದ ಸಂಸದ ಚಂದ್ರ ಆರ್ಯ

ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರ ಟೀಕೆ

ಓಟಾವಾ (ಕೆನಡಾ) – ಕೆನಡಾವು ಖಲಿಸ್ತಾನಿ ಕಟ್ಟರವಾದಿಗಳ ಜೊತೆಗೆ ದೀರ್ಘಕಾಲದಿಂದ ಹೋರಾಡುತ್ತಿದೆ ಮತ್ತು ಕೆನಡಾದ ಸರಕಾರಕ್ಕೂ ಕೂಡ ಈ ಸಮಸ್ಯೆಯ ಗಾಂಭೀರ್ಯ ತಿಳಿಯುತ್ತಿದೆ. ಕೆನಡಾದ ಸಾರ್ವಭೌಮತ್ವ ಮಹತ್ವದ್ದಾಗಿದ್ದು ವಿದೇಶದಿಂದ ನಡೆಯುವ ಯಾವುದೇ ರೀತಿಯ ಹಸ್ತಕ್ಷೇಪ ಸಹಿಸಲಾಗುವುದಿಲ್ಲ, ಎಂದು ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರು ಎಚ್ಚರಿಕೆ ನೀಡಿದರು.

ಚಂದ್ರ ಆರ್ಯ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ೨ ವಾರಗಳ ಹಿಂದೆ ಕೆನಡಾ ಪೊಲೀಸರು ರಕ್ಷಣೆ ನೀಡಿದರು, ಆಗಲೇ ನಾನು ಎಡಮಂಟನನಲ್ಲಿ ಆಯೋಜಿತ ಹಿಂದುಗಳ ಕಾರ್ಯಕ್ರಮಕ್ಕೆ ಸುರಕ್ಷಿತವಾಗಿ ಸಹಭಾಗಿಯಾಗಲು ಸಾಧ್ಯವಾಯಿತು. ಖಲಿಸ್ತಾನಿ ಪ್ರತಿಭಟನಾಕಾರರ ಒಂದು ಗುಂಪು ನನ್ನ ವಿರೋಧದಲ್ಲಿ ಪ್ರತಿಭಟನೆ ನಡೆಸಿದರು. ಕೆನಡಾದಲ್ಲಿನ ಖಲಿಸ್ತಾನಿ ಕಟ್ಟರವಾದಿಗಳ ವಿಚಾರಣೆ ಮಾಡುವುದಕ್ಕಾಗಿ ಪೊಲೀಸರು ಕೂಡ ರಾಷ್ಟ್ರೀಯ ಕೃತಿ ಪಡೆಯ ಸಿದ್ಧತೆ ಮಾಡುವ ನಿರ್ಣಯ ತೆಗೆದುಕೊಂಡಿದೆ. ಕಟ್ಟರವಾದಿ ಮತ್ತು ಭಯೋತ್ಪಾದನೆ ಇದು ದೇಶದ ಗಡಿಗಷ್ಟೇ ಸೀಮಿತವಾಗಿಲ್ಲ, ಇದು ನಾವು ತಿಳಿದಿದ್ದೇವೆ. ನಮ್ಮ ದೇಶದ ಸುರಕ್ಷಾ ವ್ಯವಸ್ಥೆ ಈ ಪ್ರಕರಣದ ಗಾಂಭೀರ್ಯತೆಯಿಂದ ಸಮೀಕ್ಷೆ ಮಾಡುವರು ಎಂದು ನಾವು ನಂಬಿದ್ದೇವೆ ಎಂದು ಹೇಳಿದರು.