‘ವ್ಹ್ಯಾಕುವ್ಹರ್ ಮತ್ತು ಟೊರೆಂಟೊದ ಭಾರತದ ರಾಯಭಾರಿ ಕಚೇರಿಯು ಬೇಹುಗಾರಿಕೆಯ ಕೇಂದ್ರಗಳು’ (ಅಂತೆ) ! – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು

ಅಮೇರಿಕಾ ಮತ್ತು ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನುನಿಂದ ವಿಷಕಾರಿಕೆ

ವಾಷಿಂಗ್ಟನ್ (ಅಮೇರಿಕಾ) – ಕೆನಡಾದಲ್ಲಿನ ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ ಇವರ ನೇತೃತ್ವದಲ್ಲಿ ನಿರ್ಮಾಣವಾಗಿರುವ ಬೇಹುಗಾರಿಕೆಯ ಜಾಲ (ನೆಟ್ವರ್ಕ್) ಭೇದಿಸುವ ಅವಶ್ಯಕತೆ ಇದೆ. ವರ್ಮಾ ಮುತ್ಸದ್ದಿ ಕಡಿಮೆ ಮತ್ತು ಢೋಂಗಿ ಹೆಚ್ಚಾಗಿದ್ದಾರೆ. ವ್ಹ್ಯಾಕುವ್ಹರ್ ಮತ್ತು ಟೊರೆಂಟೊ ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಗಳು ಬೇಹುಗಾರಿಕೆಯ ಕೇಂದ್ರಗಳಾಗಿವೆ. ಎಲ್ಲಿಯವರೆಗೆ ಈ ಎರಡು ರಾಯಭಾರಿ ಕಚೇರಿಗಳು ಶಾಶ್ವತವಾಗಿ ಮುಚ್ಚುವುದಿಲ್ಲವೋ ಅಲ್ಲಿಯವರೆಗೆ ಅದು ಹತ್ಯೆ ಮತ್ತು ಕೆನಡಾದ ಸಾರ್ವಭೌಮತ್ವಕ್ಕೆ ಸವಾಲು ಹಾಕುವರು, ಎಂದು ಅಮೇರಿಕಾ ಮತ್ತು ಕೆನಡಾ ದೇಶದ ನಾಗರಿಕ ಖಲಿಸ್ತಾನಿ ಭಯೋತ್ಪಾದಕ ಗುರುಪಥವಂತ ಸಿಂಹ ಪನ್ನು ಇವನು ‘ಸಿಟಿವಿ’ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದನು.

ಪನ್ನುವಿನ ಈ ಸಂದರ್ಶನ ಭಾರತವು ಕೆನಡಾದಿಂದ ಉಚ್ಚಾಯುಕ್ತರನ್ನು ವಾಪಸ್ ಕರೆಸಿಕೊಂಡ ನಂತರ ಪಡೆಯಲಾಯಿತು. ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ಹತ್ಯೆಯ ತನಿಖೆಯಲ್ಲಿ ಕೆನಡಾದಲ್ಲಿನ ಭಾರತೀಯ ಉಚ್ಚಾಯುಕ್ತ ಸಂಜಯ ಕುಮಾರ್ ವರ್ಮ ಇವರನ್ನು ಗುರಿ ಮಾಡಿ ಅವರಿಗೆ ಕೆನಡಾ ತೊರೆಯಲು ಆದೇಶ ನೀಡಲಾಗಿತ್ತು. ಈ ಹಿಂದೆ ಅಕ್ಟೋಬರ್ ೨೦ ರಂದು ಭಾರತದ ಮಾಜಿ ಉಚ್ಚಾಯುಕ್ತ ಸಂಜಯ ಕುಮಾರ್ ವರ್ಮ ಇವರು ಕೂಡ ‘ಸಿಟಿವಿ’ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು, ಜಸ್ಟಿನ್ ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತದೆ.

ಭಾರತಕ್ಕೆ ಬೆದರಿಕೆ ನೀಡುವ ಪನ್ನು, ನಾವು ಖಲಿಸ್ತಾನಿಗಾಗಿ ಎಲ್ಲರ ಅಭಿಪ್ರಾಯ ಪಡೆಯುವುದಕ್ಕಾಗಿ ಅಭಿಯಾನ ಮುಂದುವರೆಸುವೆವ. ನಾವು ಯಾವುದಕ್ಕೂ ಹೆದರುವುದಿಲ್ಲ. ನಿಜ್ಜರ ಹತ್ಯೆಯ ಪ್ರಕಾರಣದಲ್ಲಿ ಭಾರತ ಭಾಗಿಯಾಗಿರುವ ಇನ್ನಷ್ಟು ಸಾಕ್ಷಿಗಳು ಬೆಳಕಿಗೆ ಬರುತ್ತವೆ.

ಸಂಪಾದಕೀಯ ನಿಲುವು

  • ಒಂದುಕಡೆ ಭಾರತದ ಜೊತೆಗೆ ಮೈತ್ರಿ ಮಾಡುವುದು, ಹಾಗೂ ಇನ್ನೊಂದು ಕಡೆ ತನ್ನ ದೇಶದಲ್ಲಿನ ಭಾರತ ವಿರೋಧಿ ನಾಗರೀಕರನ್ನು ರಕ್ಷಿಸುವುದು, ಇದು ಅಮೆರಿಕಾದ ದ್ವಿಮುಖ ನೀತಿ ಆಗಿದೆ. ಭಾರತ ಇಂತಹ ವಿಶ್ವಾಸದ್ರೋಹಿ ಅಮೇರಿಕಾವನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಬೆವರಿಳಿಸಬೇಕು !
  • ಪಾಕಿಸ್ತಾನವು ಹೇಗೆ ಭಾರತ ವಿರೋಧಿ ಭಯೋತ್ಪಾದಕರನ್ನು ಪೋಷಿಸುತ್ತದೆ ಅದೇ ರೀತಿ ಅಮೇರಿಕಾ ಮತ್ತು ಕೆನಡಾ ಪನ್ನುವನ್ನು ಪೋಷಿಸುತ್ತಿರುವುದರಿಂದ ಈಗ ಭಾರತವು ಅದರ ವಿರುದ್ಧ ಹೆಚ್ಚು ಕಠಿಣ ಗೊಳ್ಳುವುದು ಆವಶ್ಯಕವಾಗಿದೆ !