೧. ಪಾದರಕ್ಷೆಗಳನ್ನು ದೇವಸ್ಥಾನದ ಹೊರಗೆ ಆದಷ್ಟು ನಮ್ಮ ಎಡಬದಿಗೆ ತೆಗೆದಿಡಬೇಕು.
೨. ಕಾಲುಗಳನ್ನು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ…’ ಎನ್ನುತ್ತಾ ತಮ್ಮ ಮೇಲೆ ೩ ಸಲ ನೀರನ್ನು ಸಿಂಪಡಿಸಿಕೊಳ್ಳಬೇಕು.
೩. ಪ್ರಾಂಗಣದಿಂದ ಕಲಶಕ್ಕೆ ನಮಸ್ಕಾರ ಮಾಡಬೇಕು ಮತ್ತು ಒಳಗೆ ಹೋಗುವಾಗಲೂ ಕೈಗಳು ನಮಸ್ಕಾರದ ಮುದ್ರೆಯಲ್ಲಿರಬೇಕು.
೪. ದೇವಸ್ಥಾನ ಪ್ರವೇಶಿಸುವ ಮುನ್ನ ಪ್ರವೇಶದ್ವಾರಕ್ಕೆ ನಮಸ್ಕರಿಸಬೇಕು.