ವಕ್ಫ್ ಬೋರ್ಡ್‌ನಿಂದ ಹಿಂದೂಗಳ ಹಕ್ಕುಗಳ ಮೇಲೆ ದಾಳಿ ! 

‘ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ‘ಸುದರ್ಶನ ನ್ಯೂಸ್’ ವಾರ್ತಾವಾಹಿನಿಯ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆ ಇವರೊಂದಿಗೆ ದುರ್ಗ (ಛತ್ತೀಸಗಡ)ದ ‘ಲಕ್ಷ ಸನಾತನ ಸಂಗಮ’ದ ರಾಷ್ಟ್ರೀಯ ಪರಾಮರ್ಶಕ ಶ್ರೀ. ವಿಶಾಲ ತಾಮ್ರಕಾರ ಇವರು ಸಂವಾದ ನಡೆಸಿದರು ಹಾಗೂ ಹಿಂದೂಗಳ ಮೇಲಾಗುವ ಆಘಾತಗಳ ವಿಷಯದಲ್ಲಿ ಚರ್ಚೆ ಮಾಡಿದರು. ಈ ಸಂದರ್ಭದಲ್ಲಿ ನಡೆದಿರುವ ಚರ್ಚೆಯ ಸಾರಾಂಶವನ್ನು ಲೇಖನದ ಸ್ವರೂಪದಲ್ಲಿ ಇಲ್ಲಿ ಕೊಡುತ್ತಿದ್ದೇವೆ.

೧. ತಮಿಳುನಾಡಿನಲ್ಲಿ ವಕ್ಫ್ ಬೋರ್ಡ್‌ನಿಂದ ಸಂಪೂರ್ಣ ಊರನ್ನೇ ಕಬಳಿಸುವ ಪ್ರಯತ್ನ

ಈ ಸಂದರ್ಭದಲ್ಲಿ ಶ್ರೀ. ಚವ್ಹಾಣಕೆಯವರು ಮಾತನಾಡುತ್ತಾ, ”ಛತ್ತೀಸಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ಅವರ ರಾಜ್ಯ ಸರಕಾರ ಒಂದು ಕಾನೂನು ಮಾಡಲಿಕ್ಕಿದೆ. ಅದಕ್ಕನುಸಾರ ಯಾರು ಮತಾಂತರವಾಗಿದ್ದಾರೆಯೋ, ಅವರಿಗೆ ಸಿಗುತ್ತಿರುವ ಮೀಸಲಾತಿಯ ಸೌಲಭ್ಯವನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಭಾರತದ ವಿಭಜನೆಯಾಗಿರುವ ಯಾವುದೇ ಇಸ್ಲಾಮೀ ದೇಶದಲ್ಲಿ ಸನಾತನ ಮಂಡಳಿ (ಬೋರ್ಡ್‌) ಇಲ್ಲ; ಆದರೆ ಭಾರತದಲ್ಲಿ ವಕ್ಫ್ ಬೋರ್ಡ್ ಇದೆ, ಆ ವಕ್ಫ್ ಬೋರ್ಡ್‌ಗೆ ಅಂದಿನ ಕಾಂಗ್ರೆಸ್‌ ಸರಕಾರ ಅಸೀಮ ಅಧಿಕಾರವನ್ನು ನೀಡಿದೆ. ಇಂತಹ ಅಧಿಕಾರದ ಮೂಲಕ ವಕ್ಫ್ ಬೋರ್ಡ್ ಹಿಂದೂಗಳ ೫ ಸಾವಿರ ವರ್ಷಗಳಷ್ಟು ಹಳೆಯ ಮಂದಿರಗಳನ್ನು ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದೆ. ತಮಿಳುನಾಡು ವಕ್ಫ್ ಬೋರ್ಡ್ ತ್ರಿಚೀ ಜಿಲ್ಲೆಯ ತಿರುಚೇಂಥುರಯೀ ಎಂಬ ಊರಿನಲ್ಲಿ ೧ ಸಾವಿರದ ೫೦೦ ವರ್ಷಗಳಷ್ಟು ಪುರಾತನವಾದ ಮಾನೆದಿಯಾವಲ್ಲಿ ಚಂದ್ರಶೇಖರ ಸ್ವಾಮಿ ಮಂದಿರದ ಭೂಮಿಯ ಮೇಲೆ ತನ್ನ ಹಕ್ಕನ್ನು ಸಾಧಿಸಿದೆ. ಈ ಊರಿನಲ್ಲಿ ಮತ್ತು ಅಕ್ಕಪಕ್ಕದ ಪರಿಸರದಲ್ಲಿ ಮಂದಿರದ ೩೬೯ ಎಕರೆ ಆಸ್ತಿ ಇದೆ. ರಾಜಗೋಪಾಲನ್‌ ಎಂಬ ಹೆಸರಿನ ಸ್ಥಳೀಯ ರೈತನು ತನ್ನ ಸ್ವಂತದ ೧.೨ ಎಕರೆ ಕೃಷಿ ಭೂಮಿಯನ್ನು ಅದೇ ಊರಿನ ಇನ್ನೊಬ್ಬ ರೈತನಿಗೆ ಮಾರಲು ಹೋದಾಗ ವಕ್ಫ್ ಬೋರ್ಡ್‌ನ ಕುತಂತ್ರದ ಮಾಹಿತಿ ಬಹಿರಂಗವಾಯಿತು. ಈ ವಿಷಯವನ್ನು ಅವನಿಗೆ ನಿಬಂಧಕರ ಕಾರ್ಯಾಲಯದಿಂದ ತಿಳಿಸಲಾಯಿತು’’ ಎಂದು ಹೇಳಿದರು.

ಶ್ರೀ. ಸುರೇಶ ಚವ್ಹಾಣಕೆ

೨. ಕರ್ನಾಟಕದಲ್ಲಿ ವಕ್ಫ್ ಬೋರ್ಡ್‌ನಿಂದ ೨ ಲಕ್ಷದ ೩೫ ಸಾವಿರ ರೂಪಾಯಿಗಳ ಭೂಮಿ ಹಗರಣ

ಶ್ರೀ. ಚವ್ಹಾಣಕೆಯವರು ಮಾತನ್ನು ಮುಂದುವರಿಸುತ್ತಾ ಹೇಳಿದರು, ವಿವಿಧ ವರ್ತಮಾನಪತ್ರಿಕೆಗಳಿಂದ ಪಡೆದಿರುವ ಮಾಹಿತಿಗನುಸಾರ ಕರ್ನಾಟಕದಲ್ಲಿ ೨ ಲಕ್ಷದ ೩೫ ಸಾವಿರ ಕೋಟಿ ರೂಪಾಯಿಗಳ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಗನುಸಾರ ಕರ್ನಾಟಕದಲ್ಲಿನ ಪ್ರಮುಖ ಮುಸಲ್ಮಾನ ಮುಖಂಡರು ವಕ್ಫ್ ಬೋರ್ಡನಿಂದ ೨ ಲಕ್ಷದ ೩೫ ಸಾವಿರ ಕೋಟಿ ರೂಪಾಯಿಗಳ ಭೂಹಗರಣ ಮಾಡಿರುವುದು ಬಹಿರಂಗವಾಗಿದೆ. ಈ ವಿಷಯದಲ್ಲಿ ೨೦೧೨ ರಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗವು ವರದಿಯನ್ನು ಪ್ರಸ್ತುತಪಡಿಸಿತ್ತು; ಆದರೆ ಅನಂತರ ಬಂದಿರುವ ಸರ್ವಪಕ್ಷೀಯ ಸರಕಾರಗಳು ಅದರ ಕಡೆಗೆ ಗಮನ ಹರಿಸಲಿಲ್ಲ. ಭಾಜಪದ ಕರ್ನಾಟಕ ವಿಭಾಗದ ಸಂಯುಕ್ತ ವಕ್ತಾರರು ಮತ್ತು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ ಮಾಣಿಪ್ಪಾಡಿ ಇವರು ಭಾಜಪದ ಮುಖಂಡ ಹಾಗೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಈ ವರದಿಯ ಆಧಾರದಲ್ಲಿ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದರು.

ಶ್ರೀ. ವಿಶಾಲ ತಾಮ್ರಕರ

೩. ವಕ್ಫ್ ಬೋರ್ಡ್‌ನಷ್ಟೇ ಅಧಿಕಾರ ‘ಸನಾತನ ಬೋರ್ಡ್‌’ಗೆ ಸಿಗಬಹುದೇ ?

ವಕ್ಫ್ ಬೋರ್ಡ್ ಭಾರತದ ಎಲ್ಲ ರಾಜ್ಯಗಳಲ್ಲಿನ ಆಸ್ತಿಗಳನ್ನು ತನ್ನ ಹೆಸರಿಗೆ ಹೇಗೆ ಮಾಡಿಕೊಂಡಿತು, ಎಂಬುದು ರಾಜ್ಯ ಮತ್ತು ಕೇಂದ್ರ ಸರಕಾರಗಳು ತನಿಖೆ ಮಾಡಬೇಕಾದ ವಿಷಯವಾಗಿದೆ.  ಭಾರತದಲ್ಲಿ ಸೈನ್ಯದಳ ಮತ್ತು ರೈಲ್ವೆಯ ಭೂಮಿಯ ನಂತರ ಹೆಚ್ಚಿನ ಭೂಮಿ ವಕ್ಫ್ ಬೋರ್ಡ್ ಬಳಿಯಿದೆ. ಸನಾತನ ಬೋರ್ಡ್ ಸ್ಥಾಪನೆಯ ನಂತರ ಕೇಂದ್ರ ಅಥವಾ ರಾಜ್ಯ ಸರಕಾರ ಅದಕ್ಕೂ ಮಿತಿಮೀರಿದ ಅಧಿಕಾರವನ್ನು (ವಕ್ಫ್ ಬೋರ್ಡ್‌ಗೆ ನೀಡಿದಂತೆ) ಕೊಡಬಹುದೇ ? ಅದರಲ್ಲಿ ಸನಾತನ ಬೋರ್ಡ್ ಮಸೀದಿಯ ಮತ್ತು ಅದರ ಸುತ್ತಲಿನ ಭೂಮಿಯನ್ನು ವಶಪಡಿಸಿ ಅಥವಾ ಅದರ ಮೇಲೆ ಹಕ್ಕು ಸಾಧಿಸಿ ತನ್ನ ಸರಹದ್ದಿನಲ್ಲಿ ಸೇರಿಸಿಕೊಳ್ಳಬಹುದೇ ? ಇದಕ್ಕೆ ನಿಮ್ಮ ಉತ್ತರ ಇಲ್ಲವೆಂದಾದರೆ, ವಕ್ಫ್ ಬೋರ್ಡ್ ಭಾರತದ ಪ್ರಾಚೀನ ಹಿಂದೂ ಮಂದಿರಗಳನ್ನು, ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ಜನರ ಖಾಸಗಿ ಭೂಮಿಯನ್ನು ತನ್ನದೆಂದು ಹೇಳಿ ಹೇಗೆ ಕಬಳಿಸುತ್ತಿದೆ ?  ಈ ಜಾತ್ಯತೀತ ದೇಶದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ, ನ್ಯಾಯವನ್ನು ಕಾಲಿನಡಿ ತುಳಿಯಲಾಗುತ್ತಿದೆ ಮತ್ತು ಜನರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.”

ದೇಶದ ಇಂದಿನ ಈ ಸ್ಥಿತಿಯನ್ನು ನೋಡಿ ಶ್ರೀ. ವಿಶಾಲ ತಾಮ್ರಕರರು ಹೇಳಿದರು, ”ಯಾರ ವರ್ತನೆ ನಮಗೆ ಒಪ್ಪಿಗೆ ಇಲ್ಲವೋ ಹಾಗೆಯೇ ನಾವು ಬೇರೆ ಯಾವುದೇ ಜಾತಿ, ಧರ್ಮ, ಪಂಥ, ಸಮೂಹ ಅಥವಾ ವ್ಯಕ್ತಿಯೊಂದಿಗೆ ವರ್ತಿಸಬಾರದು. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿಕ್ಕಿದ್ದರೆ, ನಾವು ಜಾತಿ ಮತ್ತು ಧರ್ಮದ ಆಚೆಗೆ ಹೋಗಿ ಎಲ್ಲರಿಗೂ ಸಮಾನತೆಯ ಅಧಿಕಾರವನ್ನು ನೀಡಬೇಕಾಗುತ್ತದೆ. ಯಾರ ಹಕ್ಕನ್ನೂ ಕಾಲಿನಡಿ ತುಳಿಯುವುದು ಅಥವಾ ಯಾರಿಗೂ ಅನ್ಯಾಯ ಮಾಡಿದರೆ ಇದು ರಾಷ್ಟ್ರವನ್ನು ರಸಾತಳಕ್ಕೆ ತಳ್ಳುವುದು. ‘ಸಮಾನತೆಯ ಅಧಿಕಾರ’ವು ರಾಷ್ಟ್ರದ ನ್ಯಾಯವ್ಯವಸ್ಥೆಯ ಪ್ರತಿಬಿಂಬವಾಗಿದೆ, ಅದರಲ್ಲಿ ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡಲಾಗುತ್ತದೆ ಹಾಗೂ ಅದು ಪ್ರೇಮ ಮತ್ತು ಸದ್ಭಾವನೆಯ ಸಂಕೇತವಾಗಿದೆ.”

– ಶ್ರೀ. ವಿಶಾಲ ತಾಮ್ರಕರ, ರಾಷ್ಟ್ರೀಯ ಪರಾಮರ್ಶಕರು, ‘ಲಕ್ಷ್ಯ ಸನಾತನ ಸಂಗಮ’, ದುರ್ಗ, ಛತ್ತೀಸಗಡ.