ನಿರೀಕ್ಷೆಯಂತೆ ಇರಾನ್ ಇಸ್ರೇಲ್ ಮೇಲೆ ಪೂರ್ಣ ಶಕ್ತಿಯೊಂದಿಗೆ ದಾಳಿ ಮಾಡಿ ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಈ ಆಕ್ರಮಣವು ಕೇವಲ ಮಧ್ಯಪೂರ್ವ ಅಥವಾ ಪಶ್ಚಿಮ ಏಷ್ಯಾದ ದೇಶಗಳಲ್ಲಿಯೇ ಅಕ್ಷರಶಃ ದಿಗ್ಭ್ರಮೆಯುಂಟು ಮಾಡಿದೆಯೆಂದರೆ, ವಿಶ್ವದ ಬಹುತೇಕ ದೇಶಗಳಿಗೂ ಹುಬ್ಬೇರಿಸಿದೆ; ಈಗ ಇಸ್ರೇಲ್ ಸಂದೇಹವಿಲ್ಲದೆ ತೀವ್ರ ಪ್ರತಿದಾಳಿ ನಡೆಸಲಿದೆ, ಏಕೆಂದರೆ ಅದು ಆ ರೀತಿ ಘೋಷಣೆಯನ್ನು ಮಾಡಿದೆ.
ಅಮೇರಿಕ ಸಹ, ಇರಾನ್‌ಗೆ ತೀವ್ರ ಪರಿಣಾಮ ಎದುರಿಸಲು ಸಿದ್ಧ ಇರುವಂತೆ ಎಚ್ಚರಿಕೆ ನೀಡಿದೆ. ಆದ್ದರಿಂದ ಇರಾನ್‌ನ ಆಕ್ರಮಣವು ಮೂರನೇ ಮಹಾಯುದ್ಧದ ಕಿಡಿ ಎಂದು ಪರಿಗಣಿಸಬೇಕು. ಇದಕ್ಕೂ ಮುನ್ನ ಇಸ್ರೇಲ್ ಸಪ್ಟೆಂಬರ್ ೨೮ ರಂದು ಲೆಬೆನಾನ್‌ನ ಮೇಲೆ ವಾಯುದಾಳಿ ಮಾಡಿ ಹಿಜ್‌ಬುಲ್ಲಾದ ಮುಖ್ಯಾಲಯವನ್ನು ಧ್ವಂಸಗೊಳಿಸಿತು ಹಾಗೂ ಅದರ ಮುಖ್ಯಸ್ಥ ಹಸನ ನಸ್ರುಲ್ಲಾನನ್ನು ಹತ್ಯೆಗೈದಿತು. ಇಸ್ರೇಲ್ ಹಿಜ್‌ಬುಲ್ಲಾ ಭಯೋತ್ಪಾದಕ ಸಂಘಟನೆಯ ಪ್ರಮುಖನನ್ನು ಬಂಕರ್‌ನಲ್ಲಿಯೇ ಮುಗಿಸಿರುವುದರಿಂದ ಒಂದು ದೊಡ್ಡ ಭಯೋತ್ಪಾದಕ ಸಂಘಟನೆಯ ಸೊಂಟ ಮುರಿದಿದೆ. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಾಮಿನ್ ನೆತಾನ್ಯಾಹೂ ಇವರು ಪತ್ರಕರ್ತರ ಸಭೆ ಕರೆದು ಯಾವ ಭೂಮಿಯಲ್ಲಿ ಹಿಜ್‌ಬುಲ್ಲಾಗಳನ್ನು ಪೋಷಣೆ ಮಾಡಲಾಗಿದೆಯೋ, ಆ ಲೆಬೆನಾನ್‌ನ ನಾಗರಿಕರಿಗೆ ‘ಹಿಜ್‌ಬುಲ್ಲಾದ ಭಯೋತ್ಪಾದಕರಿಗೆ ಸಹಾಯ ಮಾಡಬೇಡಿ’, ಎಂದು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್‌ನ ಭಯೋತ್ಪಾದನೆಯ ವಿರುದ್ಧ ನಿರಂತರ ನಡೆಯುತ್ತಿರುವ ಹೋರಾಟವು ಉಗ್ರರೂಪ ತಾಳುತ್ತಿರುವಾಗ ಭಾರತದಲ್ಲಿ ಮಾತ್ರ ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂಧರು ನಸ್ರುಲ್ಲಾನ ಹತ್ಯೆಯನ್ನು ಖಂಡಿಸಿ ಮೆರವಣಿಗೆ ತೆಗೆದು ಘೋಷಣೆ ನೀಡಿದರು. ಇದು ಅತ್ಯಂತ ಗಂಭೀರ, ರಾಷ್ಟ್ರಘಾತಕ ಹಾಗೂ ಚಿಂತಾಜನಕವಾಗಿದೆ.
ಮತಾಂಧ ಕಾಶ್ಮೀರಿಗಳ ಹಿಜ್‌ಬುಲ್ಲಾ ಪ್ರೇಮವನ್ನು ನಷ್ಟಗೊಳಿಸಿ !
ಈ ಯುದ್ಧಕ್ಕೂ ಭಾರತಕ್ಕೂ ಏನೂ ಸಂಬಂಧವಿಲ್ಲದಿರುವಾಗ ಕಾಶ್ಮೀರದಲ್ಲಿನ ಬಡಗ್ರಾಮದಲ್ಲಿ ಮಾತ್ರ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಕಾಶ್ಮೀರಿಗಳ ಈ ಮೆರವಣಿಗೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ದೊಡ್ಡ ಧ್ವನಿಯಲ್ಲಿ ಘೋಷಣೆ ಕೂಗುತ್ತಿದ್ದರು. ಇದರಲ್ಲಿ ಪಾಲ್ಗೊಂಡ ಯುವ ಮುಸಲ್ಮಾನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಯಾರೋ ಪ್ರಚೋದಿಸುತ್ತಿದ್ದರು ಎಂಬುದು ಮಾತ್ರ ನಿಜ; ಏಕೆಂದರೆ ದೂರದ ದೇಶದ ಭಯೋತ್ಪಾದಕನಿಗಾಗಿ ಇಂತಹ ಮೆರವಣಿಗೆ ತೆಗೆಯುವುದು, ಅದರ ನಿಯೋಜನೆ ಮಾಡುವುದು, ಭಯೋತ್ಪಾದನೆಯ ವಿಷಯದಲ್ಲಿ ಪ್ರೇಮವನ್ನು ವ್ಯಕ್ತಪಡಿಸುವ ಸಂಭಾಷಣೆಯನ್ನು ವಿದ್ಯಾರ್ಥಿಗಳು ಮಾಡುವುದು, ದೊಡ್ಡದಾಗಿ ಘೋಷಣೆ ನೀಡುವುದು, ಇದನ್ನು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಮಾಡಲು ಸಾಧ್ಯವಿಲ್ಲ. ಇದು ನಿಯೋಜನಾಬದ್ಧವಾಗಿದೆ, ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ‘ಟೂಲ್‌ಕಿಟ್’ನ ಹಾಗೆ ಇದು ಕೂಡ ಭಾರತವಿರೋಧಿ ಅಂತಾರಾಷ್ಟ್ರೀಯ ಷಡ್ಯಂತ್ರದ (ಇಕೋ ಸಿಸ್ಟಮ್‌ನ) ಭಾಗವಾಗಿದೆ, ಎಂದು ಹೇಳಲು ಆಸ್ಪದವಿದೆ. ಇವರು ‘ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರ ಬೆಂಬಲಿಗರೇ ಆಗಿದ್ದಾರೆ’, ಎಂದು ಹೇಳಿದರೆ ಅದರಲ್ಲಿ ತಪ್ಪೇನಿಲ್ಲ. ಇಂತಹ ಭಯೋತ್ಪಾದಕ ಪ್ರೇಮಿಗಳನ್ನು ಇಲ್ಲಿ ತಯಾರಿಸಲಾಗಿದೆ; ಆದ್ದರಿಂದಲೇ ಪಿಡಿಪಿಯ (ಪೀಪಲ್ಸ್ ಡೆಮೋಕ್ರಟಿಕ್ ಪಾರ್ಟಿಯ) ನಾಯಕಿ ಮೆಹಬೂಬಾ ಮುಫ್ತಿಯಂತಹ ಜನರಿಗೆ ಲಾಭವಾಗುತ್ತದೆ. ಈ ಹಮಾಸ ಅಥವಾ ಹಿಜ್‌ಬುಲ್ಲಾ ಪ್ರೇಮಿ ಕಾಶ್ಮೀರಿಗಳಿಗೆ ‘ಅವರ ಹಿತ ಯಾವುದರಲ್ಲಿದೆ ?’, ಎಂಬುದನ್ನು ಕಠೋರವಾಗಿ ವಿವರಿಸಿ ಹೇಳಬೇಕು. ಇವರ ಹೊಲಸುತನ ನಷ್ಟವಾಗದೆ ಅವರಲ್ಲಿ ವೈಚಾರಿಕ ಪರಿವರ್ತನೆ ಹೇಗೆ ಆಗಬಹುದು ? ಇವರಲ್ಲಿ ಎಷ್ಟು ಜನರಿಗೆ ‘ಭಯೋತ್ಪಾದನೆಗೆ ಬೆಂಬಲ ನೀಡಬೇಕೆಂಬುದು ತಿಳಿಯುತ್ತದೆ ?’ ಎಂಬುದರ ಕಲ್ಪನೆಯಿಲ್ಲ; ಆದರೆ ಇದರಲ್ಲಿ ‘ಪ್ರತಿಯೊಂದು ಮನೆಯಿಂದ ಹಿಜ್‌ಬುಲ್ಲಾ ಉದಯಿಸುವನು’, ಎನ್ನುವ ಘೋಷಣೆ ನೀಡುವಷ್ಟು ಅವರಲ್ಲಿ ದ್ವೇಷವನ್ನು ತುಂಬಿಸುವವರು ಎಷ್ಟು ದೊಡ್ಡ ಭಾರತದ್ವೇಷಿಗಳಾಗಿರಬಹುದು, ಎಂಬುದು ಅರಿವಾಗುತ್ತದೆ. ಕಲ್ಲು ತೂರಾಟ ಮಾಡುವವರ ದಿನಕೂಲಿ ನಿಂತು ಹೋದಾಗ ಕಲ್ಲುತೂರಾಟ ನಿಂತು ಹೋಯಿತು, ಹಾಗೆಯೆ ಭಯೋತ್ಪಾದಕಪ್ರೇಮಿ ಕಾಶ್ಮೀರಿಗಳ ಮೇಲೆ ಕೂಡ ಏನಾದರೂ ಉಪಾಯ ಹುಡುಕಲೇಬೇಕಾಗಿದೆ. ಭಯೋತ್ಪಾದಕಪ್ರೇಮಿಗಳೊಂದಿಗೆ ಮತ್ತು ಭಯೋತ್ಪಾದನೆಯನ್ನು ಸಲಹುವವರೊಂದಿಗೆ ಸಾಮ, ದಾಮ, ಭೇದ, ದಂಡ ಹೀಗೆ ವರ್ತಿಸಲೇಬೇಕಾಗಿದೆ; ಏಕೆಂದರೆ ಇದರಿಂದಲೇ ಭಾರತದಲ್ಲಿ ‘ಸ್ಲೀಪರ್ ಸೆಲ್’ (ಭಯೋತ್ಪಾದನೆಗೆ ರಹಸ್ಯವಾಗಿ ಸಹಾಯ ಮಾಡುವ ದೇಶದಾದ್ಯಂತ ಇರುವ ವ್ಯವಸ್ಥೆ) ನಿರ್ಮಾಣವಾಗುತ್ತಿದೆ. ಭಾರತದಲ್ಲಿನ ಭಯೋತ್ಪಾದನೆಯನ್ನು ಸ್ಥಳೀಯ ಭಯೋತ್ಪಾದಕಪ್ರೇಮಿಗಳಿಂದಲೆ ಪೋಷಿಸಲಾಗುತ್ತದೆ. ಆದ್ದರಿಂದ ನಾಳೆ ಹೀಗೆ ಮೆರವಣಿಗೆ ತೆಗೆಯುವ ಗುಂಪಿನಿಂದಲೆ ದೊಡ್ಡ ಭಯೋತ್ಪಾದಕರು ಉದಯಿಸುವ ಮೊದಲೆ ಅವರಿಗೆ ಅವರ ತಪ್ಪಿನ ಅರಿವು ಮೂಡಿಸುವಂತೆ ಅವರನ್ನು ದಂಡಿಸುವಂತೆ, ಭಾರತೀಯರು ಸರಕಾರಕ್ಕೆ ಒತ್ತಡ ಹೇರಬೇಕು. ಸಮಾಜವೇ ಅವರ ಮುಖಕ್ಕೆ ಮಸಿ ಬಳಿದು ಇವರು ‘ರಾಷ್ಟ್ರಘಾತಕ’ರೆಂದು ಇವರ ಮೆರವಣಿಗೆ ತೆಗೆಯದೆ ಇವರು ಸುಧಾರಿಸುವುದಿಲ್ಲ.
ರಾಷ್ಟ್ರದ್ರೋಹಿ ಮೆಹಬೂಬಾ ಮುಫ್ತಿಯ ವಿರುದ್ಧ ಕ್ರಮ ಕೈಗೊಳ್ಳಿ !
ಇಂದು ಕೂಡ ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಸೈನ್ಯದ ನಡುವೆ ಘರ್ಷಣೆ ನಡೆಯುತ್ತಿದ್ದು ಅದರಲ್ಲಿ ಸೈನಿಕರ ಪ್ರಾಣವೂ ಹೋಗುತ್ತಿದೆ. ಸಪ್ಟೆಂಬರ ೨೯ ರಂದು ಕೂಡ ಭಯೋತ್ಪಾದಕನನ್ನು ಹೊಡೆದುರುಳಿಸಲಾಯಿತು; ಆದರೆ ಮೆಹಬೂಬಾ ಮುಫ್ತಿಯಂತಹವರಿಗೆ ಸೈನಿಕರ ಪ್ರಾಣದ ಬೆಲೆ ಹೇಗೆ ತಿಳಿಯಬಹುದು ? ‘ಮೆಹಬೂಬಾ ಮುಫ್ತಿಯ ಭಯೋತ್ಪಾದಕಪ್ರೇಮ ಬಹಿರಂಗವಾಗಿ ವ್ಯಕ್ತವಾಗುತ್ತಿದ್ದರೆ, ಅವರ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ?’, ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಮೆಹಬೂಬಾ ಮುಫ್ತಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಅತ್ಯಾಚಾರದ ವಿಷಯದಲ್ಲಿ ಚಕಾರವೆತ್ತಲಿಲ್ಲ ಹಾಗೂ ಲೆಬೆನಾನದಲ್ಲಿನ ಹಿಜ್‌ಬುಲ್ಲಾದ ಪ್ರಮುಖ ನಸ್ರುಲ್ಲಾ ಸತ್ತು ಹೋದನೆಂದು ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು, ಖಂಡನೆಯನ್ನು ವ್ಯಕ್ತಪಡಿಸಿದರು. ಭಯೋತ್ಪಾದನೆಗೆ ಇಷ್ಟು ಆಕ್ರಮಕವಾಗಿ ಬೆಂಬಲ ನೀಡುವವರನ್ನು ‘ರಾಷ್ಟ್ರದ್ರೋಹಿ’ಗಳೆಂದೆ ಕರೆಯಬೇಕು. ಅವರು ಕಾಶ್ಮೀರದಲ್ಲಿ ಸೈನ್ಯದ ವಿರುದ್ಧ, ಅಂದರೆ ದೇಶದ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರ ಭಯೋತ್ಪಾದಕಪ್ರೇಮದ ವಿಷಯದಲ್ಲಿ ಮಾಧ್ಯಮಗಳು ಅವರಲ್ಲಿ ಏಕೆ ಸ್ಪಷ್ಟೀಕರಣ ಕೇಳುವುದಿಲ್ಲ ? ಸರಕಾರ ಅವರ ವಿರುದ್ಧ ಏಕೆ ಕ್ರಮತೆಗೆದುಕೊಳ್ಳುವುದಿಲ್ಲ ?
ಬಾಟ್ಲಾ ಹೌಸ್ ಘರ್ಷಣೆ, ಮಹಮ್ಮದ ಅಫ್ಝಲ, ಬುರ್ಹಾನ ವಣಿ, ಇಶ್ರತ ಜಹಾನ್, ಕಸಾಬ ಮತ್ತು ಗಾಝಾ ಹಾಗೂ ಹಿಜ್‌ಬುಲ್ಲಾಪ್ರೇಮಿ ಮೊದಲಾದವರನ್ನು ಬೆಂಬಲಿಸುವ ಭಾರತದ ಇನ್ನಿತರರೂ ಮೆಹಬೂಬಾ ಮುಫ್ತಿಯವರ ಹಾಗೆಯೆ ರಾಷ್ಟ್ರ ವಿರೋಧಿಗಳಾಗಿದ್ದಾರೆ. ಯೋಗಾಯೋಗ ಹೇಗಿದೆಯೆಂದರೆ, ವಿದೇಶಮಂತ್ರಿ ಡಾ. ಎಸ್. ಜಯಶಂಕರ ಇವರು ‘ಪಾಕಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರವನ್ನು ತೆರವುಗೊಳಿಸಲಿ’, ಎಂದು ಸಂಯುಕ್ತ ರಾಷ್ಟ್ರಗಳ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಅವರ ಗುರಿ ಇದಾಗಿದ್ದರೆ, ಅವರು ಮೊದಲು ಕಾಶ್ಮೀರದಲ್ಲಿನ ಈ ಪಾಕ್‌ಪ್ರೇಮಿಗಳಿಗೆ ಅವರ ಸ್ಥಾನವನ್ನು ತೋರಿಸಬೇಕಾಗುತ್ತದೆ; ಇಲ್ಲದಿದ್ದರೆ ಈ ಜನರು ಅವರ ಕಾರ್ಯದಲ್ಲಿ ದೊಡ್ಡ ಅಡಚಣೆಯನ್ನುಂಟು ಮಾಡುವರು ! ಭಾರತವೂ ಇಸ್ರೇಲ್‌ನಂತೆ ಧೈರ್ಯದಿಂದ ಅಂತರ್ಬಾಹ್ಯ ದೇಶವಿರೋಧಿಗಳ ಹೆಡೆಮುರಿ ಕಟ್ಟಲು ದೃಢನಿಶ್ಚಯ ಮಾಡಬೇಕು !