#RatanTata  ಉದ್ಯೋಗಕ್ಕಿಂತ ದೇಶಕ್ಕೆ ಆದ್ಯತೆ ನೀಡುವ ಏಕಮೇವಾದ್ವಿತೀಯ ರತನ ಟಾಟಾ !

ಟಾಟಾ ಉದ್ಯೋಗ ಸಮೂಹದ ಪ್ರಮುಖರಾದ ರತನ್ ಟಾಟಾ #RatanTata ಇವರು ಅಕ್ಟೋಬರ್ 9 ರ ರಾತ್ರಿ ನಿಧನರಾದರು.ಅವರು ದೇಶಕ್ಕೆ ಲಭಿಸಿದ ಅಮೂಲ್ಯ ರತ್ನವೇ ಆಗಿದ್ದರು. ದೇಶಕ್ಕಾದ ಈ ಅಪಾರ ನೋವಿನ ಸಂದರ್ಭದಲ್ಲಿ ನಾವು ರತನ್‌ ಟಾಟಾರವರು ಈ ಹಿಂದೆ ತೆಗೆದುಕೊಂಡ ಕೆಲವು ರಾಷ್ಟ್ರಹಿತದ ನಿರ್ಣಯಗಳನ್ನು ನೋಡೊಣ.

ರತನ ಟಾಟಾ

೧. ದೇಶವಿರೋಧಿ ಹೇಳಿಕೆಗಳನ್ನು ನೀಡುವ ಅಮೀರ್ ಖಾನ್‌ರೊಂದಿಗೆ ಖಂಡ-ತುಂಡ ವ್ಯವಹಾರ!
‘2016 ನೇ ಇಸ್ವಿಯಲ್ಲಿ ಕಲಾವಿದ ಅಮೀರ್ ಖಾನ್ ಇವರು ದೇಶವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಅನಂತರ ಟಾಟಾ ಉದ್ಯೋಗ ಸಮೂಹದ ಪ್ರಮುಖರಾದ ರತನ್ ಟಾಟಾ ಇವರು ತಮ್ಮ ಸಂಸ್ಥೆಯ ವತಿಯಿಂದ ಮಾಡಲ್ಪಡುವ ಎಲ್ಲ ರೀತಿಯ ಜಾಹೀರಾತುಗಳಿಂದ ಅಮೀರ್ ಖಾನ್ ಇವರನ್ನು ಸ್ವತಃ ತೆಗೆದು ಹಾಕಿದರು.

೨. ಜೆಎನ್‌ಯುವಿನ ವ್ಯಕ್ತಿಗೆ ಸಂಸ್ಥೆಯಲ್ಲಿ ಕೆಲಸ ಕೊಡದಿರಲು ನಿರ್ಧರಿಸುವುದು !
ದೆಹಲಿಯ ಜವಾಹರಲಾಲ ನೆಹರು ವಿದ್ಯಾಪೀಠದಲ್ಲಿ (ಜೆಎನ್‌ಯು) ಘಟಿಸಿದ ದೇಶದ್ರೋಹಿ ಘಟನೆಗಳಿಂದಾಗಿ ಬೇಸರಪಟ್ಟ ರತನ್ ಟಾಟಾ ಇವರು ತಮ್ಮ ಎಲ್ಲ ಸಂಸ್ಥೆಗಳಲ್ಲಿ ಇನ್ನು ಮುಂದೆ ಜೆಎನ್‌ಯುವಿನ ವ್ಯಕ್ತಿಗಳಿಗೆ ಕೆಲಸ ಕೊಡುವುದಿಲ್ಲವೆಂದು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

೩.ಪಾಕಿಸ್ತಾನಿ ಗುತ್ತಿಗೆದಾರನಿಗೆ ಎಳ್ಳಷ್ಟೂ ಬೆಲೆ ಕೊಡದಿರುವುದು
ಮುಂಬಯಿಯಲ್ಲಿನ ೨೬/೧೧ ರ ಉಗ್ರವಾದಿ ದಾಳಿಯ ನಂತರ ಟಾಟಾ ಸಮೂಹದ ‘ತಾಜ್ ಹೊಟೇಲ್’ ಇತರ ಎಲ್ಲ ತಾಜ್ ಹೊಟೇಲ್‌ಗಳ ನವೀಕರಣಕ್ಕಾಗಿ ದೇಶವಿದೇಶಗಳಿಂದ ಟೆಂಡರ್ (ಗುತ್ತಿಗೆ) ಕರೆದಿದ್ದರು. ಅನೇಕ ದೇಶ-ವಿದೇಶಗಳ ಕಂಪನಿಗಳು ಅದಕ್ಕಾಗಿ ಟಾಟಾ ಸಮೂಹಕ್ಕೆ ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಪಾಕಿಸ್ತಾನಿ ಕಂಪನಿಗಳು ಸಹ ಇದ್ದವು. ಈ ಪಾಕಿಸ್ತಾನಿ ಗುತ್ತಿಗೆದಾರರು ಹೇಗಾದರೂ ಮಾಡಿ ಈ ಗುತ್ತಿಗೆ ತಮಗೇ ಸಿಗಬೇಕೆಂದು ಪ್ರಯತ್ನಿಸುತ್ತಿದ್ದರು. ಅದಕ್ಕಾಗಿ ಅವರು ಭಾರತದಲ್ಲಿನ ಟಾಟಾ ಸಮೂಹ ಸಂಸ್ಥೆಯ ಮುಖ್ಯ ಕಾರ್ಯಾಲಯದ ಸಂಚಾಲಕರನ್ನು ಭೇಟಿಯಾಗಲು ಹೋದರು. ಆಗ ರತನ್ ಟಾಟಾ ಇವರು ಅವರಿಗೆ ಸಂಪರ್ಕಿಸಲು ಅವಕಾಶವನ್ನೇ ನೀಡಲಿಲ್ಲ. ಈ ಕಾರ್ಯಾಲಯದ ವಠಾರದಲ್ಲಿ ಗಂಟೆಗಟ್ಟಲೆ ಕಾಯುತ್ತಾ ಕುಳಿತಿದ್ದರೂ ಯಾರೂ ಕರೆಯದಿರುವುದರಿಂದ ಕೊನೆಗೆ ಪಾಕಿಸ್ತಾನದ ಗುತ್ತಿಗೆದಾರರು ಬೇಸರದಿಂದ ದೆಹಲಿಗೆ ಹೊರಟು ಹೋದರು.

೪. ದೇಶದ್ರೋಹಿಗಳಿಗೆ ಗುತ್ತಿಗೆ ನೀಡಬಾರದೆಂಬ ನಿರ್ಣಯ !
ದೆಹಲಿಗೆ ಹೋದ ನಂತರ ಅವರು ಅಂದಿನ ಕೇಂದ್ರ ಸಚಿವರಲ್ಲಿ ಟಾಟಾ ಇವರ ವಿರುದ್ಧ ದೂರು ದಾಖಲಿಸಿ ‘ಅವರಿಗೆ ಭೇಟಿ ನೀಡುವ ಅವಕಾಶ ಮಾಡಿಕೊಡಬೇಕು’, ಎಂದು ವಿನಂತಿಸಿದರು. ಅವರ ಮಾತಿಗೆ ತಲೆಯಾಡಿಸಿ ಸಂಬಂಧಪಟ್ಟ ಅಧಿಕಾರಿ ರತನ್ ಟಾಟಾ ಇವರಿಗೆ ದೂರವಾಣಿ ಕರೆ ಮಾಡಿ ‘ಅವರಿಗೇ (ಪಾಕಿಸ್ತಾನದ ಗುತ್ತಿಗೆದಾರರಿಗೇ) ಗುತ್ತಿಗೆಯನ್ನು ನೀಡಬೇಕೆಂದು ಪ್ರಚೋದಿಸಿದರು. ಆಗ ಟಾಟಾ ಹೀಗೆಂದರು, “ನಿಮಗೆ ಮಾನ-ಮರ್ಯಾದೆ ಹಾಗೂ ದೇಶಪ್ರೇಮವಿಲ್ಲದಿರಬಹುದು; ಆದರೆ ನಮಗಿದೆ. ಈ ಗುತ್ತಿಗೆಯನ್ನು ಯಾವುದೇ ರೀತಿಯಲ್ಲಿ ಆ ದೇಶವಿರೋಧಿ ಹಾಗೂ ಹಟಮಾರಿಗಳಿಗೆ ನಾನು ಕೊಡಲು ಸಾಧ್ಯವಿಲ್ಲ.” ಈ ಉತ್ತರವನ್ನು ಕೇಳಿ ಆ ಸಚಿವರ ಮುಖ ಇಂಗು ತಿಂದ ಮಂಗನಂತಾಗಿರಬಹುದು.

೫. ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನವನ್ನು ರಪ್ತು ಮಾಡದಿರುವುದು
ಒಮ್ಮೆ ಪಾಕಿಸ್ತಾನ ಸರಕಾರವು ಟಾಟಾ ಇವರಿಗೆ ‘ನೀವು ನಮಗೆ ಟಾಟಾ ಸುಮೋ ವಾಹನವನ್ನು ರಪ್ತು ಮಾಡಬೇಕು’, ಎಂದು ಸ್ವತಃ ಹೇಳಿತ್ತು. ಆದರೂ ರತನ್ ಟಾಟಾ ಇವರು ಉದ್ದೇಶಪೂರ್ವಕ ಪಾಕಿಸ್ತಾನಕ್ಕೆ ಒಂದೇ ಒಂದು ವಾಹನವನ್ನೂ ಕಳುಹಿಸಲಿಲ್ಲ. ಮನಸ್ಸಿರುತ್ತಿದ್ದರೆ, ಆಗ ಟಾಟಾ ಸಮೂಹ ಸಂಸ್ಥೆಯು ಲಾಭಗಳಿಸಿಕೊಳ್ಳಬಹುದಿತ್ತು; ಆದರೆ ರತನ್ ಟಾಟಾ ಕೇವಲ ಲಾಭವನ್ನು ನೋಡುವ ಉದ್ಯಮಿಯಲ್ಲ. ಅವರಿಗೆ ಉದ್ಯಮಕ್ಕಿಂತ ದೇಶಪ್ರೇಮ ಮಹತ್ವದ್ದಾಗಿದೆ. ಈ ಉದ್ಯಮಿಯಿಂದ ಈ ದೇಶದ ನಾಗರಿಕರು, ಉದ್ಯಮಿಗಳು, ರಾಜಕಾರಣಿಗಳು, ಸಾಹಿತಿಗಳು, ಹಾಗೂ ಬುದ್ಧಿಯನ್ನು ಒತ್ತೆ ಇಟ್ಟಿರುವ ಕೆಲವರು ಬಹಳಷ್ಟು ಕಲಿಯುವ ಹಾಗಿದೆ, ಅಲ್ಲವೇ ?’ (ಆಧಾರ: ‘ಮಾಸಿಕ ಮೇರು’, ಮಾರ್ಚ್ ೨೦೧೬)