ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ! 

೧. ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಬಲಾತ್ಕಾರ ಮತ್ತು ಆಸ್ತಿಪಾಸ್ತಿಗಳ ದಹನ 

‘ದಿನಾಂಕ ೫.೮.೨೦೨೪ ರಿಂದ ಬಾಂಗ್ಲಾದೇಶದಲ್ಲಿ ಅರಾಜಕತೆ ಆರಂಭವಾಯಿತು. ಮುಸಲ್ಮಾನ ಸಮಾಜದ ವಿದ್ಯಾರ್ಥಿಗಳು ಮೀಸಲಾತಿಯನ್ನು ಮುಂದಿಟ್ಟುಕೊಂಡು ಮೆರವಣಿಗೆ ತೆಗೆದರು. ಅಷ್ಟರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಮೀಸಲಾತಿಯ ವಿಷಯದಲ್ಲಿ ತೀರ್ಪು ಬಂತು. ಈ ಆಂದೋಲನವನ್ನು ನಿಯಂತ್ರಿಸಲು ಪ್ರಧಾನಮಂತ್ರಿ ಶೇಖ್‌ ಹಸೀನಾ ಇವರು ವಿಫಲರಾದರು. ಪರಿಸ್ಥಿತಿ ಕೈಮೀರಿ ಹೋದಾಗ ಶೇಖ್‌ ಹಸೀನಾ ಇವರು ಜೀವ ಉಳಿಸಿಕೊಳ್ಳಲು ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದರು. ಅವರು ದೇಶವನ್ನು ತೊರೆದ ನಂತರವೂ ಬಾಂಗ್ಲಾದೇಶದಲ್ಲಿ ಗಲಭೆ ಮತ್ತು ಬೆಂಕಿ ಹಚ್ಚುವುದು ಮುಂದುವರಿಯಿತು. ಮತಾಂಧರು ಹಿಂದೂಗಳ ಮನೆಗಳು, ಅಂಗಡಿಗಳು, ಕಾರ್ಖಾನೆಗಳು ಮತ್ತು ಮಂದಿರಗಳನ್ನು ನಾಶ ಮಾಡಿದರು. ಭಾರಿ ಪ್ರಮಾಣದಲ್ಲಿ ಲೂಟಿ ಮಾಡಿದರು ಹಾಗೂ ಕೆಲವು ಹಿಂದೂ ಮುಖಂಡರನ್ನು ಹತ್ಯೆ ಮಾಡಿದರು. ಅಲ್ಲಿ ಇಷ್ಟರವರೆಗೆ ೨೭ ಜಿಲ್ಲೆಗಳಲ್ಲಿ ಹಿಂದೂಗಳನ್ನು ಗುರಿಪಡಿಸಲಾಗಿದೆ. ಅವರು ಇಸ್ಕಾನ್‌ ಮಂದಿರವನ್ನೂ ಬಿಡಲಿಲ್ಲ. ಈ ಹಿಂಸಾಚಾರದಲ್ಲಿ ಕೋಟಿಗಟ್ಟಲೆ ರೂಪಾಯಿ ನಷ್ಟವಾಯಿತು.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಬಾಂಗ್ಲಾದೇಶದಲ್ಲಿ ಶೇ. ೩೪ ರಿಂದ ಶೇ. ೮ ಕ್ಕೆ ಕುಸಿದ ಹಿಂದೂಗಳ ಜನಸಂಖ್ಯೆ  !

೧೯೪೭ ರಲ್ಲಿ ಬ್ರಿಟಿಷರು ಗಾಂಧಿ ಮತ್ತು ನೆಹರೂ ಇವರ ಒಪ್ಪಿಗೆಯಿಂದ ಧರ್ಮದ ಆಧಾರದಲ್ಲಿ ಭಾರತವನ್ನು ವಿಭಜನೆ ಮಾಡಿದರು. ಆಗ ಬಾಂಗ್ಲಾದೇಶದಲ್ಲಿ (ಪೂರ್ವ ಪಾಕಿಸ್ತಾನ) ಶೇ. ೩೪ ರಷ್ಟು ಹಿಂದೂಗಳಿದ್ದರು, ಇಂದು ಅಲ್ಲಿ ಕೇವಲ ಶೇ. ೮ ರಷ್ಟು ಹಿಂದೂಗಳು ಉಳಿದಿದ್ದಾರೆ. ವಿಭಜನೆಯ ಸಮಯದಲ್ಲಿ ಮತಾಂಧರಿಂದ ಲಕ್ಷಗಟ್ಟಲೆ ಹಿಂದೂಗಳ ಹತ್ಯೆಯಾಯಿತು ಹಾಗೂ ಲಕ್ಷಗಟ್ಟಲೆ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿತ್ತು. ೧೯೭೧ ರಲ್ಲಿ ಭಾರತವು ಪಾಕಿಸ್ತಾನವನ್ನು ಬಗ್ಗುಬಡಿದು ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿತು. ದುರದೃಷ್ಟವಶಾತ್‌ ಆ ಸಂದರ್ಭದಲ್ಲಿಯೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮತಾಂಧರು ಅಸಂಖ್ಯಾತ ಹಿಂದೂಗಳನ್ನು ಹತ್ಯೆ ಮಾಡಿದರು, ಅದೇ ರೀತಿ ಮಹಿಳೆಯರ ಬಲಾತ್ಕಾರ ಮಾಡಿದರು. ಉಪಕಾರದ ಬದಲು ಅವರು ಅಪಕಾರವನ್ನೇ ಮಾಡಿದರು.

೩. ಬಾಂಗ್ಲಾದೇಶದ ಮೇಲೆ ನೇರ ಕಾರ್ಯಾಚರಣೆ ಮಾಡುವಲ್ಲಿ ಭಾರತಕ್ಕಿರುವ ಮಿತಿ

ಬಾಂಗ್ಲಾದೇಶದ ಮತಾಂಧರು ಆಸಾಮ್‌ ಸಹಿತ ಪೂರ್ವೋತ್ತರ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನುಸುಳಿದ್ದಾರೆ. ೧೯೭೧ ರ ಯುದ್ಧದ ನಂತರ ಅಲ್ಲಿನ ಭೌಗೋಲಿಕ ಸ್ಥಿತಿಯನ್ನೇ ಬದಲಾಯಿಸಿದ್ದಾರೆ. ಇತ್ತೀಚೆಗಿನ ಅರಾಜಕತೆಯ ವಾತಾವರಣದಲ್ಲಿ ಭಾರತ ಸರಕಾರವು ಬಾಂಗ್ಲಾದೇಶಿ ಹಿಂದೂಗಳಿಗಾಗಿ ನೇರವಾಗಿ ಕೃತಿ ಮಾಡದಿದ್ದರೂ ಭಾರತದೊಳಗೆ ನುಸುಳದಂತೆ ಸೈನಿಕ ವ್ಯವಸ್ಥೆ ಮಾಡಿದೆ. ಅಂತಾರಾಷ್ಟ್ರೀಯ ನಿಯಮದಿಂದ ಭಾರತ ನಿಯಮ ಭಂಗ ಮಾಡುವಂತಿಲ್ಲ. ಕೋವಿಡ್‌ ಸೋಂಕಿನ ನಂತರ ಬಾಂಗ್ಲಾದೇಶ ಭಾರತದ ಸಹಾಯದಿಂದ ಶೇ. ೬ ರಷ್ಟು ವಿಕಾಸ ಮಾಡಿಕೊಂಡಿತ್ತು. ಅಮೇರಿಕಾ, ಚೀನಾ, ಪಾಕಿಸ್ತಾನ ಈ ಎಲ್ಲ ದೇಶಗಳಿಗೆ ಬಾಂಗ್ಲಾದೇಶ ಭಾರತದತ್ತ ವಾಲಿರುವುದು ಸಹನೆಯಾಗುತ್ತಿರಲಿಲ್ಲ. ಆದ್ದರಿಂದ ಅವರು ಮೀಸಲಾತಿಯ ಆಂದೋಲನದ ನಿಮಿತ್ತದಲ್ಲಿ ಅಲ್ಲಿ ಅಸ್ಥಿರತೆಯನ್ನು ಆರಂಭಿಸಿದರು.

೪. ಬಾಂಗ್ಲಾದೇಶದ ಅಸ್ಥಿರತೆಯ ಬಗ್ಗೆ ಭಾರತದ ಪ್ರತಿಕ್ರಿಯೆ 

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಅತ್ಯಾಚಾರದ ವಿಷಯವನ್ನು ಎತ್ತಿಹಿಡಿಯುವ ಬಾಂಗ್ಲಾದೇಶಿ (ಈಗ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ) ಲೇಖಕಿ ತಸ್ಲಿಮಾ ನಸರೀನ ಇವರ ಪ್ರತಿಕ್ರಿಯೆ ಮಾರ್ಮಿಕವಾಗಿದೆ. ಅವರು, ”ಯಾವ ಜಿಹಾದಿ ಭಯೋತ್ಪಾದಕರಿಗೆ ಭಯಪಟ್ಟು, ಅವರ ಮಾತು ಕೇಳಿ ಶೇಖ್‌ ಹಸೀನಾ ನನ್ನನ್ನು ದೇಶವನ್ನು ತೊರೆಯುವಂತೆ ಮಾಡಿದರೋ, ಅದೇ ಭಯೋತ್ಪಾದಕರಿಂದಾಗಿ ಅವರೂ ಜೀವ ಉಳಿಸಿಕೊಳ್ಳಲು ಅಧಿಕಾರವನ್ನು ತೊರೆದು ಪಲಾಯನ ಮಾಡಬೇಕಾಯಿತು’’ ಎಂದು ಹೇಳಿದ್ದಾರೆ. ಭಾಜಪದ ಸಂಸದೆ ಕಂಗನಾ ರಣಾವತ ಇವರು, ”ಬಾಂಗ್ಲಾದೇಶದ ಸುತ್ತಮುತ್ತಲೂ ಇಷ್ಟು ಮುಸಲ್ಮಾನ ರಾಷ್ಟ್ರಗಳಿರುವಾಗ ಶೇಖ್‌ ಹಸೀನಾ ಇವರು ಭಾರತದಲ್ಲಿ ಆಶ್ರಯ ಪಡೆದರು. ಈ ವಿಷಯ ಹಿಂದೂ ರಾಷ್ಟ್ರದ ಮಹತ್ವವನ್ನು ತೋರಿಸುತ್ತದೆ’’ ಎಂದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಂದಿನಂತೆ ಹೇಳಿದ್ದಾರೆ, ”ಯಾವ ಪದ್ಧತಿಯಲ್ಲಿ ಬಾಂಗ್ಲಾದೇಶದ ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆಯೋ, ಅದನ್ನು ನೋಡಿದಾಗ ನಮ್ಮ ಜವಾಬ್ದಾರಿಯ ಹೆಚ್ಚಾಗಿದೆ; ಏಕೆಂದರೆ ಸನಾತನ ಧರ್ಮವನ್ನು ರಕ್ಷಿಸಲು ನಾವು ಒಂದಾಗಿ ಕಾರ್ಯ ಮಾಡುವ ಅವಶ್ಯಕತೆಯಿದೆ.’’ ತದ್ವಿರುದ್ಧ ಕಾಂಗ್ರೆಸ್ಸಿನ ಸಂಸದ ಖುರ್ಶೀದ ಆಲಮಖಾನರು, ‘ಭಾರತದಲ್ಲಿ ಈ ಸ್ಥಿತಿ ಬರಲು ಹೆಚ್ಚು ಸಮಯ ಬೇಡ. ಇಲ್ಲಿಯೂ ‘ಪೌರತ್ವ ತಿದ್ದುಪಡಿ ಕಾನೂನಿನ’ ವಿಷಯದಲ್ಲಿ ಅಸಂತೋಷವಿದೆ’’ ಎಂದಿದ್ದಾರೆ. ಹಿಂದೂದ್ವೇಷಿ ಮೆಹಬೂಬಾ ಮುಫ್ತಿ ಕೂಡ ಹಾಗೆಯೆ ಅಸಂಬದ್ಧವಾಗಿ ಮಾತನಾಡಿದರು. ವಾಸ್ತವಿಕವೆಂದರೆ, ಎಲ್ಲ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರಕಾರಕ್ಕೆ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸ್ತರದಲ್ಲಿ ಒತ್ತಡ ಹೇರಬೇಕೆಂದು ಒತ್ತಾಯಿಸಬೇಕು.

೫. ಅಸಂಘಟಿತರಾಗಿರುವುದೇ ಹಿಂದೂಗಳಿಗೆ ತಗಲಿದ ಶಾಪ !

೮೦೦ ವರ್ಷಗಳ ಹಿಂದೆ ಆ ಕಾಲದ ರಾಜರು ಕೇವಲ ತಮ್ಮ ರಾಜ್ಯವನ್ನಷ್ಟೇ ಜೋಪಾನ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರು ಹಿಂದೂಗಳೆಂದು ನೆರೆಯ ಹಿಂದೂ ರಾಜನಿಗೆ ಸಹಾಯ ಮಾಡುತ್ತಿರಲಿಲ್ಲ. ಆದ್ದರಿಂದ ಮುಸಲ್ಮಾನ ದಾಳಿಕೋರರಿಗೆ ಲಾಭವಾಯಿತು. ಇಂದಿಗೂ ಮತಪೆಟ್ಟಿಗೆಯ ಮೋಹದಿಂದ ರಾಜಕಾರಣಿಗಳು ಹಿಂದೂ ಹಿತದೆಡೆಗೆ ದುರ್ಲಕ್ಷ ಮಾಡುತ್ತಿದ್ದಾರೆ. ನಾವು ಅದರ ಬೆಲೆ ತೆರುತ್ತಿದ್ದೇವೆ. ಈ ಚಿತ್ರವನ್ನು ಬದಲಾಯಿಸಲು ಈಗ ಈಶ್ವರನೇ ಅವತಾರ ತಾಳಬೇಕು.’ (೮.೮.೨೦೨೪)

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ